ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಯೆಸ್ ಬ್ಯಾಂಕ್ ನಲ್ಲಿ ಎಷ್ಟು ಹೂಡಿಕೆ?

ಯೆಸ್ ಬ್ಯಾಂಕ್ ನ ಪುನಾರಚನೆಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಶುಕ್ರವಾರದಂದು ಪ್ರಸ್ತಾವಿತ ಯೋಜನೆಯೊಂದನ್ನು ಮುಂದಿರಿಸಿದೆ. ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವ ಬಗ್ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉತ್ಸಾಹ ವ್ಯಕ್ತಪಡಿಸಿದೆ. ಆ ಬ್ಯಾಂಕ್ ನ ಪುನಾರಚನೆಯಲ್ಲೂ ಪಾಲ್ಗೊಳ್ಳುವ ಬಗ್ಗೆ ಕೂಡ ಮಾಹಿತಿ ನೀಡಿದೆ.

ಯೆಸ್ ಬ್ಯಾಂಕ್ ನಲ್ಲಿ 49ರಷ್ಟು ಪಾಲಿಗಾಗಿ 2450 ಕೋಟಿ ರುಪಾಯಿ ತನಕ ಎಸ್ ಬಿಐ ಹೂಡಿಕೆ ಮಾಡಬಹುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಸಾರ್ವಜನಿಕರಿಂದ, ಬ್ಯಾಂಕ್ ಷೇರುದಾರರಿಂದ, ಠೇವಣಿದಾರರಿಂದ ಮತ್ತು ಸಾಲಗಾರರಿಂದ ಪ್ರಸ್ತಾವಿತ ಯೋಜನೆ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ಆಹ್ವಾನಿಸಿದೆ.

ಯೆಸ್ ಬ್ಯಾಂಕ್ ಗ್ರಾಹಕರು ಭಯ ಪಡಬೇಕಿಲ್ಲ: ನಿರ್ಮಲಾ ಸೀತಾರಾಮನ್

ಮಾರ್ಚ್ 9ರ ಸೋಮವಾರದ ತನಕ ಸಲಹೆಗಳನ್ನು ಸ್ವೀಕರಿಸಲಾಗುತ್ತದೆ. ಆ ನಂತರ ನಿರ್ಧಾರ ಮಾಡಬಹುದು. ಇದಕ್ಕೂ ಮುನ್ನ ಶುಕ್ರವಾರದಂದು ಮಾತನಾಡಿದ್ದ ರಿಸರ್ವ್ ಬ್ಯಾಂಕ್ ನ ಗೌರ್ನರ್ ಶಕ್ತಿಕಾಂತ್ ದಾಸ್, ಆರ್ಥಿಕ ವಲಯದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವ ಭರವಸೆ ನೀಡಿದ್ದರು.

SBIದಿಂದ ಯೆಸ್ ಬ್ಯಾಂಕ್ ನಲ್ಲಿ ಎಷ್ಟು ಹೂಡಿಕೆ?

ಗುರುವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಯೆಸ್ ಬ್ಯಾಂಕ್ ಮೇಲೆ ಕೆಲವು ನಿರ್ಬಂಧ ಹಾಕಿತ್ತು. ಬ್ಯಾಂಕ್ ನ ಗ್ರಾಹಕರು ಮಾರ್ಚ್ 5ರಿಂದ ಏಪ್ರಿಲ್ 3ರ ಮಧ್ಯೆ 50 ಸಾವಿರ ರುಪಾಯಿವರೆಗೆ ಮಾತ್ರ ವಿಥ್ ಡ್ರಾ ಮಾಡಬಹುದು ಎಂದಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+