ಚರ್ಮ ರಕ್ಷಣೆ ಬ್ರ್ಯಾಂಡ್ ಆದ ಫೇರ್ ಅಂಡ್ ಲವ್ಲಿ ಹೆಸರನ್ನು ಗ್ಲೋ ಅಂಡ್ ಲವ್ಲಿ ಎಂದು ಬದಲಿಸಿ ಹಿಂದೂಸ್ತಾನ್ ಯುನಿಲಿವರ್ ಗುರುವಾರ ಘೋಷಣೆ ಮಾಡಿದೆ. ಸೌಂದರ್ಯವನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವ ಪ್ರಯತ್ನದ ಭಾಗವಾಗಿ ಹೆಸರು ಬಸಲಿಸಲಾಗಿದೆ. ಗ್ಲೋ ಅಂಡ್ ಲವ್ಲಿ ಮುಂದಿನ ಕೆಲ ತಿಂಗಳಲ್ಲಿ ದೊರೆಯಲಿದೆ ಎಂದು ಕಂಪೆನಿಯು ಹೇಳಿಕೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಫೇರ್ ಅಂಡ್ ಲವ್ಲಿಯು ಮುಖದ ರಕ್ಷಣೆ ವಿಭಾಗದಲ್ಲಿ ಶೇಕಡಾ 40ರಷ್ಟು ಪಾಲನ್ನು ಹೊಂದಿದೆ. ಇನ್ನು ಪುರುಷರ ಫೇರ್ ಅಂಡ್ ಲವ್ಲಿಯನ್ನು 'ಗ್ಲೋ ಅಂಡ್ ಹ್ಯಾಂಡ್ಸಮ್' ಎಂದು ಕರೆಯಲಾಗಿದೆ. ವಾರದ ಹಿಂದಷ್ಟೇ ಹಿಂದೂಸ್ತಾನ್ ಯುನಿಲಿವರ್ ನಿಂದ ಹೆಸರು ಬದಲಿಸುವ ಬಗ್ಗೆ ಘೋಷಣೆ ಬಂದಿತ್ತು.

ಕಪ್ಪು ವರ್ಣದವರ ಪರವಾಗಿ ವಿಶ್ವದಾದ್ಯಂತ ನಡೆಯುತ್ತಿರುವ ಅಭಿಯಾನ ಸಕಾರಾತ್ಮಕವಾದ ಧ್ವನಿಯೊಂದನ್ನು ಎತ್ತಿದೆ. ಮೈ ಬಣ್ಣದ ಆಧಾರದಲ್ಲಿ ಇರುವ ಸೌಂದರ್ಯ ವರ್ಧಕಗಳ ಹೆಸರಿಗೆ ಬದಲಾವಣೆ ತರಲು ಅದೇ ಕಾರಣವಾಗಿದೆ. ಇತ್ತೀಚೆಗೆ ಜಾನ್ಸನ್ ಅಂಡ್ ಜಾನ್ಸನ್ ಕಂಪೆನಿ ಕೂಡ ಚರ್ಮ ಬಿಳಿ ಮಾಡುವ ಕ್ರೀಮ್ ಗಳನ್ನು ಭಾರತ ಸೇರಿದಂತೆ ವಿಶ್ವದಾದ್ಯಂತ ಮಾರಾಟ ಮಾಡದಿರುವುದಕ್ಕೆ ನಿರ್ಧರಿಸಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications