For Quick Alerts
ALLOW NOTIFICATIONS  
For Daily Alerts

ಭಾರತದ ಷೇರುಪೇಟೆಯ ಹೊಸ ದಾಖಲೆ: ಸೆನ್ಸೆಕ್ಸ್ 321 ಪಾಯಿಂಟ್ಸ್ ಏರಿಕೆ

|

ಭಾರತದ ಷೇರುಪೇಟೆ ಸೋಮವಾರ ಭರ್ಜರಿ ಆರಂಭವನ್ನು ಪಡೆದಿದ್ದು, ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಹಾಗೂ ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಹೊಸ ದಾಖಲೆಯ ಮಟ್ಟಕ್ಕೆ ತಲುಪಿವೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 321 ಪಾಯಿಂಟ್ಸ್ ಏರಿಕೆಗೊಂಡರೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 103 ಪಾಯಿಂಟ್ಸ್ ಜಿಗಿದಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.57ರಷ್ಟು ಅಥವಾ 321.99 ರಷ್ಟು ಏರಿಕೆಗೊಂಡು 56,446.71 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 0.62ರಷ್ಟು ಅಥವಾ 103.30 ಪಾಯಿಂಟ್ಸ್‌ ಹೆಚ್ಚಾಗಿ 16,808.50 ಪಾಯಿಂಟ್ಸ್‌ ಮುಟ್ಟಿದೆ.

ದಿನದ ವಹಿವಾಟಿನ ಆರಂಭದಲ್ಲಿ 1535 ಷೇರುಗಳು ಏರಿಕೆಗೊಂಡರೆ, 339 ಷೇರುಗಳು ಕುಸಿದವು ಮತ್ತು 107 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಏರಿಕೆಗೊಂಡ ಷೇರುಗಳು:

ಏರಿಕೆಗೊಂಡ ಷೇರುಗಳು:

ಟಾಟಾ ಮೋಟಾರ್ಸ್ ಷೇರುಗಳು 291.00 ರೂಪಾಯಿನಷ್ಟು ಆರಂಭವಾಗಿದ್ದು, ಸುಮಾರು 5 ರೂ. ಹೆಚ್ಚಾಗಿದೆ. ಟೈಟಾನ್ ಕಂಪನಿಯ ಷೇರು 33 ರೂಪಾಯಿ ಏರಿಕೆಗೊಂಡು 1,855.55 ಕ್ಕೆ ಪ್ರಾರಂಭವಾಯಿತು. ಹಿಂಡಾಲ್ಕೊ ಷೇರು ರೂ. 9 ಲಾಭದೊಂದಿಗೆ 447.35 ರಲ್ಲಿ ಆರಂಭವಾಯಿತು. ಟಾಟಾ ಸ್ಟೀಲ್ ನ ಷೇರುಗಳು 37 ರೂಪಾಯಿ ಏರಿಕೆಯಾಗಿ 1,421.70 ರೂ. ತಲುಪಿದೆ. ಕೋಲ್ ಇಂಡಿಯಾದ ಷೇರುಗಳು ಸುಮಾರು 2 ರೂ. ಹೆಚ್ಚಾಗಿ 140.75 ರೂಪಾಯಿಗೆ ಆರಂಭವಾಗಿದೆ.

ಇನ್ನುಳಿದಂತೆ ಎನ್‌ಎಸ್ಇನಲ್ಲಿ ಭಾರತ್‌ ಫೋರ್ಜ್‌, ಪಾಲಿಕ್ಯಾಬ್, ಎಸ್‌ಆರ್‌ಎಫ್‌, ನಾಲ್ಕೊ, ಇಂಡಿಯಾಮಾರ್ಟ್ ಇಂಟರ್, ಆದಿತ್ಯಾ ಬಿರ್ಲಾ ಎಫ್‌, ಸೈಲ್, ಜಿಂದಾಲ್ ಸ್ಟೀಲ್, ಹಿಂಡಾಲ್ಕೊ, ಬಂಧನ್ ಬ್ಯಾಂಕ್, ಅಶೋಕ್ ಲೇಲ್ಯಾಂಡ್, ಗೋದ್ರೇಜ್ ಕನ್ಸೂಮರ್ ಏರಿಕೆ ದಾಖಲಿಸಿದೆ.

 ಸೆಪ್ಟೆಂಬರ್‌ನಲ್ಲಿ 12 ದಿನಗಳ ಕಾಲ ಬ್ಯಾಂಕ್ ರಜೆ: ಯಾವೆಲ್ಲಾ ದಿನ ಚೆಕ್ ಮಾಡಿ.. ಸೆಪ್ಟೆಂಬರ್‌ನಲ್ಲಿ 12 ದಿನಗಳ ಕಾಲ ಬ್ಯಾಂಕ್ ರಜೆ: ಯಾವೆಲ್ಲಾ ದಿನ ಚೆಕ್ ಮಾಡಿ..

ಇಳಿಕೆಗೊಂಡ ಷೇರುಗಳು:

ಇಳಿಕೆಗೊಂಡ ಷೇರುಗಳು:

ಡಾ. ರೆಡ್ಡಿ ಲ್ಯಾಬ್‌ನ ಷೇರು 13 ರೂಪಾಯಿಗಳಷ್ಟು ಇಳಿಕೆಯಾಗಿ ರೂ. 4,587.80 ಕ್ಕೆ ಪ್ರಾರಂಭವಾಯಿತು. ಪವರ್ ಗ್ರಿಡ್ ಕಾರ್ಪೊರೇಶನ್ ಷೇರುಗಳು ಆರಂಭದಲ್ಲಿ. ಟೆಕ್ ಮಹೀಂದ್ರಾ ಷೇರುಗಳು ರೂ .1,444.30 ಕ್ಕೆ ಪ್ರಾರಂಭವಾಗಿದೆ. ಇನ್ನುಳಿದಂತೆ ವೊಡಾಫೋನ್ ಐಡಿಯಾ, ಮೈಂಡ್‌ಟ್ರೀ, ಬಿಎಚ್‌ಇಎಲ್‌, ಎಲ್‌&ಟಿ ಟೆಕ್ನಾಲಜಿ , ನೆಸ್ಲೆ, ಟೆಕ್ ಮಹೀಂದ್ರಾ, ವಿಪ್ರೋ, ಬ್ರಿಟಾನಿಯಾ ಷೇರುಗಳು ಕುಸಿದಿವೆ.

Car Loan: ಸಾಲ ತೀರಿಸುವಷ್ಟರಲ್ಲಿ ನೀವು ಎಷ್ಟು ಹಣ ಪಾವತಿ ಮಾಡಿದ್ದೀರೆಂದು ತಿಳಿಯಿರಿ..Car Loan: ಸಾಲ ತೀರಿಸುವಷ್ಟರಲ್ಲಿ ನೀವು ಎಷ್ಟು ಹಣ ಪಾವತಿ ಮಾಡಿದ್ದೀರೆಂದು ತಿಳಿಯಿರಿ..

ಡಾಲರ್ ಎದುರು ರೂಪಾಯಿ ಮೌಲ್ಯ

ಡಾಲರ್ ಎದುರು ರೂಪಾಯಿ ಮೌಲ್ಯ

ಡಾಲರ್ ಸೋಮವಾರ ನಷ್ಟವನ್ನು ಅನುಭವಿಸಿದೆ ಮತ್ತು ಫೆಡರಲ್ ರಿಸರ್ವ್ ಚೇರ್ ಜೆರೋಮ್ ಪೊವೆಲ್ ದರ ಏರಿಕೆಗೆ ನಿರೀಕ್ಷೆಗಿಂತ ನಿಧಾನವಾದ ಮಾರ್ಗವನ್ನು ಹಾಕಿದ ನಂತರ ಬಹು ವಾರಗಳ ಕನಿಷ್ಠ ಮಟ್ಟವನ್ನು ಉಳಿಸಿಕೊಂಡಿದೆ. ಡಾಲರ್ ಎದುರು ರೂಪಾಯಿ 74.10 ಮಾರ್ಕ್ ಅನ್ನು ಮುರಿದು 74.00 ಮಟ್ಟಕ್ಕಿಂತ ಕೆಳಗಿಳಿಯಿತು ಮತ್ತು 73.80 ರ ಸಮೀಪದ ಅವಧಿಗೆ ಬೆಂಬಲ ನೀಡಿತು.

ಇದರ ನಡುವೆ ಚಿನ್ನದ ದರಗಳು ಮೂರು ವಾರಗಳಿಗಿಂತಲೂ ಹೆಚ್ಚಿನ ಮಟ್ಟಕ್ಕೆ ಸೋಮವಾರ ಏರಿಕೆಯಾಗಿದೆ .

 

ಷೇರು ಖರೀದಿಸುವುದು ಹೇಗೆ?

ಷೇರು ಖರೀದಿಸುವುದು ಹೇಗೆ?

ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಬಯಕೆ ಇದ್ದರೆ, ಮೊದಲು ಸ್ಟಾಕ್ ಬ್ರೋಕರ್‌ನೊಂದಿಗೆ ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಬೇಕು. ಷೇರುಗಳನ್ನು ನೇರವಾಗಿ ಷೇರು ವಿನಿಮಯ ಕೇಂದ್ರದಿಂದ ಖರೀದಿಸಲು ಸಾಧ್ಯವಿಲ್ಲ. ಡಿಮ್ಯಾಟ್ ಮತ್ತು ಟ್ರೇಡಿಂಗ್ ಖಾತೆಯನ್ನು ತೆರೆಯಲು ಪ್ಯಾನ್, ಆಧಾರ್ ಮತ್ತು ಬ್ಯಾಂಕ್ ಖಾತೆ ಅಗತ್ಯವಿದೆ. ನೀವು ಈ ದಾಖಲೆಗಳನ್ನು ಹೊಂದಿದ್ದರೆ, ನೀವು ಸುಲಭವಾಗಿ ಬ್ರೋಕರ್‌ನೊಂದಿಗೆ ಖಾತೆಯನ್ನು ತೆರೆಯಬಹುದು ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಬಹುದು.

English summary

India's Market Open Fresh Record High: Sensex Up 312 Points

The BSE Sensex rose 0.57 per cent or 321.99 points to close at 56,446.71 points. The NSE Nifty gained 0.62% or 103.30 points, or 16,808.50 points.
Story first published: Monday, August 30, 2021, 10:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X