ಬೆಂಗಳೂರು, ಸೆಪ್ಟೆಂಬರ್ 3: ಪ್ರಸಿದ್ದವಾದ ಮಾವಳ್ಳಿ ಟಿಫಿನ್ ರೂಮ್ ಅಥವಾ ಎಮ್.ಟಿ.ಆರ್ ಬ್ರಾಂಡ್ ಇಂದು ಹೆಚ್ಚಿನ ಭಾರತೀಯರ ಮನೆಯ ಹಾಸುಹೊಕ್ಕಿದೆ. ಎಮ್.ಟಿ.ಆರ್. ಬ್ರಾಂಡ್ ಹೆಸರಿನಲ್ಲಿ, ಬೇಕಾದಷ್ಟು ತಿಂಡಿ ತಿನಸುಗಳು, ಸ್ವೀಟ್ಸ್ ಗಳು, ವ್ಯವಸ್ಥಿತವಾಗಿ ಪ್ಯಾಕ್ ಮಾಡಿದ ಆಕರ್ಷಕ ಪ್ಯಾಕೆಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಬಂದಿವೆ. ದಕ್ಷಿಣ ಭಾರತದ, ಪ್ರಿಯವಾದ ರವೆ ಇಡ್ಲಿ, ಗುಲಾಬ್ ಜಾಮೂನು ನಾಜೂಕಾಗಿ ಪ್ಯಾಕ್ ಮಾಡಿದ ಪೊಟ್ಟಣಗಳಲ್ಲಿ ಲಭ್ಯವಿದೆ.
ಇವೆಲ್ಲಕ್ಕೂ ಮಾತೃ ಸ್ಥಾನದಂತೆ ನಿಂತಿರುವ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿರುವ ಮಾವಳ್ಳಿ ಟಿಫಿನ್ ರೂಮ್ ನಲ್ಲಿ ಕನಿಷ್ಠ 800 ರವೆ ಇಡ್ಲಿಗಳು ಮತ್ತು 1,000 ಮಸಾಲೆ ದೋಸೆಗಳನ್ನು ಪೂರೈಸುತ್ತಿದೆ. ವಾರಾಂತ್ಯದಲ್ಲಿ ಇದರ ಪ್ರಮಾಣವು ದ್ವಿಗುಣಗೊಳ್ಳುತ್ತದೆ.!

ಸುಮಾರು 100 ವರ್ಷದ ಇತಿಹಾಸವನ್ನು ಹೊಂದಿರುವ ಎಂಟಿಆರ್ ನ ಮೂರನೇ ತಲೆಮಾರಿನ ಮಾಲೀಕರಾಗಿರುವ ವಿಕ್ರಂ ಮೈಯ ಅವರು ಎಂಟಿಆರ್ ಭಾರತದ ಗಡಿಯಾಚೆ ವಿಸ್ತರಿಸಲು ಪ್ಲ್ಯಾನ್ ಮಾಡಿದ್ದಾರೆ. ಮಾವಳ್ಳಿ ಟಿಫಿನ್ ರೂಮ್ ಬೇರುಗಳು ಬೆಂಗಳೂರಿನ ಲಾಲ್ ಬಾಗ್ ನಲ್ಲಿದ್ದು , ಪರಂಪಲ್ಲಿ ಯಜ್ಞ ನಾರಾಯಣ ಮಯ್ಯ ಮತ್ತು ಸೋದರರು ಸೇರಿ 1924ರಲ್ಲಿ ಇದನ್ನು ಸ್ಥಾಪಿಸಿದ್ದರು. ಇದೀಗ ಭಾರತ ಖ್ಯಾತ ಬ್ರ್ಯಾಂಡ್ ಆಗಿ ಬೆಳೆದು ನಿಂತಿರುವ ಮಾವಳ್ಳಿ ಟಿಫಿನ್ ರೂಮ್ ತವರು ರಾಜ್ಯ ಕರ್ನಾಟಕದಲ್ಲಿ 12 ಔಟ್‌ಲೆಟ್‌ಗಳನ್ನು ಹೊಂದಿದೆ. ಎಂಟಿಆರ್ ಅನ್ನು ಅಂತರಾಷ್ಟ್ರೀಯ ಬ್ರಾಂಡ್ ಮಾಡಲು ವಿಕ್ರಂ ಮಯ್ಯ ಮತ್ತು ಸಹೋದರ ಸಹೋದರಿಯ ಮುಂದಡಿ ಇಟ್ಟಿದ್ದಾರೆ.
"ಲಾಲ್‌ಬಾಗ್‌ನಿಂದ ಸಿಯಾಟಲ್‌ವರೆಗೆ ಎಲ್ಲಿಯಾದರೂ ಮತ್ತು ಎಲ್ಲೆಡೆಯೂ MTR ಇರಬಹುದು. ಇಂದು ಲಂಡನ್, ಸಿಯಾಟಲ್, ಸಿಂಗಾಪುರ್, ದುಬೈ ಮತ್ತು ವಿಶ್ವದ ಇನ್ನೂ ಮೂರು ನಗರಗಳಲ್ಲಿ MTR ಸ್ಥಾಪನೆಯಾಗಿದೆ. MTR ಸದ್ಯ 100 ನೇ ವರ್ಷದ ವಾರ್ಷಿಕೋತ್ಸವದಲ್ಲಿದ್ದುಇದು ಟೊರೊಂಟೊದಲ್ಲಿಯೂ ಔಟ್ ಲೆಟ್ ಹೊಂದಿದೆ. ಆದರೆ ನಾವು ನಮ್ಮ ಔಟ್ ಲೆಟ್ ವಿಸ್ತರಣೆಯ ಯೋಜನೆಗಳನ್ನು ಎಚ್ಚರಿಕೆಯಿಂದ ಮಾಡುತ್ತಿದ್ದು ನಮ್ಮ ಕುಟುಂಬದ ರಹಸ್ಯ ಪಾಕವಿಧಾನಗಳನ್ನು ಎಂದಿಗೂ ರಾಜಿ ಮಾಡಲಾಗುವುದಿಲ್ಲ ಎನ್ನುತ್ತಾರೆ" ವಿಕ್ರಂ ಮಯ್ಯ.
"ರೆಸ್ಟಾರೆಂಟ್ ವ್ಯವಹಾರ ಹೊರಗಿನಿಂದ ನೋಡಲು ಆಕರ್ಷಣೆ ಮತ್ತು ಫ್ಯಾನ್ಸಿಯಾಗಿದ್ದುಆದರೆ ಒಳಗಿನಿಂದ ಗಮನಿಸಿದ್ರೆ ತೀರಾ ಒತ್ತಡದಾಯಕವಾಗಿದೆ" ಎನ್ನುತ್ತಾರೆ ಎಂಟಿ ಆರ್ ಸರಣಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ 50 ವರ್ಷದ ಮೈಯಾ. ಇವರೊಂದಿಗೆ ಸಹೋದರಿ ಹೇಮಾಮಾಲಿನಿ (53) ಮತ್ತು ಸಹೋದರ ಅರವಿಂದ್ (40) ಜೊತೆ ಇದ್ದು ಕಿರಿಯ ಸಹೋದರಿ ಪ್ರಿಯದರ್ಶನಿ (45) ಸೈಲೆಂಟ್ ಪಾರ್ಟರ್ ಆಗಿದ್ದಾರೆ.
ಮಯ್ಯ ಸಹೋದರರು ತಮ್ಮನ್ನು ಸ್ವಾತಂತ್ರ್ಯದ ಮೊದಲು ಮೂಲ MTR ಬೆಂಗಳೂರಿಗೆ ಪರಿಚಯಿಸಿದ ನಾವೀನ್ಯತೆಯ ರಕ್ಷಕರಾಗಿ ನೋಡುತ್ತಾರೆ. ಇಂದು MTR ಸಂಸ್ಥೆಯೂ ಅವರ ಪ್ರತಿಸ್ಪರ್ಧಿಗಳೂ ಮೆಚ್ಚುವಂತೆ ಬೆಳೆದುನಿಂತಿದೆ. "ನಮ್ಮ ಆಹಾರ ಸಂಸ್ಕೃತಿಯನ್ನು ಜೀವಂತವಾಗಿಡಲು ಮೈಯ ಕುಟುಂಬ ತಮ್ಮ ಜೀವನವನ್ನು, ಪೀಳಿಗೆಯಿಂದ ಪೀಳಿಗೆಗೆ ಸಮರ್ಪಿಸಿದ್ದಾರೆ. ನಾವು ಎಂಟಿಆರ್ ಲಾಲ್‌ಬಾಗ್ ರಸ್ತೆಯ ಶಾಖೆಗೆ ಭೇಟಿ ನೀಡಿದಾಗಲೆಲ್ಲಾ ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸಿರುವುದನ್ನು ನಾವು ನೋಡುತ್ತೇವೆ "ಎಂದು ಮೂರು ವರ್ಷಗಳ ಹಿಂದೆ ತನ್ನ ಸಹೋದರಿ ದಿವ್ಯಾ ಅವರೊಂದಿಗೆ ರಾಮೇಶ್ವರಂ ಕೆಫೆಯನ್ನು ಪ್ರಾರಂಭಿಸಿದ ಎಂಟಿಆರ್‌ನ ಅತಿದೊಡ್ಡ ವ್ಯವಹಾರಿಕ ಪ್ರತಿಸ್ಪರ್ಧಿ ರಾಘವೇಂದ್ರ ರಾವ್ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
MTR ಎಂದರೆ Gen Z ತಲೆಮಾರಿನಿಂದ, 70 ವರ್ಷ ವಯಸ್ಸಿನವರೆಗೆ ಮತ್ತು ರಾಜಕಾರಣಿಗಳಿಂದ ಹಿಡಿದು ಚಲನಚಿತ್ರ ತಾರೆಯರವರೆಗೂ ಎಲ್ಲರೂ ತುಪ್ಪದ ಘಮವಿರುವ ಬಿಸಿಬೇಳೆ ಭಾತ್, ನಯವಾದ ರವಾ ಇಡ್ಲಿಗಳು ಮತ್ತು ಹಬೆಯಾಡುವ ಬಿಸಿ ಫಿಲ್ಟರ್ ಕಾಫಿಯ ಬಗ್ಗೆ ಸೆಳೆತ ಹೊಂದಿದವರಾಗಿದ್ದಾರೆ. MTR ಹಳೆಯ ಮೈಸೂರು ಪ್ರದೇಶದ ಬ್ರಾಹ್ಮಣ ಆಹಾರ ಮತ್ತು ಸಂಪ್ರದಾಯಗಳಲ್ಲಿ ಅನುಸರಿಸುತ್ತಿದ್ದು ಇಂದಿಗೂ ಯಾರೂ ಚಪ್ಪಲಿ ಹಾಕಿಕೊಂಡು ಅಡುಗೆ ಕೋಣೆಗೆ ಬರುವಂತಿಲ್ಲ.
"ಎಂಟಿಆರ್ ಕೇವಲ ರೆಸ್ಟೋರೆಂಟ್ ಅಲ್ಲ; ಇದು ಕಟ್ಟಡದಲ್ಲಿ ಸುತ್ತಿದ ಇತಿಹಾಸ. ಸ್ವಾತಂತ್ರ್ಯದಿಂದ ಹಿಡಿದು ಎರಡನೇ ಮಹಾಯುದ್ಧ ಮತ್ತು ತುರ್ತುಪರಿಸ್ಥಿತಿಯವರೆಗೂ ಅದು ಎಲ್ಲದಕ್ಕೂ ಸಾಕ್ಷಿಯಾಗಿದೆ. ಬೆಂಗಳೂರು ಹೈಟೆಕ್ ಸಿಟಿಯಾಗಿ ಮಾರ್ಪಟ್ಟಿದ್ದರೂ, ಎಂಟಿಆರ್ ಹಳೆಯ ನಗರಕ್ಕೆ ಪೋರ್ಟಲ್ ಆಗಿ ಉಳಿದಿದೆ ಎಂದು ಇತಿಹಾಸ ತಜ್ಞೆ ರೂಪಾ ರೈ ಹೇಳಿದ್ದಾರೆ.
ವಿಕ್ರಮ್ ಮಯ್ಯ MTR ನ ಅಂತರರಾಷ್ಟ್ರೀಯ ಬ್ರಾಂಡ್ ಅನ್ನು ನಿರ್ಮಿಸಲು ಫ್ರಾಂಚೈಸ್ ಲಾಭ-ಹಂಚಿಕೆಯ ಮಾದರಿಯನ್ನು ಬಳಸುತ್ತಿದ್ದಾರೆ. ಅವರ ಪ್ರಮುಖ ಅವಶ್ಯಕತೆ ಸರಳವಾಗಿದೆ ಆದರೆ ನಿರ್ಣಾಯಕವಾಗಿದೆ. ಬಾಣಸಿಗರು ಪ್ರಮುಖರಾಗಿದ್ದು ಅಂತರಾಷ್ಟ್ರೀಯ ಔಟ್ ಲೆಟ್ ಗೆ ಬಾಣಸಿಗರನ್ನು ಆಯ್ಕೆ ಮಾಡಿದ ನಂತರ, ಅವರು ಲಾಲ್‌ಬಾಗ್‌ನಲ್ಲಿರುವ ಮಾವಳ್ಳಿ ಟಿಫಿನ್ ರೂಮ್ ಅಡುಗೆ ಕೋಣೆಯಲ್ಲಿ ಒಂದು ವರ್ಷ ತರಬೇತಿ ನೀಡುತ್ತಾರೆ. ಇಲ್ಲಿ ಅವರು ಒಂದು ಶತಮಾನದಿಂದ ನಿಕಟವಾಗಿ ಕಾಪಾಡಲ್ಪಟ್ಟ ಪಾಕ ಪದ್ದತಿಯ ರಹಸ್ಯಗಳ ಅಭ್ಯಾಸಿಸುತ್ತಾರೆ.
ವಿಕ್ರಮ್ ಮಯ್ಯ ಕುಟುಂಬ ವ್ಯವಹಾರಕ್ಕೆ ಬರುವ ನಿರೀಕ್ಷೆ ಇಟ್ತುಕೊಂಡವರಲ್ಲ. 1999ರಲ್ಲಿ ತಂದೆ ತೀರಿಕೊಂಡಾಗ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಎಂಟಿಆರ್‌ಗೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಆದ ಅವರ ಸಹೋದರಿ ಹೇಮಾ ಅಧಿಕಾರ ವಹಿಸಿಕೊಳ್ಳಲು ಮುಂದಾದರು. ಪುರುಷ ಪ್ರಧಾನವಾಗಿದ್ದ ಉದ್ಯಮದಲ್ಲಿ ಲಿಂಗಭೇದಭಾವದ ಅನುಭವಿಸಿದ್ದರು. ಬಳಿಕ ಮಯ್ಯ ಅವರು ಕೂಡಾ ಸಹೋದರಿಗೆ ಜೊತೆಯಾಗಿ ಇಂದು ಎಂ.ಟಿ .ಆರ್ ನ್ನು ಅಂತರಾಷ್ಟಿಯ ಮಟ್ಟಕ್ಕೆ ಬೆಳೆಸಿದರು.
More From GoodReturns

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Weather Today: ಮುಂದಿನ ವಾರದಿಂದ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು; ಜನರೇ ಎಚ್ಚರ

Bengaluru Gold: ಬೆಂಗಳೂರಿನ ಚಿನ್ನ ಪ್ರಿಯರಿಗೆ ಶಾಕ್; ದಿಢೀರ್ 7000 ರೂ. ಏರಿಕೆ ಕಂಡ ಬಂಗಾರ

Karnataka Budget 2026–27: ಬೆಂಗಳೂರು ಮೂಲಸೌಕರ್ಯ ಮತ್ತು ಕಲ್ಯಾಣ ಯೋಜನೆಗಳಿಗೆ ಒತ್ತು ಸಾಧ್ಯತೆ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Karnataka Budget 2026: 4.49 ಲಕ್ಷ ಕೋಟಿಯ ದಾಖಲೆ ಬಜೆಟ್…ಈ ಬಜೆಟ್ನಲ್ಲಿ ಜನಸಾಮಾನ್ಯರಿಗೆ ಸಿಕ್ಕ ಕೊಡುಗೆ ಏನು?

Karnataka Budget 2026 Live Updates: ಕರ್ನಾಟಕ ಬಜೆಟ್ನ ಪ್ರಮುಖ ಘೋಷಣೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ

Mandya ARAI Centre: ಮಂಡ್ಯಕ್ಕೆ ಮತ್ತೊಂದು ಮೆಗಾ ಗಿಫ್ಟ್…500 ಕೋಟಿ ಹೂಡಿಕೆಯಲ್ಲಿ ARAIನ ಸುಧಾರಿತ ಕೇಂದ್ರ ಸ್ಥಾಪನೆ!

North Karnataka: ಕೈಗಾರಿಕೆ, ಕೃಷಿ, ಶಿಕ್ಷಣ..ಉತ್ತರ ಕರ್ನಾಟಕಕ್ಕೆ ಸರ್ಕಾರದಿಂದ ಸಿಕ್ಕ ಹೊಸ ಯೋಜನೆಗಳು ಏನು?

ಕರ್ನಾಟಕ ಬಜೆಟ್ 2026: ಕೃಷಿ, ಶಿಕ್ಷಣ, ಸಾರಿಗೆ, ವೈದ್ಯಕೀಯ ಕ್ಷೇತ್ರಗಳ ನಿರೀಕ್ಷೆ ಏನು? ಬಜೆಟ್ ಮೇಲೆ ಭಾರಿ ಬೇಡಿಕೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications