ವಿಶ್ವದ ಅತೀ ದೊಡ್ಡ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆಯೂ ಕೂಡಾ ಒಂದಾಗಿದೆ. ಹಾಗೆಯೇ ಜಾಗತಿಕ ಬೆಳವಣಿಗೆಗೆ ಭಾರತದ ಕೊಡುಗೆಯು ಅಪಾರ. ಪ್ರಸ್ತುತ ಯುಪಿಐ ಪಾವತಿ ವ್ಯವಸ್ಥೆಯನ್ನು ವಿಶ್ವಕ್ಕೆ ಪರಿಚಯಿಸುತ್ತಿರುವುದು ಭಾರತವು ಜಾಗತಿಕ ಡಿಜಿಟಲೀಕರಣಕ್ಕೆ ನೀಡುವ ಒಂದು ಸಣ್ಣ ಕೊಡುಗೆಯಾಗಿದೆ. ಈ ನಡುವೆ ದೇಶದಲ್ಲಿ ಹಲವಾರು ಭೌಗೋಳಿಕ, ರಾಜಕೀಯ ಅಂಶಗಳು ಇದೆ. ಗಡಿ ಸಂಘರ್ಷ, ರಾಜಕೀಯ ಗದ್ದಲ ಮೊದಲಾದವುಗಳು ದೇಶದಲ್ಲಿ ಆರ್ಥಿಕ ಬೆಳವಣಿಗೆ ಮೇಲೆಯೂ ಪ್ರಭಾವ ಉಂಟು ಮಾಡುತ್ತದೆ.
ಕೆಲವೊಂದು ಪ್ರಮುಖ ಬೆಳವಣಿಗೆಗಳು ನಿರ್ಧಾರಗಳು ಕೂಡಾ ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ. ಗಡಿ ಸಂಘರ್ಷ, ಉಕ್ರೇನ್-ರಷ್ಯಾ ಯುದ್ಧ, ಜಾಗತಿಕ ಹಣದುಬ್ಬರ ಮೊದಲಾದವುಗಳು ಪ್ರಭಾವ ಬೀರುತ್ತಾ ಬಂದಿದೆ. ಮುಖ್ಯವಾಗಿ ಸ್ಟಾಕ್ ಮಾರುಕಟ್ಟೆ, ಆರ್‌ಬಿಐನ ವಿತ್ತೀಯ ನೀತಿ, ಹಣದುಬ್ಬರದ ಮೇಲೆ ಪ್ರಭಾವ ಉಂಟು ಮಾಡುತ್ತದೆ. ಆರ್‌ಬಿಐ ತನ್ನ ವಿತ್ತೀಯ ನೀತಿಯಲ್ಲಿ ಬದಲಾವಣೆ ಮಾಡಬೇಕಾದ ಸ್ಥಿತಿ ಉಂಟಾಗುತ್ತದೆ. ಭಾರತದ ಆರ್ಥಿಕತೆಗೆ ಭೌಗೋಳಿಕ, ರಾಜಕೀಯ ಅಂಶದ ಪರಿಣಾಮಗಳೇನು ಎಂದು ತಿಳಿಯೋಣ ಮುಂದೆ ಓದಿ.,

ಸ್ಟಾಕ್ ಮಾರುಕಟ್ಟೆ
ಭಾರತೀಯ ಸ್ಟಾಕ್ ಮಾರುಕಟ್ಟೆ ನಿರಂತರವಾಗಿ ಏರಿಳಿತ ಕಂಡುತ್ತಿದೆ. ಬುಧವಾರ ಫೆಬ್ರವರಿ 22ರಂದು ವಹಿವಾಟಿನ ಅಂತ್ಯದಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 927.74 ಅಂಕ ಅಥವಾ ಶೇಕಡ 1.53ರಷ್ಟು ಕುಸಿದಿದ್ದು, 59,744.98ಕ್ಕೆ ತಲುಪಿದೆ. ನಿಫ್ಟಿ 272.40 ಅಂಕ ಅಥವಾ ಶೇಕಡ 1.53ರಷ್ಟು ಇಳಿದು 17,554.30ಕ್ಕೆ ತಲುಪಿದೆ. 928 ಷೇರುಗಳು ಏರಿಕೆಯಾದರೆ, 2451 ಷೇರುಗಳು ಕುಸಿತ ಕಂದಿದೆ, 127 ಷೇರುಗಳು ಸ್ಥಿರವಾಗಿದೆ.
ಗುರುವಾರ ವಹಿವಾಟಿನ ಆರಂಭದಲ್ಲಿ ಸ್ಟಾಕ್ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 39.24 ಅಂಕ ಅಥವಾ ಶೇಕಡ 0.07ರಷ್ಟು ಏರಿದ್ದು, 59,784.22ಕ್ಕೆ ತಲುಪಿದೆ. ನಿಫ್ಟಿ 6.70 ಅಂಕ ಅಥವಾ ಶೇಕಡ 0.04ರಷ್ಟು ಇಳಿದು 17,561ಕ್ಕೆ ತಲುಪಿದೆ. 1092 ಷೇರುಗಳು ಏರಿಕೆಯಾದರೆ, 708 ಷೇರುಗಳು ಕುಸಿತ ಕಂದಿದೆ, 110 ಷೇರುಗಳು ಸ್ಥಿರವಾಗಿದೆ. ಟಿಸಿಎಸ್, ಎಚ್‌ಸಿಎಲ್ ಟೆಕ್, ಒಎನ್‌ಜಿಸಿ ಸ್ಟಾಕ್ ಲಾಭ ಗಳಿಸಿದರೆ, ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಟೈಟಾನ್ ಕಂಪನಿ ನಷ್ಟ ಕಂಡಿದೆ.
ಆರ್‌ಬಿಐನ ಕ್ರಮಗಳು
ಭೌಗೋಳಿಕ, ರಾಜಕೀಯ ಬಿಕ್ಕಟ್ಟು, ಇತರೆ ವಿಚಾರಗಳ ನಡುವೆ ಜಾಗತಿಕವಾಗಿ ಹಣದುಬ್ಬರವು ಕಾಡುತ್ತಿದೆ. ಅದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಪರಿಷ್ಕರಣೆ ಮಾಡುತ್ತಾ ಬಂದಿದೆ. ಕಳೆದ ಬಾರಿ ಫೆಬ್ರವರಿ 8ರಂದು ಆರ್‌ಬಿಐ ರೆಪೋ ದರವನ್ನು 25 ಮೂಲಾಂಕ ಏರಿಕೆ ಮಾಡಿದೆ. ಇದರಿಂದಾಗಿ ಪ್ರಸ್ತುತ ರೆಪೋ ದರ ಶೇಕಡ 6.50ಕ್ಕೆ ತಲುಪಿದೆ. ಪ್ರಮುಖವಾಗಿ ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಬ್ಯಾಂಕ್ ರೆಪೋ ದರ ಏರಿಸಿದೆ.
ಭಾರತದಲ್ಲಿ ರಿಟೇಲ್ ಹಣದುಬ್ಬರ ಮತ್ತೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ ಮೊಟ್ಟೆ, ಮಾಂಸ, ಮೀನು, ಹಾಲಿನ ದರ ಏರಿಕೆಯಾದ ಕಾರಣ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6.5ಕ್ಕೆ ಏರಿಕೆಯಾಗಿದೆ. ಡಿಸೆಂಬರ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 5.7ರಷ್ಟು ಆಗಿತ್ತು. ಕಳೆದ ವರ್ಷ ಜನವರಿಯಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6 ಆಗಿತ್ತು.
ಜನವರಿಯಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದೆ. ಡಿಸೆಂಬರ್‌ನಲ್ಲಿ ಸಗಟು ಹಣದುಬ್ಬರ ಇಳಿಕೆಯಾಗಿದ್ದು, ಜನವರಿಯಲ್ಲಿಯೂ ಕುಸಿದಿದೆ. ಸಗಟು ಹಣದುಬ್ಬರವು 24 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಶೇಕಡ 4.73ಕ್ಕೆ ತಲುಪಿದೆ. ಡಿಸೆಂಬರ್ 2022ರಲ್ಲಿ ಆಹಾರ ಉತ್ಪನ್ನಗಳ ಬೆಲೆ ಇಳಿಕೆ, ಕಚ್ಚಾ ಎಣ್ಣೆಗಳ ಬೆಲೆ ಇಳಿಕೆ, ಕಚ್ಚಾ ತೈಲ, ನೈಸರ್ಗಿಕ ಅನಿಲ, ಆಹಾರ ಉತ್ಪನ್ನ, ಜವಳಿ, ರಾಸಾಯನಿಕ ಮತ್ತು ರಾಸಾಯನಿಕ ಉತ್ಪನ್ನಗಳ ಬೆಲೆ ಇಳಿಕೆಯಾದ ಕಾರಣದಿಂದಾಗಿ ಸಗಟು ಹಣದುಬ್ಬರವು ಇಳಿದಿದೆ. ಕಳೆದ ಕೆಲವು ತಿಂಗಳುಗಳಿಂದ ಸಗಟು ಹಣದುಬ್ಬರವು ಕಡಿಮೆಯಾಗುತ್ತಿದೆ.


Click it and Unblock the Notifications