ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 7ರ ಮಾರುಕಟ್ಟೆ ಮೌಲ್ಯವು ಕಳೆದ ವಾರ 1,37,396.66 ಕೋಟಿ ರುಪಾಯಿ ಹೆಚ್ಚಳವಾಗಿದೆ. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅತಿ ದೊಡ್ಡ ಮಟ್ಟದ ಗಳಿಕೆ ಕಂಡಿದೆ. ಆ ನಂತರದ ಸ್ಥಾನದಲ್ಲಿ ಎಚ್ ಡಿಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್, ಇನ್ಫೋಸಿಸ್, ಎಚ್ ಡಿ ಎಫ್ ಸಿ, ಐಸಿಐಸಿಐ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಇವೆ.
ಇನ್ನು ರಿಲಯನ್ಸ್ ಇಂಡಸ್ಟ್ರೀಸ್ ಲಿ., ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಕಂಪೆನಿಗಳು ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಇಳಿಕೆ ಕಂಡಿವೆ.
ಯಾವ ಕಂಪೆನಿಯ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಗಿದೆ?
ಟಿಸಿಎಸ್ 72,102.67 ಕೋಟಿ ರುಪಾಯಿ
ಇನ್ಫೋಸಿಸ್ 21,894.28 ಕೋಟಿ ರುಪಾಯಿ
ಎಚ್ ಡಿಎಫ್ ಸಿ 15,076.62 ಕೋಟಿ ರುಪಾಯಿ
ಭಾರ್ತಿ ಏರ್ ಟೆಲ್ 13,720.73 ಕೋಟಿ ರುಪಾಯಿ
ಐಸಿಐಸಿಐ ಬ್ಯಾಂಕ್ 10,0540.48 ಕೋಟಿ ರುಪಾಯಿ
ಎಚ್ ಡಿಎಫ್ ಸಿ ಬ್ಯಾಂಕ್ 3,855.36 ಕೋಟಿ ರುಪಾಯಿ
ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 693.12 ಕೋಟಿ ರುಪಾಯಿ

ಯಾವ ಕಂಪೆನಿಯ ಮಾರ್ಕೆಟ್ ಮೌಲ್ಯ, ಎಷ್ಟು ಇಳಿಕೆ?
ರಿಲಯನ್ಸ್ 34,296.37 ಕೋಟಿ ರುಪಾಯಿ
ಬಜಾಜ್ ಫೈನಾನ್ಸ್ 12,024.63 ಕೋಟಿ ರುಪಾಯಿ
ಕೊಟಕ್ ಮಹೀಂದ್ರಾ ಬ್ಯಾಂಕ್ 4,661.65 ಕೋಟಿ ರುಪಾಯಿ
ಕಳೆದ ವಾರ ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 913.53 ಪಾಯಿಂಟ್ ಏರಿಕೆ ಕಂಡಿದೆ.


Click it and Unblock the Notifications