ಭಾರತದಲ್ಲಿ ನೂರಾರು ಕೋಟಿ ಜನಸಂಖ್ಯೆಯಲ್ಲಿ ಬಡತನದ ಮಟ್ಟ ಕಮ್ಮಿ ಏನಿಲ್ಲ. ಹಾಗಂತ ಹಣವಂತರು ಕೋಟ್ಯಾಧಿಪತಿಗಳು ಕಮ್ಮಿ ಇದ್ದಾರಂತೆಯು ಅಲ್ಲ. ಭಾರತದ ಟೆಕ್ ಕಂಪನಿಯ ಟಾಪ್ CEO ಗಳಿಸುವ ಒಂದು ವರ್ಷದ ಸಂಬಳ, ಭಾರತದ ಮಹಿಳಾ ಗೃಹ ಕಾರ್ಮಿಕರೊಬ್ಬರು ಗಳಿಸೋಕೆ 22,227 ವರ್ಷಗಳೇ ಬೇಕಾಗುತ್ತದೆ. ಭಾರತದ 70 ಪರ್ಸೆಂಟ್ ಜನಸಂಖ್ಯೆಯ ಸಂಪತ್ತಿನ ನಾಲ್ಕು ಪಟ್ಟು ಹೆಚ್ಚು ಸಂಪತ್ತನ್ನು 1 ಪರ್ಸೆಂಟ್ ಜನರು ಹೊಂದಿದ್ದಾರೆ.
ಭಾರತದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಪ್ರತಿನಿತ್ಯ ಯಾವುದೇ ಸಂಭಾವನೆ ಬರದೆ 3.26 ಬಿಲಿಯನ್ ಗಂಟೆಗಳು ಕೆಲಸ ಮಾಡುತ್ತಾರೆ. ಇದು ಭಾರತದ ಆರ್ಥಿಕತೆಗೆ ಸರಿಸುಮಾರು 19 ಟ್ರಿಲಿಯನ್ ರುಪಾಯಿ(71 ಲಕ್ಷ ಕೋಟಿ ರುಪಾಯಿಗೂ ಅಧಿಕ) ಕೊಡುಗೆಯನ್ನು ನೀಡುವಂತಹ ಕೆಲಸವಾಗಿದೆ. ಹೀಗೆ ದೇಶದಲ್ಲಿ ಹಣ ಮತ್ತು ಸಂಪತ್ತು ಕೆಲವರ ಬಳಿಯೇ ಹೆಚ್ಚು ಶೇಖರವಾಗಿದ್ದರೆ, ಮತ್ತೆ ಮಾಡುವ ಕೆಲಸಕ್ಕೆ ಆದಾಯವೇ ಬರದು.
ಪ್ರತಿ ವರ್ಷ ಕೇಂದ್ರ ಸರ್ಕಾರ ಲಕ್ಷಾಂತರ ಕೋಟಿ ರುಪಾಯಿ ಬಜೆಟ್ ಮಂಡನೆ ಮಾಡುತ್ತದೆ. ಹೀಗೆ 2018-19ರ ಕೇಂದ್ರ ಮಂಡಿಸಿದ ಬಜೆಟ್‌ನ ಒಟ್ಟು ಮೌಲ್ಯಕ್ಕಿಂತ ಹೆಚ್ಚಿನ ಸಂಪತ್ತನ್ನು ಭಾರತದ 63 ಕೋಟ್ಯಾಧಿಪತಿಗಳು ಹೊಂದಿದ್ದಾರೆ.
ಒಟ್ಟು ಜನಸಂಖ್ಯೆಯ ಅಗ್ರ 1 ಪರ್ಸೆಂಟ್ ಮತ್ತು ಕೆಳಗಿನ 50 ಪರ್ಸೆಂಟ್ ಜನರ ನಡುವಿನ ಸಂಪತ್ತಿನ ಅಂತರವು ವಿಸ್ತರಿಸುತ್ತಲೇ ಇದೆ ಎಂದು ಜಾಗತಿಕ ಲಾಭರಹಿತ ಸಂಸ್ಥೆ ಆಕ್ಸ್‌ಫ್ಯಾಮ್ ತನ್ನ ಇತ್ತೀಚಿನ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಈ ಮೂಲಕ ಆದಾಯ ಅಸಮಾನತೆಯನ್ನು ಎತ್ತಿ ತೋರಿಸಿದೆ.
63 ಭಾರತೀಯ ಶತಕೋಟ್ಯಾಧಿಪತಿಗಳ ಸಂಪತ್ತು 2018-19ರ ಬಜೆಟ್‌ಗೆ ಸಮ
''ಒಟ್ಟು 63 ಭಾರತೀಯ ಶತಕೋಟ್ಯಾಧಿಪತಿಗಳ ಸಂಪತ್ತು 2018-19ರ ಆರ್ಥಿಕ ವರ್ಷದ ಒಟ್ಟು ಕೇಂದ್ರ ಬಜೆಟ್‌ಗಿಂತ 24.42 ಲಕ್ಷ ಕೋಟಿ ರೂ.ಗಳಷ್ಟಿದೆ" ಎಂದು ಆಕ್ಸ್ಫ್ಯಾಮ್ ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
"ಬಿಲಿಯನೇರ್‌ಗಳ ಸಂಪತ್ತು 2017 ರಲ್ಲಿ 325.5 ಬಿಲಿಯನ್ (ರುಪಾಯಿಗಳಲ್ಲಿ 22.73 ಟ್ರಿಲಿಯನ್) ನಿಂದ 2019 ರಲ್ಲಿ 408 ಬಿಲಿಯನ್ ಡಾಲರ್ (ರುಪಾಯಿಗಳಲ್ಲಿ 28.97 ಟ್ರಿಲಿಯನ್) ಕ್ಕೆ ಏರಿದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ. ವಾಸ್ತವವಾಗಿ, ಆ ಮೊತ್ತವು 2019-20ರ ಬಜೆಟ್ ಗಾತ್ರ 27.86 ಟ್ರಿಲಿಯನ್ ರುಪಾಯಿಗಿಂತಲೂ ಹೆಚ್ಚಾಗಿದೆ ಎಂಬುದು ವರದಿಯಲ್ಲಿ ಉಲ್ಲೇಖಿಸದ ಸಂಗತಿಯಾಗಿದೆ.
2,153 ಶತಕೋಟ್ಯಾಧಿಪತಿಗಳ ಬಳಿಯಲ್ಲಿದೆ ಜಗತ್ತಿನ 60ರಷ್ಟು ಸಂಪತ್ತು
ವಿಶ್ವದ 2,153 ಶತಕೋಟ್ಯಾಧಿಪತಿಗಳು ಭೂಮಿಯ ಜನಸಂಖ್ಯೆಯ 60 ಪರ್ಸೆಂಟ್ರಷ್ಟಿರುವ 4.6 ಬಿಲಿಯನ್ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ. ಭಾರತದ ಬಿಲಿಯನೇರ್‌ಗಳ ವಿಶ್ಲೇಷಣೆಯು ಅವರಲ್ಲಿ 15 ಮಂದಿ ಗ್ರಾಹಕ ಸರಕು ಉದ್ಯಮದಿಂದ ಮತ್ತು 2019 ರಲ್ಲಿ 10 ಕ್ಕೂ ಹೆಚ್ಚು ಔಷಧೀಯ ವಲಯದಿಂದ ಬಂದವರು ಎಂದು ತೋರಿಸಿದೆ - ಇದು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಬಹಳ ಅಪರೂಪ.
ವಾಸ್ತವವಾಗಿ, ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಆದಾಯ ಅಸಮಾನತೆಯು ಆಳವಾಗಿ ನೆಲೆಗೊಂಡಿದೆ. ಕಳೆದ ವರ್ಷದಲ್ಲಿ ಕೋಟ್ಯಾಧಿಪತಿಗಳ ಸಂಖ್ಯೆ ದ್ವಿಗುಣಗೊಂಡಿದೆ, ಅವರ ಒಟ್ಟು ಸಂಪತ್ತು ಕಳೆದ ವರ್ಷದಲ್ಲಿ ಕಡಿಮೆಯಾಗಿದೆ.
ಮನೆ, ಸಂಸಾರದ ಆರೈಕೆಯಲ್ಲಿಯೇ ಕೋಟ್ಯಾಂತರ ಗಂಟೆಗಳು ಮುಗಿದುಬಿಡುತ್ತದೆ
"ಇಂದಿನ ಆರ್ಥಿಕ ವ್ಯವಸ್ಥೆಯಿಂದ ಕನಿಷ್ಠ ಲಾಭ ಪಡೆಯುವವರಲ್ಲಿ ಮಹಿಳೆಯರು ಮತ್ತು ಹುಡುಗಿಯರು ಸೇರಿದ್ದಾರೆ. ಅವರು ಅಡುಗೆ ಮಾಡಲು, ಸ್ವಚ್ ಗೊಳಿಸಲು ಮತ್ತು ಆರೈಕೆ ಮಾಡಲು ಶತಕೋಟಿ ಗಂಟೆಗಳ ಕಾಲ ಕಳೆಯುತ್ತಾರೆ. ಹೀಗಾಗಿ ಇವರು ಆರ್ಥಿಕತೆಯ ಕೆಳಭಾಗದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ "ಎಂದು ಆಕ್ಸ್ಫ್ಯಾಮ್ ಇಂಡಿಯಾ ಸಿಇಒ ಅಮಿತಾಬ್ ಬೆಹರ್ ಹೇಳಿದ್ದಾರೆ.
ಎಲ್ಲಾ ಪಾವತಿಸದ ಕೆಲಸಗಳಲ್ಲಿ ಮುಕ್ಕಾಲು ಭಾಗಕ್ಕಿಂತ ಹೆಚ್ಚು ಮಹಿಳೆಯರು ಮಾಡುತ್ತಾರೆ. ಅವರ ಆರೈಕೆಯ ಕೆಲಸದ ಹೊರೆಯಿಂದಾಗಿ ಅವರು ಸಾಮಾನ್ಯವಾಗಿ ಕಡಿಮೆ ಸಮಯವನ್ನು ಕೆಲಸ ಮಾಡಬೇಕಾಗುತ್ತದೆ ಅಥವಾ ಉದ್ಯೋಗಿಗಳಿಂದ ಹೊರಗುಳಿಯಬೇಕಾಗುತ್ತದೆ.
ಪ್ರಪಂಚದಾದ್ಯಂತ, 42 ಪರ್ಸೆಂಟ್‌ರಷ್ಟು ಮಹಿಳೆಯರಿಗೆ ಉದ್ಯೋಗ ಪಡೆಯಲು ಸಾಧ್ಯವಿಲ್ಲ. ಏಕೆಂದರೆ ಅವರು ಎಲ್ಲಾ ಆರೈಕೆಗಾಗಿ ಜವಾಬ್ದಾರರಾಗಿರುತ್ತಾರೆ, ಇದು ಕೇವಲ ಆರು ಪರ್ಸೆಂಟ್ ಪುರುಷರಿಗೆ ಹೋಲಿಸಿದರೆ.
ಭಾರತದ ಅಗ್ರ 10 ಪರ್ಸೆಂಟ್ ಜನಸಂಖ್ಯೆಯ ಒಟ್ಟು ರಾಷ್ಟ್ರೀಯ ಸಂಪತ್ತು 74.3 ಪರ್ಸೆಂಟ್
ಭಾರತದಲ್ಲಿ ಒಟ್ಟು ಜನಸಂಖ್ಯೆಯ ಒಟ್ಟು ರಾಷ್ಟ್ರೀಯ ಸಂಪತ್ತು 74.3 ಪರ್ಸೆಂಟ್‌ನಷ್ಟಿದೆ. ಭಾರತದ ಅಗ್ರ 1 ಪರ್ಸೆಂಟ್ ಜನಸಂಖ್ಯೆಯು ರಾಷ್ಟ್ರೀಯ ಸಂಪತ್ತಿನ 42.5 ಪರ್ಸೆಂಟ್ ಸಂಪತ್ತನ್ನು ಹೊಂದಿದ್ದಾರೆ. ಆದರೆ ಕೆಳಭಾಗದ 50 ಪರ್ಸೆಂಟ್ ಜನಸಂಖ್ಯೆಯ ಬಹುಪಾಲು ರಾಷ್ಟ್ರೀಯ ಸಂಪತ್ತು ಕೇವಲ 2.8 ಪರ್ಸೆಂಟ್ ಇದೆ.
"ಬೇರೆ ರೀತಿಯಲ್ಲಿ ಹೇಳುವುದಾದರೆ, 953 ಮಿಲಿಯನ್ ಜನರು ಹೊಂದಿರುವ ಸಂಪತ್ತಿನ 4 ಪಟ್ಟು ಹೆಚ್ಚು ಅಥವಾ 70 ಪರ್ಸೆಂಟ್ ಜನರು ಹೊಂದಿರುವ ಸಂಪತ್ತನ್ನು ಅಗ್ರ 1 ಪರ್ಸೆಂಟ್ ಜನರು ಹೊಂದಿದ್ದಾರೆ. ಕೆಳಗಿನ 90 ಪರ್ಸೆಂಟ್ ಜನರು ದೇಶದ ಸಂಪತ್ತಿನ 25.7 ಪರ್ಸೆಂಟ್ ಹೊಂದಿದ್ದಾರೆ. ಅಗ್ರ ಒಂಬತ್ತು ಶತಕೋಟ್ಯಾಧಿಪತಿಗಳ ಸಂಪತ್ತು ಜನಸಂಖ್ಯೆಯ ಕೆಳಗಿನ 50 ಪರ್ಸೆಂಟ್ ಸಂಪತ್ತಿಗೆ ಸಮನಾಗಿರುತ್ತದೆ "ಎಂದು ವರದಿ ತಿಳಿಸಿದೆ.
ಜಾಗತಿಕ ಜನಸಂಖ್ಯೆಯು ಬೆಳೆದಂತೆ ಮತ್ತು ಜನರಿಗೆ ವಯಸ್ಸಾದಂತೆ ಮುಂಬರುವ ದಶಕದಲ್ಲಿ ಪಾವತಿಸದ ಮತ್ತು ಪಾವತಿಸುವ ಆರೈಕೆದಾರರ ಮೇಲಿನ ಒತ್ತಡವು ಹೆಚ್ಚಾಗಲಿದೆ ಎಂದು ವರದಿ ಹೇಳಿದೆ. ಹೀಗೆ ದೇಶದಲ್ಲಿ ಅಷ್ಟೇ ಅಲ್ಲದೆ ವಿಶ್ವದೆಲ್ಲೆಡೆ ಆದಾಯ ಅಸಮಾನತೆಯು ಹಾಗೆಯೇ ಮುಂದುವರಿದುಕೊಂಡು ಹೋಗಿದೆ.


Click it and Unblock the Notifications