ಚಿನ್ನದ ಮೇಲೆ ಆದಾಯ ತೆರಿಗೆ: ವಿವಿಧ ರೂಪದ ಹೂಡಿಕೆಗೆ ಭಾರತದಲ್ಲಿ ಹೇಗೆ ತೆರಿಗೆ ವಿಧಿಸಲಾಗುತ್ತಿದೆ?

ಬಡಬಗ್ಗರಿಂದ ಹಿಡಿದು ಉಳ್ಳವರ ತನಕ ಸದಾಕಾಲಕ್ಕೂ ಉತ್ತಮ ಹೂಡಿಕೆ ಆಯ್ಕೆ ಎಂದರೆ ಅದು ಚಿನ್ನ ಚಿನ್ನ ಚಿನ್ನ. ಕಳೆದ ಒಂದು ವರ್ಷದಿಂದ ಮಾರುಕಟ್ಟೆಯ ಆರ್ಥಿಕ ಪರಿಸ್ಥಿತಿಗಳ ಮೇಲೆ ಆಗುತ್ತಿರುವ ಬದಲಾವಣೆಯಿಂದಾಗಿ ಬಂಗಾರ ಬೆಲೆ ಹಿಂದೆಂದೂ ಕಾಣದ ಮಟ್ಟಕ್ಕೆ ಏರಿಕೆ ಕಂಡಿದೆ. ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ವಿಶ್ವದೆಲ್ಲೆಡೆ ಅನಿಶ್ಚಯ ಮನೆಮಾಡಿದ ಪರಿಣಾಮ, ಜನರ ಮನಸ್ಸು ಸುರಕ್ಷಿತ, ಖಾತ್ರಿ ಮತ್ತು ನೆಮ್ಮದಿಯ ಆದಾಯ ಕೊಡುವ ಹೂಡಿಕೆ ಸಾಧನಗಳತ್ತ ಹೊರಳಿತು.

ಹಾಗಾಗಿ, ಬಂಗಾರವೇ ಸುರಕ್ಷಿತ ಹೂಡಿಕೆ ಸಾಧನ ಎಂಬ ಜನಮಾನಸದ ನಂಬಿಕೆಯಿಂದಾಗಿ, ಅಪಾರ ಜನರು ಚಿನ್ನದ ಮೇಲೆ ಹಣ ತೊಡಗಿಸಿದರು. ಬೇರೆ ಬೇರೆ ಹೂಡಿಕೆ ಸಾಧನಗಳಲ್ಲಿ ಇಟ್ಟಿದ್ದ ಹಣವನ್ನು ಬಂಗಾರದ ಮೇಲೆ ಸುರಿದರು. ಬೆಳ್ಳಿ, ವಜ್ರ, ಪ್ಲಾಟಿನಂ ಸೇರಿದಂತೆ ನಾನಾ ಅತ್ಯಮೂಲ್ಯ ಆಭರಣ ಲೋಹಗಳಿಗೆ ಹೋಲಿಸಿದರೆ ಚಿನ್ನವೇ "ಬೆಸ್ಟ್ ಫಾರ್ ಇನ್ವೆಸ್ಟ್‌ಮೆಂಟ್" ಎಂಬ ಜನರ ನಂಬಿಕೆ ಅಗಾಧವಾಯಿತು. ಇದು ಭಾರತ ಮಾತ್ರವಲ್ಲ, ಇಡೀ ವಿಶ್ವದ ಜನರ ಹೂಡಿಕೆ ಮನಸ್ಥಿತಿ ಈಗ ಚಿನ್ನದತ್ತ ವಾಲಿದೆ.

ಮಧ್ಯಮ ವರ್ಗದಿಂದ ಹಿಡಿದು ಬೃಹತ್ ಹೂಡಿಕೆದಾರರ ತನಕ ಜನರು ಅವರ ಹೂಡಿಕೆಯ ಉದ್ದೇಶ ಮತ್ತು ಹೂಡಿಕೆಯ ಶಕ್ತಿಗೆ ಅನುಗುಣವಾಗಿ ನಾನಾ ರೂಪದ ಚಿನ್ನದ ಹೂಡಿಕೆಗಳಲ್ಲಿ ಹಣ ತೊಡಗಿಸುತ್ತಿದ್ದಾರೆ. ಆದರೆ, ಚಿನ್ನದ ಮೇಲೆ ಹೂಡಿಕೆ ಮಾಡುವಾಗ ಎದುರಾಗುವ ತೆರಿಗೆ ಬಾಧ್ಯತೆಗಳ ಬಗ್ಗೆ ಜನರು ಜಾಗೃತರಾಗಿರಬೇಕು, ಇದು ಅತಿಮುಖ್ಯವಾದ ವಿಚಾರ.

ಭಾರತದಲ್ಲಿರುವ ನಾನಾ ರೂಪದ ಚಿನ್ನದ ಹೂಡಿಕೆಗಳು ಯಾವುವು?

ಭಾರತದಲ್ಲಿರುವ ನಾನಾ ರೂಪದ ಚಿನ್ನದ ಹೂಡಿಕೆಗಳು ಯಾವುವು?

ಭಾರತೀಯರಿಗೆ ಬಂಗಾರ ಎಂದರೆ ಅತಿ ವ್ಯಾಮೋಹ. ಏನೇ ಬಡತನವಿರಲಿ, ದು ಚೂರಾದಾರೂ ಚಿನ್ನ ಖರೀದಿಸಲೇಬೇಕು ಎಂಬ ಭಾರತೀಯರ ಪುರಾತನ ಭಾವನೆ ಇಂದಿಗೂ ಮುಂದುವರಿದುಕೊಂಡು ಬಂದಿದೆ. ಹಾಗಾಗಿ, ಚಿನ್ನ ಖರೀದಿಯಲ್ಲಿ ಚೀನಾ ನಂತರ ಭಾರತ ಇಡೀ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಚಿನ್ನದ ಆಭರಣಗಳನ್ನು ಖರೀದಿಸುವಲ್ಲಿ ಭಾರತೀಯರು ಸದಾ ಮುಂದು. ಆದರೆ ಇದೀಗ ಚಿನ್ನದ ಮೇಲೆ ಹೂಡಿಕೆಗೆ ನಾನಾ ಮಾರ್ಗಗಳಿವೆ. ಪ್ರತಿಯೊಬ್ಬರ ಅಗತ್ಯಕ್ಕೆ ತಕ್ಕಂತೆ ಹೂಡಿಕೆ ಮಾಡಲು ಈಗ ಸಾಕಷ್ಟು ಅವಕಾಶಗಳಿವೆ. ಡಿಜಿಟಲ್ ಗೋಲ್ಡ್, ಭೌತಿಕ ಚಿನ್ನ, ಚಿನ್ನದ ಉತ್ಪನ್ನಗಳು(ಡೆರಿವೇಟಿವ್ ಕಾಂಟ್ರಾಕ್ಟ್-ಇಬ್ಬರು ಪಾರ್ಟಿಗಳ ನಡುವೆ ಏರ್ಪಡುವ ಉತ್ಪನ್ನ ಗುತ್ತಿಗೆ) ಮತ್ತು ದಾಖಲೆ ಪತ್ರಗಳ ಮೂಲಕ ಚಿನ್ನ ಹೂಡಿಕೆ ಇತ್ಯಾದಿ ಹಲವಾರು ರೀತಿಯ ಹೂಡಿಕೆ ಸಾಧನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಪೇಟಿಎಂ, ಇಟಿ ಮನಿ ಮೂಲಕ ಖರೀದಿಸುವ ಚಿನ್ನವೇ ಡಿಜಿಟಲ್ ಗೋಲ್ಡ್. ಭೌತಿಕ ಚಿನ್ನವೆಂದರೆ ಬಂಗಾರದ ಆಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ಬಿಸ್ಕಿಟ್, ಚಿನ್ನದ ಉಳಿತಾಯ ಯೋಜನೆಗಳು, ಪೇಪರ್ ಗೋಲ್ಡ್, ಗೋಲ್ಡ್ ಇಟಿಎಫ್, ಗೋಲ್ಡ್ ಮ್ಯೂಚುವಲ್ ಫಂಡ್‌ಗಳ ಖರೀದಿ ಇತ್ಯಾದಿ.

ಡಿಜಿಟಲ್ ಗೋಲ್ಡ್ಪೇಟಿಎಂ, ಇಟಿ ಮನಿ ಮೂಲಕ ಚಿನ್ನ ಖರೀದಿ 
ಭೌತಿಕ ಚಿನ್ನಚಿನ್ನದ ಆಭರಣಗಳು, ಚಿನ್ನದ ರತ್ನಾಭರಣಗಳು, ನಾಣ್ಯಗಳು, ಚಿನ್ನದ ಉಳಿತಾಯ ಯೋಜನೆಗಳು, ಚಿನ್ನದ ಬಿಸ್ಕೆಟ್‌ಗಳು
ಪೇಪರ್ ಗೋಲ್ಡ್ಗೋಲ್ಡ್ ಇಟಿಎಫ್‌ಗಳು, ಗೋಲ್ಡ್ ಮ್ಯೂಚುವಲ್ ಫಂಡ್‌ಗಳು, ಸವರನ್ ಗೋಲ್ಡ್ ಬಾಂಡ್‌ಗಳು
ಗೋಲ್ಡ್ ಡೆರಿವೇಟಿವ್ಸ್ಚಿನ್ನದ ಸರಕಿನ ಮೇಲೆ ಹೂಡಿಕೆ

ಗೋಲ್ಡ್ ಡೆರಿವೇಟಿವ್ಸ್ ಹೂಡಿಕೆ
ಇದು ಚಿನ್ನದ ಸರಕಿನ ಮೇಲೆ ಮಾಡುವ ಹೂಡಿಕೆ. ಇದು ಅತ್ಯಂತ ಲಾಭಾಂಶ ತಂದುಕೊಡುವ, ಐಷಾರಾಮಿ ಹೂಡಿಕೆ ಸಾಧನವಾಗಿದೆ. ಈ ಹೂಡಿಕೆಯಲ್ಲಿ ಗಂಡಾಂತರಗಳು ಕಡಿಮೆ, ಹಾಗಾಗಿ, ಇದು ಹೂಡಿಕೆಯ ಪ್ರಮುಖ ಭಾಗವಾಗಿ ಪರಿಗಣಿಸಬಹುದು. ಬೃಹತ್ ಹೂಡಿಕೆದಾರರಿಗೆ ಇದು ಭರ್ಜರಿ ಲಾಭ ತಂದುಕೊಡುವ ಸಾಧನವಾಗಿದೆ. 

ಭೌತಿಕ ಚಿನ್ನ ಮಾರಾಟಕ್ಕೆ ತೆರಿಗೆ

ಭೌತಿಕ ಚಿನ್ನ ಮಾರಾಟಕ್ಕೆ ತೆರಿಗೆ

ಚಿನ್ನದ ಆಭರಣಗಳು, ಚಿನ್ನವಿರುವ ರತ್ನಾಭರಣಗಳು, ಚಿನ್ನದ ನಾಣ್ಯಗಳು, ಚಿನ್ನದ ಉಳಿತಾಯ ಯೋಜನೆಗಳು, ಚಿನ್ನದ ಬಿಸ್ಕಿಟ್‌ಗಳು ಜನಪ್ರಿಯ ಹೂಡಿಕೆ ಸಾಧನಗಳಾಗಿದ್ದು, ಇವುಗಳಿಗೆ ತೆರಿಗೆ ಅನ್ವಯವಾಗುತ್ತದೆ. ವೈಯಕ್ತಿಕ ಹೂಡಿಕೆದಾರರು ಭೌತಿಕ ಚಿನ್ನ ಮಾರಾಟ ಮಾಡಿದರೆ, 20% ತೆರಿಗೆ ವಿಧಿಸಲಾಗುತ್ತದೆ, ಜತೆಗೆ ದೀರ್ಘಕಾಲೀನ ಬಂಡವಾಳ ಗಳಿಕೆಗೆ 4% ಮೇಲ್ತೆರಿಗೆ (ಸೆಸ್) ಅನ್ವಯವಾಗುತ್ತದೆ. ನೀವು ಚಿನ್ನ ಖರೀದಿಸಿದ 3 ವರ್ಷಗಳಲ್ಲಿ ಅದನ್ನು ಮಾರಾಟ ಮಾಡಿದರೆ, ಅದನ್ನು ಅಲ್ಪಾವಧಿ ಎಂದು ಪರಿಗಣಿಸಲಾಗುತ್ತದೆ. ಖರೀದಿಸಿದ ಚಿನ್ನವನ್ನು 3 ವರ್ಷಗಳ ನಂತರ ಮಾರಾಟ ಮಾಡಿದರೆ, ಅದನ್ನು ದೀರ್ಘಾವಧಿ ಎಂದು ಪರಿಗಣಿಸಲಾಗುತ್ತದೆ. ನೀವು 3 ವರ್ಷದೊಳಗೆ ಚಿನ್ನ ಮಾರಾಟ ಮಾಡಿದರೆ, ನಿಮ್ಮ ವಾರ್ಷಿಕ ವರಮಾನದ ತೆರಿಗೆ ಹಂತ(ಬ್ರಾಕೆಟ್) ಪರಿಗಣಿಸಿ, ಅಲ್ಪಾವಧಿ ಬಂಡವಾಳ ಗಳಿಕೆ ಮೇಲ್ತೆರಿಗೆ ವಿಧಿಸಲಾಗುತ್ತದೆ. ದೀರ್ಘಾವಧಿ ಆದರೆ ಸೆಸ್ ಸೇರಿ ಒಟ್ಟಾರೆ 20.8% ತೆರಿಗೆ ವಿಧಿಸಲಾಗುತ್ತದೆ, ಜತೆಗೆ ಸೂಚ್ಯಂಕ ಪ್ರಯೋಜನಗಳು ಲಭಿಸುತ್ತವೆ. ಚಿನ್ನ ಮಾರಾಟ ಮಾಡುವಾಗ ಟಿಡಿಎಸ್ (ಮೂಲದಲ್ಲೇ ತೆರಿಗೆ ಕಡಿತ) ಅನ್ವಯವಾಗುವುದಿಲ್ಲ. ನೀವು 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಚಿನ್ನ ಖರೀದಿಸುವಾಗ ನಗದು ಪಾವತಿಸಿದರೆ, 1% ಟಿಡಿಎಸ್ ವಿಧಿಸಲಾಗುತ್ತದೆ. ನೀವು ಚಿನ್ನದ ಆಭರಣ ಖರೀದಿಸಿದರೆ 3% ಜಿಎಸ್‌ಟಿ ಮತ್ತು ತಯಾರಿಕಾ ವೆಚ್ಚ (ಇದ್ದರೆ) ಪಾವತಿಸಬೇಕಾಗುತ್ತದೆ.

ಡಿಜಿಟಲ್ ಚಿನ್ನಕ್ಕೆ ತೆರಿಗೆ

ಡಿಜಿಟಲ್ ಚಿನ್ನಕ್ಕೆ ತೆರಿಗೆ

ಬಂಡವಾಳ ಗಳಿಕೆಯ ತೆರಿಗೆ ವಿಚಾರಕ್ಕೆ ಬಂದರೆ, ಭೌತಿಕ ಚಿನ್ನದ ರೀತಿಯಲ್ಲೇ ಡಿಜಿಟಲ್ ಚಿನ್ನಕ್ಕೂ ತೆರಿಗೆ ಅನ್ವಯವಾಗುತ್ತದೆ. ಡಿಜಿಟಲ್ ಗೋಲ್ಡ್ ಮೇಲಿನ ಹೂಡಿಕೆ ಇತ್ತೀಚೆಗಷ್ಟೇ ಮಾರುಕಟ್ಟೆಗೆ ಪರಿಚಯವಾಗಿರುವ ಹೂಡಿಕೆ ಸಾಧನ. ಇದು ಅಲ್ಪಕಾಲದಲ್ಲೇ ಅಪಾರ ಜನಪ್ರಿಯತೆ ಗಳಿಸಿಕೊಂಡಿದೆ. 36 ತಿಂಗಳು ಅಂದರೆ 3 ವರ್ಷದೊಳಗೆ ಈ ಹೂಡಿಕೆಗೆ ಸಿಗುಲ ಆದಾಯಕ್ಕೆ ತೆರಿಗೆ ಅನ್ವಯವಾಗುವುದಿಲ್ಲ. ದೀರ್ಘಕಾಲೀನ ಬಂಡವಾಳ ಗಳಿಕೆ ಆದರೆ, ಡಿಜಿಟಲ್ ಚಿನ್ನದಿಂದ ಬರುವ ಒಟ್ಟು ಆದಾಯಕ್ಕೆ 20% ತೆರಿಗೆ ವಿಧಿಸಲಾಗುತ್ತದೆ. ಜತೆಗೆ 4% ಮೇಲ್ತೆರಿಗೆ(ಸೆಸ್) ಅನ್ವಯವಾಗುತ್ತದೆ. ಆದರೆ ಇದಕ್ಕೆ ಸೂಚ್ಯಂಕ ಪ್ರಯೋಜನಗಳು ಲಭಿಸುತ್ತವೆ. ಪೇಟಿಎಂ, ಗೂಗಲ್ ಪೇ ಮತ್ತು ಫೋನ್ ಪೇಯಂತಹ ಅನೇಕ ಮೊಬೈಲ್ ವ್ಯಾಲೆಟ್ ಕಂಪನಿಗಳು ಎಂಎಂಟಿಸಿ-ಪಿಎಎಂಪಿ ಅಥವಾ ಸೇಫ್ ಗೋಲ್ಡ್ ಜತೆ ಪಾಲುದಾರಿಕೆ ಮಾಡಿಕೊಂಡು ಚಿನ್ನ ಮಾರಾಟಕ್ಕೆ ಇಳಿದಿವೆ. ಕನಿಷ್ಠ 1 ರೂ. ಹೂಡಿಕೆ ಮಾಡಿ ಚಿನ್ನ ಖರೀದಿಸುವ ಕೊಡುಗೆಗಳನ್ನು ಮಾರುಕಟ್ಟೆಗೆ ಬಿಡುತ್ತಿವೆ. ಡಿಜಿಟಲ್ ಚಿನ್ನವನ್ನು ಇಟ್ಟುಕೊಳ್ಳುವ ಕಾಲಾವಧಿ ನಿರ್ಧರಿಸಿ, ಇದಕ್ಕೆ ತೆರಿಗೆ ನಿರ್ಧರಿಸಲಾಗುತ್ತದೆ.

ಪೇಪರ್ ಗೋಲ್ಡ್ ಗೆ ತೆರಿಗೆ ಹೇಗೆ?

ಪೇಪರ್ ಗೋಲ್ಡ್ ಗೆ ತೆರಿಗೆ ಹೇಗೆ?

ಚಿನ್ನದ ಇಟಿಎಫ್(Exchange-traded fund - ಷೇರು ಮಾರುಕಟ್ಟೆಯಲ್ಲಿ ವಹಿವಾಟು ಆಗುವ ನಿಧಿ) ಹೂಡಿಕೆ ಸಾಧನಗಳಲ್ಲಿ ನೀವು ಬಂಡವಾಳ ತೊಡಗಿಸಬಹುದು. ಈ ಸಾಧನಗಳಲ್ಲಿ ನಿಮಗೆ ಭೌತಿಕ ಚಿನ್ನ ಸಿಗುವುದಿಲ್ಲ. ನೀವು ಚಿನ್ನದ ಇಟಿಎಫ್ ಮೇಲೆ ತೊಡಗಿಸಿರುವ ಹಣಕ್ಕೆ ದಾಖಲೆ ಪತ್ರಗಳನ್ನು ನೀಡಲಾಗುತ್ತದೆ. ದೈನಂದಿನ ಚಿನ್ನದ ಬೆಲೆ ಆಧರಿಸಿ, ನಿಮ್ಮ ಹೂಡಿಕೆ ದಿನನಿತ್ಯದ ವಹಿವಾಟಿಗೆ ಒಳಪಟ್ಟಿರುತ್ತದೆ. ಗೋಲ್ಡ್ ಇಟಿಎಫ್ ಗಳಿಂದ ಬರುವ ಗಳಿಕೆಯ ಪ್ರಮಾಣವು ಬಹುತೇಕ ಭೌತಿಕ ಚಿನ್ನ ಮಾರಾಟ ಮಾಡಿದಾಗ ಸಿಗುವ ಆದಾಯ ಪ್ರಮಾಣದಷ್ಟೇ ಇರುತ್ತದೆ. ಗೋಲ್ಡ್ ಇಟಿಎಫ್ ಮತ್ತು ಮ್ಯೂಚುವಲ್ ಫಂಡ್ ಗಳಿಂದ ಸಿಗುವ ಲಾಭಗಳಿಗೆ ಭೌತಿಕ ಚಿನ್ನಕ್ಕೆ ಹಾಕುವ ತೆರಿಗೆಯನ್ನೇ ವಿಧಿಸಲಾಗುತ್ತದೆ. ಆದರೆ ಸವರನ್ ಗೋಲ್ಡ್ ಬಾಂಡ್ ಗಳಿಂದ ಸಿಗುವ ವರಮಾನಕ್ಕೆ ವಿಧಿಸುವ ತೆರಿಗೆ ಪ್ರಮಾಣ ಬೇರೆಯೇ ಆಗಿರುತ್ತದೆ. 3 ವರ್ಷದೊಳಗೆ ಹೂಡಿಕೆ ಮಾಡುವ ಹೂಡಿಕೆದಾರರಿಗೆ ನೇರ ತೆರಿಗೆ ಅನ್ವಯವಾಗುವುದಿಲ್ಲ. ಹಾಗಾಗಿ, ಅಲ್ಪಾವಧಿಯ ಹೂಡಿಕೆದಾರರಿಗೆ ಚಿನ್ನ ಸೂಕ್ತ ಹೂಡಿಕೆ ಸಾಧನವಾಗಿದೆ.

ಚಿನ್ನದ ಬಾಂಡ್ ಗಳ ಮಾರಾಟಕ್ಕೆ ತೆರಿಗೆ ಹೇಗೆ?

ಚಿನ್ನದ ಬಾಂಡ್ ಗಳ ಮಾರಾಟಕ್ಕೆ ತೆರಿಗೆ ಹೇಗೆ?

ನೀವು ಚಿನ್ನದ ಬಾಂಡ್ ಗಳ ಮೇಲೆ ಹೂಡಿಕೆ ಮಾಡಿದರೆ, ವರ್ಷಕ್ಕೆ 2.5% ಬಡ್ಡಿ ಆದಾಯ ಸಿಗುತ್ತದೆ. ಈ ಆದಾಯವನ್ನು ಇತರೆ ಮೂಲಗಳ ವರಮಾನ ಎಂದು ಪರಿಗಣಿಸಿ, ಅದಕ್ಕೆ ತಕ್ಕಂತೆ ತೆರಿಗೆ ಹಾಕಲಾಗುತ್ತದೆ. ಸವರನ್ ಗೋಲ್ಡ್ ಬಾಂಡ್ ಗಳ ಮೇಲೆ 8 ವರ್ಷ ಹೂಡಿಕೆ ಮಾಡಿದರೆ, ಅದು ತೆರಿಗೆ ಮುಕ್ತವಾಗಿರುತ್ತದೆ. ಗೋಲ್ಡ್ ಬಾಂಡ್ ಯೋಜನೆಯ ನಿಗದಿತ ಕಾಲ ಅಥವಾ ಗಡವಿಗಿಂತ ಮುನ್ನವೇ ನೀವು ಆ ಯೋಜನೆಯಿಂದ ಹೊರಬಂದರೆ, ಈ ಯೋಜನೆಯಿಂದ ಬರುವ ಲಾಭಕ್ಕೆ ಬೇರೆ ರೀತಿಯ ತೆರಿಗೆ ದರ ಅನ್ವಯವಾಗುತ್ತದೆ. ಇದು ಗಮನಿಸಬೇಕಾದ ಪ್ರಮುಖ ವಿಚಾರ. ದೀರ್ಘಕಾಲೀನ ಬಂಡವಾಳ ಸ್ವತ್ತನ್ನು ಪರಿಗಣಿಸಿ, ಹೂಡಿಕೆದಾರರು ಕನಿಷ್ಠ 3 ವರ್ಷಗಳ ಕಾಲ ಗೋಲ್ಡ್ ಬಾಂಡ್ ಯೋಜನೆಯಲ್ಲಿ ಇರಬೇಕು. ನೀವು 3 ವರ್ಷದೊಳಗೆ ಗೋಲ್ಡ್ ಬಾಂಡ್‌ಗಳನ್ನು ಮಾರಾಟ ಮಾಡಿದರೆ, ಅದು ಅಲ್ಪಾವಧಿ ಎಂದು ಪರಿಗಣಿತವಾಗುತ್ತದೆ. ವಿಶೇಷವೇನೆಂದರೆ, ಗೋಲ್ಡ್ ಬಾಂಡ್ ಗಳನ್ನು ಖರೀದಿಸಿ, 8 ವರ್ಷಗಳ ಕಾಲ ಕಾಪಾಡಿದರೆ, ಅದರಿಂದ ಬರುವ ಆದಾಯಕ್ಕೆ ಬಂಡವಾಳ ಗಳಿಕೆ ತೆರಿಗೆ ಇರುವುದಿಲ್ಲ. ಜತೆಗೆ ಟಿಡಿಎಸ್ ಸಹ ಅನ್ವಯವಾಗುವುದಿಲ್ಲ. ಹಾಗಾಗಿ, 8 ವರ್ಷಗಳ ಅವಧಿಯ ಸವರನ್ ಗೋಲ್ಡ್ ಬಾಂಡ್‌ಗಳಲ್ಲಿ ಹೂಡಿಕೆ ಲಾಭದಾಯಕ. ಈ ಬಾಂಡ್ ಗಳಿಂದ ಸಿಗುವ ಬಡ್ಡಿ ಆದಾಯವನ್ನು ಇತರೆ ಮೂಲಗಳ ಆದಾಯ ಎಂದು ಪರಿಗಣಿಸಿ, ಹೂಡಿಕೆದಾರನ ಆದಾಯದ ಆಧಾರದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಚಿನ್ನದ ಉತ್ಪನ್ನಗಳ(ಡೆರಿವೇಟಿವ್ಸ್) ಮೇಲೆ ತೆರಿಗೆ ಹೇಗೆ?

ಚಿನ್ನದ ಉತ್ಪನ್ನಗಳ(ಡೆರಿವೇಟಿವ್ಸ್) ಮೇಲೆ ತೆರಿಗೆ ಹೇಗೆ?

ಕಂಪನಿಯೊಂದರ ಒಟ್ಟು ವಾರ್ಷಿಕ ಆದಾಯ 2 ಕೋಟಿ ರೂ.ಗಿಂತ ಕಡಿಮೆ ಇದ್ದರೆ, ಅದು ಗಳಿಸುವ ಲಾಭಕ್ಕೆ 6% ತೆರಿಗೆ ವಿಧಿಸಲಾಗುತ್ತದೆ. ಚಿನ್ನದ ಉತ್ಪನ್ನಗಳಿಂದ ಬರುವ ಆದಾಯವನ್ನು ವ್ಯವಹಾರ ಲಾಭ ಎಂದು ತೋರಿಸಬಹುದು. ಇದರಿಂದ ತೆರಿಗೆ ಹೊರೆ ಕಡಿಮೆ ಮಾಡಿಕೊಳ್ಳಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 44 ಎಡಿ ಅಡಿ, ನಿಮ್ಮ ಎಲ್ಲ ವ್ಯವಹಾರಗಳ ಲಾಭದ ದಾಖಲೆ ಪತ್ರಗಳನ್ನು ಸಮಗ್ರವಾಗಿ ನಿರ್ವಹಿಸುವ ಅಗತ್ಯ ಇರುವುದಿಲ್ಲ.

ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ತೆರಿಗೆ ಹೇಗೆ?

ಚಿನ್ನವನ್ನು ಉಡುಗೊರೆಯಾಗಿ ಸ್ವೀಕರಿಸಿದರೆ ತೆರಿಗೆ ಹೇಗೆ?

ಪೋಷಕರು, ಮಕ್ಕಳು ಮತ್ತು ಒಡಹುಟ್ಟಿದವರಿಂದ ನೀವು ಚಿನ್ನ ಅಥವಾ ಚಿನ್ನದ ಆಭರಣಗಳು ಮತ್ತು ಚಿನ್ನದ ರತ್ನಾಭರಣಗಳನ್ನು ಉಡುಗೊರೆಯಾಗಿ ಸ್ವೀಕರಿಸಿದರೆ, ನೀವು ಯಾವುದೇ ರೀತಿಯ ತೆರಿಗೆ ಪಾವತಿಸುವ ಅಗತ್ಯವಿಲ್ಲ. ಪೋಷಕರಲ್ಲದೆ ಬೇರೆ ಇತರರಿಂದ ನೀವು ಉಡುಗೊರೆಯಾಗಿ ಸ್ವೀಕರಿಸಿದರೆ, ಇತರೆ ಮೂಲಗಳಿಂದ ಬಂದ ಆದಾಯ ಎಂದು ನೀವು ತೆರಿಗೆ ಪಾವತಿಸಬೇಕಾಗುತ್ತದೆ. ಉಡುಗೊರೆಯ ಮೊತ್ತ 50 ಸಾವಿರ ರೂ. ದಾಟಿದ್ದರೆ ಮಾತ್ರ ತೆರಿಗೆಗೆ ಒಳಪಡುತ್ತದೆ.

ಸಮಾಪನ
ಷೇರುಗಳು ಮತ್ತು ಬಾಂಡ್ ಗಳಂತೆ ಚಿನ್ನವು ಅಪಾಯಮುಕ್ತ ಹೂಡಿಕೆ ಸಾಧನವೇನಲ್ಲ. ಜಾಗತಿಕ ಆರ್ಥಿಕ ಪರಿಸ್ಥಿತಿಗಳಿಗೆ ಅನುಗುಣವಾಗಿ ಚಿನ್ನದ ಬೆಲೆ ಏರಿಳಿತ ಕಾಣುತ್ತಿರುತ್ತದೆ. ಹಾಗಾಗಿ, ಹೂಡಿಕೆಗಳಲ್ಲಿ ವೈವಿಧ್ಯತೆ ಕಾಪಾಡುವುದು ಅಗತ್ಯ. ಅಂದರೆ ಮಾರುಕಟ್ಟೆಯಲ್ಲಿರುವ ವಿವಿಧ ಸೂಕ್ತ ಹೂಡಿಕೆ ಸಾಧನಗಳಲ್ಲಿ ಹಣ ತೊಡಗಿಸುವುದು ಜಾಣತನ. ವಿವಿಧ ಸಾಧನಗಳಿಗೆ ಹೂಡಿಕೆಯನ್ನು ಬದಲಿಸಲು ಚಿನ್ನ ನೆರವಾಗುತ್ತೆ. ಅದರಲ್ಲೂ ವಿಶೇಷವಾಗಿ ಮಾರುಕಟ್ಟೆ ಕುಸಿತ ಪ್ರವೃತ್ತಿಯಲ್ಲಿದ್ದಾಗ, ಚಿನ್ನದ ಬೆಲೆ ಏರಿಕೆ ಕಂಡಿದ್ದಾಗ, ಹೂಡಿಕೆ ಬದಲಾವಣೆಗೆ ಚಿನ್ನ ಸಹಾಯಕ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+