ದೇಶದಲ್ಲಿ ಕೊರೊನಾ ವೈರಸ್‌ನ ಅಬ್ಬರ ಹೆಚ್ಚಾಗುತ್ತಲೇ ಸಾಗಿದೆ. ಸೋಂಕು ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ಲಾಕ್‌ಡೌನ್ ಮೂರು ಬಾರಿ ವಿಸ್ತರಣೆಯಾಗಿದೆ. ಎರಡು ಹಂತದ ಲಾಕ್‌ಡೌನ್‌ಗಳನ್ನು ಬಹಳ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದ ಸರಕಾರ, ಮೂರನೇ ಹಂತದ ಲಾಕ್‌ಡೌನ್‌ನಲ್ಲಿ ಹಲವು ಸಡಿಲಿಕೆಗಳನ್ನು ನೀಡಿದೆ. ಇದರಲ್ಲಿ ಅಂತರ್ ಜಿಲ್ಲಾ ಪ್ರಯಾಣಕ್ಕೆ ಅವಕಾಶ ನೀಡಿರುವುದು ಒಂದು.
ಕರ್ನಾಟಕದಿಂದಲೂ ಬೇರೆ ಜಿಲ್ಲೆಗಳಿಗೆ, ಅಂತರ್ ರಾಜ್ಯಗಳಿಗೆ ಹೋಗುವ ಅವಕಾವಿದೆ. ಆದರೆ, ಇದಕ್ಕಾಗಿ ಜನರು ಸರಕಾರದಿಂದ ಇ- ಪಾಸ್ ಪಡೆಯಬೇಕಾದ ಅಗತ್ಯ ಇದೆ. ಅನೇಕರು ಯಾವುದೋ ಊರುಗಳಲ್ಲಿ ಸಿಲುಕಿಕೊಂಡಿದ್ದಾರೆ. ಇಂತವರು ತಮ್ಮ ಊರಿಗೆ ವಾಪಸ್ಸಾಗಲೆಂದೇ ಈ ಆನ್‌ಲೈನ್ ಸೇವೆಯನ್ನು ನೀಡಲಾಗಿದೆ. ಇದಕ್ಕಾಗಿ ಕರ್ನಾಟಕ ಸರ್ಕಾರದ ಪ್ರತ್ಯೇಕ ವೆಬ್‌ಸೈಟ್ https://sevasindhu.karnataka.gov.in ಭೇಟಿ ನೀಡಿ ನೀವು ಅಲ್ಲಿ ಈ-ಪಾಸ್ ಸುಲಭವಾಗಿ ಪಡೆಯಬಹುದು. ಹೇಗೆ ಇ-ಪಾಸ್ ಪಡೆಯುವುದು ಎಂಬುದಕ್ಕೆ ಈ ಕೆಳಗೆ ಮಾಹಿತಿ ಇದೆ ಓದಿ.
ಕರ್ನಾಟಕದ ಇತರೆ ಜಿಲ್ಲೆಗಳಿಗೆ ಪ್ರಯಾಣಿಸಲು ಅರ್ಜಿ ಸಲ್ಲಿಕೆ
ಕರ್ನಾಟಕ ಸರ್ಕಾರದ https://sevasindhu.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಿದಾಗ ಮುಖ್ಯ ಪೇಜ್‌ನಲ್ಲಿ ನಿಮಗೆ ''ಕೋವಿಡ್-19 : ಕರ್ನಾಟಕದ ಇತರೆ ಜಿಲ್ಲೆಗಳಿಗೆ ಪ್ರಯಾಣಿಸಲು ಇಲ್ಲಿ ಅರ್ಜಿ ಸಲ್ಲಿಸಿ'' ಎಂಬಲ್ಲಿ ಮೊದಲು ಕ್ಲಿಕ್ ಮಾಡಿ ಆ ಮೂಲಕ ನೀವು ಪ್ರಯಾಣಿಸಲು ಬೇಕಾಗಿರುವ ಅರ್ಜಿ ಸಲ್ಲಿಕೆ ವಿಭಾಗ ತೆರೆದುಕೊಳ್ಳುತ್ತದೆ.
ಅರ್ಜಿದಾರರು ಮೊದಲಿಗೆ ಪ್ರಯಾಣಿಕರ ವಿವರಣಗಳನ್ನು ನಮೂದಿಸಬೇಕಾಗುತ್ತದೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಬೇಕಾತ್ತದೆ.
ಮೊಬೈಲ್‌ಗೆ ಬರುವ 'ಒಟಿಪಿ' ದೃಢೀಕರಿಸಿ
ಅರ್ಜಿ ಸಲ್ಲಿಸುವ ಕಾಲಂನಲ್ಲಿ ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆಯನ್ನು ದೃಢೀಕರಿಸಲು 'ಒಟಿಪಿ' ಬರುತ್ತದೆ. ಆರು ಸಂಖ್ಯೆಗಳ ಒಟಿಪಿಯನ್ನು ನೀವು ವೆಬ್‌ಸೈಟ್‌ನಲ್ಲಿ ನಮೂದಿಸಿದಾಗ ಪರಿಶೀಲಿಸಲಾಗಿದೆ ಎಂದು ಬರುತ್ತದೆ. ಆ ಬಳಿಕ ಮುಂದಿನ ವಿವರಗಳನ್ನು ನೀವು ಎಂಟ್ರಿ ಮಾಡಬೇಕು. ಲಿಂಗ, ವಯಸ್ಸು, ಪ್ರಯಾಣಿಕರ ಆಧಾರ್ ಸಂಖ್ಯೆ, ನೀವು ಯಾವ ಪ್ರಯಾಣಿಕರ ವರ್ಗಕ್ಕೆ ಸೇರಿದ್ದೀರಿ? ಯಾವ ಕಾರಣಕ್ಕೆ ಪ್ರಯಾಣ ಮಾಡುತ್ತಿದ್ದೀರಿ ಎಂದು ಮಾಹಿತಿ ನೀಡಬೇಕು.
ನಿಮ್ಮ ಪ್ರಸ್ತುತ ವಿಳಾಸ, ತಲುಪಬೇಕಾದ ವಿಳಾಸ ಎಂಟ್ರಿ ಮಾಡಿ
ಪ್ರಯಾಣಿಕರ ವಿವರಗಳ ಜೊತೆಗೆ ನಿಮ್ಮ ಪ್ರಸ್ತುತ ವಿಳಾಸವನ್ನು ನಮೂದಿಸಬೇಕು. ವಿಳಾಸದ ಜೊತೆಗೆ ಪೋಸ್ಟಲ್ ಕೋಡ್ ಹಾಕಬೇಕು. ಜೊತೆಗೆ ನೀವು ತಲುಪಬೇಕಾದ ವಿಳಾಸವನ್ನು ನೀಡಬೇಕಾಗುವುದು.
ವಾಹನದ ವ್ಯವಸ್ಥೆ ಕುರಿತು ಮಾಹಿತಿ ನೀಡಬೇಕು
ನೀವು ಬೇರೆ ಜಿಲ್ಲೆಗಳಿಗೆ ತೆರಳುವ ವಾಹನ ಬಾಡಿಗೆಯೇ, ಅಥವಾ ಸ್ವಂತದ್ದೇ ಎಂದು ನೀವು ಆಯ್ಕೆ ಮಾಡಬೇಕಾಗುತ್ತದೆ. ಪ್ರಯಾಣಿಸುವ ವಾಹನ ಬೈಕ್, ಕಾರು, ಎಸ್‌ಯುವಿಯಲ್ಲಿ ಯಾವುದು ಎಂದು ಆಯ್ಕೆ ಮಾಡಿ. ಬಳಿಕ ವಾಹನ ಸಂಖ್ಯೆ, ಪ್ರಯಾಣದ ದಿನಾಂಕ, ಡ್ರೈವರ್‌ನ ಐಡಿ ಕಾರ್ಡ್(ವೋಟರ್ ಐಡಿ, ಆಧಾರ್, ಡ್ರೈವಿಂಗ್ ಲೈಸೆನ್ಸ್) ನಮೂದಿಸಿದ ಬಳಿಕ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಸಂಖ್ಯೆಯನ್ನು ತಿಳಿಸಬೇಕು.
ಇದರ ಜೊತೆಗೆ ನಿಮ್ಮ ಜೊತೆಯಲ್ಲಿ ಪ್ರಯಾಣಿಸುವವರ ಹೆಸರು, ವಯಸ್ಸು, ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
ಒಂದು ಕಾರಿನಲ್ಲಿ ನಾಲ್ವರಿಗೆ ಮಾತ್ರ ಪ್ರಯಾಣಿಸಲು ಅವಕಾಶ
ಹೌದು ಅರ್ಜಿದಾರರು, ಡ್ರೈವರ್ ಸೇರಿ ಒಟ್ಟಾರೆ ಒಂದು ಕಾರಿನಲ್ಲಿ ನಾಲ್ವರು ಪ್ರಯಾಣಿಸಲು ಮಾತ್ರ ಅವಕಾಶವಿದೆ. ಹೆಚ್ಚಿಗೆ ಸಂಖ್ಯೆಯ ಪ್ರಯಾಣಿಕರಿಗೆ ಎಂಟ್ರಿ ಇರುವುದಿಲ್ಲ. ಹೀಗಾಗಿ ಪ್ರಯಾಣಿಕರು ಮುಖ್ಯವಾಗಿ ಇದನ್ನು ಗಮನದಲ್ಲಿಟ್ಟುಕೊಳ್ಳಿ.
ಎಲ್ಲವನ್ನೂ ಎಂಟ್ರಿ ಮಾಡಿದ ಬಳಿಕ ಕೊನೆಯಲ್ಲಿ Submit ಬಟನ್ ಕ್ಲಿಕ್ ಮಾಡಿ. ನಂತರ ನಿಮ್ಮ ಆಧಾರ್ ಅಥವಾ ಯಾವುದಾದರೂ ವ್ಯಾಲಿಡ್ ಐಡಿ ಕಾರ್ಡ್ ಅನ್ನು ಅಟ್ಯಾಚ್ ಮಾಡಿ ಒಕೆ ಮಾಡಿದ ಬಳಿಕ ನಿಮ್ಮ ಪ್ರಯಾಣದ ಅರ್ಜಿಯು, ನೀವು ಪ್ರಸ್ತುತ ಇರುವ ಜಿಲ್ಲಾಧಿಕಾರಿಗೆ ತಲುಪುತ್ತದೆ. ಪರಿಶೀಲಿಸಿದ ಬಳಿಕ ನಿಮಗೆ ಇ-ಪಾಸ್ ಸಿಗುತ್ತದೆ.
ಇದೇ ರೀತಿಯಲ್ಲಿ ಇತರೆ ರಾಜ್ಯಗಳಿಗೆ ಪ್ರಯಾಣಿಸ ಬೇಕಾದರೆ ಪ್ರತ್ಯೇಕ ಅರ್ಜಿ ವಿಭಾಗವಿದ್ದು, ಈ ಮೇಲ್ಕಂಡ ರೀತಿಯಲ್ಲಿ ವಿವರಗಳನ್ನು ನಮೂದಿಸಿ ಇ-ಪಾಸ್ ಪಡೆದುಕೊಳ್ಳಬಹುದು.


Click it and Unblock the Notifications