ಕೊರೊನಾವೈರಸ್ ವಿಶ್ವದಾದ್ಯಂತ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀರಿದ್ದು, ಬಲಿಷ್ಟ ಅರ್ಥವ್ಯವಸ್ಥೆಗಳೇ ತತ್ತರಿಸಿ ಹೋಗಿವೆ. ಆದರೆ ಈ ಎಲ್ಲಾ ಸಮಸ್ಯೆಗಳು ಮುಗಿದ ಮೇಲೆ ಭಾರತದ ಐಟಿ ವಲಯ ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ ಎಂದು ಇನ್ಫೋಸಿಸ್ ಸಹ ಸಂಸ್ಥಾಪಕ, ಆಕ್ಸಿಲರ್ ವೆಂಚುರ್ಸ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಹೇಳಿದ್ದಾರೆ.
ಸದ್ಯ ಎಲ್ಲಾ ಉದ್ಯಮಗಳ ಮೇಲೆ ಲಾಕ್‌ಡೌನ್ ಪರಿಣಾಮ ಬೀರಿದ್ದು, ಐಟಿ ವಲಯಕ್ಕೂ ಇದರ ಬಿಸಿ ತಟ್ಟಿದೆ. ಆದರೆ ಇದು ಕೇವಲ ತಾತ್ಕಾಲಿಕವಾಗಿದ್ದು, ಕೊರೊನಾ ಸಮಸ್ಯೆ ಮುಗಿದ ಮೇಲೆ ಭಾರತದ ಐಟಿ ಉದ್ಯಮ ಹಿಂದಿಗಿಂತಲೂ ಬಲಿಷ್ಟವಾಗಿ ಬೆಳೆಯಲಿದೆ ಎಂದಿದ್ದಾರೆ.

ಸದ್ಯ ಐಟಿ ಮತ್ತು ಐಟಿಇಎಸ್ ಎರಡೂ ವಲಯಗಳಿಗೆ ತೀವ್ರ ಹೊಡೆತ ಬಿದ್ದಿದೆ. ಆದರೆ ಅವರು ನಿರ್ಮಾಣಮಾಡಿಕೊಂಡಿರುವ ಸಂಬಂಧ ಬಲಿಷ್ಠವಾಗಿದ್ದು ಆರ್ಥಿಕ ಪುನಶ್ಚೇತನಕ್ಕೆ ಇದು ಸಹಾಯವಾಗಲಿದೆ ಎಂದರು.
ಐಟಿ ಮತ್ತು ಐಟಿಇಎಸ್ ವಲಯಗಳು ಜಗತ್ತಿನಲ್ಲಿ ಪ್ರಮುಖ 20 ಕಂಪೆನಿಗಳ ಜೊತೆ ಕೆಲಸ ಮಾಡುತ್ತಿದ್ದು ಪ್ರತಿಯೊಬ್ಬರೂ ಸದ್ಯ ಆದಾಯದಲ್ಲಿ ಕುಸಿತ ಕಾಣುತ್ತಿದ್ದಾರೆ. ಪ್ರವಾಸ ಮತ್ತು ಹೊಟೇಲ್ ಉದ್ಯಮಕ್ಕೆ ತೀವ್ರ ಹೊಡೆತ ಬಿದ್ದಿದೆ. ಇದು ಐಟಿ ವಲಯಗಳಿಗೂ ವರ್ಗಾವಣೆಯಾಗಿದ್ದು ಅವುಗಳಲ್ಲಿ ಕೂಡ ಆದಾಯ ಕುಸಿತವಾಗಿದೆ ಎಂದರು.
''ನಾವು 1980 ರಲ್ಲಿ 160 ಬಿಲಿಯನ್ ಡಾಲರ್ ಆರ್ಥಿಕತೆಯಾಗಿದ್ದೇವು ಮತ್ತು ಇಂದು ನಾವು 2.7 ಟ್ರಿಲಿಯನ್ ಆರ್ಥಿಕತೆಯಾಗಿದ್ದೇವೆ. ಅಲ್ಲಿಂದ ನಮ್ಮನ್ನು ಇಲ್ಲಿಗೆ ಕರೆದೊಯ್ಯುವ ಎಲ್ಲವೂ ಇನ್ನೂ ನಿಜ, ಏನೂ ಬದಲಾಗಿಲ್ಲ. ಆರ್ಥಿಕತೆ ಪುನರ್ನಿರ್ಮಾಣ ಮಾಡಲು ನಾವು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ನಾವು ಅದನ್ನು ಮಾಡಿದರೆ, ನಾವು ಯಶಸ್ವಿಯಾಗುತ್ತೇವೆ. ವಿನಾಶಗೊಂಡ ಜರ್ಮನಿ ಮತ್ತು ಜಪಾನ್ ಆರ್ಥಿಕತೆ ಮತ್ತೆ ಪುಟಿದೆದ್ದುದ್ದನ್ನು ನಾವು ನೋಡಿದ್ದೇವೆ "ಎಂದು ಅವರು ಆಶಾದಾಯಕವಾಗಿ ಮಾತನ್ನು ಹೇಳುವ ಜೊತೆಗೆ " ಇಂದಿನ ಯುವಕರು ಆರ್ಥಿಕತೆಯನ್ನು ಪುನರ್ನಿರ್ಮಿಸುತ್ತಾರೆ ಎಂದು ನಂಬುತ್ತೇನೆ. ಅದು ನನಗೆ ಆತ್ಮವಿಶ್ವಾಸವನ್ನು ನೀಡುತ್ತದೆ "ಎಂದು ಅವರು ಹೇಳಿದರು.


Click it and Unblock the Notifications