ಚೀನಾದ ಕುತಂತ್ರಕ್ಕೆ ತಕ್ಕ ತಿರುಗೇಟು ನೀಡಿದ ಭಾರತ: ಕೈ ಕೈ ಹಿಸುಕಿಕೊಳ್ತಿದೆ ಡ್ರ್ಯಾಗನ್ ರಾಷ್ಟ್ರ

ಕೊರೊನಾವೈರಸ್‌ನಿಂದಾಗಿ ಇಡೀ ವಿಶ್ವವೇ ಏನು ಮಾಡಬೇಕೆಂದು ಗೊತ್ತಾಗದೆ ಪರಿತಪಿಸುತ್ತಿರುವಾಗ, ಅವಕಾಶವಾದಿ, ಕುತಂತ್ರಿ ಚೀನಾ ಸೈಲೆಂಟಾಗಿ ವಿಶ್ವದ ಮೂಲೆ ಮೂಲೆಯಲ್ಲಿ ಹೂಡಿಕೆ ಮಾಡುತ್ತಾ ಹೋಗುತ್ತಿದೆ. ವಿಶ್ವದ ಆರ್ಥಿಕತೆಯು ದುರ್ಬಲಗೊಳ್ಳುತ್ತಿದ್ದಂತೆ ಚೀನಾ ಸಿಕ್ಕ ಅವಕಾಶ ಬಳಸಿಕೊಳ್ಳಲು ಪ್ರಾರಂಭಿಸಿದೆ.

ವಿಶ್ವದ ದುರ್ಬಲ ರಾಷ್ಟ್ರಗಳಷ್ಟೇ ಅಲ್ಲ, ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಕಣ್ಣಿಟ್ಟಿರುವ ಡ್ರ್ಯಾಗನ್ ರಾಷ್ಟ್ರ ಅಲ್ಲಿನ ಕಂಪನಿಗಳ ಮೇಲೆ ಹೂಡಿಕೆ ಮಾಡುತ್ತಾ ನಿಯಂತ್ರಣ ಸಾಧಿಸಲು ಪ್ರಯತ್ನಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಭಾರತ ಸರ್ಕಾರವು ದಿಟ್ಟ ನಿಲುವು ತೆಗೆದುಕೊಂಡು ಇತ್ತೀಚೆಗಷ್ಟೇ ನೇರ ಬಂಡವಾಳ ಹೂಡಿಕೆ(FDI) ನೀತಿಯಲ್ಲಿ ಕೆಲವು ಗಮನಾರ್ಹ ಬದಲಾವಣೆ ತಂದಿದೆ.

ಬಾಂಗ್ಲಾ-ಪಾಕ್‌ಗಷ್ಟೇ ಇದ್ದ ನಿರ್ಬಂಧ ಚೀನಾಕ್ಕೂ ಅನ್ವಯ

ಬಾಂಗ್ಲಾ-ಪಾಕ್‌ಗಷ್ಟೇ ಇದ್ದ ನಿರ್ಬಂಧ ಚೀನಾಕ್ಕೂ ಅನ್ವಯ

130 ಕೋಟಿಗೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಭಾರತಕ್ಕೆ ವಿದೇಶಿ ಬಂಡವಾಳ ಹರಿವು ಅಭಿವೃದ್ಧಿಗೆ ಪೂರಕ. ಆದರೆ ಚೀನಾದಿಂದ ಬರುತ್ತಿರುವ ಬಂಡವಾಳವು ಆಕ್ರಮಣಶೀಲ ಸಮಾಜವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಭಾರತ ಸರ್ಕಾರ ಎಫ್‌ಡಿಐ ನೀತಿಗಳಲ್ಲಿ ಕಠಿಣ ಬದಲಾವಣೆ ತಂದಿತು.

ಇನ್ಮುಂದೆ ಯಾವ ದೇಶಗಳು ಭಾರತದೊಂದಿಗೆ ಭೂಗಡಿಗಳನ್ನು ಹೊಂದಿವೆಯೋ ಆ ದೇಶಗಳು ಯಾವುದೇ ವ್ಯವಹಾರದಲ್ಲಿ ಅಥವಾ ಕಂಪೆನಿಯಲ್ಲಿ ಹೂಡಿಕೆ ಮಾಡಬೇಕೆಂದರೆ, ಮೊದಲು ಭಾರತ ಸರಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ.

ಮೊದಲೆಲ್ಲ ಈ ನಿರ್ಬಂಧ ಕೇವಲ ಪಾಕಿಸ್ಥಾನ ಮತ್ತು ಬಾಂಗ್ಲಾದೇಶಕ್ಕಷ್ಟೇ ಇತ್ತು. ಈಗ ಇದು ತನಗೂ ಅನ್ವಯವಾಗುವುದರಿಂದಾಗಿ ಚೀನಾ ಕೈ-ಕೈ ಹಿಸುಕಿಕೊಂಡು ಕೆಂಡಾಮಂಡಲವಾಗಿದೆ.

ಭಾರತದಲ್ಲಿ ಚೀನಾ ಕಂಪನಿಗಳು ಬಹಳಷ್ಟಿವೆ

ಭಾರತದಲ್ಲಿ ಚೀನಾ ಕಂಪನಿಗಳು ಬಹಳಷ್ಟಿವೆ

ಭಾರತದಲ್ಲಿ ಚೀನಾದ ಹೂಡಿಕೆಯ ಪ್ರಮಾಣ 26 ಶತಕೋಟಿ ಡಾಲರ್‌ ದಾಟಿದೆ. ಭಾರತದಲ್ಲಿ ಹೂಡಿಕೆ ಮಾಡಿರುವ ಅನೇಕ ಕಂಪೆನಿಗಳು ಚೀನಿ ಸರಕಾರದ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಿವೆ. 2014ರವರೆಗೂ ಭಾರತದಲ್ಲಿ ಚೀನಾದದ ನಿವ್ವಳ ಹೂಡಿಕೆ 1.6 ಶತಕೋಟಿ ಡಾಲರ್‌ಗಳಷ್ಟಿತ್ತು. ಮುಂದಿನ ಐದು ವರ್ಷಗಳಲ್ಲಿ ಅದು 8 ಶತಕೋಟಿ ಅಮೆರಿಕನ್‌ ಡಾಲರ್‌ಗೆ ಏರಿತು.

ಭಾರತದಲ್ಲಿ ಚೀನಿ ಹೂಡಿಕೆ ಅಧಿಕೃತ ಅಂಕಿ ಅಂಶಗಳಿಗಿಂತಲೂ 25 ಪರ್ಸೆಂಟ್ ಅಧಿಕವಿರಬಹುದು ಎಂಬ ಅಂದಾಜಿದೆ. ಇನ್ನು ಘೋಷಣೆಯಾದ ಯೋಜನೆಗಳು, ಮತ್ತು ಪ್ಲ್ಯಾನ್‌ ಮಾಡಲಾದ ಹೂಡಿಕೆಗಳನ್ನು ಪರಿಗಣಿಸಿದರೆ, ಈ ಪ್ರಮಾಣ 26 ಶತಕೋಟಿ ಡಾಲರ್‌ಗೂ ಅಧಿಕವಾಗುತ್ತದೆ.

ಭಾರತದ ಮೇಲೆ ಮುನಿಸಿಕೊಂಡ ಡ್ರ್ಯಾಗನ್ ರಾಷ್ಟ್ರ

ಭಾರತದ ಮೇಲೆ ಮುನಿಸಿಕೊಂಡ ಡ್ರ್ಯಾಗನ್ ರಾಷ್ಟ್ರ

ಭಾರತ ಸರ್ಕಾರ ತೆಗೆದುಕೊಂಡಿರುವ ಎಫ್‌ಡಿಐ ನೀತಿಯಲ್ಲಿನ ಬದಲಾವಣೆಯಿಂದಾಗಿ ಡ್ರ್ಯಾಗನ್ ರಾಷ್ಟ್ರ ಬಹಳಷ್ಟು ಸಿಟ್ಟಾಗಿದೆ. ಭಾರತದ ಈ ನಿರ್ಧಾರವನ್ನು ಹೇಗಾದರೂ ಮಾಡಿ ಬದಲಾಯಿಸಬೇಕು ಎಂದು ಒತ್ತಡ ತಂತ್ರ ಹೇರಲು ಮುಂದಾಗಿದೆ. ಕೇಂದ್ರ ಸರ್ಕಾರದ ಈ ನಡೆ ತಾರತಮ್ಯದ ಕ್ರಮ ಎಂದಿರುವ ಚೀನಾ ಜಿ20 ರಾಷ್ಟ್ರಗಳ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದೆ.

HDFC ಬ್ಯಾಂಕ್‌ನಲ್ಲಿ ಪಾಲು ಹೆಚ್ಚಿಸಿಕೊಂಡಿದ್ದ ಚೀನಾ

HDFC ಬ್ಯಾಂಕ್‌ನಲ್ಲಿ ಪಾಲು ಹೆಚ್ಚಿಸಿಕೊಂಡಿದ್ದ ಚೀನಾ

ಭಾರತದಲ್ಲಿ ಕೊರೊನಾವೈರಸ್ ಹಾವಳಿ ಹೆಚ್ಚಾಗುವುದನ್ನೇ ಕಾಯುತ್ತಿದ್ದ ಅವಕಾಶವಾದಿ ಚೀನಾ ತನ್ನ ಪೀಪಲ್ಸ್ ಬ್ಯಾಂಕ್ ಆಫ್ ಚೀನಾದಿಂದ ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿನ ತನ್ನ ಪಾಲುದಾರಿಕೆಯನ್ನು 0.8 ಪರ್ಸೆಂಟ್‌ನಿಂದ ಏಕಾಏಕಿ 1.01 ಪರ್ಸೆಂಟ್‌ಗೆ ಏರಿಸಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಚೀನಾದ ಪ್ರತಿ ಹೂಡಿಕೆ ಮೇಲೂ ಕಣ್ಣಿಡಿ ಎಂದು ಆದೇಶಿಸಿತ್ತು. ಅಲ್ಲದೆ ವಿದೇಶಿ ನೇರ ಹೂಡಿಕೆ ಮೇಲೆ ಬಿಗಿ ನಿಯಂತ್ರಣ ತಂದಿತು.

ಈ ನಿರ್ಧಾರದಿಂದ ಹದಗೆಡುತ್ತ ಉಭಯ ರಾಷ್ಟ್ರಗಳ ಸಂಬಂಧ?

ಈ ನಿರ್ಧಾರದಿಂದ ಹದಗೆಡುತ್ತ ಉಭಯ ರಾಷ್ಟ್ರಗಳ ಸಂಬಂಧ?

ನೇರ ಬಂಡವಾಳ ಹೂಡಿಕೆಯ ವಿಚಾರದಲ್ಲಿನ ಈ ಬದಲಾವಣೆಯು ಭವಿಷ್ಯದಲ್ಲಿ ಭಾರತ ಮತ್ತು ಚೀನ ನಡುವಿನ ಸಂಬಂಧದ ಮೇಲೆ ಹದಗೆಡಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. ಇನ್ನೊಂದೆಡೆ ಚೀನಾ ತನ್ನ ಹೂಡಿಕೆಯಿಂದಾಗಿ ಭಾರತದಲ್ಲಿ ಅನೇಕ ಉದ್ಯೋಗಗಳು ಸೃಷ್ಟಿಯಾಗಿವೆ ಮತ್ತು ಅಭಿವೃದ್ಧಿಯಾಗಿದೆ ಎಂದು ಹೇಳುತ್ತದೆ. ಮೊಬೈಲ್‌ಫೋನ್, ಗೃಹಪಯೋಗಿ ಉಪಕರಣಗಳು, ಆಟೋಮೊಬೈಲ್ ಸಂಬಂಧ ಉದ್ಯೋಗಗಳು ಸೃಷ್ಟಿಯಾಗಿವೆ. ಆದರೆ ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಚೀನಾ ಹೂಡಿಕೆ ಹೆಚ್ಚಿಸಿದ್ದು ಅನುಮಾನ ಹೆಚ್ಚಾಗಲು ಕಾರಣವಾಗಿದೆ.

ಜಪಾನ್, ಆಸ್ಟ್ರೇಲಿಯಾ, ಜರ್ಮನಿಯಲ್ಲೂ ಕಠಿಣವಾಗಲಿದೆ ಎಫ್‌ಡಿಐ ನೀತಿ

ಜಪಾನ್, ಆಸ್ಟ್ರೇಲಿಯಾ, ಜರ್ಮನಿಯಲ್ಲೂ ಕಠಿಣವಾಗಲಿದೆ ಎಫ್‌ಡಿಐ ನೀತಿ

ಕೊರೊನಾವೈರಸ್ ಜಗತ್ತಿನಾದ್ಯಂತ ಹರಡಿ, ವಿವಿಧ ದೇಶಗಳ ಆರ್ಥಿಕತೆ ಕುಂಠಿತವಾಗುತ್ತಿರುವಂತೆಯೇ ಚೀನಾ ಇದರಿಂದ ಲಾಭ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ಚೀನಾದ ಕಂಪೆನಿಗಳು, ಅನ್ಯ ದೇಶಗಳ ಕಂಪೆನಿಗಳನ್ನು ಅಥವಾ ಅವುಗಳಲ್ಲಿ ಪಾಲನ್ನು ಅಗ್ಗದ ದರದಲ್ಲಿ ಖರೀದಿಸಲಾರಂಭಿಸಿವೆ ಎಂಬ ಅಸಮಾಧಾನ ಜಗತ್ತಿನಾದ್ಯಂತ ಭುಗಿಲೆದ್ದಿದೆ.

ಈ ಕಾರಣಕ್ಕಾಗಿಯೇ, ಇತ್ತೀಚೆಗಷ್ಟೇ ಆಸ್ಟ್ರೇಲಿಯಾ ಮತ್ತು ಜರ್ಮನಿ ಕೂಡ, ತಮ್ಮ ಕಂಪೆನಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ವಿದೇಶಿ ನೇರ ಬಂಡವಾಳ ಹೂಡಿಕೆ ನೀತಿಯನ್ನು ಬಿಗಿಗೊಳಿಸಿವೆ. ಜಪಾನ್ ಕೂಡ ಆಮದು ಪ್ರಮಾಣವನ್ನು ತಗ್ಗಿಸಿದೆ. ಕೊರೊನಾವೈರಸ್‌ನಂತಹ ಪಿಡುಗಿನ ಸಂದರ್ಭದಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಚೀನಾ ಏಕಸ್ವಾಮ್ಯ ಸಾಧಿಸಲು ಪ್ರಯತ್ನಿಸುತ್ತಿದೆ ಎಂಬ ಟೀಕೆಗೆ ಒಳಗಾಗಿದೆ.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಜೊತೆಗೆ ಆಫ್ರಿಕನ್ ರಾಷ್ಟ್ರಗಳ ಕಂಪನಿಗಳಲ್ಲೂ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಕಂಪನಿಗಳಲ್ಲೇ ಖರೀದಿಸುತ್ತಿದೆ. ಹೀಗಾಗಿ ಅನೇಕ ರಾಷ್ಟ್ರಗಳು ಅಪಾಯಕಾರಿ ಚೀನಾದಿಂದ ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+