ದೆಹಲಿಯ ಅತ್ಯಂತ ದುಬಾರಿ ಮಾರುಕಟ್ಟೆಗಳ ವಿಚಾರಕ್ಕೆ ಬಂದಾಗ, ಖಾನ್ ಮಾರ್ಕೆಟ್ ಸಾಮಾನ್ಯವಾಗಿಯೇ ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ಉನ್ನತ ಶ್ರೇಣಿಯ ಅಧಿಕಾರಿಗಳು ಮತ್ತು ಶ್ರೀಮಂತ ವ್ಯಕ್ತಿಗಳು ವಾಸಿಸುವ ಈ ಪ್ರದೇಶವನ್ನು ಲುಟಿಯನ್ಸ್ ದೆಹಲಿ ಎಂದೂ ಕರೆಯುತ್ತಾರೆ.
ಈ ಮಾರುಕಟ್ಟೆಯಲ್ಲಿ ಅಂಗಡಿಗಳ ಮಾಸಿಕ ಬಾಡಿಗೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ. ಹೀಗಿರುವಾಗ ಇಲ್ಲಿಯ ಬಾಡಿಗೆ ಎಷ್ಟಿದೆ, ಈ ಮಾರುಕಟ್ಟೆ ಯಾರ ಒಡೆತನದಲ್ಲಿದೆ, ಏನು ಮಹತ್ವ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ಖಾನ್ ಮಾರುಕಟ್ಟೆಯ ಬಗ್ಗೆ ನಿಮಗೆ ವಿವರ
1951 ರಲ್ಲಿ ಸ್ಥಾಪನೆಯಾದ ಖಾನ್ ಮಾರುಕಟ್ಟೆಯು ವಿಭಜನೆಯ ನಂತರ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಜನರಿಗೆ ಮನೆಗಳನ್ನು ಒದಗಿಸಿದೆ. ಕೆಳಗಿನ ಮಹಡಿಗಳು ಅಂಗಡಿಗಳನ್ನು ಹೊಂದಿದ್ದು, ಮೇಲಿನವುಗಳು ನಿವಾಸಗಳು ಆಗಿದ್ದವು.
ಪಾಕಿಸ್ತಾನದಿಂದ ಹಿಂದೂಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಜಬ್ಬಾರ್ ಖಾನ್ ಅವರ ಹೆಸರನ್ನು ಈ ಮಾರುಕಟ್ಟೆಗೆ ಇಡಲಾಗಿದೆ. ಈ ಮೂಲಕ ಗೌರವವನ್ನು ಅಬ್ದುಲ್ ಜಬ್ಬಾರ್ ಖಾನ್‌ಗೆ ನೀಡಲಾಗಿದೆ.
ಆರಂಭದಲ್ಲಿ, ಈ ಪ್ರದೇಶದಲ್ಲಿ ಕೇವಲ ಮೂರು ಮನೆಗಳು ಅಸ್ತಿತ್ವದಲ್ಲಿದ್ದವು. ಆದರೆ ಕಾಲಾನಂತರದಲ್ಲಿ, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳು ಕೂಡಾ ಸ್ಥಾಪನೆಯಾದವು. ಇಂದು, ಖಾನ್ ಮಾರುಕಟ್ಟೆಯು ವೈವಿಧ್ಯಮಯ ಗ್ರಾಹಕರಿಗೆ ಸೇವೆಯನ್ನು ನೀಡುವ ಸಾವಿರಾರು ಸಂಸ್ಥೆಗಳನ್ನು ಹೊಂದಿದೆ.
ಬಾಡಿಗೆ ಎಷ್ಟಿದೆ ಗೊತ್ತಾ?
ಸರ್ಕಾರದ ನಿಯಂತ್ರಣದಲ್ಲಿ, ಈ ಅಂಗಡಿಗಳಲ್ಲಿ ಹೆಚ್ಚಿನವು ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುತ್ತವೆ. ಆರಂಭದಲ್ಲಿ ತಿಂಗಳಿಗೆ 50 ರೂಪಾಯಿ ಬಾಡಿಗೆಯನ್ನು ನಿಗದಿಪಡಿಸಲಾಗಿತ್ತು. 1956 ರಲ್ಲಿ ಪುನರ್‌ವಸತಿ ಸಚಿವಾಲಯದ ಯೋಜನೆಯು 6,516 ರೂಪಾಯಿಗೆ ಬಾಡಿಗೆ ಮೊತ್ತವನ್ನು ಏರಿಸಿದೆ.
ಖಾನ್ ಮಾರ್ಕೆಟ್‌ನಲ್ಲಿನ ವಾಣಿಜ್ಯ ಸ್ಥಳದ ಸರಾಸರಿ ಬಾಡಿಗೆ ಪ್ರತಿ ಚದರ ಅಡಿಗೆ 1800 ರೂಪಾಯಿಯಿಂದ 2200 ರೂಪಾಯಿವರೆಗೆ ಇದೆ. ಇದು ಸ್ಥಳ, ಗಾತ್ರ ಮತ್ತು ಆಸ್ತಿಯ ಪ್ರಕಾರವನ್ನು ಅವಲಂಬಿಸಿರುತ್ತದೆ. ಆ ಮೂಲಕ, ಅಂಗಡಿಗಳ ಬಾಡಿಗೆ ಮಾಸಿಕ ಅಂದಾಜು 6 ಲಕ್ಷ ರೂಪಾಯಿ ಆಗಿದೆ.
ರಾಜನಾಥ್ ಸಿಂಗ್ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಮಾರುಕಟ್ಟೆಯನ್ನು ಮರುನಾಮಕರಣ ಮಾಡಲು ಪ್ರಯತ್ನಿಸಿದರೂ, ಅಂಗಡಿ ಮಾಲೀಕರು ಬದಲಾವಣೆಯನ್ನು ತೀವ್ರವಾಗಿ ವಿರೋಧಿಸಿದರು. ಖಾನ್ ಮಾರ್ಕೆಟ್, ಅದರ ಶ್ರೀಮಂತ ಇತಿಹಾಸ ಮತ್ತು ಆಧುನಿಕತೆಯ ಮಿಶ್ರಣವಾಗಿದೆ. ಶಾಪಿಂಗ್ ಮಾಡಲು ಇಷ್ಟಪಡುವವರಿಗೆ ಮತ್ತು ಆಹಾರ ಪ್ರಿಯರಿಗೆ ಉತ್ತಮ ಸ್ಥಳ ಇದಾಗಿದೆ.


Click it and Unblock the Notifications