ಮನೆ ಬಾಗಿಲಿಗೆ 412 ಕೋಟಿ ರುಪಾಯಿ ತಲುಪಿಸಿದ ಭಾರತೀಯ ಅಂಚೆ

ಕೊರೊನಾವೈರಸ್‌ ಬಿಕ್ಕಟ್ಟಿನ ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ಮನೆಯಿಂದ ಹೊರಗೆ ತೆರಳಲು ಸಾಧ್ಯವಾಗುತ್ತಿಲ್ಲ. ಇಂತಹ ಕಷ್ಟದ ಸಂದರ್ಭದಲ್ಲಿ ಜನರಿಗೆ 412 ಕೋಟಿ ರುಪಾಯಿಗಳನ್ನು ಅವರ ಮನೆಯ ಬಾಗಿಲಿಗೆ ತಲುಪಿಸಿದ ಹೆಗ್ಗಳಿಕೆಗೆ ಭಾರತೀಯ ಅಂಚೆ ಪಾತ್ರವಾಗಿದೆ.

ಭಾರತದಲ್ಲಿ ಮಾರ್ಚ್ 25ರಂದು ಲಾಕ್‌ಡೌನ್ ಜಾರಿಗೆ ಬಂದಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತೀಯ ಅಂಚೆಯು ನಡೆಸಿದ 21 ಲಕ್ಷ ವ್ಯವಹಾರಗಳಲ್ಲಿ 412 ಕೋಟಿ ರುಪಾಯಿಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಿದೆ. ಬಹುತೇಕ ಈ ಸೌಲಭ್ಯಗಳನ್ನು ಗ್ರಾಮೀಣ ಹಾಗೂ ಬ್ಯಾಂಕಿಂಗ್ ಸೇವೆ ಇಲ್ಲದ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ತಲುಪಿಸಿದೆ.

ಮನೆ ಬಾಗಿಲಿಗೆ 412 ಕೋಟಿ ರುಪಾಯಿ ತಲುಪಿಸಿದ ಭಾರತೀಯ ಅಂಚೆ

ಜನರು ಯಾವ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾರೆ ಎಂಬುದರ ಹೊರತಾಗಿಯೂ, ನಗರ ಅಥವಾ ಹಳ್ಳಿಗಳಲ್ಲಿ ಬ್ರಾಂಚ್ ಇಲ್ಲದೆಯ ಹೊರತಾಗಿಯೂ ಅಂಚೆ ಕಚೇರಿಗೆ ಕರೆ ಮಾಡಿ ನಗದನ್ನು ಮನೆ ಬಾಗಿಲಿಗೆ ತಲುಪಿಸಲು ವಿನಂತಿಸಬಹುದಾಗಿದೆ. ಕೇವಲ 15 ನಿಮಿಷದೊಳಗೆ ಆಯಾ ಪ್ರಾದೇಶಿಕ ಕಚೇರಿಯ ಪೋಸ್ಟ್ ಮ್ಯಾನ್ ನಿಮ್ಮ ಮನೆ ಬಾಗಿಲಿಗೆ ಹಣವನ್ನು ತಲುಪಿಸಲಿದ್ದಾರೆ. ಇದಕ್ಕಾಗಿ ನೀವು ಅಂಚೆ ಕಚೇರಿಯಲ್ಲಿ ಖಾತೆಯೊಂದನ್ನು ಹೊಂದಿರಬೇಕು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+