ಹುಬ್ಬಳ್ಳಿಯಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಐಟಿ ಕ್ಷೇತ್ರಗಳು ಬೆಳೆಯಬೇಕು ಎಂಬ ಆಸೆ ಬಹುದಿನಗಳಿಂದ ಎಲ್ಲರಲ್ಲೂ ಇದೆ. ಇದರಿಂದ ಆ ಭಾಗದಲ್ಲಿ ಉದ್ಯೋಗ ಸೃಷ್ಟಿ ಆಟಗಬಹುದು ಎಂಬ ಆಸೆ. ಈ ನಿಟ್ಟಿನಲ್ಲಿ ಹಲವು ಕಂಪನಿಗಳು ಈಗಾಗಲೇ ಬೆಂಗಳೂರನ್ನು ಹೊರತು ಪಡಿಸಿ, ರಾಜ್ಯದ ಬೇರೆ ಬೇರೆ ಊರುಗಳತ್ತ ಮುಖ ಮಾಡಿವೆ. ಈಗ ಪ್ರತಿಷ್ಠಿತ ಕಂಪನಿಯೊಂದು ವಾಣಿಜ್ಯ ನಗರಿಯಲ್ಲೊಂದು ಕ್ಯಾಂಪಸ್ ಆರಂಭಿಸಿದೆ.
ಹುಬ್ಬಳ್ಳಿಯ ಕೆಎಲ್‌ಇ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಕೆಎಲ್‌ಇಐಟಿ) ಯಲ್ಲಿ ಭವಿಷ್ಯದ ತಂತ್ರಜ್ಞಾನ ಡೊಮೇನ್‌ಗಳಾದ ಮೆಷಿನ್ ಲರ್ನಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ ಮತ್ತು ಡೇಟಾ ಸೈನ್ಸ್‌ನಲ್ಲಿ ಯುವಕರನ್ನು ಹೆಚ್ಚಿಸಲು ಸ್ಯಾಮ್‌ಸಂಗ್ ರಿಸರ್ಚ್ ಆಂಡ್ ಡೆವಲ್ಪಮೆಂಟ್ ಇನ್‌ಸ್ಟಿಟ್ಯೂಟ್ ಬೆಂಗಳೂರು ಕ್ಯಾಂಪಸ್ ಆರಂಭಿಸಿದೆ.
ಕ್ಲಾಸ್ ರೂಮ್‌ನಲ್ಲಿ ಅಧ್ಯಾಪಕರು ಅಡ್ವಾನ್ಸ್ ಟೆಕ್ನಾಲಜಿ ಹಾಗೂ ಪ್ರಾಜಕ್ಟ್‌ಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಕೆಲಸ ಮಾಡುತ್ತಾರೆ. ಇದರಿಂದ ಕೆಲಸಕ್ಕೆ ಸೇರಿದಾಗ ಅನುಕೂಲವಾಗುತ್ತದೆ. ಕೆಎಲ್‌ಇಯಲ್ಲಿ ನಿರ್ಮಿತವಾದ ಕ್ಯಾಂಪಸ್ ಮೂಲಕ ಉದ್ಯಮ ಮತ್ತು ಶೈಕ್ಷಣಿಕ ನಡುವಿನ ಅಂತರವನ್ನು ಕಡಿಮೆ ಮಾಡಲು ಬಯಸುತ್ತದೆ. ಅಲ್ಲದೆ ಸೂಕ್ತ ಮಾರ್ಗದರ್ಶನದ ಮೂಲಕ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಮೇಲೆ ಕೇಂದ್ರೀಕರಿಸುತ್ತದೆ.

ಈ ಕಾರ್ಯಕ್ರಮದ ಮೂಲಕ SRI-B KLEIT ನಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರನ್ನು ಹೆಚ್ಚಿಸಲು ಚಿಂತನೆ ನಡೆದಿದೆ. SRI-B ಈಗಾಗಲೇ ಕರ್ನಾಟಕ ಮತ್ತು ಆಂಧ್ರಪ್ರದೇಶದಾದ್ಯಂತ ನಾಲ್ಕು ಎಂಜಿನಿಯರಿಂಗ್ ಕಾಲೇಜುಗಳೊಂದಿಗೆ ಕೆಲಸ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ, ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್, IoT ಮತ್ತು ಬಿಗ್ ಡೇಟಾ ಕೋರ್ಸ್‌ಗಳಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡಿದೆ. 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಾಗಲೇ ಪ್ರಮಾಣಪತ್ರವನ್ನು ಪಡೆದಿದ್ದಾರೆ.

ಈ ಕ್ಯಾಂಪಸ್ ಮೂಲಕ ಅತ್ಯಾಧುನಿಕ ತಂತ್ರಜ್ಞಾನದ ಕುರಿತು ವಿದ್ಯಾರ್ಥಿಗಳಿಗೆ ಕೌಶಲ್ಯ ನೀಡುವ ಮೂಲಕ ವಿದ್ಯಾರ್ಥಿಗಳ ಸ್ಕಿಲ್ ಹೆಚ್ಚಿಸಲು ಸಹಾಯಕಾರಿ. ಸ್ಯಾಮ್‌ಸಂಗ್ ತನ್ನ ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಕಾರ್ಯಕ್ರಮದ ಭಾಗವಾಗಿ ಐಐಟಿ-ದೆಹಲಿ, ಐಐಟಿ-ಕಾನ್ಪುರ್, ಐಐಟಿ-ಹೈದರಾಬಾದ್, ಐಐಟಿ-ಖರಗ್‌ಪುರ, ಐಐಟಿ-ರೂರ್ಕಿ ಮತ್ತು ಐಐಟಿ-ಗುವಾಹಟಿ, ಐಐಐಟಿಡಿಎಂ-ಕರ್ನೂಲ್ ಮತ್ತು ಐಐಟಿ-ಜೋಧ್‌ಪುರದಲ್ಲಿ ಇದುವರೆಗೆ ಎಂಟು ಸ್ಯಾಮ್‌ಸಂಗ್ ಇನ್ನೋವೇಶನ್ ಲ್ಯಾಬ್‌ಗಳನ್ನು ಸ್ಥಾಪಿಸಿದೆ. .


Click it and Unblock the Notifications