For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ ನಲ್ಲಿ ಇಳಿಕೆ ಕಂಡ ಚಿಲ್ಲರೆ ಹಣದುಬ್ಬರ ದರ

|

ಭಾರತದಲ್ಲಿ ಗ್ರಾಹಕ ದರ ಸೂಚ್ಯಂಕ (CPI) ಆಧಾರದಲ್ಲಿ ಅಳೆಯುವ ರೀಟೇಲ್ ಹಣದುಬ್ಬರ ದರವು ಕಳೆದ ತಿಂಗಳು, ಡಿಸೆಂಬರ್ ನಲ್ಲಿ ಕಡಿಮೆ ಆಗಿದೆ. ಮಂಗಳವಾರ ಕೇಂದ್ರ ಸಚಿವಾಲಯದಿಂದ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, ಡಿಸೆಂಬರ್ ನಲ್ಲಿ ಗ್ರಾಹಕ ದರ ಸೂಚ್ಯಂಕವು ಡಿಸೆಂಬರ್ ನಲ್ಲಿ 4.59% ಇದೆ. ಅಂದ ಹಾಗೆ ನವೆಂಬರ್ ನಲ್ಲಿ 6.93% ಇತ್ತು.

 

ನವೆಂಬರ್ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆನವೆಂಬರ್ ಚಿಲ್ಲರೆ ಹಣದುಬ್ಬರ ದರದಲ್ಲಿ ಅಲ್ಪ ಪ್ರಮಾಣದ ಇಳಿಕೆ

ಒಂದು ನೆಮ್ಮದಿಯ ವಿಚಾರ ಏನೆಂದರೆ, ಆರ್ ಬಿಐ ಗುರಿಯಾಗಿ ಇಟ್ಟುಕೊಂಡಿರುವ 2ರಿಂದ 6 ಪರ್ಸೆಂಟ್ ನಲ್ಲೇ ಹಣದುಬ್ಬರ ದರ ಇದೆ. ಇನ್ನು ಗ್ರಾಹಕ ಆಹಾರ ದರ ಸೂಚ್ಯಂಕ (CFPI) ಆಹಾರ ಪದಾರ್ಥಗಳ ಬೆಲೆಯನ್ನು ಅಳೆಯುತ್ತದೆ. ಡಿಸೆಂಬರ್ ನಲ್ಲಿ ಅದು 3.41% ಇದೆ. ನವೆಂಬರ್ ನಲ್ಲಿ 9.50% ಇತ್ತು. ಮುಖ್ಯವಾಗಿ ಆಹಾರ ಪದಾರ್ಥಗಳ ಬೆಲೆಯಲ್ಲಿ ಇಳಿಕೆ ಆಗಿದ್ದರಿಂದ ಹಣದುಬ್ಬರ ದತ್ತಾಂಶದಲ್ಲಿ ಚೇತರಿಕೆ ಆಗಿದೆ.

 
ಡಿಸೆಂಬರ್ ನಲ್ಲಿ ಇಳಿಕೆ ಕಂಡ ಚಿಲ್ಲರೆ ಹಣದುಬ್ಬರ ದರ

ಮತ್ತೊಂದು ಮಾಹಿತಿಯನ್ನು ಸಹ ಕೇಂದ್ರದಿಂದ ಬಿಡುಗಡೆ ಮಾಡಲಾಗಿದೆ. ಅದರ ಪ್ರಕಾರ, ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಕ್ಷನ್ (IIP) ನವೆಂಬರ್ ನಲ್ಲಿ 1.9% ಕುಸಿತ ಕಂಡು, 126.3ರಲ್ಲಿದೆ. ಅದೇ ಅಕ್ಟೋಬರ್ ನಲ್ಲಿ 3.6% ಬೆಳವಣಿಗೆ ದಾಖಲಾಗಿತ್ತು. ಗಣಿಗಾರಿಕೆ ಉತ್ಪಾದನೆ ನವೆಂಬರ್ ನಲ್ಲಿ 7.3% ಕಡಿಮೆ ಆಗಿದೆ. ತಯಾರಿಕಾ ಉತ್ಪಾದನೆ 1.7% ಇಳಿಕೆ ಆಗಿದ್ದರೆ, ವಿದ್ಯುತ್ ಉತ್ಪಾದನೆ 3.5% ಪ್ರಗತಿ ಕಂಡಿದೆ.

English summary

India's Retail Inflation Eases In December; IIP Contracted In November

India's retail inflation based on Consumer Price Index (CPI) eases in December and IIP contracted in November. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X