ನವದೆಹಲಿ, ಅಕ್ಟೋಬರ್ 19: ಎಫ್‌ಎಂಸಿಜಿ ಕ್ಷೇತ್ರದ ಪ್ರಮುಖ ಸಂಸ್ಥೆ ಹಿಂದುಸ್ತಾನ್ ಯೂನಿಲಿವರ್ ತನ್ನ 2ನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಸಂಸ್ಥೆಯ ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ನಿವ್ವಳ ಲಾಭದಲ್ಲಿ ಶೇಕಡ 9 ರಷ್ಟು ಏರಿಕೆಯಾಗಿದ್ದು, 2,187 ಕೋಟಿ ರೂ.ಗೆ ತಲುಪಿದೆ, ಇದು ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಯನ್ನು ಮೀರಿದೆ. ತಜ್ಞರು 2,217 ಕೋಟಿ ರೂ ಎಂದು ನಿರೀಕ್ಷಿಸಿದ್ದರು.
ಸೋಪ್-ಇಂದ-ಶಾಂಪೂ ಉತ್ಪನ್ನ ತಯಾರಕ ಸಂಸ್ಥೆ ಹಿಂದುಸ್ತಾನ್ ಯೂನಿಲಿವರ್ (ಎಚ್ಎಎಲ್) ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯಿಂದ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 17ರಷ್ಟು ಹೆಚ್ಚಳ ಕಂಡು ಬಂದಿದ್ದು, 12,724 ಕೋಟಿ ರು ಬಂದಿದ್ದು, ಇದು ಕೂಡಾ ಮಾರುಕಟ್ಟೆ ವಿಶ್ಲೇಷಕರ ನಿರೀಕ್ಷೆಯಂತೆ ಬಂದಿದೆ.
ಉತ್ತಮ ಫಲಿತಾಂಶ ಹೊರ ಬಂದ ಬೆನ್ನಲ್ಲೇ ಕಂಪನಿಯ ಮಂಡಳಿಯು ಇಂದು ತನ್ನ ಮಂಡಳಿಯ ಸಭೆಯ ನಂತರ 15 ರೂ ಪ್ರತಿ ಷೇರಿನಂತೆ ಮಧ್ಯಂತರ ಲಾಭಾಂಶವನ್ನು ಘೋಷಿಸಿದೆ.

ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಎಚ್‌ಯುಎಲ್‌ನ ದೇಶೀಯ ಗ್ರಾಹಕರ ಬೆಳವಣಿಗೆಯು ಪ್ರಸಕ್ತ ವರ್ಷದಲ್ಲಿ ಶೇ 11 ರಷ್ಟಿದೆ. ಎಲ್ಲಾ ಮೂರು ವಿಭಾಗಗಳು ಸ್ಪರ್ಧಾತ್ಮಕವಾಗಿ ಬೆಳೆಯುವುದರೊಂದಿಗೆ ಕಾರ್ಯಕ್ಷಮತೆ ವಿಶಾಲ-ಆಧಾರಿತವಾಗಿದೆ. ವ್ಯಾಪಾರದ ಮೂಲಭೂತ ಅಂಶಗಳು ಮಾರುಕಟ್ಟೆಯ ಪಾಲು ಮತ್ತು ಮಾರುಕಟ್ಟೆಯಲ್ಲಿ ಎಲ್ಲೆಡೆ ಗುರುತಿಸುಕೊಳ್ಳುವಿಕೆಯೊಂದಿಗೆ ವ್ಯಾಪಾರದಲ್ಲಿ ನಾಲ್ಕನೇ ಒಂದು ಭಾಗದಷ್ಟು ಪ್ರಬಲವಾಗಿದೆ ಎಂದು ಹಿಂದೂಸ್ತಾನ್ ಯೂನಿಲಿವರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
"ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ವ್ಯಾಪಾರದ ಪರಿಸ್ಥಿತಿಗಳಲ್ಲಿ ಸತತ ಸುಧಾರಣೆ ಕಂಡು ಬಂದಿದೆ, ಆದರೂ ಅಭೂತಪೂರ್ವ ಮಟ್ಟದ ಇನ್ಪುಟ್ ವೆಚ್ಚದ ಹಣದುಬ್ಬರ ಮತ್ತು ಗ್ರಾಹಕರ ಭಾವನೆಗಳ ನಿರ್ವಹಣೆ ಸವಾಲಿನ ವಿಷಯವಾಗಿತ್ತು," ಎಂದು ಹಿಂದೂಸ್ತಾನ್ ಯೂನಿಲಿವರ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ ಪ್ರತಿಕ್ರಿಯಿಸಿದ್ದಾರೆ.
ತ್ರೈಮಾಸಿಕದಲ್ಲಿ ಗ್ರಾಹಕ ಸರಕುಗಳ ಕಂಪನಿಯ ಕಾರ್ಯನಿರ್ವಹಣೆಯ ಕಾರ್ಯಕ್ಷಮತೆಗೆ ಭಾರೀ ಹೊಡೆತ ಬಿದ್ದಿದ್ದು, ಕಾರ್ಯಾಚರಣೆಯ ಮಾರ್ಜಿನ್ ವರ್ಷಕ್ಕೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಕುಸಿದು 24.6 ಶೇಕಡಕ್ಕೆ ಕುಗ್ಗಿದೆ. ಆದರೆ, ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆಯ ಲಾಭವು ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಶೇ 9.2 ಬೆಳವಣಿಗೆಯನ್ನು ಕಂಡು 3,132 ಕೋಟಿ ರು ಗೆ ಮುಟ್ಟಿದೆ.
"ನಿವ್ವಳ ಆದಾಯ ನಿರ್ವಹಣೆ ಮತ್ತು ಉಳಿತಾಯದ ಮೇಲೆ ನಮ್ಮ ಗಮನ ಕೇಂದ್ರೀಕರಿಸಿದ ಕ್ರಮಗಳು ಹಣದುಬ್ಬರದ ಒತ್ತಡವನ್ನು ನಿರ್ವಹಿಸಲು ಮತ್ತು ಆರೋಗ್ಯಕರ ತಳಮಟ್ಟದ ಕಾರ್ಯಕ್ಷಮತೆಯನ್ನು ತಲುಪಿಸಲು ನಮಗೆ ಸಹಾಯ ಮಾಡಿದೆ" ಎಂದು ಹಿಂದೂಸ್ತಾನ್ ಯೂನಿಲಿವರ್ ಹೇಳಿದೆ.
ಎಚ್ಎಎಲ್‌ನ ಮೂರು ಉತ್ಪನ್ನ ವಿಭಾಗಗಳು ವರ್ಷದಿಂದ ವರ್ಷಕ್ಕೆ ಲೆಕ್ಕದಲ್ಲಿ ಹೆಚ್ಚಿನ ಬೆಳವಣಿಗೆಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿವೆ. ತ್ವಚೆ, ಸೌಂದರ್ಯವರ್ಧಕಗಳು ಮತ್ತು ಕೂದಲ ರಕ್ಷಣೆಯ ನೇತೃತ್ವದಲ್ಲಿ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ವಿಭಾಗವು ಶೇಕಡಾ 10 ರಷ್ಟು ಬೆಳೆದಿದೆ. ಸಾಬೂನು ವಿಭಾಗವು ಉನ್ನತ ನೆಲೆಯಲ್ಲಿ ಬೆಳೆಯುವಲ್ಲಿ ಯಶಸ್ವಿಯಾಗಿದೆ, ಆದರೆ, ಕೋವಿಡ್ -19 ಪ್ರಕರಣಗಳು ಕಡಿಮೆಯಾಗಿ ಸ್ಯಾನಿಟೈಜರ್ ಮತ್ತು ಕೈತೊಳೆಯುವಿಕೆಯ ಬೇಡಿಕೆ ಕಡಿಮೆಯಾಗಿದ್ದು, ಕೈ ನೈರ್ಮಲ್ಯ ಉತ್ಪನ್ನಗಳ ಮಾರಾಟ ತಗ್ಗಿದೆ.
''ಚಹಾ ಉತ್ಪನ್ನವು ಅತ್ಯಂತ ಬಲವಾದ ತಳಹದಿಯ ಮೇಲೆ ಬೆಳೆದಿದೆ ಮತ್ತು ಅದರ ಮಾರುಕಟ್ಟೆ ಪ್ರಾಬಲ್ಯವನ್ನು ಮತ್ತಷ್ಟು ಬಲಪಡಿಸಿಕೊಂಡಿದೆ ಮತ್ತು ಆಹಾರ ವಿಭಾಗವು ವಾರ್ಷಿಕ ಶೇ 7ರಷ್ಟು ಪ್ರಗತಿ ಕಂಡಿದೆ,'' ಎಂದು ಎಚ್ಎಎಲ್ ಹೇಳಿದೆ. ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಶೇ 2.2ರಷ್ಟು ಪ್ರಗತಿ ಕಂಡು 2,71.95 ರಂತೆ ಎನ್ಎಸ್ಇಯಲ್ಲಿ ವಹಿವಾಟು ಕಂಡಿದೆ.(ಪಿಟಿಐ)
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ



Click it and Unblock the Notifications