ಪ್ರಸಕ್ತ ಹಣಕಾಸು ವರ್ಷದಲ್ಲಿ 24.64 ಲಕ್ಷ ತೆರಿಗೆದಾರರಿಗೆ 80 ಸಾವಿರ ಕೋಟಿ ರುಪಾಯಿ ಮೌಲ್ಯದ ಹಣವನ್ನು ರೀಫಂಡ್ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯು ತಿಳಿಸಿದೆ. ಸಿಬಿಡಿಟಿಯಿಂದ ಈ ತನಕ 88,652 ಕೋಟಿ ರುಪಾಯಿಗೂ ಹೆಚ್ಚು ಮೊತ್ತವನ್ನು 24.64 ಲಕ್ಷಕ್ಕೂ ಹೆಚ್ಚು ತೆರಿಗೆದಾರರಿಗೆ ಏಪ್ರಿಲ್ 1, 2020ರಿಂದ ಈಚೆಗೆ ರೀಫಂಡ್ ಮಾಡಲಾಗಿದೆ.
23,05,726 ಪ್ರಕರಣಗಳಲ್ಲಿ 28,180 ಕೋಟಿ ರುಪಾಯಿ ಆದಾಯ ತೆರಿಗೆ ಮರು ಪಾವತಿಸಲಾಗಿದೆ. 1,58,280 ಪ್ರಕರಣಗಳಲ್ಲಿ 60,472 ಕೋಟಿ ರುಪಾಯಿ ಕಾರ್ಪೊರೇಟ್ ತೆರಿಗೆ ರೀಫಂಡ್ ನೀಡಲಾಗಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ. ಕೊರೊನಾ ವೈರಸ್ ಹಬ್ಬಿರುವ ಹಿನ್ನೆಲೆಯಲ್ಲಿ ತೆರಿಗೆದಾರರ ಅನುಕೂಲವನ್ನು ಗಮನದಲ್ಲಿಟ್ತುಕೊಂಡು ಹಣಕಾಸು ಸಚಿವಾಲಯವು ಶೀಘ್ರವಾಗಿ ರೀಫಂಡ್ ಮಾಡುವಂತೆ ಸೂಚಿಸಿದೆ.
ರೀಫಂಡ್ ಗೆ ಸಂಬಂಧಿಸಿದ ವಿಚಾರಗಳನ್ನು ಆದ್ಯತೆ ಮೇಲೆ ಆಗಸ್ಟ್ 31, 2020ರೊಳಗೆ ಬಗೆಹರಿಸಲು ನಿರ್ಧರಿಸಲಾಗಿದೆ. ರೀಫಂಡ್ ಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡಲು ಅನುಕೂಲ ಆಗುವಂತೆ ಐ.ಟಿ. ಇಲಾಖೆಯ ಮೇಲ್ ಗಳಿಗೆ ಸ್ಪಂದಿಸಲು ಮನವಿ ಮಾಡಿಕೊಳ್ಳಲಾಗಿದೆ.

ರೀಫಂಡ್ ಗಳನ್ನು ತೆರಿಗೆದಾರರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ.


Click it and Unblock the Notifications