ಭಾರತದ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳ ಪೈಕಿ ಒಂಬತ್ತರ ಮಾರುಕಟ್ಟೆ ಮೌಲ್ಯವು ಕಳೆದ ವಾರ (ಅಕ್ಟೋಬರ್ 26ರಿಂದ 30ರ ಮಧ್ಯೆ) 1,63,510.28 ಕೋಟಿ ರುಪಾಯಿ ಕೊಚ್ಚಿಹೋಗಿದೆ. ಈ ಪೈಕಿ ಅತಿ ದೊಡ್ಡ ನಷ್ಟ ಅನುಭವಿಸಿರುವುದು ರಿಲಯನ್ಸ್ ಇಂಡಸ್ಟ್ರೀಸ್. ಬಿಎಸ್ ಇ ಸೂಚ್ಯಂಕವಾದ ಸೆನ್ಸೆಕ್ಸ್ 1071.43 ಪಾಯಿಂಟ್ಸ್ ಇಳಿಕೆ ಆಗಿದೆ.
ಟಾಪ್ ಟೆನ್ ಅತ್ಯಂತ ಮೌಲ್ಯಯುತ ಕಂಪೆನಿಗಳ ಪೈಕಿ ಕೊಟಕ್ ಮಹೀಂದ್ರಾ ಬ್ಯಾಂಕ್ ಮಾರುಕಟ್ಟೆ ಮೌಲ್ಯ 32,570.94 ಕೋಟಿ ರುಪಾಯಿ ಏರಿಕೆಯಾಗಿದ್ದನ್ನು ಹೊರತುಪಡಿಸಿದಲ್ಲಿ ಹತ್ತರಲ್ಲಿ ಒಂಬತ್ತು ಕಂಪೆನಿಗಳ ಮಾರುಕಟ್ಟೆ ಮೌಲ್ಯದಲ್ಲಿ ಕುಸಿತವಾಗಿದೆ. ಹಾಗಿದ್ದರೆ ಯಾವ ಕಂಪೆನಿಯ ಮಾರುಕಟ್ಟೆ ಮೌಲ್ಯ ಎಷ್ಟು ಕಡಿಮೆ ಆಗಿದೆ ಎಂಬ ವಿವರ ಹೀಗಿದೆ:

* ರಿಲಯನ್ಸ್ ಇಂಡಸ್ಟ್ರೀಸ್ 39355.06 ಕೋಟಿ
* ಎಚ್ ಡಿಎಫ್ ಸಿ ಬ್ಯಾಂಕ್ 28574.61 ಕೋಟಿ
* ಇನ್ಫೋಸಿಸ್ 26152.79 ಕೋಟಿ
* ಎಚ್ ಡಿಎಫ್ ಸಿ 24844.93 ಕೋಟಿ
* ಹಿಂದೂಸ್ತಾನ್ ಯುನಿಲಿವರ್ 16858.07 ಕೋಟಿ
* ಐಸಿಐಸಿಐ ಬ್ಯಾಂಕ್ 16754.64 ಕೋಟಿ
* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 8105.15 ಕೋಟಿ
* ಎಚ್ ಸಿಎಲ್ ಟೆಕ್ನಾಲಜೀಸ್ 2455.87 ಕೋಟಿ
* ಭಾರ್ತಿ ಏರ್ ಟೆಲ್ 409.16 ಕೋಟಿ


Click it and Unblock the Notifications