ಲಾಕ್ ಡೌನ್ ನಿಂದ 7,27,500 ಕೋಟಿಗೂ ಹೆಚ್ಚು ನಷ್ಟದ ಅಂದಾಜು

ಕೊರೊನಾ ಹರಡದಂತೆ ತಡೆಯುವುದಕ್ಕೆ ದೇಶದಾದ್ಯಂತ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಈ ಲಾಕ್ ಡೌನ್ ನಿಂದ ಆಗುವ ಆರ್ಥಿಕ ಪರಿಣಾಮ ಏನು ಗೊತ್ತೆ? ಭಾರತದ ಆರ್ಥಿಕತೆ $ 4.64 ಬಿಲಿಯನ್ ನಷ್ಟ ಅನುಭವಿಸಲಿದೆ ಎನ್ನಲಾಗುತ್ತಿದೆ. ಅಕ್ಯುಟ್ ರೇಟಿಂಗ್ಸ್ ಅಂಡ್ ರೀಸರ್ಚ್ ಈ ಬಗ್ಗೆ ತನ್ನ ವರದಿಯಲ್ಲಿ ತಿಳಿಸಿದೆ.

ಪ್ರತಿ ದಿನದ ನಷ್ಟವನ್ನು ಜಿಡಿಪಿ ನಷ್ಟಕ್ಕೆ ಲೆಕ್ಕ ಹಾಕಿ ಹೇಳುವುದಾದರೆ 21 ದಿನದ ಲಾಕ್ ಡೌನ್ ಅವಧಿಯಲ್ಲಿ $ 98 ಬಿಲಿಯನ್ ನಷ್ಟ ಆಗುವ ಅಂದಾಜು ಮಾಡಲಾಗಿದೆ. 7,27,500 ಕೋಟಿ ರುಪಾಯಿಗೂ ಹೆಚ್ಚು ನಷ್ಟ ಆಗಲಿದೆ ಎಂದು ವರದಿಯಲ್ಲಿ ದಾಖಲಿಸಲಾಗಿದೆ.

"FY21 ಮೊದಲ ತ್ರೈಮಾಸಿಕದ ನಿಜವಾದ ಜಿಡಿಪಿಯ ಅಂದಾಜನ್ನು ಮಾಡುವುದಕ್ಕೆ ಹಲವು ಪದ್ಧತಿ ಅನುಸರಿಸಿದ್ದೇವೆ. ಕೊರೊನಾ ಮುಂಚಿನ ಅವಧಿಗಿಂತ ಬೆಳವಣಿಗೆ ದರವು 5-6 ಪರ್ಸೆಂಟ್ ಕಡಿಮೆ ಆಗಬಹುದು" ಎಂದು ರೇಟಿಂಗ್ ಏಜೆನ್ಸಿ ಸಿಇಒ ತಿಳಿಸಿದ್ದಾರೆ.

ಲಾಕ್ ಡೌನ್ ನಿಂದ 7,27,500 ಕೋಟಿಗೂ ಹೆಚ್ಚು ನಷ್ಟದ ಅಂದಾಜು

ಕೊರೊನಾದಿಂದ ಟ್ರಾನ್ಸ್ ಪೋರ್ಟ್, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು, ರಿಯಲ್ ಎಸ್ಟೇಟ್ ಚಟುವಟಿಕೆಗಳ ಮೇಲೆ ತೀವ್ರ ತರವಾದ ಪರಿಣಾಮ ಆಗಲಿದೆ. ಈ ವಲಯಗಳಲ್ಲಿ GVA (ಗ್ರಾಸ್ ವ್ಯಾಲ್ಯೂ ಆಡೆಡ್) 50% ನಷ್ಟ ಆಗುವ ಅಂದಾಜಿದೆ. ಇದರ ಪರಿಣಾಮವಾಗಿ FY21 ಮೊದಲ ತ್ರೈಮಾಸಿಕದ ಒಟ್ಟಾರೆ GVAನಲ್ಲಿ 22% ನಷ್ಟ ಆಗಬಹುದು ಎಂದು ಅಂದಾಜಿಸಲಾಗಿದೆ.

ಕೊರೊನಾ ಅವಧಿಯಲ್ಲಿ ಸಂವಹನ, ಪ್ರಸಾರ ಹಾಗೂ ಹೆಲ್ತ್ ಕೇರ್ ನಲ್ಲಿ ವಿಸ್ತರಣೆ ಆಗಿದೆ. ಒಟ್ಟಾರೆ GVAಯಲ್ಲಿ ಈ ವಲಯಗಳ ಕೊಡುಗೆ 3.5% ಇದೆ. ಇನ್ನು ಕೃಷಿ ಚಟುವಟಿಕೆಯಲ್ಲಿ ದೊಡ್ಡ ವ್ಯತ್ಯಾಸ ಆಗದಿದ್ದರೂ ಕೃಷಿ ಮೇಲೆ ಅವಲಂಬಿತವಾದ ಇತರ ಚಟುವಟಿಕೆಗಳ ಮೇಲೆ ಪರಿಣಾಮ ಆಗಲಿದೆ.

ಕೊರೊನಾದ ಆರ್ಥಿಕ ಹೊಡೆತದಿಂದ ಚೇತರಿಸಿಕೊಳ್ಳಲು ಕನಿಷ್ಠ ಎರಡು- ಮೂರು ತಿಂಗಳು ಬೇಕಾಗಬಹುದು ಎಂದು ಅಭಿಪ್ರಾಯ ಪಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+