ಭಾರತದ ಹತ್ತು ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ ಎಂಟರ ಮಾರುಕಟ್ಟೆ ಬಂಡವಾಳ ಮೌಲ್ಯವು 1,45,194.57 ಕೋಟಿ ರುಪಾಯಿ ಹೆಚ್ಚಳವಾಗಿದೆ. ಅದು ಕೂಡ ಸೆಪ್ಟೆಂಬರ್ 28, 2020ರಿಂದ ಅಕ್ಟೋಬರ್ 1, 2020ರ ತನಕ ನಾಲ್ಕು ದಿನಗಳ ಕಾಲ ನಡೆದ ವಹಿವಾಟಿನಲ್ಲಿ ಏರಿಕೆಯಾದ ಬಂಡವಾಳ ಇದು.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್ ಡಿಎಫ್ ಸಿ ಬ್ಯಾಂಕ್ ಗಳಿಕೆಯ ಮುಂಚೂಣಿಯಲ್ಲಿ ಇದ್ದವು. ಇನ್ನು ಸೆನ್ಸೆಕ್ಸ್ 1308.39 ಪಾಯಿಂಟ್ ಏರಿಕೆ ಕಂಡಿತು. ಯಾವ ಕಂಪೆನಿಯ ಮಾರುಕಟ್ಟೆ ಬಂಡವಾಳ ಎಷ್ಟು ಹೆಚ್ಚಾಯಿತು ಎಂಬುದರ ವಿವರ ಹೀಗಿದೆ:

ಟಿಸಿಎಸ್ 37,692.7 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 34,425.67 ಕೋಟಿ
ಎಚ್ ಡಿಎಫ್ ಸಿ 25,091.57 ಕೋಟಿ
ರಿಲಯನ್ಸ್ ಇಂಡಸ್ಟ್ರೀಸ್ 15,789.36 ಕೋಟಿ
ಐಸಿಐಸಿಐ ಬ್ಯಾಂಕ್ 14,244.15 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 11,053.88 ಕೋಟಿ
ಹಿಂದೂಸ್ತಾನ್ ಯುನಿಲಿವರ್ 4,064.73 ಕೋಟಿ
ಇನ್ಫೋಸಿಸ್ 2,832.51 ಕೋಟಿ
ಇನ್ನು ಭಾರ್ತಿ ಏರ್ ಟೆಲ್ ಕಂಪೆನಿಯ ಬಂಡವಾಳ ಮೌಲ್ಯವು 4,009.84 ಕೋಟಿ ರುಪಾಯಿ ಇಳಿಕೆಯಾದರೆ, ಎಚ್ ಸಿಎಲ್ ಟೆಕ್ನಾಲಜೀಸ್ ಲಿಮಿಟೆಡ್ 4,002.66 ಕೋಟಿ ರುಪಾಯಿ ಇಳಿದವು.


Click it and Unblock the Notifications