ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಸೆಪ್ಟೆಂಬರ್ ತ್ರೈಮಾಸಿಕದ ತನ್ನ ನಿವ್ವಳ ಲಾಭವನ್ನು ಘೋಷಣೆ ಮಾಡಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಘೋಷಣೆ ಮಾಡಲಾಗಿದ್ದ 2,616 ಕೋಟಿ ರೂಪಾಯಿ ನಿವ್ವಳ ಲಾಭಕ್ಕೆ ಹೋಲಿಕೆ ಮಾಡಿದಾಗ ಈ ವರ್ಷದ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ (YoY) ಸುಮಾರು ಶೇಕಡ 3.86 ರಷ್ಟು ಏರಿಕೆಯಾಗಿ, 2,717 ಕೋಟಿ ರೂಪಾಯಿಗೆ ತಲುಪಿದೆ.
ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಎಚ್‌ಯುಎಲ್‌ನ ನಿರ್ದೇಶಕರ ಮಂಡಳಿಯು ಪ್ರತಿ ಇಕ್ವಿಟಿ ಷೇರಿನ ಪ್ರತಿ ಒಂದು ರೂಪಾಯಿಯ ಮೌಲ್ಯಕ್ಕೆ 18 ರೂಪಾಯಿಗಳ ಮಧ್ಯಂತರ ಡಿವಿಡೆಂಡ್ ಅನ್ನು ಘೋಷಣೆ ಮಾಡಿದೆ. ನಿಯಂತ್ರಕ ಫೈಲಿಂಗ್‌ನ ಪ್ರಕಾರ ಸಂಸ್ಥೆಯ ಮಾರಾಟವು ಈ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 3.53 ರಷ್ಟು ಏರಿಕೆಯಾಗಿದೆ.

ಈ ತ್ರೈಮಾಸಿಕದಲ್ಲಿ ಸಂಸ್ಥೆಯ ಮಾರಾಟವು ವರ್ಷದಿಂದ ವರ್ಷಕ್ಕೆ ಶೇಕಡ 3.53 ರಷ್ಟು ಜಿಗಿತ ಕಂಡು 15,027 ಕೋಟಿ ರೂಪಾಯಿಗೆ ತಲುಪಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಸಂಸ್ಥೆಯ ಮಾರಾಟವು ಸುಮಾರು 14,514 ಕೋಟಿ ರೂಪಾಯಿ ಆಗಿತ್ತು. ಬಿಎಸ್‌ಇಯಲ್ಲಿ ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ ಷೇರಿನ ಕೊನೆಯ ವಹಿವಾಟಿನ ಬೆಲೆಯು ಶೇಕಡ 4 ರಷ್ಟು ಇಳಿಕೆಯಾಗಿ, 2549 ರೂಪಾಯಿಗೆ ತಲುಪಿದೆ.
ತ್ರೈಮಾಸಿಕಕ್ಕೆ ಬಡ್ಡಿ, ತೆರಿಗೆ, ಡೆಪ್ರಿಸಿಯೇಷನ್ ಮತ್ತು ಭೋಗ್ಯ (ಇಬಿಐಟಿಡಿಎ) ಮೊದಲ ಗಳಿಕೆಗಳು ಸುಮಾರು ಶೇಕಡ 9 ರಷ್ಟು ಏರಿಕೆಯಾಗಿ 3,694 ಕೋಟಿ ರೂಪಾಯಿಗಳಿಗೆ ತಲುಪಿದೆ. ಇಬಿಐಟಿಡಿಎ ಮಾರ್ಜಿನ್ 130 ಬೇಸಿಸ್ ಪಾಯಿಂಟ್‌ಗಳಷ್ಟು ಅಂದರೆ ಶೇಕಡ 24.6 ರಷ್ಟು ಸುಧಾರಣೆ ಕಂಡಿದೆ ಎಂದು ಕಂಪನಿಯ ನಿಯಂತ್ರಕ ಫೈಲಿಂಗ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರತಿ ಷೇರಿಗೆ 18 ರೂಪಾಯಿ ಡಿವಿಡೆಂಡ್ ಘೋಷಣೆ
ಇಂದಿನ ದಿನಾಂಕದ ಕಂಪನಿಯ ಬಿಎಸ್‌ಇ ಫೈಲಿಂಗ್ ಪ್ರಕಾರ ಮಾರ್ಚ್ 31, 2024 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷಕ್ಕೆ 1 ರೂಪಾಯಿ ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ 18 ರೂಪಾಯಿ ಮಧ್ಯಂತರ ಡಿವಿಡೆಂಡ್ ಅನ್ನು ಘೋಷಣೆ ಮಾಡಲಾಗಿದೆ. ಈ ಡಿವಿಡೆಂಡ್ ಅನ್ನು 2023ರ ನವೆಂಬರ್ 2, ನವೆಂಬರ್ 16 ರಂದು ಷೇರುದಾರರಿಗೆ ಲಾಭಾಂಶವನ್ನು ಪಾವತಿಸಲಾಗುತ್ತದೆ ಎಂದು ತಿಳಿಸಿದೆ.
ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್ ರಿಟರ್ನ್
ಹಿಂದೂಸ್ತಾನ್ ಯೂನಿಲಿವರ್ ಷೇರಿನ ಪ್ರಸ್ತುತ ಮಾರುಕಟ್ಟೆ ಬೆಲೆ ಬಿಎಸ್‌ಇಯಲ್ಲಿ 2549 ರೂಪಾಯಿ ಆಗಿದೆ. ಇದರ 52 ವಾರಗಳ ಗರಿಷ್ಠ ಬೆಲೆಯು ಪ್ರತಿ ಷೇರಿಗೆ 2768.50 ರೂಪಾಯಿ ಆಗಿದೆ. 52 ವಾರಗಳ ಕನಿಷ್ಠ ಬೆಲೆಯು ಪ್ರತಿ ಷೇರಿಗೆ 2393 ರೂಪಾಯಿ ಆಗಿದೆ. ಈ ಎಫ್‌ಎಂಸಿಜಿ ಮಾರುಕಟ್ಟೆ ಮೌಲ್ಯವು 5,98,781.59 ಕೋಟಿ ರೂಪಾಯಿ ಆಗಿದೆ.
ಎಚ್‌ಯುಎಲ್ ಷೇರು ಕಳೆದ ಒಂದು ವಾರದಲ್ಲಿ ಸುಮಾರು ಶೇಕಡ 0.42 ರಷ್ಟು ಇಳಿಕೆಯಾಗಿದೆ. ಕಳೆದ ಎರಡು ವಾರಗಳ ಅವಧಿಯಲ್ಲಿ ಸುಮಾರು ಶೇಕಡ 1.08 ರಷ್ಟು ಗಳಿಸಿದೆ. ಕಳೆದ 1 ತಿಂಗಳ ಅವಧಿಯಲ್ಲಿ ಶೇಕಡ 4.57 ರಷ್ಟು ಕುಸಿತ ಕಂಡಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಶೇಕಡ 1.28 ರಷ್ಟು ಕುಸಿತ ಕಂಡಿದೆ. ಕಳೆದ 3 ವರ್ಷಗಳಲ್ಲಿ ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಶೇಕಡ 17.02 ರಷ್ಟು ಬೆಳವಣಿಗೆಯನ್ನು ಕಂಡಿದೆ.
ಹಿಂದೂಸ್ತಾನ್ ಯೂನಿಲಿವರ್ ಡಿವಿಡೆಂಡ್ ಇತಿಹಾಸ
ಈ ವರ್ಷದ ಆರಂಭದಲ್ಲಿ, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್‌ಯುಎಲ್) ಮಾರ್ಚ್ 2023 ರ ಆರ್ಥಿಕ ವರ್ಷದಲ್ಲಿ ಪ್ರತಿ ಷೇರಿಗೆ 22 ರೂಪಾಯಿ ಅಥಾವ ಪ್ರತಿ ಷೇರಿಗೆ ಶೇಕಡ 2,200 ರಷ್ಟು ಅಂತಿಮ ಡಿವಿಡೆಂಡ್ ಅನ್ನು ಘೋಷಿಸಿದೆ. ಎಚ್‌ಯುಎಲ್ ಈಗಾಗಲೇ ಹಣಕಾಸು ವರ್ಷ 2023ರಲ್ಲಿ ತನ್ನ ಷೇರುದಾರರಿಗೆ ಪ್ರತಿ ಷೇರಿಗೆ 17 ರೂಪಾಯಿ ಮಧ್ಯಂತರ ಡಿವಿಡೆಂಡ್ ಅನ್ನು ಘೋಷಿಸಿದೆ.
ಹಣಕಾಸು ವರ್ಷ 2023 ರಲ್ಲಿ ಎಚ್‌ಯುಎಲ್ ಘೋಷಿಸಿದ ಒಟ್ಟು ಲಾಭಾಂಶವು ಪ್ರತಿ ಷೇರಿಗೆ 39 ರೂಪಾಯಿಯಷ್ಟಿತ್ತು. ಹಿಂದುಸ್ತಾನ್ ಯೂನಿಲಿವರ್ ಲಿಮಿಟೆಡ್ ಮಾರ್ಚ್ 27, 2001 ರಿಂದ 48 ಲಾಭಾಂಶಗಳನ್ನು ಘೋಷಿಸಿದೆ. ಪ್ರಸ್ತುತ ಷೇರಿನ ಬೆಲೆ 2551.30 ರೂಪಾಯಿ ಆಗಿದೆ. ಇದು ಟ್ರೆಂಡ್‌ಲೈನ್ ಪ್ರಕಾರ ಶೇಕಡ 1.53 ರಷ್ಟು ಲಾಭಾಂಶವನ್ನು ಘೋಷಿಸುತ್ತದೆ.


Click it and Unblock the Notifications