ನವದೆಹಲಿ, ಅ. 30: ಭಾರತದ ವಿದೇಶ ವಿನಿಮಯ ಮೀಸಲು ನಿಧಿಯ ಸತತ ಕುಸಿತ ಮುಂದುವರಿದಿದೆ. ಕಳೆದ 2 ವರ್ಷದಲ್ಲೇ ಅತ್ಯಂತ ಕಡಿಮೆ ಮಟ್ಟಕ್ಕೆ ಫೋರೆಕ್ಸ್ ಮೀಸಲು ಇಳಿದಿದೆ. ಅಕ್ಟೋಬರ್ 21ರಂದು ಅಂತ್ಯಗೊಂಡ ವಾರದಲ್ಲಿ ಫೋರೆಕ್ಸ್ ಮೀಸಲು 3.85 ಬಿಲಿಯನ್ ಡಾಲರ್‌ನಷ್ಟು (31,680 ಕೋಟಿ ರೂಪಾಯಿ) ಇಳಿಕೆ ಕಂಡಿದೆ. ಈಗ ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಸಂಗ್ರಹ 524.52 ಬಿಲಿಯನ್ ಡಾಲರ್ (ಸುಮಾರು 43 ಲಕ್ಷ ಕೋಟಿ ರೂಪಾಯಿ) ಇದೆ. ಇದು ರಿಸರ್ವ್ ಬ್ಯಾಂಕ್ ಅಕ್ಟೋಬರ್ 28ರಂದು (ಶುಕ್ರವಾರ) ಬಿಡುಗಡೆ ಮಾಡಿರುವ ಅಂಕಿ ಅಂಶದಿಂದ ಸಿಕ್ಕಿರುವ ಮಾಹಿತಿ.
ಮೂರ್ನಾಲ್ಕು ತಿಂಗಳಿಂದಲೂ ಫೋರೆಕ್ಸ್ ಮೀಸಲು ನಿಧಿ ಸಂಗ್ರಹ ಬಹುತೇಕ ಸತತವಾಗಿ ಕುಸಿಯುತ್ತಾ ಬಂದಿದೆ. ಕಳೆದ 12 ವಾರಗಳನ್ನು ಗಮನಿಸಿದರೆ ಒಮ್ಮೆ ಮಾತ್ರ ಫೋರೆಕ್ಸ್ ಸಂಗ್ರಹ ಹೆಚ್ಚಿದ್ದು. ಉಳಿದ 11 ವಾರಗಳು ಇಳಿಕೆಯಾಗಿದೆ. ಅಕ್ಟೋಬರ್ 7ರಂದು ಅಂತ್ಯಗೊಂಡ ವಾರದಲ್ಲಿ ಚಿನ್ನದ ರಿಸರ್ವ್‌ಗಳು ಹೆಚ್ಚಿದ್ದರಿಂದ ಫೋರೆಕ್ಸ್ ರಿಸರ್ವ್‌ಗಳೂ ಕೂಡ ಸ್ವಲ್ಪ ಮಟ್ಟಿಗೆ ಹೆಚ್ಚಳಗೊಂಡಿದ್ದವು.
2021ರ ಸೆಪ್ಟೆಂಬರ್ 8ರ ವಾರದಲ್ಲಿ ಭಾರತದಲ್ಲಿ ಒಟ್ಟು ಫೋರೆಕ್ಸ್ ಮೀಸಲು ನಿಧಿ ಸಂಗ್ರಹ 642.453 ಡಾಲರ್ ಇತ್ತು. ಅಂದರೆ ಬರೋಬ್ಬರಿ 52.8 ಲಕ್ಷ ಕೋಟಿ ರೂಪಾಯಿಯಷ್ಟು ವಿದೇಶೀ ವಿನಿಮಯ ಮೀಸಲು ನಿಧಿ ಸಂಗ್ರಹ ಇತ್ತು. ಅದು ಸಾರ್ವಕಾಲಿಕ ದಾಖಲೆಯ ಮೊತ್ತವೆನಿಸಿದೆ. ಅದಾದ ಬಳಿಕ ಭಾರತದ ಫೋರೆಕ್ಸ್ ಖಜಾನೆ 117.93 ಬಿಲಿಯನ್ ಡಾಲರ್ (ಸುಮಾರು 9.7 ಲಕ್ಷ ಕೋಟಿ ರೂಪಾಯಿ) ಕಳೆದುಕೊಂಡಿದೆ.
ಈ ಬಾರಿಯ ಹಣಕಾಸು ವರ್ಷ ಶುರುವಾಗುವ ವೇಳೆ ಭಾರತದಲ್ಲಿ ಫಾರೆಕ್ಸ್ ರಿಸರ್ವ್ಸ್ ದಾಖಲೆಯ 607 ಬಿಲಿಯನ್ ಡಾಲರ್‌ನಷ್ಟಿತ್ತು. ಅಂದರೆ ಸುಮಾರು 50 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಅದಾದ ಬಳಿಕ ಸಂಗ್ರಹ ಸತತವಾಗಿ ಕುಸಿಯುತ್ತಲೇ ಬರುತ್ತಿದೆ.
ಏನು ಕಾರಣ?
ಡಾಲರ್ ಮೌಲ್ಯ ಹೆಚ್ಚುತ್ತಾ ಇರುವುದು ಇದಕ್ಕೆ ಪ್ರಮುಖ ಕಾರಣ. ರೂಪಾಯಿ ಮೌಲ್ಯ ಹೆಚ್ಚು ಕುಸಿತವಾಗದಂತೆ ತಡೆಯಲು ಆರ್‌ಬಿಐ ಫೋರೆಕ್ಸ್ ಮೀಸಲು ನಿಧಿಯ ಹಣವನ್ನು ಬಳಸಿಕೊಳ್ಳದೇ ಬೇರೆ ವಿಧಿ ಇರಲಿಲ್ಲ ಎನ್ನಲಾಗಿದೆ.
ಫೋರೆಕ್ಸ್ ಮೀಸಲು ನಿಧಿಯಲ್ಲಿ ವಿದೇಶ ಕರೆನ್ಸಿ ಆಸ್ತಿ (ಎಫ್‌ಸಿಎ) ಮೊತ್ತ ಅಕ್ಟೋಬರ್ 15-21ರ ವಾರದಲ್ಲಿ 3.59 ಬಿಲಿಯನ್ ಡಾಲರ್‌ನಷ್ಟು ಕಡಿಮೆಗೊಂಡು 465.08 ಬಿಲಿಯನ್ ಡಾಲರ್ ಮೊತ್ತಕ್ಕೆ ಬಂದಿಳಿದಿದೆ. ಗೋಲ್ಡ್ ರಿಸರ್ವ್‌ಗಳೂ ಕೂಡ 247 ಮಿಲಿಯನ್ ಡಾಲರ್ (2047 ಕೋಟಿ ರೂಪಾಯಿ) ಕಡಿಮೆಗೊಂಡು 37.21 ಬಿಲಿಯನ್ ಡಾಲರ್ (3.06 ಲಕ್ಷ ಕೋಟಿ ರೂ) ಮೊತ್ತಕ್ಕೆ ಕುಸಿದಿದೆ. ಇದು ಫೋರೆಕ್ಸ್ ಮೀಸಲು ನಿಧಿ ಸಂಗ್ರಹ ನಶಿಸಲು ಕಾರಣ ಎನ್ನುವ ಅಭಿಪ್ರಾಯ ಇದೆ.
ಆತಂಕ ಪಡಬೇಕಿಲ್ಲವಾ?
ಭಾರತಲ್ಲಿ ಏಪ್ರಿಲ್ ತಿಂಗಳಿಂದ 118 ಬಿಲಿಯನ್ ಡಾಲರ್‌ನಷ್ಟು ಹಣ ಫೋರೆಕ್ಸ್ ಮೀಸಲು ಸಂಗ್ರಹದಿಂದ ಹೊರಹೋದರೂ ಈಗಿರುವ 524.52 ಬಿಲಿಯನ್ ಡಾಲರ್ ಮೊತ್ತ ಕಡಿಮೆ ಏನಲ್ಲ. ಮುಂದಿನ ಹಣಕಾಸು ವರ್ಷದಲ್ಲಿ ಏನೇ ಯಡವಟ್ಟಾದರೂ ವಿದೇಶೀ ವಿನಿಮಯ ಮೀಸಲು ನಿಧಿ ಸಂಗ್ರಹ 510 ಬಿಲಿಯನ್ ಡಾಲರ್‌ಗಿಂತ ಕಡಿಮೆ ಇಳಿಯುವ ಸಾಧ್ಯತೆ ಕಡಿಮೆ ಎಂದು ತಜ್ಞರು ಹೇಳುತ್ತಾರೆ.
ಈಗಿರುವ 524 ಬಿಲಿಯನ್ ಡಾಲರ್ ಮೊತ್ತದ ಫೋರೆಕ್ಸ್ ರಿಸರ್ವ್‌ನಲ್ಲಿ 8.9 ತಿಂಗಳ ಕಾಲ ಆಮದಿಗೆ ತೊಂದರೆ ಆಗುವುದಿಲ್ಲ. 2013ರಲ್ಲಿ ಇದ್ದ ವಿದೇಶೀ ವಿನಿಯಮ ಮೀಸಲು ನಿಧಿ 6.5 ತಿಂಗಳು ಆಮದಿಗಾಗುವಷ್ಟು ಮಾತ್ರ ಇತ್ತು. ಆ ವರ್ಷಕ್ಕೆ ಹೋಲಿಸಿಕೊಂಡರೆ ಈಗ ಭಾರೀ ಭದ್ರತೆಯ ಸ್ಥಿತಿಯಲ್ಲಿದ್ದೇವೆ ಎನಿಸುತ್ತದೆ.
ಫಾರೆಕ್ಸ್ ಮೀಸಲು ನಿಧಿ ಯಾಕೆ ಮುಖ್ಯ ಎಂದರೆ ಅದು ಒಂದು ಆರ್ಥಿಕತೆಗೆ ಸಂಕಷ್ಟ ಬಂದಾಗ ಶಾಕ್ ಅಬ್ಸಾರ್ಬರ್ ರೀತಿ ಕೆಲಸಕ್ಕೆ ಬರುತ್ತದೆ. ಆರ್‌ಬಿಐ ಇತ್ತೀಚಿನ ಕೆಲ ವರ್ಷಗಳಿಂದ ಫಾರೆಕ್ಸ್ ರಿಸರ್ವ್ ನಿಧಿಯ ಮೊತ್ತವನ್ನು ಹೆಚ್ಚಿಸುವತ್ತ ಗಮನ ಕೊಟ್ಟಿದ್ದರಿಂದ ಈಗ ಆರ್ಥಿಕ ಸಂಕಷ್ಟದಲ್ಲಿ ಈ ಹಣವನ್ನು ಬಳಸಿ ಸರಿದೂಗಿಸಲು ಸಾಧ್ಯವಾಗುತ್ತದೆ. ಇಲ್ಲವಾಗಿದ್ದರೆ ಹಣದುಬ್ಬರ ಇತ್ಯಾದಿ ಎಲ್ಲವೂ ಹೆಚ್ಚಾಗಿ ಭಾರತದಲ್ಲಿ ವಿಪರೀತ ಎನಿಸುವಷ್ಟು ಆರ್ಥಿಕ ಮುಗ್ಗಟ್ಟು ತಲೆದೋರುವ ಅಪಾಯ ಆಗುತ್ತಿತ್ತು ಎಂಬುದು ಕೆಲ ತಜ್ಞರ ಅನಿಸಿಕೆ.
ಬೇರೆ ದೇಶಗಳದ್ದೂ ಇದೇ ಕಥೆ v
ಕೋಟಿ ಕೋಟಿ ಫೋರೆಕ್ಸ್ ರಿಸರ್ವ್ ಹಣವನ್ನು ಕಳೆದುಕೊಂಡರೂ ಭಾರತ ಅತೀ ಹೆಚ್ಚು ಫೋರೆಕ್ಸ್ ರಿಸರ್ವ್ಸ್ ಸಂಗ್ರಹ ಇರುವ ದೇಶಗಳ ಪಟ್ಟಿಯಲ್ಲಿ ಆರನೇ ಸ್ಥಾನ ಉಳಿಸಿಕೊಂಡಿದೆ. ಭಾರತ ಮಾತ್ರವಲ್ಲ ಬಹುತೇಕ ಪ್ರಮುಖ ದೇಶಗಳ ಫೋರೆಕ್ಸ್ ರಿಸರ್ವ್ಸ್ ಕಡಿಮೆಯಾಗಿದೆ. ಚೀನಾ ಮೊದಲ ಸ್ಥಾನದಲ್ಲಿದ್ದರೂ ಚೀನಾ ಕೂಡ ಭಾರೀ ಮೊತ್ತದ ಫೋರೆಕ್ಸ್ ಮೀಸಲು ನಿಧಿಯನ್ನು ಕಳೆದುಕೊಂಡಿದೆ.
ಟಾಪ್ 15 ದೇಶಗಳ ಪೈಕಿ ಸೌದಿ ಅರೇಬಿಯಾ, ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಮಾತ್ರ ಫೋರೆಕ್ಸ್ ರಿಸರ್ವ್ಸ್ ಸಂಗ್ರಹವನ್ನು ಹೆಚ್ಚಿಸಿಕೊಂಡಿರುವುದು. ಪಾಕಿಸ್ತಾನದಲ್ಲಿ ಫೋರೆಕ್ಸ್ ರಿಸರ್ವ್ ನಿಧಿ ಕೇವಲ 7,439 ಡಾಲರ್ (6.12 ಲಕ್ಷ ಕೋಟಿ ರೂಪಾಯಿ) ಮಾತ್ರವೇ ಇರುವುದು.
ಅತಿಹೆಚ್ಚು ಫೋರೆಕ್ಸ್ ರಿಸರ್ವ್ಸ್ ಇರುವ ದೇಶಗಳು
1) ಚೀನಾ: 3193.579 ಬಿಲಿಯನ್ ಡಾಲರ್ (262.8 ಲಕ್ಷ ಕೊಟಿ ರೂಪಾಯಿ)
2) ಜಪಾನ್: 1238.056 ಬಿಲಿಯನ್ ಡಾಲರ್ (101.8 ಲಕ್ಷ ಕೋಟಿ ರೂಪಾಯಿ)
3) ಸ್ವಿಟ್ಜರ್‌ಲ್ಯಾಂಡ್: 949.111 ಬಿಲಿಯನ್ ಡಾಲರ್ (78.1 ಲಕ್ಷ ಕೋಟಿ ರೂಪಾಯಿ)
4) ತೈವಾನ್: 541.11 ಬಿಲಿಯನ್ ಡಾಲರ್ (44.52 ಲಕ್ಷ ಕೋಟಿ ರೂಪಾಯಿ)
5) ರಷ್ಯಾ: 541.00 ಬಿಲಿಯನ್ ಡಾಲರ್ (44.51 ಲಕ್ಷ ಕೋಟಿ ರೂಪಾಯಿ)
6) ಭಾರತ: 524.52 ಬಿಲಿಯನ್ ಡಾಲರ್ (43.16 ಲಕ್ಷ ಕೋಟಿ ರೂಪಾಯಿ)
7) ಸೌದಿ ಅರೇಬಿಯಾ: 467.126 ಬಿಲಿಯನ್ ಡಾಲರ್ (38.44 ಲಕ್ಷ ಕೋಟಿ ರೂಪಾಯಿ)
8) ಹಾಂಕಾಂಗ್: 419.20 ಬಿಲಿಯನ್ ಡಾಲರ್ (34.49 ಲಕ್ಷ ಕೋಟಿ ರೂಪಾಯಿ)
9) ಸೌತ್ ಕೊರಿಯಾ: 416.77 ಬಿಲಿಯನ್ ಡಾಲರ್ (34.29 ಲಕ್ಷ ಕೋಟಿ ರೂಪಾಯಿ)
10) ಬ್ರೆಜಿಲ್: 327.58 ಬಿಲಿಯನ್ ಡಾಲರ್ (26.96 ಲಕ್ಷ ಕೋಟಿ ರೂಪಾಯಿ)
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications