ನವದೆಹಲಿ, ಏಪ್ರಿಲ್ 7: ಇತ್ತೀಚೆಗೆ ಸೈಬರ್ ವಂಚನೆ ಪ್ರಕರಣ ಅಥವಾ ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆನ್‌ಲೈನ್ ವಹಿವಾಟುಗಳ ಹೆಚ್ಚಳದೊಂದಿಗೆ ಸೈಬರ್ ವಂಚಕರು ಹೆಚ್ಚು ಆಧುನಿಕವಾಗುತ್ತಿದ್ದಾರೆ ಮತ್ತು ಬ್ಯಾಂಕ್ ಖಾತೆಯಿಂದ ಹಣವನ್ನು ಕದಿಯಲು ಹೊಸ ಮಾರ್ಗಗಳನ್ನು ಕಂಡುಹಿಡಿಯುತ್ತಿದ್ದಾರೆ. ಹೀಗಾಗಿ ಸಾಧ್ಯವಷ್ಟು ಎಚ್ಚರಿಕೆಯಿಂದ ವ್ಯವಹರಿಸುವುದು ಉತ್ತಮ.
ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಕಿರಿಯ ವೈದ್ಯರೊಬ್ಬರು ತಮ್ಮ ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ಇತ್ತೀಚೆಗೆ ಕಿರಿಕಿರಿ ಅನುಭವಿಸಿದರು. ಅದಕ್ಕೂ ಮೊದಲು ಅವರಿಗೊಂದು ಕರೆ ಬಂದಿತ್ತು. ಅವರ ಬಳಿ ಇದ್ದ ಕ್ರೆಡಿಟ್ ಮಿತಿಯನ್ನು ಹೆಚ್ಚಳವಾಗಿದೆ. ಇದಕ್ಕಾಗಿ ಅವರು ಕೆಲವು ಪ್ರೋಸೀಜರ್ ಫಾಲೋ ಮಾಡಬೇಕಿತ್ತು. ಆದರೆ ಕ್ರೆಡಿಟ್ ಮಿತಿ ಹೆಚ್ಚಳವಾಗುವ ಬದಲು ಅವರ ಖಾತೆಯಿಂದ 2 ಲಕ್ಷ ರೂ. ಕಡಿತಗೊಂಡಿತ್ತು. ಆ ಬಳಿಕ ಆ ಡಾಕ್ಟರ್ ಪೊಲೀಸರಿಗೆ ದೂರು ನೀಡಿದ್ದರು.

ಇಂತಹ ವಂಚನೆ ಪ್ರಕರಣಗಳಿಂದ ಗ್ರಾಹಕರ ಹಣವನ್ನು ರಕ್ಷಿಸಲು, ಗ್ರಾಹಕರ ಗುರುತನ್ನು ರಕ್ಷಿಸಲು, ವಂಚನೆಯನ್ನು ತಡೆಗಟ್ಟಲು ಮತ್ತು ಆನ್‌ಲೈನ್ ಗ್ರಾಹಕರ ಅನುಭವವನ್ನು ಸುಧಾರಿಸಲು ಗ್ರಾಹಕರ ಗುರುತನ್ನು ರಕ್ಷಿಸಲು, ವಂಚನೆಯನ್ನು ತಡೆಗಟ್ಟಲು ಮತ್ತು ಆನ್‌ಲೈನ್ ಗ್ರಾಹಕರ ಅನುಭವವನ್ನು ಸುಧಾರಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿದೆ. ಮತ್ತೊಂದೆಡೆ ಆರ್‌ಬಿಐ ನಿಗದಿಪಡಿಸಿದ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ಗ್ರಾಹಕರು ನವೀಕರಿಸುವುದು ಬಹಳ ಮುಖ್ಯವಾಗುತ್ತದೆ.
RBI ಪ್ರಕಾರ, ಫೋನ್ ಬ್ಯಾಂಕಿಂಗ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಆನ್‌ಲೈನ್ ಪಾವತಿ ಗೇಟ್‌ವೇ ಸಮಸ್ಯೆಗಳಂತಹ ಮಾಹಿತಿ ಕೊರತೆ ಅಥವಾ ಬ್ಯಾಂಕಿಂಗ್ ಸಮಸ್ಯೆಗಳಿಂದ ನೀವು ವಂಚನೆಗೆ ಬಲಿಯಾದರೆ, ನೀವು ದೂರು ಸಲ್ಲಿಸಬಹುದು. ಜೊತೆಗೆ, ಥರ್ಡ್ ಪಾರ್ಟ್ ಯಿಂದ ಭದ್ರತೆಗೆ ಲೋಪವಾಗಿ ನಿಮ್ಮ ಖಾತೆಯಿಂದ ಹಣವನ್ನು ಕಡಿತಗೊಂಡರೆ, ಅದಕ್ಕೆ ನೀವು ಅಥವಾ ಬ್ಯಾಂಕ್ ಜವಾಬ್ದಾರರಾಗಿರುವುದಿಲ್ಲ, ಕಳೆದುಹೋದ ಹಣವನ್ನು ಮರುಪಾವತಿಸಲಾಗುತ್ತದೆ.
ಒಂದು ವೇಳೆ ನೀವು ವಂಚನೆಗೆ ಒಳಗಾಗಿದ್ದರೆ, ನೀವು 3 ದಿನಗಳಲ್ಲಿ ಬ್ಯಾಂಕ್‌ಗೆ ಲಿಖಿತವಾಗಿ ತಿಳಿಸಬೇಕು ಎಂದು ಆರ್‌ಬಿಐ ಮಾರ್ಗಸೂಚಿಗಳು ಹೇಳುತ್ತವೆ. ನೀವು ವಂಚನೆಯ ಬಗ್ಗೆ 4 ರಿಂದ 7 ದಿನಗಳಲ್ಲಿ ವರದಿ ಮಾಡಿದರೂ ಸಹ, ನಿಮ್ಮ ಹಣವನ್ನು ಮರುಪಡೆಯಲು ನಿಮಗೆ ಇನ್ನೂ ಅವಕಾಶವಿದೆ.
ಆರ್‌ಬಿಐ ಮಾರ್ಗಸೂಚಿಗಳ ಹೊರತಾಗಿಯೂ ಬ್ಯಾಂಕ್‌ಗಳು ಗ್ರಾಹಕರಿಗೆ ಹಣ ಮರುಪಾವತಿ ಮಾಡುವುದನ್ನು ಮುಂದೂಡಬಹುದು ಎಂದು ದೆಹಲಿ ಪೊಲೀಸ್ ಸೈಬರ್ ತಜ್ಞ ಕಿಸ್ಲೇ ಚೌಧರಿ ಎಚ್ಚರಿಸಿದ್ದಾರೆ. ಇದಕ್ಕಾಗಿ ಮರುಪಾವತಿ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯ ಕ್ರಮ ಯಾವುದೆಲ್ಲ ಎಂಬುವುದನ್ನು ಈ ಕೆಳಗಿನಂತೆ ವಿವರಿಸಿದ್ದಾರೆ.
ಹಂತ 1
ನೀವು ಆನ್‌ಲೈನ್ ವಂಚನೆಯನ್ನು ಎದುರಿಸಿದರೆ, ಅದೇ ದಿನ ಹತ್ತಿರದ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರನ್ನು ಸಲ್ಲಿಸಲು ಶಿಫಾರಸು ಮಾಡಲಾಗಿದೆ. ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ನೋಂದಾಯಿಸಿಕೊಳ್ಳುವುದು ಉತ್ತಮ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ, ದೂರು ಸಲ್ಲಿಸುವುದನ್ನು ಮರೆಯಬೇಡಿ.
ಹಂತ 2
ವಂಚನೆಗೊಳಗಾದ ದಿನ ಅಥವಾ ಮರುದಿನ , ಪೊಲೀಸ್ ಠಾಣೆಯಲ್ಲಿ ನೀಡಿದ ರಶೀದಿಯೊಂದಿಗೆ ನಿಮ್ಮ ಬ್ಯಾಂಕ್‌ಗೆ ಭೇಟಿ ನೀಡಿ. ಬ್ಯಾಂಕ್‌ನಲ್ಲಿ ವಂಚನೆ ಅರ್ಜಿಯನ್ನು ಸಿದ್ಧಪಡಿಸಿ ಮತ್ತು ಪೊಲೀಸ್ ರಶೀದಿಯೊಂದಿಗೆ ಸಲ್ಲಿಸಿ.
ಹಂತ 3
ಮೂರನೇ ಹಂತವು ಎರಡೂ ಡಾಕ್ಯುಮೆಂಟ್‌ಗಳ ಸಾಫ್ಟ್ ಕಾಪಿಗಳನ್ನು RBI ನ ಇಮೇಲ್ ಐಡಿ [email protected] ಗೆ ಕಳುಹಿಸಬೇಕಾಗುತ್ತದೆ, ಹಾಗೆಯೇ ನಿಮ್ಮ ಬ್ಯಾಂಕ್‌ನ ಇಮೇಲ್ ಐಡಿಯನ್ನು ನೀವು ಮಾಡಿರುವ ಮೇಲ್ ನ CC ಯಲ್ಲಿ ಸೇರಿಸಲು ಮರೆಯಬೇಡಿ. ನೀವು ಇದೆಲ್ಲವನ್ನು 3 ದಿನಗಳಲ್ಲಿ ಪೂರ್ಣಗೊಳಿಸಬೇಕು.
ಹಣವನ್ನು ಮರಳಿ ಅರ್ಹರಾಗಿರುವುದಿಲ್ಲ?
ವಂಚನೆಗೊಳಾದ 7 ದಿನಗಳ ನಂತರ ಪೊಲೀಸರಿಗೆ ಅಥವಾ ಇಬ್ಬರೂ ಬ್ಯಾಂಕ್‌ಗೆ ವರದಿ ಮಾಡಿದರೆ ಹಣ ರಿಕವರಿ ಮಾಡಲಾಗುವುದಿಲ್ಲ. ಬಿಟ್‌ಕಾಯಿನ್, ಆನ್‌ಲೈನ್ ಕರೆನ್ಸಿ, ಆನ್‌ಲೈನ್ ಆಟಗಳು ಅಥವಾ ಬೆಟ್ಟಿಂಗ್‌ನಲ್ಲಿ ಕಳೆದುಹೋದ ಹಣವನ್ನು ಸಾಮಾನ್ಯವಾಗಿ ಮರುಪಡೆಯಲಾಗುವುದಿಲ್ಲ.


Click it and Unblock the Notifications