For Quick Alerts
ALLOW NOTIFICATIONS  
For Daily Alerts

ಜುಲೈನಲ್ಲಿ ಭಾರತದ ನಿರುದ್ಯೋಗ ದರ ಇಳಿಕೆ: 4 ತಿಂಗಳಲ್ಲೇ ಕಡಿಮೆ

|

ಭಾರತದ ನಿರುದ್ಯೋಗ ದರವು ಜುಲೈನಲ್ಲಿ ನಾಲ್ಕು ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟಕ್ಕೆ ಕುಸಿದಿದ್ದು, ಈ ಮೂಲಕ ಆರ್ಥಿಕತೆಯಲ್ಲಿ ಚೇತರಿಕೆಯ ಲಕ್ಷಣಗಳು ಕಂಡುಬಂದಿದೆ.

 

ಜುಲೈನಲ್ಲಿ UPI ದಾಖಲೆ: 6.06 ಲಕ್ಷ ಕೋಟಿ ರೂ. ವಹಿವಾಟುಜುಲೈನಲ್ಲಿ UPI ದಾಖಲೆ: 6.06 ಲಕ್ಷ ಕೋಟಿ ರೂ. ವಹಿವಾಟು

ಈ ವರ್ಷದ ಜನವರಿ ತಿಂಗಳಿನಲ್ಲಿ ನಿರುದ್ಯೋಗ ದರವು ಮೊದಲ ಬಾರಿಗೆ ತಗ್ಗಿದ್ದು, ಶೇ 6.5 ಕ್ಕೆ ಇಳಿಕೆಯಾಗಿತ್ತು. ಅದಾದ ಬಳಿಕ ಸತತ ಏರಿಕೆ ದಾಖಲಿಸಿದ್ದ ನಿರುದ್ಯೋಗ ದರವು ಜುಲೈ ತಿಂಗಳಿನಲ್ಲಿ ಇಳಿಕೆಯಾಗಿದೆ.

 

ಖಾಸಗಿ ಸಂಸ್ಥೆ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಪ್ರೈವೇಟ್ ಲಿಮಿಟೆಡ್‌ನ ಇತ್ತೀಚಿನ ಮಾಹಿತಿಯ ಪ್ರಕಾರ, ನಿರುದ್ಯೋಗ ದರವು ಜೂನ್ ತಿಂಗಳಿನ ಶೇ. 9.17ರಿಂದ ಜುಲೈ ತಿಂಗಳಲ್ಲಿ ಶೇಕಡಾ 6.95 ಕ್ಕೆ ಇಳಿಕೆಗೊಂಡಿದೆ.

ಜುಲೈನಲ್ಲಿ ಭಾರತದ ನಿರುದ್ಯೋಗ ದರ ಇಳಿಕೆ: 4 ತಿಂಗಳಲ್ಲೇ ಕಡಿಮೆ

ಕಳೆದ ತಿಂಗಳು ಗ್ರಾಮೀಣ ನಿರುದ್ಯೋಗ ದರವು ಶೇಕಡಾ 6.3 ಕ್ಕೆ ಕುಸಿಯಿತು, ಆದರೆ ನಗರ ಪ್ರದೇಶದ ನಿರುದ್ಯೋಗವು ಶೇಕಡ 8 ಕ್ಕಿಂತ ಹೆಚ್ಚಿದೆ.

ಹೀಗೆ ನಿರುದ್ಯೋಗ ಪ್ರಮಾಣ ಏರಿಕೆಯು ಹಾಗೂ ಉದ್ಯೋಗಗಳ ಲಾಭವು ಆರ್ಥಿಕತೆಗೆ ಧನಾತ್ಮಕವಾಗಿದೆ. ಅಲ್ಲಿ ಖಾಸಗಿ ಬಳಕೆಯು ಒಟ್ಟು ದೇಶೀಯ ಉತ್ಪನ್ನದ ಸುಮಾರು ಶೇಕಡಾ 60 ರಷ್ಟಿದೆ ಮತ್ತು ಕಳೆದ ಆರ್ಥಿಕ ವರ್ಷದಲ್ಲಿ ಸಂಕೋಚನದಿಂದ ಚೇತರಿಸಿಕೊಳ್ಳುತ್ತಿದೆ.

ಅಂತರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇಕಡಾ 9.5ರಷ್ಟು ಕಾಣಲಿದೆ ಎಂದು ಅಂದಾಜಿಸಿದೆ. ಇದೇ ಪ್ರಮಾಣದಲ್ಲಿ ಆರ್‌ಬಿಐ ಕೂಡ ಊಹಿಸಿದ್ದು, ಹಿಂದಿನ ಬೆಳವಣಿಗೆ ದರದ ಅಂದಾಜನ್ನು ತಗ್ಗಿಸಿದೆ.

ಜಿಎಸ್‌ಟಿ ಸಂಗ್ರಹ ಎಷ್ಟು?
ಭಾನುವಾರ ಬಿಡುಗಡೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದತ್ತಾಂಶವು ಜೂನ್‌ನಲ್ಲಿ ಕುಸಿತದ ನಂತರ ಜುಲೈ ಸಂಗ್ರಹಗಳು ಪುಟಿದೇಳುವುದನ್ನು ತೋರಿಸಿದೆ. ವೈರಸ್ ನಿರ್ಬಂಧಗಳನ್ನು ಸರಾಗಗೊಳಿಸುವ ನಡುವೆ ಕಳೆದ ತಿಂಗಳು ಭಾರತದ ಕಾರ್ಖಾನೆಯ ಚಟುವಟಿಕೆಯು ಪುನಶ್ಚೇತನಕ್ಕೆ ಸಾಕ್ಷಿಯಾಗಿದೆ.

ಜೂನ್ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿಗಿಂತ ಕಡಿಮೆ ಇದ್ದ ಜಿಎಸ್‌ಟಿ ಆದಾಯ, ಜುಲೈ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿಯನ್ನು ಮೀರಿದೆ. ಜುಲೈನಲ್ಲಿ ಜಿಎಸ್‌ಟಿ ಸಂಗ್ರಹ 1,16,393 ಕೋಟಿ ರೂ. ಆಗಿದ್ದು, ಜುಲೈ 2020 ಕ್ಕೆ ಹೋಲಿಸಿದರೆ ಶೇಕಡಾ 33 ರಷ್ಟು ಹೆಚ್ಚಳ ಕಂಡುಬಂದಿದೆ.

ಓರ್ವ ಸಾಮಾನ್ಯ ವ್ಯಕ್ತಿ ಕೋಟ್ಯಧಿಪತಿ ಆಗಲು ಏನು ಮಾಡ್ಬೇಕು?ಓರ್ವ ಸಾಮಾನ್ಯ ವ್ಯಕ್ತಿ ಕೋಟ್ಯಧಿಪತಿ ಆಗಲು ಏನು ಮಾಡ್ಬೇಕು?

ಕೋವಿಡ್‌ನ ಮೊದಲ ಅಲೆಯಿಂದ ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿತ್ತು. ಹೆಚ್ಚಿದ ಆದಾಯ ಸಂಗ್ರಹವು ಮೊದಲ ತ್ರೈಮಾಸಿಕದಲ್ಲಿ ಹಣಕಾಸಿನ ಕೊರತೆಯನ್ನು ಸರಿದೂಗಿಸಲು ಸಹಾಯ ಮಾಡಿದೆ. ಇದು ಎಂಟು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

English summary

India's Unemployment Rate Down To 6.95% In July: CMIE

The unemployment rate declined to 6.95 per cent in July 2021 Four months low
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X