ಐಸಿಐಸಿಐ- ವಿಡಿಯೋಕಾನ್ ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಬ್ಯೂರೋ ಆಫ್ ಇನ್‌ವೆಸ್ಟಿಗೇಷನ್ (ಸಿಬಿಐ) ಚಾರ್ಜ್‌ಶೀಟ್ ಅನ್ನು ಫೈಲ್ ಮಾಡಿದೆ. ಮಾಜಿ ಐಸಿಐಸಿಐ ಬ್ಯಾಂಕ್ ಎಂಡಿ ಮತ್ತು ಚೇರ್‌ಮನ್ ಚಂದಾ ಕೋಚರ್, ಆಕೆಯ ಪತಿ ದೀಪಕ್ ಕೋಚರ್, ವಿಡಿಯೋಕಾನ್ ಗ್ರೂಪ್ ಚೇರ್‌ಮನ್ ವೇಣುಗೋಪಲ್ ದೂತ್ ವಿರುದ್ಧ ಐಸಿಐಸಿಐ- ವಿಡಿಯೋಕಾನ್ ಸಾಲ ವಂಚನೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಫೈಕ್ ಮಾಡಲಾಗಿದೆ. ಆದರೆ ಈವರೆಗೂ ಕೋರ್ಟ್ ಈ ವಿಚಾರವನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ.
ವಿಡಿಯೋಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ, ವೇಣುಗೋಪಲ್ ನಂದ್‌ಲಾಲ್ ದೂತ್, ಚಂದಾ ಕೋಚರ್, ದೀಪಕ್ ವಿರೇಂದ್ರ ಕೋಚರ್, ನುಪವರ್ ರಿನಿವೇಬಲ್ ಲಿಮಿಟೆಡ್, ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್, ಅನ್‌ಕೋನ್ ಪಬ್ಲಿಕ್ ಸರ್ವೆಂಟ್ಸ್ ವಿರದ್ಧವಾಗಿ 22.1.2019ರಂದು ಮೊದಲ ಬಾರಿಗೆ ದೂರು ದಾಖಲಾಗಿತ್ತು.

ಆಗಸ್ಟ್ 26, 2009 ರಂದು, ಎಂಡಿ ಚಂದಾ ಕೊಚ್ಚರ್ ನೇತೃತ್ವದ ಮಂಜೂರಾತಿ ಸಮಿತಿಯು ವೀಡಿಯೊಕಾನ್ ಇಂಟರ್‌ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ (ವಿಐಇಎಲ್) 300 ಕೋಟಿ ರೂಪಾಯಿಯ ಸಾಲವನ್ನು ಮಂಜೂರು ಮಾಡಿತ್ತು. ಈ ಸಾಲವನ್ನು ಅಧಿಕೃತ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಜಾರಿ ಮಾಡಲಾಗಿದೆ ಎಂಬ ಆರೋಪವಿದೆ. ಸೆಪ್ಟೆಂಬರ್ 7, 2009ರಲ್ಲಿ ಈ ಸಾಲವನ್ನು ನೀಡಲಾಗಿದೆ. ಇದಾದ ಮರುದಿನವೇ ಸೆಪ್ಟೆಂಬರ್ 8, 2009ರಲ್ಲಿ ವಿಡಿಯೋಕಾನ್ ಗ್ರೂಪ್ ಚೇರ್‌ಮನ್ ವೇಣುಗೋಪಲ್ ದೂತ್ 64 ಕೋಟಿ ರೂಪಾಯಿಯನ್ನು ದೀಪಕ್ ಕೋಚರ್ ನಿರ್ವಹಣೆ ಮಾಡುವ ಎನ್‌ಆರ್‌ಎಲ್ ಸಂಸ್ಥೆಯ ಖಾತೆಗೆ ಜಮೆ ಮಾಡಲಾಗಿದೆ.
ಎನ್‌ಆರ್‌ಎಲ್ ಅನ್ನು ಡಿಸೆಂಬರ್ 24, 2008 ರಂದು ಆರಂಭಿಸಲಾಗಿದೆ. ಧೂತ್ ಮತ್ತು ಅವರ ಸಂಬಂಧಿ ಸೌರಭ್ ಧೂತ್ ಜನವರಿ 15, 2009 ರಂದು ಎನ್‌ಆರ್‌ಎಲ್‌ನ ನಿರ್ದೇಶಕತ್ವಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆ ನೀಡುವ ಮೊದಲು ವಿ ಎನ್ ಧೂತ್ ಅವರು ದೀಪಕ್ ಕೊಚ್ಚರ್ ಅವರಿಗೆ 1997500 ವಾರಂಟ್‌ಗಳನ್ನು (ಈಕ್ವಿಟಿಯಾಗಿ ಪರಿವರ್ತಿಸಬಹುದು) ಮಂಜೂರು ಮಾಡಿದ್ದಾರೆ. ಜೂನ್ 5, 2009 ರಂದು ವಿನ್ ಧೂತ್ ಮತ್ತು ದೀಪಕ್ ಕೊಚ್ಚರ್ ಹೊಂದಿರುವ ಎನ್‌ಆರ್‌ಎಲ್‌ನ ಷೇರುಗಳನ್ನು ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್ (ಎನ್‌ಇಪಿಎಲ್) ಗೆ ವರ್ಗಾವಣೆ ಮಾಡಲಾಗಿದೆ. ಧೂತ್ ಜನವರಿ 15, 2009ರಲ್ಲಿ ತಮ್ಮ ಷೇರುಗಳನ್ನು ದೀಪಕ್ ಕೊಚ್ಚರ್ ನಿರ್ವಹಿಸುವ ಪಿನಾಕಲ್ ಎನರ್ಜಿ ಟ್ರಸ್ಟ್‌ಗೆ ವರ್ಗಾಯಿಸಿ ಬಳಿಕ ಎಸ್‌ಇಪಿಎಲ್ ನಿರ್ದೇಶಕತ್ವಕ್ಕೆ ರಾಜೀನಾಮೆ ನೀಡಿದರು.
ಜೂನ್ 2009 ಮತ್ತು ಅಕ್ಟೋಬರ್ 2011ರ ನಡುವೆ ಐಸಿಐಸಿಐ ಬ್ಯಾಂಕ್ ವೀಡಿಯೊಕಾನ್ ಇಂಡಸ್ಟ್ರೀಸ್ ಲಿಮಿಟೆಡ್‌ನಿಂದ ಈ ಕಂಪನಿಗಳು ಪಡೆದಿರುವ ಅಸುರಕ್ಷಿತ ಸಾಲವನ್ನು ಮರುಪಾವತಿಸಲು ಅನುವು ಮಾಡಿಕೊಡುವ ಉದ್ದೇಶಕ್ಕಾಗಿ ವೀಡಿಯೊಕಾನ್ ಗ್ರೂಪ್‌ನ ಆರು ಕಂಪನಿಗಳಿಗೆ 1875 ಕೋಟಿ ರೂಪಾಯಿ ಸಾಲವನ್ನು ಮಂಜೂರು ಮಾಡಿದೆ. ಚಂದಾ ಕೊಚ್ಚರ್ ಅವರು ಐಸಿಐಸಿಐ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಆಗಿ ಅಧಿಕಾರ ವಹಿಸಿಕೊಂಡ ನಂತರ ಈ ಎಲ್ಲಾ ಸಾಲಗಳನ್ನು ಮಂಜೂರು ಮಾಡಲಾಗಿದೆ.
ಐಸಿಐಸಿಐ ಬ್ಯಾಂಕ್ ಸಾಲ ವಂಚನೆ ಪ್ರಕರಣರದಲ್ಲಿ ಬಾಂಬೆ ಹೈಕೋರ್ಟ್ ಈ ಹಿಂದೆ ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೋಚರ್ ಹಾಗೂ ಅವರ ಪತಿ ದೀಪಕ್ ಕೋಚರ್‌ಗೆ ಜಾಮೀನು ಮಂಜೂರು ಮಾಡಿದೆ. ಡಿಸೆಂಬರ್ 23ರಂದು ಐಸಿಐಸಿಐ ಬ್ಯಾಂಕ್‌ನ ಸುಮಾರು 3,000 ಕೋಟಿ ಸಾಲ ವಂಚನೆ ಪ್ರಕರಣದಲ್ಲಿ ದಂಪತಿಯನ್ನು ಬಂಧನ ಮಾಡಲಾಗಿತ್ತು.


Click it and Unblock the Notifications