ಅಮೃತಸರ, ನವೆಂಬರ್ 05: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪಂಜಾಬ್‌ನಲ್ಲಿ ಡ್ರೈ ಫ್ರೂಟ್ಸ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿದ್ದಾರೆ.
ಡ್ರೈ ಫ್ರೂಟ್ಸ್ ವ್ಯಾಪಾರದಲ್ಲಿ ತೊಡಗಿರುವ ಜನರ ಮೇಲೆ ದಾಳಿ ನಡೆಸಿದ ನಂತರ 200 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ಆದಾಯವನ್ನು ಪತ್ತೆ ಮಾಡಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶುಕ್ರವಾರ ತಿಳಿಸಿದೆ.
ದಾಳಿ ವೇಳೆ ರೂ. 40 ಕೋಟಿಯಷ್ಟು ಹೆಚ್ಚುವರಿ ದಾಸ್ತಾನು ಪತ್ತೆಯಾಗಿದೆ. ವಶಪಡಿಸಿಕೊಂಡ ವಸ್ತು ಮತ್ತು ಸಂಗ್ರಹಿಸಿದ ಪುರಾವೆಗಳ ವಿಶ್ಲೇಷಣೆ ಪ್ರಕಾರ ಒಂದು ಗುಂಪು ಬೇನಾಮಿಯಾಗಿ ವ್ಯವಹಾರ ನಡೆಸುತಿತ್ತು ಎಂದು ಅದು ಹೇಳಿದೆ.

ಶೋಧ ಕಾರ್ಯದ ವೇಳೆ ಲೆಕ್ಕಕ್ಕೆ ಸಿಗದ 63 ಲಕ್ಷ ರೂ. ನಗದು ಮತ್ತು 2 ಕೋಟಿ ರೂ. ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ ಮತ್ತು 200 ಕೋಟಿ ರೂ.ಗಿಂತ ಹೆಚ್ಚಿನ ಲೆಕ್ಕಕ್ಕೆ ಬಾರದ ಆದಾಯವನ್ನು ಪತ್ತೆಹಚ್ಚಿದೆ" ಎಂದು ಅದು ಹೇಳಿದೆ.
ಅಕ್ಟೋಬರ್ 28 ರಂದು ದಾಳಿ ನಡೆಸಲಾಗಿದ್ದು, ಈ ಗುಂಪು ಹಲವಾರು ವರ್ಷಗಳಿಂದ ಒಣ ಹಣ್ಣುಗಳ ಖರೀದಿಯನ್ನು ವಿಪರೀತವಾಗಿ ಹೆಚ್ಚಿಸುತಿತ್ತು ಎಂದು ಸಿಬಿಡಿಟಿ ಹೇಳಿದೆ. ವಶಕ್ಕೆ ಪಡೆಯಲಾದ ದಾಖಲಾತಿಯಲ್ಲಿ ಮಾರಾಟ ಮತ್ತು ಖರೀದಿ ನಡುವೆ ದೊಡ್ಡ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಜಸ್ಥಾನದ 33ಕ್ಕೂ ಅಧಿಕ ಪ್ರದೇಶಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಶೋಧ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ ಹಣದ ರಶೀತಿ ಹಾಗೂ ಜಾಮೀನು ಖರೀದಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಇದಲ್ಲದೆ ಮರಳನ್ನು ನಗದು ಮೂಲಕ ಮಾರಾಟ ಮಾಡಿರುವುದಕ್ಕೂ ಸಾಕ್ಷ್ಯಗಳು ದೊರೆತಿವೆ.
ಯಾವುದೇ ದಾಖಲೆ ಇಲ್ಲದ 2.31 ಕೋಟಿ ರೂ ಹಾಗೂ ದಾಖಲೆಗಳಿಲ್ಲದ 2.48 ಕೋಟಿ ರೂ. ಬೆಲೆ ಬಾಳುವ ಆಭರಗಳು ದೊರೆತಿವೆ. ಒಟ್ಟಿನಲ್ಲಿ ಈ ಶೋಧದಲ್ಲಿ 50 ಕೋಟಿ ಗೂ ಅಧಿಕ ಲೆಕ್ಕಕ್ಕೆ ಸಿಗದ ಆದಾಯವನ್ನು ಪತ್ತೆ ಮಾಡಲಾಗಿದೆ.
ಕೆಲವು ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆಯು ಮಹಾರಾಷ್ಟ್ರ ಮಾಜಿ ಸಚಿವ ಅಜಿತ್ ಪವಾರ್ ಅವರ ಮನೆ ಮೇಲೂ ಐಟಿ ದಾಳಿ ನಡೆದಿತ್ತು.
ವಶಕ್ಕೆ ಪಡೆಯಳಾಗಿರುವ ಆಸ್ತಿಗಳಲ್ಲಿ ದಕ್ಷಿಣ ದೆಹಲಿಯಲ್ಲಿರುವ ಸುಮಾರು 20 ಕೋಟಿ ಮೌಲ್ಯದ ಫ್ಲಾಟ್ ಸೇರಿದೆ. ನಿರ್ಮಲ್ ಹೌಸ್‌ನಲ್ಲಿರುವ ಪಾರ್ಥ್ ಪವಾರ್ ಅವರ ಕಚೇರಿಯ ವೆಚ್ಚ ಸುಮಾರು 25 ಕೋಟಿ. ಜಾರಂದೇಶ್ವರ ಸಕ್ಕರೆ ಕಾರ್ಖಾನೆ ಸುಮಾರು 600 ಕೋಟಿ ರೂ.
ಇದಲ್ಲದೇ ಗೋವಾದಲ್ಲಿ ನಿಲಯ ಎಂಬ ರೆಸಾರ್ಟ್ 250 ಕೋಟಿ ರೂ. ಶಾಮೀಲಾಗಿವೆ. ಜಪ್ತಿ ಮಾಡಿರುವ ಆಸ್ತಿ ಬೇನಾಮಿ ಹಣದಿಂದ ಖರೀದಿಸಿಲ್ಲ ಎಂದು ಸಾಬೀತುಪಡಿಸಲು ಅಜಿತ್ ಪವಾರ್ ಗೆ 90 ದಿನಗಳ ಕಾಲಾವಕಾಶ ನೀಡಲಾಗಿದೆ.
ಆದಾಯ ತೆರಿಗೆ ಇಲಾಖೆಯು ಕಳೆದ ತಿಂಗಳು ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರರಿಗೆ ಸಂಬಂಧಿಸಿದ ಕನಿಷ್ಠ 70 ನಿವೇಶನಗಳ ಮೇಲೆ ದಾಳಿ ನಡೆಸಿತ್ತು.


Click it and Unblock the Notifications