ಕಾರ್ಮಿಕ ಕಾನೂನು ಸುಧಾರಣೆ ಹೆಸರಲ್ಲಿ ಏನೇನಾಗಬಹುದೋ?

ಭಾರತದಲ್ಲಿನ ಕಾರ್ಮಿಕ ಕಾನೂನುಗಳ ಬಗ್ಗೆ ಮತ್ತೆ ಚರ್ಚೆ ಚಾಲೂ ಆಗಿದೆ. ಇಲ್ಲಿನ ಕಾರ್ಮಿಕ ಕಾನೂನುಗಳು ಬಹಳ ಕಠಿಣ. ತುಂಬ ಬದಲಾವಣೆ ಕೂಡ ಕಾಣಲಾರವು. ಅಸ್ಪಷ್ಟವಾದ ನಿಯಮಗಳ ಕಾರಣಗಳಿಂದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಅಧಿಕಾರಿಗಳ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ದಿನದಿನಕ್ಕೂ ಕಾರ್ಮಿಕ ಕಾನೂನುಗಳು ಇಳಿಜಾರಿನಲ್ಲಿ ಸಾಗುತ್ತಿವೆ.

ಹಲವು ಸಮೀಕ್ಷೆಗಳು, ಅಧ್ಯಯನಗಳಲ್ಲಿ ಭಾರತದಲ್ಲಿನ ಹೂಡಿಕೆದಾರರನ್ನು ಪ್ರಶ್ನೆ ಕೇಳಲಾಗಿದೆ: ನಿಮಗೆ ಬಹಳ ಚಿಂತೆಗೆ ಈಡು ಮಾಡುವ ಅಂಶಗಳು ಯಾವುವು? ಆ ಪಟ್ಟಿಗೆ ಹೀಗಿದೆ: ಕಾರ್ಮಿಕ ಕಾನೂನು, ಭೂಮಿ ಸ್ವಾಧೀನ ತುಂಬ ದುಬಾರಿ ಹಾಗೂ ಅಧಿಕಾರಿಗಳು ವಿಪರೀತ ತಡ ಮಾಡುತ್ತಾರೆ. ಹೀಗೆ ಸಾಗುತ್ತದೆ.

ಆದರೆ, ನಿಮಗೆ ಗೊತ್ತಾ? ಭಾರತದಲ್ಲಿ ಕಾರ್ಮಿಕರಿಗೆ ಸಂಬಂಧಿಸಿದ ಕಾನೂನುಗಳ ಸಂಖ್ಯೆಯೇ ದೊಡ್ಡದಿದೆ. ಕೇಂದ್ರದ ವ್ಯಾಪ್ತಿಯಲ್ಲಿ ಕನಿಷ್ಠ 40 ಕಾನೂನುಗಳಿವೆ. ರಾಜ್ಯದ ಹಂತಕ್ಕೆ ಬಂದರೆ 100ಕ್ಕೂ ಹೆಚ್ಚು ಕಾಯ್ದೆ ಮತ್ತು ವಿಧೇಯಕಗಳಿವೆ. ಇನ್ನೂ ಈ ಎಲ್ಲ ಕಾನೂನಿಗಳಿಂದ ಫಾಯಿದೆ ಏನು ಗೊತ್ತಾ? ಸಂಘಟಿತ ವಲಯದ ಒಬ್ಬ ಉದ್ಯೋಗಿಯನ್ನೂ ಕೆಲಸದಿಂದ ತೆಗೆಯಲು ಸಾಧ್ಯವಿಲ್ಲ.

ಇನ್ನು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಬೇಕು ಅಂದರೆ ಕಾರ್ಮಿಕ ಅಧಿಕಾರಿಗಳ ಬಳಿ ಒಂದು ರಾಶಿಯಷ್ಟು ವಿಚಾರಗಳಿಗೆ ಅನುಮತಿ ಪಡೆಯಬೇಕು. ಇಂಡಸ್ಟ್ರಿಯಲ್ ಎಂಪ್ಲಾಯ್ ಮೆಂಟ್ (ಸ್ಟ್ಯಾಂಡಿಂಗ್ ಆರ್ಡರ್ಸ್) ಕಾಯ್ದೆ 1946ರ ಯಾವ ಪರಿಯಲ್ಲಿ ಇದೆಯೆಂದರೆ, ಒಂದು ಕೆಲಸವನ್ನು ಮತ್ತೆ ಮಾಡುವಂತೆ ಹೇಳಬೇಕಾದಲ್ಲಿ ಉದ್ಯೋಗದಾತರು ಅನುಮತಿ ಪಡೆಯಬೇಕು. ಈ ಉದಾಹರಣೆಗಳ ಮೂಲಕ ಸರ್ಕಾರದ ಸವಾಲುಗಳನ್ನು ಗಮನಿಸಿದರೆ ಕಾರ್ಮಿಕ ಕಾನೂನು ಸುಧಾರಣೆ ಮಾಡುವುದು ಒಳ್ಳೆ ಆಲೋಚನೆ.

ಹಲವು ಕಡೆ ಸ್ವಚ್ಛತೆಗೆ ಕೊರತೆ ಇದೆ

ಹಲವು ಕಡೆ ಸ್ವಚ್ಛತೆಗೆ ಕೊರತೆ ಇದೆ

ಭಾರತದಲ್ಲಿ ಎಲ್ಲವನ್ನೂ ಸುಧಾರಣೆ ಅನ್ನೋ ಹೆಸರಲ್ಲೇ ಮಾಡಲಾಗುತ್ತದೆ. ಆದರೆ ಯಾವುದನ್ನು ಕಾರ್ಮಿಕ ಕಾನೂನು ಸುಧಾರಣೆ ಅನ್ನಬಹುದು? ಕಳೆದ ವಾರ ಉತ್ತರಪ್ರದೇಶ ಸುಧಾರಣೆ ಎಂಬ ಪದಕ್ಕೇ ಹೊಸ ವ್ಯಾಖ್ಯಾನ ನೀಡಿದೆ. ಅದು ಹೇಗೆ ಗೊತ್ತಾ? ಕಾರ್ಮಿಕ ರಕ್ಷಣೆಗಾಗಿ ಇರುವ ಎಲ್ಲ ಕಾನೂನನ್ನೂ ಮೂರು ವರ್ಷಗಳ ಕಾಲ ತೆಗೆಯಲಾಗಿದೆ. ಭಾರತದಲ್ಲಿ ಕಾರ್ಮಿಕ ಕಾನೂನು ಕಠಿಣ, ಸಂಕೀರ್ಣ ಹಾಗೂ ಬಿಗಿಯಾಗಿದೆ ಹೌದು. ಹಾಗಂತ ಎಲ್ಲ ಕಾನೂನನ್ನೂ ತೆಗೆದುಬಿಡೋದಾ? ಎಲ್ಲವನ್ನೂ ತೆಗೆದುಬಿಡೋದು ಸುಧಾರಣೆಗಾಗಿ ಇರುವ ಏಕೈಕ ದಾರಿಯೇ? ಕಾರ್ಮಿಕ ಕಾನೂನಿನಲ್ಲಿ ಉದ್ಯೋಗ ಸ್ಥಳದಲ್ಲಿ ಒದಗಿಸಬೇಕಾದ ಕನಿಷ್ಠ ಸೌಕರ್ಯದ ಪ್ರಸ್ತಾವ ಇದೆ. ಕಾರ್ಮಿಕರು ಕೆಲಸ ನಿರ್ವಹಿಸಲು ಸೂಕ್ತ ಸನ್ನಿವೇಶ ಬೇಕು. ಇದೀಗ ಮತ್ತೆ ಹಲವು ಕಡೆಗಳಲ್ಲಿ ಮೂಲಭೂತವಾದ ಸ್ವಚ್ಛತೆ ಹಾಗೂ ಸ್ಯಾನಿಟೇಷನ್ ಇಲ್ಲದಂತಾಗುತ್ತದೆ. ಇದಕ್ಕೆ ಸರ್ಕಾರವೇ ಬೆಂಬಸಿದಂತೆ ಆಗುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಶುದ್ಧ ಗಾಳಿ, ಶೌಚಾಲಯ, ಅಗತ್ಯ ಸೌಲಭ್ಯ ಒದಗಿಸಬೇಕು. ಕುಡಿಯುವ ನೀರಿಗೆ ವ್ಯವಸ್ಥೆ ಇರಬೇಕು. ಆದರೆ ಇದ್ಯಾವುದನ್ನೂ ಕಾರ್ಮಿಕ ಕಾನೂನು ಎಂಬುದು ಅಸ್ತಿತ್ವದಲ್ಲಿ ಇದ್ದಾಗಲೇ ನೀಡದಿದ್ದವರು ಇನ್ನು ಕಾನೂನು ಭಯ ಹೋದ ಮೇಲೆ ಕೇಳಿಸಿಕೊಳ್ತಾರಾ?

ಸಂಘಟಿತ ವಲಯದ ಕಾರ್ಮಿಕರು 10 ಪರ್ಸೆಂಟ್ ನೊಳಗೆ ಮಾತ್ರ

ಸಂಘಟಿತ ವಲಯದ ಕಾರ್ಮಿಕರು 10 ಪರ್ಸೆಂಟ್ ನೊಳಗೆ ಮಾತ್ರ

ಈಗಾಗಲೇ ಕೆಲಸ ಕಳೆದುಕೊಂಡಿರುವ ಜನರ ಪ್ರಮಾಣ ದೊಡ್ಡದಿದೆ. ಇಂಥ ಸನ್ನಿವೇಶದಲ್ಲಿ ಇದು ಬೇಕು, ಅದು ಬೇಕು ಎಂದು ಕೇಳುವಂಥ ಸನ್ನಿವೇಶ ಇದೆಯಾ? ಇದು ಪೂರ್ತಿ ಸಂಘಟಿತ ವಲಯಕ್ಕೆ ಸಂಬಂಧಿಸಿದ್ದು. ಆ ಸಂಖ್ಯೆ 10 ಪರ್ಸೆಂಟ್ ನೊಳಗೆ ಇದೆ. ಬಹುಸಂಖ್ಯಾತರು (ಮಹಾರಾಷ್ಟ್ರದಲ್ಲಿ 90% ಹಾಗೂ ಗುಜರಾತ್ ನಲ್ಲಿ 97%) ಅಸಂಘಟಿತ ವಲಯ ಕಾರ್ಮಿಕರಿದ್ದಾರೆ. ಒಟ್ಟಾರೆ 45 ಕೋಟಿ ಜನರಲ್ಲಿ 1.10 ಕೋಟಿಗೂ ಕಡಿಮೆ ಜನಕ್ಕೆ ಬಾಯಿ ಮಾತಿನಲ್ಲಿ ಸುರಕ್ಷತೆ ನೀಡಲಾಗುತ್ತಿದೆ. ಇದೀಗ ಇದನ್ನು ತೆಗೆಯುವುದಕ್ಕಾಗಿ ಹಲವು ರಾಜ್ಯಗಳಲ್ಲಿ ಕೇಳಲಾಗುತ್ತಿದೆ. ಕೊರೊನಾ ಎಲ್ಲ ಮುಗಿದ ನಂತರ ಉದ್ಯೋಗ ಸ್ಥಳದಲ್ಲಿ ಬಹಳ ಪ್ರಾಮುಖ್ಯತೆಯ ಕನಿಷ್ಠ ಸೌಕರ್ಯವನ್ನು ಒದಗಿಸಬೇಕು. ಸುರಕ್ಷಿತ ಅಂತರ, ಕೈ ತೊಳೆಯುವುದಕ್ಕೆ ಅನುಕೂಲ ಹಾಗೂ ಇದರ ಜತೆಗೆ ಅಗತ್ಯ ಪ್ರಮಾಣದ ಸ್ಯಾನಿಟೈಸೇಷನ್ ಬಗ್ಗೆ ಕಠಿಣ ಕಣ್ಗಾವಲು ಇಡಬೇಕು. ಯಾವಾಗ ಕಾನೂನು ಬಿಗಿ ಹಿಡಿತವನ್ನು ಕಳೆದುಕೊಳ್ಳುತ್ತದೋ ಆಗ ಹಲವು ಬಿಕ್ಕಟ್ಟಿಗೆ ಕಾರಣವಾಗಬಹುದು. ಈಚೆಗೆ ಕೇಂದ್ರ ಸರ್ಕಾರವು ಎಲ್ಲ ಕಾರ್ಮಿಕರಿಗೆ ವಿಮೆ ಕಡ್ಡಾಯ ಮಾಡಿದೆ. ಇದು ಉತ್ತರ ಪ್ರದೇಶದ ಹೊಸ ಕಾನೂನು ಅಡಿಯಲ್ಲಿ ಲಾಗೂ ಆಗುತ್ತದಾ?

ಚೀನಾದಿಂದ ಕಾರ್ಖಾನೆ ಸೆಳೆಯುವ ಯತ್ನ

ಚೀನಾದಿಂದ ಕಾರ್ಖಾನೆ ಸೆಳೆಯುವ ಯತ್ನ

ಚೀನಾದಿಂದ ಕಾರ್ಖಾನೆಗಳನ್ನು ಭಾರತಕ್ಕೆ ಸೆಳೆಯಬೇಕು ಎಂಬ ಏಕೈಕ ಕಾರಣಕ್ಕೆ ಇಂಥ ನಿರ್ಧಾರ ಕೈಗೊಳ್ಳಲಾಗಿದೆ. ಈಗ ಪ್ರಶ್ನೆ ಕೇಳಬೇಕಾದ್ದು ಏನೆಂದರೆ, ಈಗಿನ ಸನ್ನಿವೇಶದಲ್ಲಿ ಕೆಲವು ಮೂಲಭೂತ ಸೌಕರ್ಯ ಪಡೆಯಲು ಭಾರತದ ಕಾರ್ಮಿಕರು ಅರ್ಹರಿದ್ದಾರೆಯೇ? ಹಾಗಿದ್ದರೆ ಆ ಸೌಕರ್ಯಗಳು ಯಾವುವು? ಭಾರತದ ಸಂಸತ್ ಗೆ ಇನ್ನೂ ಸಾಧ್ಯವಾಗದಿದ್ದ ಕಾಲದಲ್ಲಿ, ಆರು ವರ್ಷಗಳ ಹಿಂದೆ ರಾಜಸ್ಥಾನದ ಮುಖ್ಯಮಂತ್ರಿ ಆಗಿದ್ದ ವಸುಂಧರಾ ರಾಜೇ ಕಾರ್ಮಿಕ ಕಾನೂನು ಸುಧಾರಣೆ ಆರಂಭಿಸಿದ್ದರು. ಗುತ್ತಿಗೆ ನೌಕರರ ನೇಮಕ ಹಾಗೂ ವಜಾಗೆ ಇರುವ ನಿಯಮಗಳನ್ನು ಸಡಿಸಲಾಯಿತು. ಹೊಸದಾಗಿ ಕಾರ್ಮಿಕ ಒಕ್ಕೂಟಗಳ ಸಂಘಟನೆ ಆರಂಭಿಸುವುದಕ್ಕಿ ನಿಯಮಗಳನ್ನು ಕಠಿಣ ಮಾಡಲಾಯಿತು. ಭಾರತದ ಕಂಪೆನಿಗಳು, ಎಕನಾಮಿಕ್ ಸರ್ವೇ ಆಫ್ ಇಂಡಿಯಾ ಬಹುಪರಾಕ್ ಹೇಳಿದವು. ದುರದೃಷ್ಟ ಏನೆಂದರೆ, ಅದಕ್ಕೆ ಸಮಯ ಸರಿ ಇರಲಿಲ್ಲ. ರಾಜಸ್ಥಾನದಲ್ಲಿ ವೇತನ ಪ್ರಮಾಣ ಸಿಕ್ಕಾಪಟ್ಟೆ ಕುಸಿಯಿತು. ನಿರುದ್ಯೋಗ ಪ್ರಮಾಣ ಹೆಚ್ಚಾಯಿತು. ಅಪನಗದೀಕರಣ ಪರಿಣಾಮವಾಗಿ ರಾಜ್ಯದ ಜಿಡಿಪಿಗೆ ಪೆಟ್ಟು ಬಿತ್ತು. ಆರ್ಥಿಕ ಚಟುವಟಿಕೆಗಳು ತಣ್ಣಗಾದವು. ಸುಧಾರಣೆಗಳನ್ನು ಜಾರಿಗೆ ತರುವುದು ತಡವಾಯಿತು. 2019ರಲ್ಲಿ ಸರ್ಕಾರವೇ ಬದಲಾಯಿತು.

ಕಾರ್ಮಿಕ ಕಾನೂನಿನಿಂದ 1000 ದಿನಗಳ ವಿನಾಯಿತಿ

ಕಾರ್ಮಿಕ ಕಾನೂನಿನಿಂದ 1000 ದಿನಗಳ ವಿನಾಯಿತಿ

ಇನ್ನು ಮೋದಿ ನೇತೃತ್ವದ ಸರ್ಕಾರ ಎರಡನೇ ಅವಧಿಗೆ ಆಯ್ಕೆಯಾದ ಮೇಲೆ ಸಂಪೂರ್ಣವಾಗಿ ರಾಜಕೀಯ ವಿಚಾರಗಳಿಗೆ ಗಮನ ನೀಡಿತು. ಜಮ್ಮು- ಕಾಶ್ಮೀರ ವಿಶೇಷ ಕಾಯ್ದೆ ರದ್ದು, ಪೌರತ್ವ ಕಾನೂನು ತಿದ್ದುಪಡಿ ಇಂಥದ್ದಕ್ಕೆ ದೃಷ್ಟಿ ನೆಟ್ಟು, ಆರ್ಥಿಕ ಕಾನೂನು ವಿಚಾರಗಳ ಕಡೆಗೆ ಗಮನ ಹರಿಸಲೇ ಇಲ್ಲ. ಬ್ಯಾಂಕಿಂಗ್ ಸುಧಾರಣೆ, ತೆರಿಗೆ ಕಾನೂನಿನ ಬಗ್ಗೆ ತಿದ್ದುಪಡಿ, ದಿವಾಳಿ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸಬೇಕಾದ ಕಡೆ ಪ್ರಯತ್ನವೇ ಸಾಗಲಿಲ್ಲ. ಈ ನಿಯಮಗಳನ್ನು ಶಾಸಕಾಂಗದ ಮೂಲಕವೇ ಜಾರಿಗೆ ತರಬೇಕು ಎನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿಕೊಂಡು, ಅದೇ ಮುಖ್ಯ ಸ್ಥಾನ ಪಡೆಯಿತು. ಯಾವಾಗ ಹೊಸದಾಗಿ ಬಂದ ಮಧ್ಯಪ್ರದೇಶ ಸರ್ಕಾರವು ಹೊಸ ಹೂಡಿಕೆದಾರರಿಗೆ ಕಾರ್ಮಿಕ ಕಾನೂನಿನಿಂದ 1000 ದಿನಗಳ ವಿನಾಯಿತಿ ನೀಡಿತೋ, ಆಗ ಎಲ್ಲರೂ ಅಚ್ಚರಿಗೆ ಒಳಗಾದರು. ಕಾರ್ಮಿಕ ನಿರೀಕ್ಷಕರ ಜಾಗದಲ್ಲಿ ಯಾವುದೋ ಸರ್ಟಿಫಿಕೇಷನ್ ಪಡೆದ ವ್ಯಕ್ತಿಗಳು ಇರುತ್ತಾರೆ. ಈಗೆಲ್ಲ ಹೊಸ ಘಟಕಗಳಿಗೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದು ಬಲು ಸಲೀಸು. ಕಾರ್ಮಿಕ ಒಕ್ಕೂಟಗಳು ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ಆಡಳಿತ ಮಂಡಳಿ ಜತೆ ಚೌಕಾಸಿ ಮಾಡಲು ಸಾಧ್ಯವಿಲ್ಲ.

ಇನ್ನು ಮುಂದೆ ಎರಡು ಬಗೆಯ ಕಾನೂನು ಕಾಣಲು

ಇನ್ನು ಮುಂದೆ ಎರಡು ಬಗೆಯ ಕಾನೂನು ಕಾಣಲು

ಇನ್ನು ಮುಂದೆ ಎರಡು ಬಗೆಯ ಕಾನೂನು ಕಾಣಲು ಸಾಧ್ಯವಿದೆ. ಈಗಾಗಲೇ ಇರುವ ಕೈಗಾರಿಕೆಗಳಿಗೆ ಒಂದು ಕಾನೂನಾದರೆ, ಹೊಸದಾಗಿ ಆರಂಭಿಸುವುದಕ್ಕೆ ಪೂರ್ತಿಯಾಗಿ ವಿನಾಯಿತಿ ಇರುವ ಕಾನೂನು. ಇಂಥ ಬದಲಾವಣೆಗೆ ಜನರು ಪ್ರತಿಕ್ರಿಯೆ ನೀಡುವ ಮುನ್ನವೇ ಸರಳ ಆದೇಶ ಹೊರಡಿಸಿಬಿಟ್ಟಿದ್ದಾರೆ. ಉತ್ತರಪ್ರದೇಶ ಸರ್ಕಾರವು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ, ಜೀತದಾಳು ವ್ಯವಸ್ಥೆ (ನಿರ್ಮೂಲನೆ) ಕಾಯ್ದೆ ಹಾಗೂ ಪೇಮೆಂಟ್ ಆಫ್ ವೇಜಸ್ ಕಾಯ್ದೆಯ ಸೆಕ್ಷನ್ 5 ಈ ಮೂರನ್ನು ಹೊರತುಪಡಿಸಿ ಎಲ್ಲ ಕಾನೂನನ್ನು ಮೂರು ವರ್ಷಗಳ ತನಕ ತೆಗೆಯಲಾಗಿದೆ. ಗುಜರಾತ್ ನಲ್ಲಿ ಸಾವಿರದಿನ್ನೂರು ದಿನಕ್ಕೆ ತೆಗೆಯಲಾಗಿದೆ. ಅಸ್ಸಾಂನಲ್ಲಿ ನಿರ್ದಿಷ್ಟ ಅವಧಿಗೆ ಕಾರ್ಮಿಕರನ್ನು ನೇಮಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಇನ್ನು ಕೆಲಸ ಮಾಡುವ ಅವಧಿಯಲ್ಲಿ ಎಂಟರಿಂದ ಹನ್ನೆರಡು ಗಂಟೆ ಶಿಫ್ಟ್ ಗೆ ಹೆಚ್ಚಿಸಲಾಗಿದೆ. ಇದೇ ರೀತಿಯ ಕಾನೂನು ಬದಲಾವಣೆಗೆ ರಾಜಸ್ಥಾನ ಹಾಗೂ ಪಂಜಾಬ್ ಕೂಡ ಸಿದ್ಧತೆ ನಡೆಸಿದೆ.

ವ್ಯಾಪಾರ- ವ್ಯವಹಾರ ಸುಲಭವಾಗಿ ಮಾಡಲು ಆಗಲ್ಲ

ವ್ಯಾಪಾರ- ವ್ಯವಹಾರ ಸುಲಭವಾಗಿ ಮಾಡಲು ಆಗಲ್ಲ

ಕೊರೊನಾ ಬಂದಿದೆ. ಅದರಿಂದ ಆರ್ಥಿಕ ‌ಚಟುವಟಿಕೆಗೆ ಹೊಡೆತ ಬಿದ್ದಿದೆ. ಆದ್ದರಿಂದ ವ್ಯಾಪಾರ- ಕೈಗಾರಿಕೆಗಳಿಗೆ ಅನುಕೂಲ ಮಾಡಿಕೊಡಬೇಕು. ಆ ಮೂಲಕ ವಲಸೆ ಕಾರ್ಮಿಕರಿಗೆ ಕೆಲಸ ಸಿಗಬೇಕು ಎಂಬುದು ನಿಜ. ಆದರೆ ಈ ಉದ್ದೇಶಕ್ಕೂ ಹನ್ನೆರಡು ಗಂಟೆ ಶಿಫ್ಟ್ ಗೂ ಏನಾದರೂ ಸಂಬಂಧ ಇದೆಯಾ? ಹಾಗೊಂದು ವೇಳೆ ಅಗತ್ಯ ಇದ್ದಲ್ಲಿ ಶಿಫ್ಟ್ ಸಮಯ ಕಡಿಮೆ ಮಾಡಿ, ಇರುವ ಜನರನ್ನು ಶಿಫ್ಟ್ ಗಳ್ಳಲ್ಲಿ ಬರುವಂತೆ ಹೇಳಬಹುದಿತ್ತು. ಕೊರೊನಾದ ಕಾರಣಕ್ಕೆ ಚೀನಾದಿಂದ ಹೊರಬರುತ್ತಿರುವ ಕೈಗಾರಿಕೆಗಳು ಭಾರತದಲ್ಲಿ ತಳವುರಲು ವ್ಯವಸ್ಥೆ ಮಾಡಬೇಕು ಎಂಬುದು ಸದ್ಯಕ್ಕೆ ಕೇಳಿಬರುತ್ತಿರುವ ಮಾತು. ಆದರೆ ಕಳೆದ ಕೆಲ ವರ್ಷದಿಂದ ಭಾರತದಲ್ಲಿ ಹೂಡಿಕೆ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿವೆ. ಅದಕ್ಕೆ ಕಠಿಣವಾದ ಕಾರ್ಮಿಕ ಕಾನೂನು ಮಾತ್ರ ಕಾರಣ ಅಲ್ಲ್. ಇಲ್ಲಿ ವ್ಯಾಪಾರ, ವ್ಯವಹಾರ ಸುಲಭವಾಗಿ ಮಾಡಲು ಆಗಲ್ಲ ಎಂಬುದು ಸೇರಿ ಹಲವು ತಕರಾರುಗಳಿವೆ.

ಭಾರತದ ಮೊದಲ ಕಾನೂನು ಬಂದಿದ್ದು 1850ರಲ್ಲಿ

ಭಾರತದ ಮೊದಲ ಕಾನೂನು ಬಂದಿದ್ದು 1850ರಲ್ಲಿ

ಆದರೆ, ಕೊರೊನಾ ನಂತರ ಎಲ್ಲ ವಲಯದಲ್ಲಿ ಆಲೋಚನೆ ಬದಲಾಗಿದೆ. ಭಾರತದ ಮೊದಲ ಕಾನೂನು ಬಂದಿದ್ದು 1850ರಲ್ಲಿ. ಅದು ಅಪ್ರೆಂಟೀಸ್ ಕಾಯ್ದೆ. ಆಗೆಲ್ಲ ಅನಾಥ ಮಕ್ಕಳು ಕೈಗಾರಿಕೆಗಳಿಗೆ ಸೇರಬೇಕಿತ್ತು. ಅವರಿಗೆ ತರಬೇತು ಕೊಡಲಾಗುತ್ತಿತ್ತು. ಭೋಪಾಲ್ ಅನಿಲ ದುರಂತದಿಂದ ಪರಿಸರ ಸಂರಕ್ಷಣೆ ಕಾಯ್ದೆ ಬಗ್ಗೆ ಪರಿಚಯ ಮಾಡಲಾಯಿತು. 1958ರಿಂದ ಸರಣಿ ಕಲ್ಲಿದಲು ಗಣಿ ಸ್ಪೋಟದಿಂದ ಅಲ್ಲಿನ ಕಾರ್ಮಿಕರ ಸ್ಥಿತಿ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಾಧ್ಯವಾಯಿತು. ಪರಿಣಾಮವಾಗಿ 1973ರಲ್ಲಿ ಆ ವಲಯದ ರಾಷ್ಟ್ರೀಕರಣ ಮಾಡಲಾಯಿತು. ದುರಂತ ಏನೆಂದರೆ, ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳು ಕಾರ್ಮಿಕ ಕಾನೂನಿಗೆ ತಿದ್ದುಪಡಿ ತರಲು ಹೊರಟಿರುವ ಸಮಯ ಕಠಿಣವಾಗಿದೆ. ಕೇಂದ್ರದಲ್ಲಿನ ಮೋದಿ ಸರ್ಕಾರ ನ್ಯಾಷನಲ್ ಮಿನಿಮಮ್ ವೇಜ್ ಜಾರಿಗೆ ತರಬೇಕು ಅಂತಿದೆ. ಆದರೆ ಈಗ ರಾಜ್ಯ ಸರ್ಕಾರಗಳು ಜಾರಿಗೆ ತರಲು ಹೊರಟಿರುವ ನಿಯಮಗಳಿಗೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕಾರ್ಮಿಕರ ಕಾನೂನುಗಳಿಗೆ ಸಂಬಂಧಿಸಿದ ತೀರ್ಮಾನ ಕೈಗೊಳ್ಳಲು ಅವಕಾಶ ನೀಡಿದ್ದು ಈ ದೇಶದ ಇತಿಹಾಸದಲ್ಲಿಯೇ ಅತ್ಯಂತ ದುರ್ಬಲ ಕ್ಷಣ. ಇದನ್ನು ಅರ್ಥ ಮಾಡಿಕೊಳ್ಳಬೇಕು ಕಾರ್ಮಿಕರ ಹಿತ ರಕ್ಷಣೆ ಆಗಬೇಕು ಎನ್ನುತ್ತವೆ ಕಾರ್ಮಿಕ ಒಕ್ಕೂಟಗಳು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+