ನವದೆಹಲಿ, ಡಿಸೆಂಬರ್ 18: ಯೂನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ವಹಿವಾಟುಗಳಲ್ಲಿ ಗಣನೀಯ ಬೆಳವಣಿಗೆ ಕಂಡು ಬರುತ್ತಿದೆ. ಡಿಜಿಟಲ್ ಯುಗದಲ್ಲಿ ಟೀ ಅಂಗಡಿಯಲ್ಲೂ ಮಂದಿ ಫೋನ್ ಪೇ, ಗೂಗಲ್ ಪೇ ಅನ್ನು ಬಳಕೆ ಮಾಡುತ್ತಿದ್ದಾರೆ. ಅದೇ ರೀತಿ ನೀವು UPI ಐಡಿಯನ್ನು ಬಳಸುವ ಮೂಲಕ ನೀವು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು. ನಿಮ್ಮ ಬಳಿ ನಗದು ಹಣವಿಲ್ಲದಿರುವಾಗ ಅಥವಾ ನಗದನ್ನು ನಿಭಾಯಿಸಲು ಬಯಸದಿದ್ದಾಗ ಸಹಾಯ ಮಾಡುತ್ತದೆ.
ದಿನಸಿ ವಸ್ತುಗಳನ್ನು ಖರೀದಿಸುವುದರಿಂದ ಹಿಡಿದು ವಿದ್ಯುತ್ ಬಿಲ್‌ಗಳನ್ನು ಪಾವತಿಸುವವರೆಗೆ ಬಹುತೇಕ ಕಡೆಗಳಲ್ಲಿ ಡಿಜಿಟಲ್ ಪೇಮೆಂಟ್ ಅನ್ನು ಸ್ವೀಕರಿಸಲಾಗುತ್ತಿದೆ. ಆದಾಗ್ಯೂ, ನೀವು ವರ್ಗಾವಣೆ ಮಾಡಬಹುದಾದ ಮೊತ್ತ ಮತ್ತು UPI ಮೂಲಕ ನೀವು ಮಾಡಬಹುದಾದ ವಹಿವಾಟುಗಳ ಸಂಖ್ಯೆಯ ಮೇಲೆ ಕೆಲವು ಮಿತಿಗಳಿವೆ. ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರಕಾರ, ಒಬ್ಬ ವ್ಯಕ್ತಿಯು ಒಂದೇ ದಿನದಲ್ಲಿ ಯುಪಿಐ ಮೂಲಕ1 ಲಕ್ಷದವರೆಗೆ ಮಾತ್ರ ಹಣವನ್ನು ವರ್ಗಾಯಿಸಬಹುದು.
ಗೂಗಲ್ ಪೇ, ಪೇಟಿಎಂ ಮತ್ತು ಫೋನ್ ಪೇ ಯುಪಿಐ ವಹಿವಾಟುಗಳನ್ನು ಮಾಡಲು ಸಾಮಾನ್ಯವಾಗಿ ಬಳಸುವ ಕೆಲವು ಅಪ್ಲಿಕೇಶನ್‌ಗಳಾಗಿವೆ. ಈ ಪ್ಲಾಟ್‌ಫಾರ್ಮ್‌ಗಳು ವಿವಿಧ ಗರಿಷ್ಠ ಮಿತಿಗಳನ್ನು ಹೊಂದಿದ್ದು, ಪಾವತಿ ವ್ಯವಸ್ಥೆಯನ್ನು ಬಳಸಿಕೊಂಡು ನೀವು ಎಷ್ಟು ಹಣವನ್ನು ವರ್ಗಾಯಿಸಬಹುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳಿ.
ಅಮೆಜಾನ್ ಪೇ ಗರಿಷ್ಠ ಮಿತಿ
ಒಂದೇ ದಿನದಲ್ಲಿ 1 ಲಕ್ಷದವರೆಗಿನ UPI ವಹಿವಾಟುಗಳನ್ನು ಅಮೆಜಾನ್ ಪೇ ಅನುಮತಿಸುತ್ತದೆ. ಆದರೆ ಅಮೆಜಾನ್ ಪೇನಲ್ಲಿ ನೋಂದಾಯಿಸಿದ ಮೊದಲ 24 ಗಂಟೆಗಳ ಗರಿಷ್ಠ ಮಿತಿಯನ್ನು 5,000 ರೂಪಾಯಿಗೆ ನಿಗದಿಪಡಿಸಲಾಗಿದೆ.
ಗೂಗಲ್ ಪೇ ಗರಿಷ್ಠ ಮಿತಿ
ಅಮೆಜಾನ್ ಪಾವತಿ ಪ್ಲಾಟ್‌ಫಾರ್ಮ್‌ನಂತೆ, ನೀವು ಗೂಗಲ್ ಪೇ ಮೂಲಕವೂ 1 ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ಕಳುಹಿಸಲು ಸಾಧ್ಯವಿಲ್ಲ. ದಿನಕ್ಕೆ ವಹಿವಾಟುಗಳ ಸಂಖ್ಯೆಯ ಮೇಲೆ ಮಿತಿಯನ್ನು ಹಾಕಲಾಗಿದೆ. ಎಲ್ಲಾ UPI ಅಪ್ಲಿಕೇಶನ್‌ಗಳಲ್ಲಿ ಒಂದೇ ದಿನದಲ್ಲಿ ಒಬ್ಬರು 10 ಬಾರಿ ಹೆಚ್ಚು ಹಣವನ್ನು ಕಳುಹಿಸಲಾಗುವುದಿಲ್ಲ.
ಪೇಟಿಎಂ ಗರಿಷ್ಠ ಮಿತಿ
ಪೇಟಿಎಂ ಯುಪಿಐ ಮೂಲಕ ಒಂದು ದಿನದಲ್ಲಿ ವರ್ಗಾಯಿಸಬಹುದಾದ ಗರಿಷ್ಠ ಮೊತ್ತದ ಮೇಲಿನ ಮಿತಿಯು 1 ಲಕ್ಷ ರೂಪಾಯಿ ಆಗಿದೆ. ಪೇಟಿಎಂ ಯುಪಿಐ ಮುಖೇನ ಒಂದು ಗಂಟೆಯಲ್ಲಿ 20,000 ವರೆಗಿನ ವಹಿವಾಟುಗಳನ್ನು ಅನುಮತಿಸುತ್ತದೆ. ಪೇಟಿಎಂ ಯುಪಿಐ ಮೂಲಕ ಗಂಟೆಗೆ ಗರಿಷ್ಠ ಐದು ವಹಿವಾಟು ಮತ್ತು ದಿನಕ್ಕೆ ಗರಿಷ್ಠ 20 ವಹಿವಾಟುಗಳ ಮಿತಿಯನ್ನು ಹೇರಲಾಗಿದೆ.
ಫೋನ್ ಪೇ ಗರಿಷ್ಠ ಮಿತಿ
ಫೋನ್‌ಪೇ ಬಳಕೆದಾರರಿಗೆ ಒಂದು ದಿನದಲ್ಲಿ 1 ಲಕ್ಷ ರೂಪಾಯಿವರೆಗೆ ವಹಿವಾಟು ಮಾಡಲು ಅನುಮತಿಸುತ್ತದೆ. ಇದು ವ್ಯಕ್ತಿಯು ಹಣವನ್ನು ವರ್ಗಾಯಿಸುವ ಬ್ಯಾಂಕ್ ಖಾತೆಯ ಮೇಲೆ ಅವಲಂಬಿಸಿರುತ್ತದೆ. ಈ ಅಪ್ಲಿಕೇಶನ್‌ಗಳಿಗೆ ದೈನಂದಿನ UPI ವರ್ಗಾವಣೆ ಮಿತಿಯು ನೀವು ಬಳಸುತ್ತಿರುವ ಬ್ಯಾಂಕ್ ಅನ್ನು ಅವಲಂಬಿಸಿರುತ್ತದೆ.


Click it and Unblock the Notifications