For Quick Alerts
ALLOW NOTIFICATIONS  
For Daily Alerts

"ಲಾಕ್ ಡೌನ್ ಇನ್ನಷ್ಟು ಮುಂದುವರಿದರೆ ಅರ್ಥವ್ಯವಸ್ಥೆ ಕಷ್ಟಕಷ್ಟ"

|

ಭಾರತದ ಸ್ಥೂಲ ಅರ್ಥ ವ್ಯವಸ್ಥೆಯು ಮಂಕಾಗಿದ್ದು, ಒಂದು ವೇಳೆ ಸ್ಥಳೀಯ ಅಥವಾ ರಾಷ್ಟ್ರೀಯ ಲಾಕ್ ಡೌನ್ ಇನ್ನೂ ಕೆಲ ಸಮಯ ಮುಂದುವರಿದರೆ ಆರ್ಥಿಕ ಸ್ಥಿತಿ ಹದಗೆಡುತ್ತದೆ ಎಂದು ಭಾನುವಾರದಂದು ಹೆಸರಾಂತ ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್ ಅಭಿಪ್ರಾಯ ಪಟ್ಟಿದ್ದಾರೆ. ದೇಶದಾದ್ಯಂತ ಲಾಕ್ ಡೌನ್ ಆಗಿರುವುದರಿಂದ ಕೆಲವು ಭಾಗಗಳಲ್ಲಿ ಈಗಾಗಲೇ ಹಿಂಸಾಚಾರಗಳು ಆರಂಭವಾಗಿವೆ ಎಂದಿದ್ದಾರೆ.

 

ಕೊರೊನಾ ವೈರಾಣು ಹಬ್ಬದಿರುವಂತೆ ಎಚ್ಚರಿಕೆ ವಹಿಸಲು ಭಾರತದಲ್ಲಿ 21 ದಿನಗಳಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈಗಾಗಲೇ ಸನ್ನಿವೇಶ ಮಂಕಾಗಿದೆ. ಸ್ಥಳೀಯ ಅಥವಾ ರಾಷ್ಟ್ರೀಯ ಲಾಕ್ ಡೌನ್ ಇನ್ನಷ್ಟು ಸಮಯ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹಾಳಾಗಬಹುದು. ಹಾಗೊಂದು ವೇಳೆ ಆಗದಿದ್ದರೂ ಜಗತ್ತಿನಾದ್ಯಂತದ ಆರ್ಥಿಕ ಕುಸಿತವು ಭಾರತದ ಆರ್ಥಿಕತೆ ಮೇಲೆ ಪರಿಣಾಮ ಬೀರಲಿದೆ ಬೆಲ್ಜಿಯಂನಲ್ಲಿ ಹುಟ್ಟಿದ ಭಾರತೀಯ ಅರ್ಥಶಾಸ್ತ್ರಜ್ಞ ಹೇಳಿದ್ದಾರೆ.

ಕೊರೊನಾ ಬಗ್ಗೆ ಅಚ್ಚರಿಯ ಅಂಕಿ- ಅಂಶ ತೆರೆದಿಟ್ಟ ಸರ್ಕಾರ

ಉದ್ಯೋಗ ಸೃಷ್ಟಿ ವಿಚಾರವಾಗಿ ಮಾತನಾಡಿರುವ ಅವರು, ಕೆಲವು ವಲಯಗಳ ಮೇಲೆ ತೀವ್ರ ಪರಿಣಾಮ ಆಗಿದೆ. ಆದರೆ ಮೆಡಿಕಲ್ ಕೇರ್ ನಂಥ ವಲಯಗಳು ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಪ್ರಗತಿ ದಾಖಲಿಸಿವೆ ಎಂದು ಅವರು ಹೇಳಿದ್ದಾರೆ.

ಲಾಕ್ ಡೌನ್ ಅನ್ನು ಇನ್ನು ಕೆಲ ದಿನದಲ್ಲಿ ತೆಗೆದರೂ ವಲಸೆ ನೌಕರರು ಮತ್ತೆ ಕೆಲಸಗಳಿಗೆ ಮರಳುವುದಕ್ಕೆ ಆಲೋಚನೆ ಮಾಡುತ್ತಾರೆ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಸೈಕಲ್ ಪಂಕ್ಚರ್ ಆಗಿದೆ. ಒಂದು ಚಕ್ರದ ಸಹಾಯದಿಂದ ಅದು ಚಲಿಸುವುದಕ್ಕೆ ಆಗಲ್ಲ. ಒಂದು ವೇಳೆ ಈ ಬಿಕ್ಕಟ್ಟು ಕೊನೆಯಾದರೂ ಇದು ಆರ್ಥಿಕತೆಯ ಉಳಿದ ವಲಯಗಳಿಗೂ ಹಬ್ಬುತ್ತದೆ. ಅದರಲ್ಲೂ ಬ್ಯಾಂಕಿಂಗ್ ವ್ಯವಸ್ಥೆಯೂ ಒಂದು ಎಂದಿದ್ದಾರೆ.

ವಲಸೆ ಕಾರ್ಮಿಕರ ಮೇಲೆ ಅವಲಂಬನೆ ಆಗಿರುವ ಕೃಷಿಯೂ ಒಳಗೊಂಡಂತೆ ಇತರ ವಲಯಗಳಿಗೆ ಕೆಲಸಕ್ಕೆ ಜನರು ದೊರೆಯದೆ ಸಮಸ್ಯೆಯಾಗಬಹುದು ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಂದ ಹಾಗೆ, ವಿವಿಧ ರೇಟಿಂಗ್ ಏಜೆನ್ಸಿಗಳು ಭಾರತದ ಜಿಡಿಪಿ ಬೆಳವಣಿಗೆ ದರವು ಕಡಿಮೆ ಆಗಬಹುದು ಎಂಬುದನ್ನು ಅಂದಾಜು ಮಾಡಿವೆ.

English summary

"If Lock Down Continues Economic Situation Will Become Worse"

If lock down continues economic situation become worse, said economist.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X