For Quick Alerts
ALLOW NOTIFICATIONS  
For Daily Alerts

ಹುಂಡೈ ಕಾರು ಬೇಡಿಕೆಯಲ್ಲಿ ಅಕ್ಟೋಬರ್ ನಲ್ಲಿ ಏರಿಕೆ; ಯಾವುದಕ್ಕೆ ಡಿಮ್ಯಾಂಡ್?

|

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕರ ವಾಹನಗಳ ಉತ್ಪಾದನಾ ಸಂಸ್ಥೆ ಹುಂಡೈ ಮೋಟಾರ್ಸ್ ಇಂಡಿಯಾ ಲಿಮಿಟೆಡ್ ದೇಶೀ ಸಗಟು ವಾಹನ ಅಕ್ಟೋಬರ್ ನಲ್ಲಿ 56,605 ಯೂನಿಟ್ ಮಾರಾಟ ಮಾಡಿದ್ದು, ಕಳೆದ ವರ್ಷದ ಇದೇ ಅವಧಿಯ ದೇಶೀ ಮಾರಾಟಕ್ಕೆ ಹೋಲಿಸಿದಲ್ಲಿ 13.2% ಏರಿಕೆ ಆಗಿದೆ. ಹುಂಡೈ ಎಸ್ ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಆಗಿದೆ.

ವೆನ್ಯೂ ಹಾಗೂ ಕ್ರೆಟಾ ಕಾರುಗಳಿಗೆ ಬೇಡಿಕೆಯಲ್ಲಿ ಭಾರೀ ಹೆಚ್ಚಳ ಆಗಿದೆ. ಮಾರಾಟ ಹೆಚ್ಚಳ ಆಗುವ ನಿರೀಕ್ಷೆ ಇಟ್ಟುಕೊಂಡು, ಡೀಲರ್ ಶಿಪ್ ಗಳ ಬಳಿಯಲ್ಲಿ ಹುಂಡೈನಿಂದ ದಾಸ್ತಾನು ಹೆಚ್ಚಿಸಲಾಗಿದೆ. ವರ್ಷದ ಹಿಂದೆ ಹೋಲ್ ಸೇಲ್ ಮಾರಾಟ 50010 ಆಗಿತ್ತು. ಸೆಪ್ಟೆಂಬರ್ ನಲ್ಲಿ 50313, ಆಗಸ್ಟ್ ನಲ್ಲಿ 45809 ಯೂನಿಟ್ ಇತ್ತು.

ಮತ್ತಷ್ಟು ವಲಯಗಳಿಗೆ ಉತ್ಪಾದನಾ ಪ್ರೋತ್ಸಾಹಕ: ನೀತಿ ಆಯೋಗಮತ್ತಷ್ಟು ವಲಯಗಳಿಗೆ ಉತ್ಪಾದನಾ ಪ್ರೋತ್ಸಾಹಕ: ನೀತಿ ಆಯೋಗ

ಚೆನ್ನೈನಲ್ಲಿನ ತನ್ನ ಘಟಕವನ್ನು ಮೇ ತಿಂಗಳಿನ 4ನೇ ತಾರೀಕು ಆರಂಭಿಸಿದೆ. ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಿಕಾ ಕಂಪೆನಿಯಾದ ಹುಂಡೈ ಅಕ್ಟೋಬರ್ ನಲ್ಲಿ 12230 ಯೂನಿಟ್ ರಫ್ತು ಮಾರಾಟವಾಗಿ, ಕಳೆದ ವರ್ಷಕ್ಕ್ಜಿಂತ 10.1 ಪರ್ಸೆಂಟ್ ಕಡಿಮೆ ಆಗಿದೆ. ಕಳೆದ ಮೇ ತಿಂಗಳಲ್ಲಿ ಲಾಕ್ ಡೌನ್ ಲಾಕ್ ಡೌನ್ ನಿರ್ಬಂಧ ತೆರವು ಮಾಡುತ್ತಾ ಬಂದ ಮೇಲೆ ರೀಟೇಲ್ ಮಾರಾಟ ಹಾಗೂ ಬುಕ್ಕಿಂಗ್ ಹೆಚ್ಚಾಗಿದೆ.

ಹುಂಡೈ ಕಾರು ಬೇಡಿಕೆಯಲ್ಲಿ ಅಕ್ಟೋಬರ್ ಏರಿಕೆ; ಯಾವುದಕ್ಕೆ ಡಿಮ್ಯಾಂಡ್?

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ವೈಯಕ್ತಿಕ ಸಾಗಾಟಕ್ಕೆ ಗ್ರಾಹಕರು ವಾಹನ ಖರೀದಿ ಕಡೆಗೆ ಆಸಕ್ತಿ ತೋರುತ್ತಿದ್ದಾರೆ. ಆದ್ದರಿಂದ ಮಾರಾಟದಲ್ಲಿ ಹೆಚ್ಚಳವಾಗಿದೆ. ಅದರಲ್ಲಿ ಕ್ರೆಟಾ, ವೆನ್ಯೂ ಕಾರುಗಳಿಗೆ ಬೇಡಿಕೆ ಹೆಚ್ಚಿದೆ.

English summary

Hyundai October Domestic Wholesales Rises 13 Percent Year On Year

Inia's second largest passenger car manufacturer Hyundai October domestic wholesales rises 13.2% year on year. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X