ಭಾರತದ ಷೇರು ಮಾರುಕಟ್ಟೆಯ 10 ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ 6 ಕಂಪೆನಿಗಳ ಮಾರುಕಟ್ಟೆ ಮೌಲ್ಯ ಕಳೆದ ವಾರ 91,629.38 ಕೋಟಿ ರುಪಾಯಿ ಏರಿಕೆ ಕಂಡಿವೆ. ಈ ಪೈಕಿ ಐಸಿಐಸಿಐ ಬ್ಯಾಂಕ್ ಹಾಗೂ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಗರಿಷ್ಠ ಮಟ್ಟದ ದಾಖಲೆಯನ್ನು ಕಂಡಿವೆ. ರಜಾ ದಿನದ ಆರಂಭದೊಂದಿಗೆ ಶುರುವಾದ ಸೆನ್ಸೆಕ್ಸ್ ವಹಿವಾಟು ಕಳೆದ ವಾರ 929.83 ಪಾಯಿಂಟ್ ಅಥವಾ 2.10 ಪರ್ಸೆಂಟ್ ಏರಿಕೆ ದಾಖಲಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಹಿಂದೂಸ್ತಾನ್ ಯುನಿಲಿವರ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್ ಹಾಗೂ ಭಾರ್ತಿ ಏರ್ ಟೆಲ್ ಕಂಪೆನಿ ಏರಿಕೆ ದಾಖಲಿಸಿದ್ದರೆ, ಎಚ್ ಡಿಎಫ್ ಸಿ ಬ್ಯಾಂಕ್, ಎಚ್ ಡಿಎಫ್ ಸಿ, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆ ಆಗಿದೆ.
ಗಳಿಕೆ ಕಂಡ ಕಂಪೆನಿಗಳ ಪೈಕಿ ICICI ಬ್ಯಾಂಕ್ ಗರಿಷ್ಠ ಮಟ್ಟದಲ್ಲಿ ಅಂದರೆ, 20,272.71 ಕೋಟಿ ಮೇಲೇರಿದೆ. ಟಿಸಿಎಸ್ 17,579.92 ಕೋಟಿ, ಭಾರ್ತಿ ಏರ್ ಟೆಲ್ 16,694.01 ಕೋಟಿ, ಇನ್ಫೋಸಿಸ್ 14,524.89 ಕೋಟಿ, HUL 11,970.99 ಕೋಟಿ, ರಿಲಯನ್ಸ್ ಕಂಪೆನಿ ಮಾರುಕಟ್ಟೆ ಮೌಲ್ಯ 10,586.86 ಕೋಟಿ ರುಪಾಯಿ ಹೆಚ್ಚಳವಾಗಿದೆ.

ಇಳಿಕೆ ಕಡೆಗೆ ಗಮನಿಸಿದರೆ ಎಚ್ ಡಿಎಫ್ ಸಿ ಬ್ಯಾಂಕ್ ಮೌಲ್ಯವು 30,589.19 ಕೋಟಿ, ಕೊಟಕ್ ಮಹೀಂದ್ರಾ ಬ್ಯಾಂಕ್ 11,037.31 ಕೋಟಿ, ಎಚ್ ಡಿಎಫ್ ಸಿ 1,803.38 ಕೋಟಿ ಮತ್ತು ಬಜಾಜ್ ಫೈನಾನ್ಸ್ 1,708.34 ಕೋಟಿ ರುಪಾಯಿ ಇಳಿಕೆ ಕಂಡಿದೆ.
ಭಾರತ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಟಾಪ್ ಟೆನ್ ಕಂಪೆನಿಗಳು ಹೀಗಿವೆ: ರಿಲಯನ್ಸ್, TCS, HDFC Bank, HUL, ಇನ್ಫೋಸಿಸ್, ಎಚ್ ಡಿಎಫ್ ಸಿ, ಕೊಟಕ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಬಜಾಜ್ ಫೈನಾನ್ಸ್ ಮತ್ತು ಭಾರ್ತಿ ಏರ್ ಟೆಲ್.


Click it and Unblock the Notifications