ಅಂಚೆ ಇಲಾಖೆ (ಇಂಡಿಯಾ ಪೋಸ್ಟ್) ಮತ್ತು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)ಯಿಂದ ಮಂಗಳವಾರದಂದು ಹೊಸ ಡಿಜಿಟಲ್ ಪಾವತಿ ಅಪ್ಲಿಕೇಷನ್ "DakPay" ಆರಂಭಿಸಲಾಗಿದೆ. ಗ್ರಾಹಕರು ಈ ಅಪ್ಲಿಕೇಷನ್ ಮೂಲಕ ಬ್ಯಾಂಕಿಂಗ್ ಸೇವೆಗಳನ್ನು ಆನ್ ಲೈನ್ ನಲ್ಲೇ ಪಡೆಯಬಹುದು.
ಇಂಡಿಯಾ ಪೋಸ್ಟ್ ಮತ್ತು ಐಪಿಪಿಬಿಯಿಂದ ದೇಶದಾದ್ಯಂತ 'ಡಾಕ್ ಪೇ' ಮೂಲಕ ಡಿಜಿಟಲ್ ಹಣಕಾಸು ಮತ್ತು ಬ್ಯಾಂಕಿಂಗ್ ಸೇವೆ ಒದಗಿಸಲಾಗುತ್ತದೆ. ಹಣ ಕಳುಹಿಸುವುದು, ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಮಾಡುವುದು, ಸೇವೆಗಳಿಗೆ ಪಾವತಿ ಮತ್ತು ವರ್ತಕರಿಗೆ ಡಿಜಿಟಲ್ ಆಗಿ ಪಾವತಿಯನ್ನು ಡಾಕ್ ಪೇ ಮೂಲಕ ಮಾಡಬಹುದು.
ದೇಶದಲ್ಲಿ ಇರುವ ಇತರ ಯಾವುದೇ ಬ್ಯಾಂಕ್ ಜತೆಗೆ ಕೂಡ ಈ ಅಪ್ಲಿಕೇಷನ್ ಬಳಸಿ ಬ್ಯಾಂಕಿಂಗ್ ಸೇವೆಗಳ ಕಾರ್ಯ ನಿರ್ವಹಣೆ ಮಾಡಬಹುದು.

"ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದೊಂದಿಗೆ ಎಲ್ಲರನ್ನೂ ಆರ್ಥಿಕವಾಗಿ ಒಳಗೊಳ್ಳಬೇಕು ಮತ್ತು ಆತ್ಮನಿರ್ಭರ್ ಭಾರತ್ ಮುಂದಕ್ಕೆ ಒಯ್ಯಬೇಕು ಎಂದು ಇಂಡಿಯಾ ಪೋಸ್ಟ್ ಆಫೀಸ್ ಡಾಕ್ ಪೇ ಆರಂಭಿಸಿದೆ- ಇಂಟರ್ ಬ್ಯಾಂಕ್ ಹಣ ವರ್ಗಾವಣೆ, ಮರ್ಚೆಂಟ್ ಪಾವತಿ ಸೇವೆ ಮತ್ತು ವಿವಿಧ ಪೋಸ್ಟಲ್ ಸೇವೆಗಳಿಗೆ ಯುಪಿಐ ಆಧಾರಿತ ಡಿಜಿಟಲ್ ಪಾವತಿ ಅಪ್ಲಿಕೇಷನ್ ಇದು," ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.
More From GoodReturns

ಷೇರು ಮಾರುಕಟ್ಟೆ ಕುಸಿತದ ಭೀತಿ: ಹೂಡಿಕೆದಾರರೇ ಎಚ್ಚರವಿರಲಿ!

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!



Click it and Unblock the Notifications