ದೋಷಪೂರಿತ ಆಪಲ್ ಪ್ಲೇ ಸಿಸ್ಟಂ ಹೊಂದಿರುವ ಕಾರು ಸರಬರಾಜು ಮಾಡಿದ ಕಾರಣದಿಂದಾಗಿ ಬೆಂಗಳೂರು ನಗರದ ನಿವಾಸಿ ಸ್ವಾತಿ ಅಗರ್ವಾಲ್ ಎಂಬಾಕೆಗೆ ಪರಿಹಾರ ಪಾವತಿಸಲು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಈಗ ಬ್ಲೂ ಹ್ಯುಂಡೈ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಎರಡು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ ಮಾಡಿದೆ.
ಜೊತೆಗೆ 25 ಸಾವಿರ ರೂಪಾಯಿ ವೆಚ್ಚವನ್ನು ಕೂಡಾ ಗ್ರಾಹಕರಿಗೆ ನೀಡುವಂತೆ ಆದೇಶ ನೀಡಲಾಗಿದೆ. ಹಾಗೆಯೇ ಬ್ಲೂ ಹ್ಯುಂಡೈ ಮತ್ತು ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಜಂಟಿಯಾಗಿ ಮತ್ತು ಐಒಎಸ್ ಆಧಾರಿತ ಫೋನ್‌ಗಳೊಂದಿಗೆ ಸಂಪರ್ಕ ಹೊಂದಿರುವ ಆಪಲ್ ಪ್ಲೇನ ಅಪ್‌ಗ್ರೇಡ್ ವರ್ಜನ್ ಅನ್ನು ಷರತ್ತಿನ ಮೇಲೆ ಬದಲಾವಣೆ ಮಾಡಬೇಕಾಗಿದೆ.

ಆದೇಶವನ್ನು ನೀಡಿದ 60 ದಿನಗಳಲ್ಲಿ ಉತ್ತಮ ಕಾರ್ಯವನ್ನು ನಿರ್ವಹಿಸುವ ಐಒಎಸ್ ಆಧಾರಿತ ಫೋನ್‌ಗಳೊಂದಿಗೆ ಸಂಪರ್ಕ ಹೊಂದಿರುವ ಆಪಲ್ ಪ್ಲೇ ಅನ್ನು ಹೊಂದಿರುವ ಕಾರನ್ನು ಸಂಸ್ಥೆ ಒದಗಿಸಬೇಕಾಗಿದೆ. ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯೆ ಸುಮಾ ಅನಿಲ್ ಕುಮಾರ್ ಒಳಗೊಂಡ ಆಯೋಗ ಸ್ವಾತಿ ಸಲ್ಲಿಸಿದ್ದ ದೂರನ್ನು ಭಾಗಶಃ ಪುರಸ್ಕರಿಸಿ ಈ ಆದೇಶ ನೀಡಿದೆ.
ವಾಹನವು ಪರಿಪೂರ್ಣವಾಗಿರುವುದರಿಂದ ಕಾರಿನ ಚಾಲನೆಯಲ್ಲಿರುವ ಸ್ಥಿತಿಯನ್ನು ಮಾತ್ರ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆಯೋಗವು ಸ್ಪಷ್ಟಪಡಿಸಿದೆ. ಏಕೆಂದರೆ ಕಾರು ಅನುಕೂಲಕ್ಕಾಗಿ ಮತ್ತು ಕಾರಿನ ಉತ್ತಮ ಚಾಲನೆಗಾಗಿ ಇತರ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಒತ್ತಿ ಹೇಳಿದೆ. ಆದ್ದರಿಂದ ಪ್ಲೇ ಸಿಸ್ಟಮ್ ಕಾರ್ಯ ನಿರ್ವಹಣೆ ಮಾಡದ್ದರು ಕಾರಿನ ಕೆಲಸದ ಸ್ಥಿತಿ ಹೇಗಿದೆ ಎಂದು ಪರಿಗಣಿಸಬೇಕಾದ ಒಂದು ಕಾರಣವಾಗಿದೆ.
ಆದ್ದರಿಂದ ಇಲ್ಲಿ ಡೀಲರ್ ಮತ್ತು ಸೇವಾ ಪೂರೈಕೆದಾರರು ಕಾರು ಪರಿಪೂರ್ಣ ಚಲಿಸುವ ಸ್ಥಿತಿಯಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ. ನಮ್ಮಲ್ಲಿ ಈ ಫೀಚರ್‌ಗಳಿದೆ, ಇದರಿಂದ ನಿಮಗೆ ಲಾಭ ಎಂದು ಗ್ರಾಹಕರಲ್ಲಿ ಹೇಳಿ ಕಾರಿಗೆ ಅಧಿಕ ಬೆಲೆಯನ್ನು ವಿಧಿಸಲಾಗಿರುತ್ತದೆ. ಹಾಗಿರುವಾಗ ಕಾರಿನಲ್ಲಿ ದೋಷವಿದ್ದರೆ ಅದಕ್ಕೆ ಸಂಸ್ಥೆಯೇ ಜವಾಬ್ದಾರರಾಗಿರುತ್ತಾರೆ.
ಆಪಲ್ ಪ್ಲೇ ಸಿಸ್ಟಂನ ತಯಾರಕರ ಬಗ್ಗೆ ದೂರುದಾರರಿಗೆ ಮಾರ್ಗದರ್ಶನ ನೀಡುವ ಮತ್ತು ದೋಷವನ್ನು ಸರಿಯಾದ ಮೂಲಗಳ ಮೂಲಕ ಸರಿ ಮಾಡುವ ಜಬಾಬ್ದಾರಿಯನ್ನು ಡೀಲರ್ ಮತ್ತು ತಯಾರಕರು ಹೊಂದಿರುತ್ತಾರೆ. ಆದರೆ ಕಾರನ್ನು ಹಲವಾರು ಬಾರಿ ಸರ್ವಿಸ್‌ಗೆ ತೆಗೆದುಕೊಂಡು ನಿರ್ಲಕ್ಷ್ಯ ತೋರಿದ್ದಾರೆ. ಗ್ರಾಹಕರಿಗೆ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆಯೋಗ ಗಮನಿಸಿದೆ.
ಮಾರ್ಚ್ 2021 ರಲ್ಲಿ ಹ್ಯುಂಡೈ ಐ20 ಅನ್ನು ಖರೀದಿಸಿದ ಒಂದು ತಿಂಗಳೊಳಗೆ ವೈರ್‌ಲೆಸ್ ಆಪಲ್ ಪ್ಲೇ ಸಿಸ್ಟಮ್‌ನಲ್ಲಿನ ದೋಷಗಳಿವುದು ಸ್ವಾತಿ ಗಮನಕ್ಕೆ ಬಂದಿದೆ. ದಿಡೀರ್ ಆಗಿ ಸಂಪರ್ಕ ಕಡಿತಗೊಳ್ಳುವ, ಕೆಲವೊಮ್ಮೆ ದಿಡೀರ್ ಆಗಿ ಮರುಸಂಪರ್ಕವಾಗುವುದು ಆಗುತ್ತಿತ್ತು. ಇದು ಆಕೆಗೆ ಚಾಲನೆ ಮಾಡಲು ಮತ್ತು ಬೆಂಗಳೂರಿನಲ್ಲಿ ನಗರ ಸಂಚಾರಕ್ಕೆ ದೊಡ್ಡ ಸವಾಲನ್ನು ಸೃಷ್ಟಿಸಿತು.
ಗೂಗಲ್ ಮ್ಯಾಪ್ ಕೂಡಾ ಪರದೆಯಿಂದ ಹೊರಗುಳಿಯುತ್ತಿತ್ತು. ಇದರಿಂದಾಗಿ ಗೂಗಲ್ ಮ್ಯಾಪ್ ಬಳಸಿಕೊಂಡು ಚಾಲನೆ ಮಾಡುವ ಅನಿರೀಕ್ಷಿತ ಗೊಂದಲ ಮತ್ತು ಗಾಬರಿಗೆ ಕಾರಣವಾಗುತ್ತಿತ್ತು. ವಾಹನದ ಬ್ಲೂಟೂತ್ ಮೂಲಕ ಸಂಪರ್ಕಗೊಂಡಿರುವ ಫೋನ್‌ನಲ್ಲಿ ಮಾತನಾಡುವಾಗ, ವೈರ್‌ಲೆಸ್‌ನಿಂದ ದಿಡೀರ್ ಆಗಿ ಕರೆ ಕಟ್ ಆಗುತ್ತಿತ್ತು. ಇದನ್ನು ಸರಿಪಡಿಸಲು ಹಲವಾರು ಬಾರಿ ಸರ್ವಿಸ್‌ಗೆ ನೀಡಿದರೂ ಸಮಸ್ಯೆ ಸರಿಯಾಗಿರಲಿಲ್ಲ.


Click it and Unblock the Notifications