40 ವರ್ಷದೊಳಗೆ ಸ್ವಪರಿಶ್ರಮದಿಂದ ಶತಕೋಟ್ಯಧಿಪತಿ ಉದ್ಯಮಿಗಳಾದ ಭಾರತೀಯರು ಇವರು

ಐಐಎಫ್ ಎಲ್ ವೆಲ್ತ್ ಹಾಗೂ ಹ್ಯುರನ್ ಇಂಡಿಯಾದಿಂದ ಬುಧವಾರ ಪಟ್ಟಿಯೊಂದನ್ನು ಬಿಡುಗಡೆ ಮಾಡಲಾಗಿದೆ. "IIFL Wealth Hurun India 40 & Under Self-Made Rch List 2020" ಎಂಬುದು ಈ ಪಟ್ಟಿಗೆ ನೀಡಿರುವ ಹೆಸರು. ಸ್ವಂತ ಪರಿಶ್ರಮದಿಂದ ಶತಕೋಟ್ಯಧಿಪತಿಗಳಾದ 40 ವರ್ಷದೊಳಗಿನ ಉದ್ಯಮಿಗಳ ಪಟ್ಟಿ ಇದು. 2020ರಲ್ಲಿ 40 ವರ್ಷದೊಳಗಿನ ಉದ್ಯಮಿಗಳ ಆಸ್ತಿ 59% ಹೆಚ್ಚಾಗಿದೆ.

1000 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಂಪತ್ತು ಇರುವ 40 ವರ್ಷದೊಳಗಿನ ಭಾರತದವರ ಬಗ್ಗೆ ಪಟ್ಟಿಯೊಂದನ್ನು ಮಾಡಲಾಗಿದೆ. ಇದರಲ್ಲಿ ಕವರ್ ಆಗಿರುವ 12ರಲ್ಲಿ 11 ಸ್ಟಾರ್ಟ್ ಅಪ್ ಗಳ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್ ಗಿಂತ ಹೆಚ್ಚಿದೆ.

ಈ ವರದಿಯಲ್ಲಿ ಕಂಡುಬಂದ ಪ್ರಮುಖ ಅಂಶಗಳು ಹೀಗಿವೆ:
* ಝೆರೋದಾಗೆ ಸೇರಿದ ನಿತಿನ್ ಕಾಮತ್ (40) ಹಾಗೂ ನಿಖಿಲ್ ಕಾಮತ್ (34) 24,000 ಕೋಟಿ ರುಪಾಯಿ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇದ್ದಾರೆ. ಆ ನಂತರ ದಿವಾಂಕ್ ತುರಖಿಯ (38) ಎರಡನೇ ಸ್ಥಾನದಲ್ಲಿದ್ದು, ಅವರ ನಿವ್ವಳ ಆಸ್ತಿ ಮೌಲ್ಯ 14,000 ಕೋಟಿ ರುಪಾಯಿ ಇದೆ.

* ಸ್ವಂತ ಪರಿಶ್ರಮದಿಂದ ಉದ್ಯಮಿಯಾದ 40 ವರ್ಷದೊಳಗಿನವರ ಆಸ್ತಿ 2020ರಲ್ಲಿ 59% ಏರಿಕೆಯಾಗಿದ್ದು, 44,900 ಕೋಟಿ ರುಪಾಯಿ ಮುಟ್ಟಿದೆ.

* ಈ ಪಟ್ಟಿಯಲ್ಲಿ ಇರುವ ಏಕೈಕ ಮಹಿಳೆ Vu ಟೆಕ್ನಾಲಜೀಸ್ ನ 39 ವರ್ಷದ ದೇವಿತಾ ಸರಫ್.

* ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಲು ಬಯಸುವವರು ಜಾಸ್ತಿ ಇದ್ದಾರೆ ಎಂಬುದು 9 ಮಂದಿ ಈ ನಗರವನ್ನು ಆರಿಸಿಕೊಂಡಿರುವುದರಿಂದ ಗೊತ್ತಾಗುತ್ತದೆ. ತಲಾ ಇಬ್ಬರು ಗುರುಗ್ರಾಮ್/ದೆಹಲಿಯಲ್ಲಿ ವಾಸವಿದ್ದಾರೆ.

* ಇಬ್ಬರು ಭಾರತದ ಹೊರಗೆ ವಾಸವಿದ್ದಾರೆ.

* ಈ ಪಟ್ಟಿಯಲ್ಲಿ ಇರುವವರ ಸರಾಸರಿ ವಯಸ್ಸು 37. ಅತ್ಯಂತ ಕಡಿಮೆ ವಯಸ್ಸು ಅಂದರೆ 26.

* 26 ವರ್ಷದ ಓಯೋ ರೂಮ್ಸ್ ನ ರಿತೇಶ್ ಅಗರ್ ವಾಲ್ ಅತ್ಯಂತ ಚಿಕ್ಕ ವಯಸ್ಸಿಗೆ ಸ್ವಂತ ಪರಿಶ್ರಮದಿಂದ ಉದ್ಯಮಿಯಾದವರು.

40 ವರ್ಷದೊಳಗೆ ಸ್ವಪರಿಶ್ರಮದಿಂದ ಶತಕೋಟ್ಯಧಿಪತಿ ಉದ್ಯಮಿಗಳಾದ ಭಾರತೀಯರು

ಪಟ್ಟಿಯಲ್ಲಿ ಟಾಪ್ ನಲ್ಲಿ ಇರುವವರ ಮಾಹಿತಿ ಹೀಗಿದೆ:
* ನಿತಿನ್ ಕಾಮತ್ ಮತ್ತು ನಿಖಿಲ್ ಕಾಮತ್- 24 ಸಾವಿರ ಕೋಟಿ ಆಸ್ತಿ

* ದಿವ್ಯಾಂಕ್ ತುರಖಿಯ- 14,000 ಕೋಟಿ ಆಸ್ತಿ

* ಅಮೋದ್ ಮಾಲವೀಯ- 13,100 ಕೋಟಿ ಆಸ್ತಿ

* ಸುಜಿತ್ ಕುಮಾರ್- 13,100 ಕೋಟಿ ಆಸ್ತಿ

* ವೈಭವ್ ಗುಪ್ತಾ- 13,100 ಕೋಟಿ ಆಸ್ತಿ

* ರಾಜು ರವೀಂದ್ರನ್- 7800 ಕೋಟಿ ಆಸ್ತಿ

* ಬಿನ್ನಿ ಬನ್ಸಾಲ್- 7500 ಕೋಟಿ ಆಸ್ತಿ

* ಸಚಿನ್ ಬನ್ಸಾಲ್- 7500 ಕೋಟಿ ಆಸ್ತಿ

* ರಿತೇಶ್ ಅಗರ್ ವಾಲ್- 4500 ಕೋಟಿ ಆಸ್ತಿ

* ಭವಿಶ್ ಅಗರ್ ವಾಲ್- 3500 ಕೋಟಿ ಆಸ್ತಿ

* ದೀಪಕ್ ಗರ್ಗ್- 3200 ಕೋಟಿ ಆಸ್ತಿ

* ಹರ್ಮನ್ ನರುಲಾ- 2900 ಕೋಟಿ ಆಸ್ತಿ

* ದೀಪಿಂದರ್ ಗೋಯೆಲ್- 2200 ಕೋಟಿ ಆಸ್ತಿ

* ಅಂಕಿತ್ ಭಾಟಿ- 1600 ಕೋಟಿ ಆಸ್ತಿ

* ಶ್ರೀಹರ್ಷ ಮಜೇಟಿ- 1400 ಕೋಟಿ ಆಸ್ತಿ

* ದೇವಿತಾ ರಾಜ್ ಕುಮಾರ್ ಸರಫ್- 1200 ಕೋಟಿ ಆಸ್ತಿ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+