ಸಿಹಿಸುದ್ದಿ.. ನೀವು ಐಸಿಐಸಿಐ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯನ್ನು ಹೊಂದಿದ್ದೀರಾ..? ಹಾಗಿದ್ರೆ ನೀವು ಈ ಸುದ್ದಿಯನ್ನು ಓದಲೇಬೇಕು. ಯಾಕೆಂದರೆ ಐಸಿಐಸಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಮಹತ್ವದ ನಿರ್ಧಾರವೊಂದನ್ನು ತಗೆದುಕೊಂಡಿದೆ.
ಹೌದು,ಇನ್ಮುಂದೆ ಸ್ಥಿರ ಠೇವಣಿಗಳ ಬಡ್ಡಿದರ ಕಡಿಮೆಯಾತ್ತದೆ.ಐಸಿಐಸಿಐ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ 3 ಕೋಟಿಗಿಂತ ಕಡಿಮೆ ಅವಧಿಯ ಠೇವಣಿಗಳ ಮೇಲಿನ ಆಯ್ದ ಅವಧಿಗಳ ಮೇಲಿನ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರಗಳನ್ನು 20 ಬೇಸಿಸ್ ಪಾಯಿಂಟ್‌ಗಳವರೆಗೆ (ಬಿಪಿಎಸ್) ಇಳಿಕೆಯನನ್ನು ಮಾಡಿದೆ. ಈ ಪರಿಷ್ಕೃತ ದರಗಳು ಮೇ 27, 2025 ರಿಂದ ಐಸಿಐಸಿಐ ಬ್ಯಾಂಕ್‌ನ ಸ್ಥಿರ ಠೇವಣಿಗಳ ಬಡ್ಡಿದರ ಮತ್ತು ಮೇ 23, 2025 ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್‌ಗೆ ಬಡ್ಡಿದರ ಪರಿಷ್ಕೃತ ದರಗಳು ಜಾರಿಗೆ ಬರುತ್ತವೆ. ಪರಿಷ್ಕೃತ ದರಗಳು ಬಡ್ಡಿ ದರ ಎಷ್ಟು ಇದೆ ಎಂದು ತಿಳಿಯಲು ಮುಂದೆ ಓದಿ..

ಐಸಿಐಸಿಐ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆಗಳು
ಐಸಿಐಸಿಐ ಬ್ಯಾಂಕ್ ಹಲವಾರು ಪ್ರಮುಖ ಅವಧಿಗಳ ಮೇಲಿನ ಎಫ್‌ಡಿ ದರಗಳನ್ನು ಕಡಿಮೆ ಮಾಡಿದೆ ಅವುಗಳು ಈ ಕೆಳಗಿನಂತೆ ಇವೆ..
1 ವರ್ಷದಿಂದ 15 ತಿಂಗಳವರೆಗೆ ಬಡ್ಡಿದರ: ಶೇಕಡಾ.6.70 ರಿಂದ ಶೇ. 6.50 ಕ್ಕೆ ಇಳಿಕೆ
15 ತಿಂಗಳಿಂದ 18 ತಿಂಗಳವರೆಗೆ ಬಡ್ಡಿದರ: ಶೇಕಡಾ. 6.80 ರಿಂದ ಶೇ. 6.60ಕ್ಕೆ ಇಳಿಕೆ
18 ತಿಂಗಳಿಂದ 2 ವರ್ಷಗಳು ಬಡ್ಡಿದರ: ಶೇಕಡಾ.7.05 ರಿಂದ ಶೇ. 6.85ಕ್ಕೆ ಇಳಿಕೆ
2 ವರ್ಷ 1 ದಿನದಿಂದ 5 ವರ್ಷಗಳು ಬಡ್ಡಿದರ: ಶೇಕಡಾ.6.90 ರಿಂದ 6.75% ಕ್ಕೆ ಇಳಿಸಲಾಗಿದೆ.
5 ವರ್ಷ 1 ದಿನದಿಂದ 10 ವರ್ಷಗಳು: ಶೇಕಡಾ. 6.70 ಮೊದಲು ಶೇ.6.80 ಇಳಿಕೆ ಮಾಡಲಾಗಿತ್ತು.
ತೆರಿಗೆ ಉಳಿತಾಯ ಎಫ್‌ಡಿ (5 ವರ್ಷಗಳು): ಶೇಕಡಾ.6.90 ರಿಂದ ಶೇ.6.75ಕ್ಕೆ ಪರಿಷ್ಕರಿಸಲಾಗಿದೆ.
ಸಾಮಾನ್ಯ ನಾಗರಿಕರಿಗೆ, ಬಡ್ಡಿದರಗಳು ಈಗ ಶೇ.3.00 ಮತ್ತು ಶೇ. 7.05ರ ನಡುವೆ ಇವೆ.
ಹಿರಿಯ ನಾಗರಿಕರು ಶೇ. 3.50 ಮತ್ತುಶೇ.7.55 ನಡುವೆ ಇದೆ. 18 ತಿಂಗಳಿಂದ 2 ವರ್ಷಗಳ ಅವಧಿಗೆ ಅತ್ಯಧಿಕ ದರ ಶೇ.7.35ರಷ್ಟು ಬಡ್ಡಿದರವನ್ನು ಹೊಂದಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್‌ಡಿ ದರ ಪರಿಷ್ಕರಣೆಗಳು
ಏಪ್ರಿಲ್‌ನಲ್ಲಿ 50 ಬೇಸಿಸ್ ಪಾಯಿಂಟ್‌ಗಳ ಕಡಿತದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡ ತನ್ನ ಎಫ್‌ಡಿ ಬಡ್ಡಿದರಗಳನ್ನು ಇಳಿಕೆ ಮಾಡಲಾಗಿದೆ.
1 ವರ್ಷದಿಂದ 15 ತಿಂಗಳವರೆಗೆ:10 bps ಕಡಿತಗೊಳಿಸಿ ಶೇ. 6.60 ರಿಂದ ಶೇ.6.50ಕ್ಕೆ ಇಳಿಸಲಾಗಿದೆ.
18 3 ಪರಿಷ್ಕರಣೆಯ ನಂತರ, ಸಾಮಾನ್ಯ ನಾಗರಿಕರಿಗೆ FD ಬಡ್ಡಿದರಗಳು ಈಗ ಶೇ.3.00ರಿಂದ ಶೇ. 6.85 ವರೆಗೆ ಇರುತ್ತವೆ, ಆದರೆ ಹಿರಿಯ ನಾಗರಿಕರು ಶೇ.3.50 ರಿಂದ ಶೇ.7.35ವರೆಗೆ ಪಡೆಯುತ್ತಾರೆ. ಹಿರಿಯ ನಾಗರಿಕರಿಗೆ 15 ರಿಂದ 21 ತಿಂಗಳ ಅವಧಿಗೆ ಶೇ.7.35ರಷ್ಟು ಅತ್ಯಧಿಕ ದರ ಅನ್ವಯವಾಗುತ್ತದೆ.
ಎರಡೂ ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಸ್ವಲ್ಪ ಹೆಚ್ಚಿನ ದರಗಳನ್ನು ನೀಡುತ್ತಲೇ ಇವೆ ಮತ್ತು ಹೆಚ್ಚಿನ FD ಅವಧಿಗಳಲ್ಲಿ ಅಕಾಲಿಕ ಹಿಂಪಡೆಯುವಿಕೆಗೆ ಅವಕಾಶವನ್ನು ಸಹ ನೀಡಲಾಗುತ್ತದೆ.
ಇತ್ತೀಚಿನ ಎಚ್‌ಡಿಎಫ್‌ಸಿ ಬ್ಯಾಂಕ್ FD ಬಡ್ಡಿದರಗಳು ಹೀಗಿವೆ
1 ವರ್ಷದಿಂದ 15 ತಿಂಗಳಿಗಿಂತ ಕಡಿಮೆ ಇರುವರಿಗೆ: ಶೇ.6.50ರಷ್ಟು ಬಡ್ಡಿ ದರ
18 ತಿಂಗಳಿಂದ 21 ತಿಂಗಳಿಗಿಂತ ಕಡಿಮೆ ಇರುವವರಿಗೆ:ಶೇ.6.85 ರಷ್ಟು ಬಡ್ಡಿದರ
ಎರಡು ವರ್ಷ ಮತ್ತು ಒಂದು ದಿನದಿಂದ ಮೂರು ವರ್ಷಗಳವರೆಗೆ: ಶೇಕಡಾ 6.70ರಷ್ಟು ಬಡ್ಡಿದರ
ಎಚ್‌ಡಿಎಫ್‌ಸಿ ಬ್ಯಾಂಕ್ ಅಷ್ಟೇ ಅಲ್ಲದೆ ಕೆನರಾ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್‌ಗಳು ಎಫ್‌ಡಿ ಬಡ್ಡಿ ದರವನ್ನು ಇಳಿಕೆಯನ್ನು ಮಾಡಿವೆ.


Click it and Unblock the Notifications