ಭಾರತದ ಷೇರು ಮಾರುಕಟ್ಟೆಯು ಹೊಸ ವರ್ಷದ ಆರನೇ ದಿನ (ಜನವರಿ 6ನೇ ತಾರೀಕು, ಸೋಮವಾರ) ಅಲ್ಲೋಲ- ಕಲ್ಲೋಲ ಸೃಷ್ಟಿಸಿದೆ. ಹೂಡಿಕೆದಾರರ ಮೂರು ಲಕ್ಷ ಕೋಟಿ ರುಪಾಯಿ ಸಂಪತ್ತು ಕರಗಿಹೋಗಿದೆ. ಸೆನ್ಸೆಕ್ಸ್ ಸೂಚ್ಯಂಕವು 787.98 ಪಾಯಿಂಟ್ ಇಳಿಕೆಯಾಗಿ, ದಿನಾಂತ್ಯಕ್ಕೆ 40676.63 ಅಂಶಗಳೊಂದಿಗೆ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 233.6 ಪಾಯಿಂಟ್ ಇಳಿಕೆ ಕಂಡು, ದಿನಾಂತ್ಯಕ್ಕೆ 11993.05 ಅಂಶಗಳೊಂದಿಗೆ ವ್ಯವಹಾರ ಮುಗಿಸಿದೆ.
ಅಮೆರಿಕವು ಇರಾಕ್ ನ ಬಾಗ್ದಾದ್ ನಲ್ಲಿರುವ ವಿಮಾನ ನಿಲ್ದಾಣದಲ್ಲಿ ಡ್ರೋಣ್ ದಾಳಿ ನಡೆಸಿ, ಇರಾನ್ ನ ಸೇನಾ ಪ್ರಮುಖ ಖಾಸಿಂ ಸುಲೇಮಾನಿ ಹತ್ಯೆ ಮಾಡಿದ ಮೇಲೆ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇನ್ನು ಇರಾಕ್ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ದಿಗ್ಬಂಧನ ಹೇರುವ ಬೆದರಿಕೆ ಒಡ್ಡಿರುವುದು ಸಹ ಷೇರು ಮಾರುಕಟ್ಟೆ ಮೇಲೆ ಪ್ರಭಾವ ಬೀರಿದೆ.
ಅಷ್ಟೇ ಅಲ್ಲ, ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ, ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿತ ಹಾಗೂ ಚಿನ್ನ- ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಆಗಿದೆ. ಈ ಎಲ್ಲವೂ ಇರಾನ್ ಹಾಗೂ ಅಮೆರಿಕ ಮಧ್ಯದ ಉದ್ವಿಗ್ನ ಪರಿಸ್ಥಿತಿಯ ಪರಿಣಾಮವಾಗಿಯೇ ಆಗಿದೆ.

ಸೆನ್ಸೆಕ್ಸ್ ನಲ್ಲಿ ಭಾರೀ ಕುಸಿತ ಕಂಡ ಟಾಪ್ ಐದು ಷೇರುಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಬಜಾಜ್ ಫೈನಾನ್ಸ್
ಇಂಡಸ್ ಇಂಡ್ ಬ್ಯಾಂಕ್
ಮಾರುತಿ ಸುಜುಕಿ
ಟಾಟಾ ಮೋಟಾರ್ಸ್
ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡ ಟಾಪ್ ಐದು ಷೇರುಗಳು
ಬಜಾಜ್ ಫೈನಾನ್ಸ್
ವೇದಾಂತ
ಜೀ ಎಂಟರ್ ಟೇನ್ ಮೆಂಟ್
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಯೆಸ್ ಬ್ಯಾಂಕ್
More From GoodReturns

T20 World Cup: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 96 ರನ್ಗಳ ಗೆಲುವು...ತಂಡಕ್ಕೆ ಸಿಕ್ಕ ಬಹುಮಾನಗಳೇನು?

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Silver Rate Today: ಭಾರತದಲ್ಲಿ ಪಾತಾಳಕ್ಕಿಳಿದ ಬೆಳ್ಳಿ; ಎಷ್ಟಿದೆ ಗೊತ್ತಾ ಇಂದಿನ ದರ?

LPG Crisis: ಭಯಪಡಬೇಡಿ, ಅವಸರದಲ್ಲಿ ಬುಕ್ ಮಾಡ್ಬೇಡಿ; ಗೃಹಬಳಕೆಯ ಎಲ್ಪಿಜಿ ಬಳಕೆದಾರರಿಗೆ ಕೇಂದ್ರ ಭರವಸೆ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Silver Rate Today: ಚಿನ್ನದಂತೆ ಬೆಳ್ಳಿ ದರವೂ ಭಾರೀ ಕುಸಿತ; ಒಂದೇ ದಿನ 10,000 ರೂ. ಇಳಿಕೆ

LPG shortage: ಮಧ್ಯಪ್ರಾಚ್ಯದ ಉದ್ವಿಗ್ನತೆ, ಬೆಂಗಳೂರು-ಮುಂಬೈನಲ್ಲಿ LPG ಕೊರತೆ ಆತಂಕ: ರೆಸ್ಟೋರೆಂಟ್ಗಳು ಮುಚ್ಚುವ ಭೀತಿ

LPG ಪೂರೈಕೆಯಲ್ಲಿ ಕೊರತೆ; ದೇಶದಲ್ಲಿ ಎಲ್ಪಿಜಿ ಉತ್ಪಾದನೆ 10% ಹೆಚ್ಚಳ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

ಶೀಘ್ರ ನಿವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯ...ಭಾರತೀಯ ಯುವಕರಿಗಾಗಿ FIRE ಚಳುವಳಿ ರಹಸ್ಯಗಳು!



Click it and Unblock the Notifications