For Quick Alerts
ALLOW NOTIFICATIONS  
For Daily Alerts

ಯು.ಎಸ್. ಡಾಲರ್ ವಿರುದ್ಧ ಭಾರತದ ರುಪಾಯಿ 74.03ಕ್ಕೆ ಕುಸಿತ

|

ಭಾರತದ ರುಪಾಯಿ ಮೌಲ್ಯವು ಅಮೆರಿಕದ ಡಾಲರ್ ವಿರುದ್ಧ ಕುಸಿತ ಸೋಮವಾರವೂ ಮುಂದುವರಿಸಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ 16 ಪೈಸೆ ಇಳಿಕೆಯಾಗಿ ರು. 74.03ರಲ್ಲಿ ವಹಿವಾಟು ನಡೆಸಿತು. ಕೊರೊನಾ ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಹಿಂಜರಿತದ ಭೀತಿ ಎದುರಾಗಿದ್ದು, ದೇಶೀಯ ಈಕ್ವಿಟಿ ಮಾರುಕಟ್ಟೆಯಲ್ಲಿ ಭಾರೀ ತಲ್ಲಣ ಉಂಟು ಮಾಡಿದೆ.

 

ದೇಶೀಯ ಈಕ್ವಿಟಿ ಮಾರ್ಕೆಟ್ ದುರ್ಬಲಗೊಂಡಿರುವುದು, ವಿದೇಶಿ ಬಂಡವಾಳದ ಹೊರಹರಿವು ಸೇರಿ ರುಪಾಯಿ ಮೌಲ್ಯವು ಕುಸಿಯುವಂತೆ ಮಾಡಿದೆ. ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿದಿದ್ದರೂ ತೈಲ ಬೆಲೆಯಲ್ಲಿನ ಇಳಿಕೆ ರುಪಾಯಿಗೆ ಬೆಂಬಲ ನೀಡಿದೆ. ಆದರೆ ಟ್ರೇಡರ್ ಗಳು ಪ್ರಮುಖ ಆರ್ಥಿಕತೆಗಳಲ್ಲಿ ಆರ್ಥಿಕ ಕುಸಿತ ಆಗಬಹುದು ಎಂಬ ಅಳುಕು ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ರುಪಾಯಿಗೆ ಹೊಡೆತ ಬಿದ್ದಿದೆ.

 
ಯು.ಎಸ್. ಡಾಲರ್ ವಿರುದ್ಧ ಭಾರತದ ರುಪಾಯಿ 74.03ಕ್ಕೆ ಕುಸಿತ

ಸೋಮವಾರ ದಿನದ ವಹಿವಾಟನ್ನು 73.99ರೊಂದಿಗೆ ರುಪಾಯಿ ಆರಂಭಿಸಿತು. ಆ ನಂತರ 16 ಪೈಸೆಯಷ್ಟು ಕುಸಿದು, 74.03ರಲ್ಲಿ ಕೊನೆಯದಾಗಿ ವಹಿವಾಟು ನಡೆಸಿತು. ಶುಕ್ರವಾರದಂದು ಯು.ಎಸ್. ಡಾಲರ್ ವಿರುದ್ಧ ರುಪಾಯಿ 73.87 ದಿನಾಂತ್ಯಕ್ಕೆ ವ್ಯವಹಾರ ಮುಗಿಸಿತ್ತು.

English summary

India Rupee Against US Dollar Breaks 74

Due to global cues, India rupee fall to 74 against US Dollar on Monday. Here is the details.
Story first published: Monday, March 9, 2020, 11:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X