For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

|

ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number(PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ. ಉಚಿತವಾಗಿ ಇ-ಪ್ಯಾನ್ ಕಾರ್ಡ್ ನೀಡುವ ಯೋಜನೆ ಮುಂದಿನ ಕೆಲವು ವಾರಗಳಲ್ಲಿ ಫೆಬ್ರವರಿ ತಿಂಗಳಿನಲ್ಲಿ ಪ್ರಾರಂಭಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿದೆ.

ಅರ್ಜಿ ಸಲ್ಲಿಸಲಿರುವ ವ್ಯಕ್ತಿಯ ವಿವರಗಳನ್ನು ಆಧಾರ್ ಮೂಲಕ ತೆಗೆದುಕೊಳ್ಳಲಾಗುವುದು. ಇದರಿಂದ ಪ್ಯಾನ್ ಕಾರ್ಡ್ ದಾರರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ.

ಏನಿದು ಇ ಪ್ಯಾನ್: ಎಲೆಕ್ಟ್ರಾನಿಕ್-ಪ್ಯಾನ್ ಕಾರ್ಡ್ ಇದರ ವಿಸ್ತೃತ ರೂಪ. ಇ ಪ್ಯಾನ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು.

ಸುಲಭವಾಗಿ ಇ ಪ್ಯಾನ್ ಪಡೆಯುವುದು ಹೇಗೆ? ಸರಳ ವಿಧಾನ ಇಲ್ಲಿದೆ

ಇ ಪ್ಯಾನ್ ಕಾರ್ಡ್ ವಿಶೇಷ ಹೇಗೆ?
* ಇ ಪ್ಯಾನ್ ಅರ್ಜಿಯಲ್ಲಿ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.
* ಆಧಾರ್ ಸಂಖ್ಯೆಗೆ ಜೋಡಿಸಿರುವ ಅಧಿಕೃತ ಫೋನ್ ನಂಬರ್ ಪರಿಶೀಲಿಸಲಾಗುವುದು
* ನಿಮ್ಮ ಅಧಿಕೃತ ಫೋನ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರಲಿದೆ.
* ಯಾವುದೇ ಬೇರೆ ದಾಖಲೆ ಒದಗಿಸುವ ಅಗತ್ಯವಿಲ್ಲ.
* ಹೊಸ PAN ಸೃಷ್ಟಿಯಾಗುತ್ತಿದ್ದಂತೆ, ಡಿಜಿಟಲ್ ಸಹಿಯುಳ್ಳ ಇ-ಪ್ಯಾನ್ ವಿತರಿಸಲಾಗುವುದು.
* ಇದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಇದರಲ್ಲಿ ಭೌಗೋಳಿಕ ಮಾಹಿತಿ, ಅರ್ಜಿದಾರರನ ಭಾವಚಿತ್ರ ಇರಲಿದೆ. ಎಲ್ಲಾ ಮಾಹಿತಿಯೂ encrypt ಆಗಿರುವುದರಿಂದ ಮಾಹಿತಿ ಸುರಕ್ಷವಾಗಿರಲಿದೆ.

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
* UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್ NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ
* ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ
* ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
* ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ.
* 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
* ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ. ಆದರೆ,ಇ ಪ್ಯಾನ್ ತಕ್ಷಣವೇ ಸಿಗುವುದರಿಂದ ಆದಾಯ ತೆರಿಗೆ ಇಲಾಖೆಯು ಕಾರ್ಡ್ ಗಳನ್ನು ಮನೆ ವಿಳಾಸಕ್ಕೆ ಕಳಿಸುವ ಅಗತ್ಯವಿಲ್ಲ.

***
ಲಿಂಕ್ ಪರಿಶೀಲನೆ ಹೇಗೆ?
* ನೀವು ಈ ಮೊದಲೇ ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಆಗಿರದಿದ್ದರೆ,
1. ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ ಗೆ ಭೇಟಿ ಕೊಡಿ.
2. ಅಲ್ಲಿ ಆಧಾರ್ - ಪ್ಯಾನ್ ಕಾರ್ಡ್ ಲಿಂಕ್ ಮಾಡುವ ಐಕಾನ್ ಕ್ಲಿಕ್ಕಿಸಿರಿ.
3. ಆಗ ಓಪನ್ ಆಗುವ ಡಯಲಾಗ್ ಬಾಕ್ಸ್ ನಲ್ಲಿ ನಿಮ್ಮ ಪ್ಯಾನ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಸಂಖ್ಯೆ, ಆಧಾರ್ ಕಾರ್ಡ್ ನಲ್ಲಿರುವ ಮಾದರಿಯಲ್ಲಿ ನಿಮ್ಮ ಹೆಸರನ್ನು ಅಲ್ಲಿ ಕೊಟ್ಟಿರುವ ಜಾಗಗಳಲ್ಲಿ ಭರ್ತಿ ಮಾಡಿರಿ. ಕ್ಯಾಪ್ಚಾ ಮಾಹಿತಿ ಎಂಟರ್ ಮಾಡಿ.
4. ನಂತರ, ಸಬ್ ಮಿಟ್ ಬಟನ್ ಕ್ಲಿಕ್ಕಿಸಿದರೆ, ಈ ಕಾರ್ಡ್ ಆಗಲೇ ಆಧಾರ್ ಗೆ ಲಿಂಕ್ ಆಗಿದೆಯೆಂಬ ಸಂದೇಶ ಬರುತ್ತದೆ.

English summary

How to get e-Pan Card using Aadhaar number

Here are the steps to get e-Pan Card using Aadhaar number from Income Tax department official website.
Story first published: Friday, February 7, 2020, 17:32 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X