ಭಾರತದ 10 ಮೌಲ್ಯಯುತ ಕಂಪೆನಿಗಳ ಪೈಕಿ 8 ಕಳೆದ ವಾರದಲ್ಲಿ 1,37,311.31 ಕೋಟಿ ರುಪಾಯಿಯಷ್ಟು ಬಂಡವಾಳವನ್ನು ಷೇರುಪೇಟೆಯಲ್ಲಿ ಕಳೆದುಕೊಂಡು, ಬಡವಾಗಿವೆ. ಈ ಪೈಕಿ ಅತಿ ದೊಡ್ಡ ನಷ್ಟ ಅನುಭವಿಸಿರುವುದು ರಿಲಯನ್ಸ್ ಇಂಡಸ್ಟ್ರೀಸ್. ರಿಲಯನ್ಸ್ ಇಂಡಸ್ಟ್ರೀಸ್ ಮಾರುಕಟ್ಟೆ ಬಂಡವಾಳ ಮೌಲ್ಯ 65,232.46 ಕೋಟಿ ರುಪಾಯಿ ಕರಗಿದೆ.
ಟಾಪ್ ಹತ್ತು ಕಂಪೆನಿಗಳ ಪೈಕಿ ಭಾರ್ತಿ ಏರ್ ಟೆಲ್ ಹಾಗೂ ಐಟಿಸಿ ಹೊರತುಪಡಿಸಿ ಉಳಿದ ಎಂಟು ಕಂಪೆನಿಗಳು ಮಾರುಕಟ್ಟೆ ಬಂಡವಾಳ ನಷ್ಟ ಅನುಭವಿಸಿವೆ. ಅಂದ ಹಾಗೆ ಯಾವ ಕಂಪೆನಿಗಳ ಬಂಡವಾಳ ಮೌಲ್ಯ ಎಷ್ಟು ನಷ್ಟವಾಗಿದೆ ಎಂಬುದರ ವಿವರ ಹೀಗಿದೆ.
* ಎಚ್ ಡಿಎಫ್ ಸಿ ಬ್ಯಾಂಕ್ 22,347.07 ಕೋಟಿ
* ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 13,192.26 ಕೋಟಿ
* ಐಸಿಐಸಿಐ ಬ್ಯಾಂಕ್ 9,770.06 ಕೋಟಿ
* ಇನ್ಫೋಸಿಸ್ 9,518.84 ಕೋಟಿ
* ಎಚ್ ಡಿಎಫ್ ಸಿ 9,370.38 ಕೋಟಿ
* ಕೊಟಕ್ ಮಹೀಂದ್ರಾ ಬ್ಯಾಂಕ್ 7,805.2 ಕೋಟಿ
* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 75.04 ಕೋಟಿ

ಆದರೆ, ಭಾರ್ತಿ ಏರ್ ಟೆಲ್ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ 13,147.89 ಕೋಟಿ ಹಾಗೂ ಐಟಿಸಿ ಕಂಪೆನಿಯ ಬಂಡವಾಳ ಮೌಲ್ಯದಲ್ಲಿ 7,744.11 ಕೋಟಿ ರುಪಾಯಿ ಏರಿಕೆ ಆಗಿದೆ.


Click it and Unblock the Notifications