ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳಲ್ಲಿ 8ರ ಮಾರುಕಟ್ಟೆ ಮೌಲ್ಯವು 2,50,825.28 ಕೋಟಿ ರುಪಾಯಿ ಒಂದೇ ವಾರದಲ್ಲಿ ( ಮೇ 4ರಿಂದ ಮೇ 8, 2020ರ ಮಧ್ಯೆ) ನಷ್ಟವಾಗಿದೆ. ಇದರಲ್ಲಿ ಟಿಸಿಎಸ್ ಹಾಗೂ ಎಚ್ ಡಿಎಫ್ ಸಿ ಕಂಪೆನಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ಭಾರ್ತಿ ಏರ್ ಟೆಲ್- ಈ ಎರಡು ಕಂಪೆನಿಗಳು ಲಾಭದೊಂದಿಗೆ ವಾರಾಂತ್ಯದ ವಹಿವಾಟು ಅಂತ್ಯಗೊಂಡಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮಾರುಕಟ್ಟೆ ಮೌಲ್ಯದಲ್ಲಿ 45,535.19 ಕೋಟಿ ಬಂಡವಾಳ ನಷ್ಟವಾಗಿದೆ. ಇನ್ನು ಎಚ್ ಡಿಎಫ್ ಸಿ ಬ್ಯಾಂಕ್ 39,923.11 ಕೋಟಿ ಇಳಿಕೆಯಾಗಿದೆ. ಎಚ್ ಡಿಎಫ್ ಸಿ 39,386.76 ಕೋಟಿ ರುಪಾಯಿ ನಷ್ಟ ಅನುಭವಿಸಿದೆ. ಐಟಿಸಿ 29,316.97 ಕೋಟಿ, ಐಸಿಐಸಿಐ ಬ್ಯಾಂಕ್ 27,288.27 ಕೋಟಿ, ಕೊಟಕ್ ಮಹೀಂದ್ರಾ ಬ್ಯಾಂಕ್ 26,457.32 ಕೋಟಿ ರುಪಾಯಿ ಬಂಡವಾಳ ಮೌಲ್ಯ ಕುಸಿದಿದೆ.

ಹಿಂದೂಸ್ತಾನ್ ಯುನಿಲಿವರ್ 25,221.54 ಕೋಟಿ ರುಪಾಯಿ, ಇನ್ಫೋಸಿಸ್ 17,696.12 ಕೋಟಿ ರುಪಾಯಿ ಇಳಿದಿದೆ. ಆದರೆ ರಿಲಯನ್ಸ್ ಕಂಪೆನಿ ಮೌಲ್ಯ 60,081.33 ಕೋಟಿ ರುಪಾಯಿ ಹಾಗೂ ಏರ್ ಟೆಲ್ ಷೇರು ಮೌಲ್ಯದಲ್ಲಿ 8,537.95 ಕೋಟಿ ರುಪಾಯಿ ಹೆಚ್ಚಳವಾಗಿದೆ. ಕಳೆದ ಶುಕ್ರವಾರದ ಅಂತ್ಯಕ್ಕೆ ಸೆನ್ಸೆಕ್ಸ್ 2074.92 ಪಾಯಿಂಟ್ ಅಥವಾ 6.15 ಪರ್ಸೆಂಟ್ ಇಳಿಕೆಯಾಗಿದೆ.


Click it and Unblock the Notifications