ಬೆಂಗಳೂರು, ಜೂನ್ 9: ದೇಶದಲ್ಲಿ ಸುಸ್ಥಿರ ಸ್ಟಾರ್ಟಪ್ ಸಂಸ್ಕೃತಿಯನ್ನು ಉತ್ತೇಜಿಸುವ ಗುರಿಯೊಂದಿಗೆ ಭಾರತದ ಅತ್ಯಂತ ದೊಡ್ಡ ಸ್ಟಾರ್ಟಪ್ ಕಾರ್ಯಕ್ರಮ "ಇಂಡಿಯಾ ಫರ್ಸ್ಟ್ ಟೆಕ್ ಸ್ಟಾರ್ಟಪ್ ಅಂಡ್ ಅವಾರ್ಡ್ಸ್ 2022' ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವಾಲಯದ ಬೆಂಬಲ ಪಡೆದಿದ್ದು ಕರ್ನಾಟಕ ಸರ್ಕಾರದ ಮಾನ್ಯ ಉನ್ನತ ಶಿಕ್ಷಣ, ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ಥ ನಾರಾಯಣ್ ಉದ್ಘಾಟಿಸಿದರು.
ಇಂಡಿಯಾ ಸ್ಟಾರ್ಟಪ್ ಮಿಷನ್ ಅಡಿಯಲ್ಲಿ ಆಲ್ ಇಂಡಿಯಾ ಕೌನ್ಸಿಲ್ ಫಾರ್ ರೊಬೊಟಿಕ್ಸ್ ಅಂಡ್ ಆಟೊಮೇಷನ್(ಎಐಸಿಆರ್‌ಎ) ಆಯೋಜಿಸಿರುವ ಐಎಫ್‌ಟಿಎಸ್‌ಸಿ ಇಸ್ರೊ ಅಧ್ಯಕ್ಷ ಎಸ್.ಸೋಮನಾಥ್, ರಾಜೇಶ್ ಪಾಠಕ್(ಭಾರತ ಸರ್ಕಾರದ ತಂತ್ರಜ್ಞಾನ ಅಭಿವೃದ್ಧಿ ಕಾರ್ಯದರ್ಶಿ), ವಿವಿಧ ರಾಜ್ಯಗಳ ಹಿರಿಯ ಸರ್ಕಾರಿ ಅಧಿಕಾರಿಗಳು, ನೂರಾರು ಹೂಡಿಕೆದಾರರು ಮತ್ತು ವೆಂಚರ್ ಕ್ಯಾಪಿಟಲಿಸ್ಟ್‌ಗಳು ಮತ್ತು ಉತ್ತರ ಪ್ರದೇಶ, ಕೇರಳ, ಛತ್ತೀಸಗಢ, ಒಡಿಶಾ ಇತ್ಯಾದಿ ರಾಜ್ಯಗಳ ತಂತ್ರಜ್ಞಾನ ಸ್ಟಾರ್ಟಪ್‌ಗಳು ಭಾಗವಹಿಸಿದ್ದವು.
ಬೆಂಗಳೂರು ಚಾಪ್ಟರ್ ತಂತ್ರಜ್ಞಾನ ಸ್ಟಾರ್ಟಪ್ ಇಕೊಸಿಸ್ಟಂನಲ್ಲಿ ಅತ್ಯಾಧುನಿಕ ಪರಿವರ್ತನೀಯ ತಂತ್ರಜ್ಞಾನಗಳಾದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಮಷಿನ್ ಲರ್ನಿಂಗ್, ಡ್ರೋನ್ ತಂತ್ರಜ್ಞಾನಗಳು ಹಾಗೂ ಹಲವು ಹೊಸ ವಿಭಾಗಗಳನ್ನು ಎತ್ತಿ ತೋರಿಸಿದೆ. ಐಎಫ್‌ಟಿಎಸ್‌ಸಿ ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ ತಮ್ಮದೇ ಆದ ಸ್ಥಾನ ಕಂಡುಕೊಳ್ಳಲು ಮತ್ತು ಅನುಕೂಲಕರ ಸಹಯೋಗಗಳನ್ನು ಉದ್ಯಮ ದೈತ್ಯರು ಮತ್ತು ತಂತ್ರಜ್ಞಾನದ ಪರಿಣಿತರೊಂದಿಗೆ ಸೃಷ್ಟಿಸುತ್ತದೆ. ಇದು ಹೊಸಬರಿಗೆ ಉದ್ಯಮದ ನಾಯಕರು ಹಾಗೂ ನೀತಿ ನಿರೂಪಕರೊಂದಿಗೆ ಭೇಟಿಯಾಗಲು ಮತ್ತು ಸಂಪರ್ಕ ಹೊಂದಲು ಅನುಕೂಲ ಕಲ್ಪಿಸುತ್ತದೆ.
ಬೆಂಗಳೂರಿನಿಂದ ಸ್ಟಾರ್ಟಪ್‌ಗಳ ಮೌಲ್ಯದ ಶೇ.55
ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ, ಇಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಶ್ವತ್ಥ ನಾರಾಯಣ್ , ''ಭಾರತ ಸರ್ಕಾರವು ಸ್ಟಾರ್ಟಪ್ ವಲಯದ ಪ್ರಗತಿ ಮತ್ತು ಉಳಿವಿಗೆ ಹಲವು ಉಪಕ್ರಮಗಳು ಮತ್ತು ಯೋಜನೆಗಳನ್ನು ಪ್ರಾರಂಭಿಸಿದೆ. ಕರ್ನಾಟಕ ರಾಜ್ಯ ಸರ್ಕಾರವೂ ಕೇಂದ್ರ ಸರ್ಕಾರದ ನೀತಿಗಳಿಗೆ ಪೂರಕವಾದ ವಿವಿಧ ಉಪಕ್ರಮಗಳನ್ನು ಕೂಡಾ ಪ್ರಾರಂಭಿಸಿದೆ. ಎಲ್ಲ ಪಾಲುದಾರರೂ ಈ ಕಾರ್ಯಕ್ರಮಗಳ ಪೂರ್ಣ ಪ್ರಯೋಜನ ಪಡೆಯಲು ಒಟ್ಟಿಗೆ ಬರಬೇಕು. ಕರ್ನಾಟಕ ಸದಾ ಉದ್ಯಮಗಳು, ಅನ್ವೇಷಕರು ಮತ್ತು ಸ್ಟಾರ್ಟಪ್‌ಗಳಿಗೆ ಬೆಂಬಲದ ನೀತಿಗಳನ್ನು ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದೆ. ಭಾರತದ ಒಟ್ಟು ಸ್ಟಾರ್ಟಪ್‌ಗಳ ಮೌಲ್ಯದ ಶೇ.55ರಷ್ಟು ಬೆಂಗಳೂರಿನಿಂದ ಬಂದಿವೆ. ಕರ್ನಾಟಕವು ಹೊಸ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವಲ್ಲಿ ಪ್ರಥಮ ರಾಜ್ಯವಾಗಿದ್ದು ಕುಶಲಿ ಮಾನವಶಕ್ತಿಯು ಭವಿಷ್ಯದ ಪ್ರಗತಿ ಮತ್ತು ಸುಸ್ಥಿರತೆಯನ್ನು ಸೃಷ್ಟಿಸುವಲ್ಲಿ ಪ್ರಮುಖ ಸಂಪನ್ಮೂಲ ಎಂದು ನಂಬಿದೆ. ಐಎಫ್‌ಟಿಎಸ್‌ಸಿ ರೀತಿಯ ಕಾರ್ಯಕ್ರಮಗಳು ಎಲ್ಲ ಪಾಲುದಾರರನ್ನೂ ಒಂದೇ ವೇದಿಕೆಯಡಿ ತರುತ್ತವೆ ಮತ್ತು ಆರೋಗ್ಯಕರ ಸ್ಪರ್ಧೆ ಮತ್ತು ಸಹಕಾರ ಉತ್ತೇಜಿಸುತ್ತವೆ" ಎಂದರು.
ಸ್ಟಾರ್ಟಪ್ ಇಕೊಸಿಸ್ಟಂನ ಸುಸ್ಥಿರತೆ
ಎಐಸಿಆರ್‌ಎ ಅಧ್ಯಕ್ಷ ರಾಜ್‌ಕುಮಾರ್ ಶರ್ಮಾ, ''ಐಎಫ್‌ಟಿಎಸ್‌ಸಿ 2022 ನಮ್ಮ ದೇಶದಲ್ಲಿ ತಂತ್ರಜ್ಞಾನ ಸ್ಟಾರ್ಟಪ್ ಇಕೊಸಿಸ್ಟಂನ ತಂತ್ರಜ್ಞಾನ ಆವಿಷ್ಕಾರಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಈ ಪರಿವರ್ತನೀಯ ತಂತ್ರಜ್ಞಾನಗಳು ಈ ವಲಯವನ್ನು ಮರು ರೂಪಿಸುತ್ತವೆ ಮತ್ತು ಎಲ್ಲ ಪ್ರಸ್ತುತ ಸವಾಲುಗಳಿಗೆ ಪರಿಹಾರಗಳನ್ನು ಒದಗಿಸುತ್ತವೆ. ಬೆಂಗಳೂರು ನಗರದಲ್ಲಿ ಕೃತಕ ಬುದ್ಧಿಮತ್ತೆಗೆ ಸೆಂಟರ್ ಆಫ್ ಎಕ್ಸೆಲೆನ್ಸ್ ಅಭಿವೃದ್ಧಿಪಡಿಸುತ್ತಿದ್ದೇವೆ ಮತ್ತು ದೇಶದಲ್ಲಿ ಹೊಸ ತಲೆಮಾರಿನ ಸ್ಟಾರ್ಟಪ್‌ಗಳ ಉತ್ತೇಜನಕ್ಕೆ 100 ಕೋಟಿ ರೂ. ನಿಧಿಯನ್ನು ರೂಪಿಸುತ್ತಿದ್ದು ಅದು ಸ್ಟಾರ್ಟಪ್ ಇಕೊಸಿಸ್ಟಂನ ಸುಸ್ಥಿರತೆಗೆ ನೆರವಾಗಲಿದೆ'' ಎಂದರು.
ಇಕೊಸಿಸ್ಟಂ ನಿರ್ಮಿಸಲು ತಂತ್ರಜ್ಞಾನ
ಈ ಕಾರ್ಯಕ್ರಮವು ಸ್ಟಾರ್ಟಪ್ ಇಕೊಸಿಸ್ಟಂ ನಿರ್ಮಿಸಲು ತಂತ್ರಜ್ಞಾನಗಳ ರಾಜ್ಯದ ದೂರದೃಷ್ಟಿ ಮತ್ತು ಭಾರತದಲ್ಲಿ ಸ್ಟಾರ್ಟಪ್‌ಗಳ ಪ್ರಸ್ತುತ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು ನೆರವಾಯಿತು. ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಾಂತ್ರಿಕ ಆವಿಷ್ಕಾರಗಳು ಮತ್ತು ಕೈಗಾರಿಕೆಗಳಲ್ಲಿ ಅವುಗಳ ಅಳವಡಿಕೆಯ ಕುರಿತು ತಜ್ಞರು ಮಾತನಾಡಿದರು.
ಸ್ಟಾರ್ಟಪ್‌ಗಳಿಗೆ ವೃದ್ಧಿಸುತ್ತಿರುವ ಮಾರುಕಟ್ಟೆ
ಐಎಫ್‌ಟಿಎಸ್‌ಸಿ ಬೆಂಗಳೂರು ಚಾಪ್ಟರ್ ಸ್ಟಾರ್ಟಪ್‌ಗಳಿಗೆ ಸೂಕ್ತ ಅವಕಾಶಗಳನ್ನು ಕಂಡುಕೊಳ್ಳಲು, ಸಹಯೋಗ ಹೊಂದಲು, ಪಾಲುದಾರಿಕೆಗಳನ್ನು ಬೆಳೆಸಿಕೊಳ್ಳಲು ಮತ್ತು ಅವರ ವಹಿವಾಟು ವೃದ್ಧಿಸಿಕೊಳ್ಳಲು ನೆರವಾಗುತ್ತದೆ. ಈ ಕಾರ್ಯಕ್ರಮವು ಸ್ಟಾರ್ಟಪ್‌ಗಳಿಗೆ ವೃದ್ಧಿಸುತ್ತಿರುವ ಮಾರುಕಟ್ಟೆಯಲ್ಲಿ ಸ್ಥಾನ ಕಂಡುಕೊಳ್ಳಲು ಮತ್ತು ಭವಿಷ್ಯವನ್ನು ಮರು ವ್ಯಾಖ್ಯಾನಿಸಲು ಪ್ರತಿಯೊಂದನ್ನೂ ನೀಡುತ್ತದೆ.


Click it and Unblock the Notifications