ಚೀನಾವನ್ನು ಬಡಿಯಲು ಮೈ ಕೊಡವಿ ನಿಂತ ಭಾರತದಿಂದ 'ಲಕ್ಸೆಂಬರ್ಗ್ ಮಾಡೆಲ್'

ಚೀನಾದಿಂದ ಹೊರಗೆ ಬರುವ ಕಂಪೆನಿಗಳು ಸೀದಾ ಭಾರತದಲ್ಲಿ ನೆಲೆಯೂರಲು ಏನು ಬೇಕು ಅವೆಲ್ಲವನ್ನೂ ಕೇಂದ್ರ ಸರ್ಕಾರ ಆರಂಭಿಸಿದೆ. ಅದರ ಮೊದಲ ಹಂತವಾಗಿ ಭೂಮಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಯಾವುದೇ ಉದ್ಯಮದ ಆರಂಭಕ್ಕೆ ಭೂಮಿ ಅತಿ ಮುಖ್ಯವಾದದ್ದು. ಯುರೋಪ್ ನಲ್ಲಿರುವ ಲಕ್ಸೆಂಬರ್ಗ್ ದೇಶದ ವಿಸ್ತೀರ್ಣ ಎಷ್ಟಿದೆಯೋ ಅದರ ಎರಡು ಪಟ್ಟು ದೊಡ್ಡ ಜಾಗವನ್ನು ಕಂಪೆನಿಗಳಿಗೆ ನೀಡಲಾಗುತ್ತಿದೆ.

ಅದೇ ಹಾದಿಯಲ್ಲಿ ಸಾಗಿರುವ ಭಾರತವು ದೇಶದಾದ್ಯಂತ 11,40,611.259 ಎಕರೆ ಪ್ರದೇಶವನ್ನು ಗುರುತಿಸಿದೆ ಎಂದು ಈ ಬಗ್ಗೆ ಪಕ್ಕಾ ಮಾಹಿತಿ ಇರುವವರು ತಿಳಿಸಿದ್ದಾರೆ. ಇದರಲ್ಲಿ ಈಗಾಗಲೇ ಗುಜರಾತ್, ಮಹಾರಾಷ್ಟ್ರ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಕೈಗಾರಿಕೆಗಳಿಗೆ ಮೀಸಲಿಟ್ಟಿರುವ 2,84,494.8967 ಎಕರೆ ಪ್ರದೇಶವು ಒಳಗೊಂಡಿದೆ.

ಉದ್ಯಮಗಳಿಗೆ ಭಾರತದಲ್ಲಿ ಅನುಕೂಲಕರ ವಾತಾವರಣ

ಉದ್ಯಮಗಳಿಗೆ ಭಾರತದಲ್ಲಿ ಅನುಕೂಲಕರ ವಾತಾವರಣ

ವಿಶ್ವ ಬ್ಯಾಂಕ್ ನೀಡಿರುವ ಮಾಹಿತಿ ಪ್ರಕಾರ, ಲಕ್ಸೆಂಬರ್ಗ್ ಇರುವುದು 6,00,466.077 ಎಕರೆಯಷ್ಟು. ಅದರ ಎರಡು ಪಟ್ಟು ಭೂಮಿಯನ್ನು ಭಾರತದಲ್ಲಿ ಉದ್ಯಮಗಳಿಗೆ ಮೀಸಲಿಡಲಾಗಿದೆ. ಅದರ ಜತೆಗೆ ಹೂಡಿಕೆಗೆ ಅನುಕೂಲವಾದ ವಾತಾವರಣ ನಿರ್ಮಾಣ ಆಗಲಿದೆ. ಈಗ ಭಾರತದಲ್ಲಿ ಹೂಡಿಕೆ ಮಾಡಬೇಕು ಎಂದಿರುವ ಕಂಪೆನಿಗಳಿಗೆ ಸಮಸ್ಯೆ ಆಗಿರುವುದೇನೆಂದರೆ, ಭೂ ಸ್ವಾಧೀನ ಪ್ರಕ್ರಿಯೆ. ಸೌದಿ ಅರಾಮ್ಕೋ ಹಾಗೂ ಪೋಕ್ಸೋದಂಥ ಕಂಪೆನಿಗಳ ಹತಾಶೆಗೆ ಕಾರಣ ಇದೇ. ಆದ್ದರಿಂದಲೇ ರಾಜ್ಯ ಸರ್ಕಾರಗಳ ಜತೆ ಸಮನ್ವಯದಿಂದ ಕೆಲಸ ಮಾಡುತ್ತಿರುವ ಮೋದಿ ಸರ್ಕಾರ, ಹೂಡಿಕೆದಾರರಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದೆ. ಯಾವ ಚೀನಾವನ್ನು ಮ್ಯಾನುಫ್ಯಾಕ್ಚರಿಂಗ್ ನೆಲೆ ಎಂದು ಕರೆಯಲಾಗುತ್ತದೋ ಅಲ್ಲಿಂದ ಹೊರಬರುವ ಉದ್ಯಮಗಳಿಗೆ ಕೊರೊನಾದ ನಂತರ ಭಾರತದಲ್ಲಿ ಅವಶ್ಯಕ ವಾತಾವರಣ ನಿರ್ಮಿಸಲು ಮುಂದಾಗಿದೆ.

ಭೂಮಿ, ವಿದ್ಯುತ್, ರಸ್ತೆ ಸಂಪರ್ಕ

ಭೂಮಿ, ವಿದ್ಯುತ್, ರಸ್ತೆ ಸಂಪರ್ಕ

ಸದ್ಯಕ್ಕಂತೂ ಹೂಡಿಕೆದಾರರು ಭಾರತದಲ್ಲಿ ಕಾರ್ಖಾನೆ ಸ್ಥಾಪಿಸಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಹೂಡಿಕೆ ಮಾಡುವವರೇ ನೋಡಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಕೆಲವು ಪ್ರಕರಣವು ತಲೆ ನೋವಾಗುತ್ತಿದೆ. ಸಣ್ಣ ಪ್ರಮಾಣದ ಭೂ ಖರೀದಿ ಮಾಡುವವರ ಜತೆಗೂ ವ್ಯಾಪಾರ ಮಾಡುತ್ತಾ ಕೂರಬೇಕಾಗುತ್ತದೆ. ಭೂಮಿ, ವಿದ್ಯುತ್, ನೀರು, ರಸ್ತೆ ಸಂಪರ್ಕ ಇವೆಲ್ಲವನ್ನೂ ಒದಗಿಸುವುದರಿಂದ ಆರ್ಥಿಕತೆಗೆ ಹೂಡಿಕೆಯನ್ನು ಆಕರ್ಷಿಸಬಹುದು. ಕೊರೊನಾಗೆ ಮುಂಚೆಯೇ ಹೂಡಿಕೆ ನಿಧಾನವಾಗಿತ್ತು. ಈಗಂತೂ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ಹೊಸದಾಗಿ ಹೇಳುವುದಕ್ಕೆ ಏನೂ ಇಲ್ಲ. ಈಗ ಸರ್ಕಾರ ಹತ್ತು ವಲಯಗಳನ್ನು ಆಯ್ಕೆ ಮಾಡಿಕೊಂಡಿದೆ.

68 ಬಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ವಹಿವಾಟು

68 ಬಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ವಹಿವಾಟು

ಎಲೆಕ್ಟಿಕಲ್, ಫಾರ್ಮಾಸ್ಯುಟಿಕಲ್ಸ್, ವೈದ್ಯಕೀಯ ಉಪಕರಣಗಳು, ಎಲೆಕ್ಟ್ರಾನಿಕ್ಸ್, ಹೆವಿ ಎಂಜಿನಿಯರಿಂಗ್, ಸೌರ ಸಲಕರಣೆಗಳು, ಫುಡ್ ಪ್ರೊಸೆಸಿಂಗ್, ಕೆಮಿಕಲ್ಸ್ ಮತ್ತು ಟೆಕ್ಸ್ ಟೈಲ್ಸ್- ಇವು ಉತ್ಪಾದನಾ ವಲಯವನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ಇನ್ವೆಸ್ಟ್ ಇಂಡಿಯಾ ಎಂಬ ಸರ್ಕಾರಿ ಸಂಸ್ಥೆಗೆ ಜಪಾನ್, ಯು.ಎಸ್., ದಕ್ಷಿಣ ಕೊರಿಯಾ ಮತ್ತು ಚೀನಾದಿಂದ ಭಾರತಕ್ಕೆ ಉದ್ಯಮವನ್ನು ಸ್ಥಳಾಂತರ ಮಾಡುವ ಬಗ್ಗೆ ಕೇಳಲಾಗುತ್ತದೆ. ಭಾರತದ ಜತೆ ವ್ಯಾಪಾರ ಸಹಭಾಗಿತ್ವ ವಹಿಸಿರುವ ಟಾಪ್ ಹನ್ನೆರಡರ ಪೈಕಿ ನಾಲ್ಕು ದೇಶಗಳು ಈ ಪಟ್ಟಿಯಲ್ಲಿ ಇವೆ. ದ್ವಿಪಕ್ಷೀಯವಾಗಿ ಒಟ್ಟಾರೆ ವ್ಯಾಪಾರ ವಹಿವಾಟು 179.27 ಬಿಲಿಯನ್ ಅಮೆರಿಕನ್ ಡಾಲರ್ ವ್ಯವಹಾರ ಆಗಿದೆ. ಆ ನಾಲ್ಕು ದೇಶಗಳು ಏಪ್ರಿಲ್ 2000ದಿಂದ 2019ರ ಮಧ್ಯೆ 68 ಬಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ವಹಿವಾಟು ನಡೆಸಿವೆ ಎಂದು ಸರ್ಕಾರದ ದತ್ತಾಂಶಗಳು ತಿಳಿಸುತ್ತವೆ.

ಪ್ರಧಾನಿ ಮೋದಿ ಮಾತುಕತೆ

ಪ್ರಧಾನಿ ಮೋದಿ ಮಾತುಕತೆ

ಸ್ಪೆಷಲ್ ಎಕನಾಮಿಕ್ ಝೋನ್ಸ್ ನಲ್ಲಿ ಬಳಸದಿರುವ ಭೂಮಿ, ಸದ್ಯಕ್ಕೆ ಲಭ್ಯವಿದ್ದಲ್ಲಿ ಅದನ್ನು ಬಳಸಿಕೊಳ್ಳಲು ಈಗ ಮುಂದಾಗಿದ್ದಾರೆ. ವಿದೇಶ ಬಂಡವಾಳವನ್ನು ಸೆಳೆಯಲು ಸಮ್ಪೂರ್ಣವಾದ ಯೋಜನೆಯೊಂದನ್ನು ಸಿದ್ಧಪಡಿಸಲಾಗಿದ್ದು, ಈ ತಿಂಗಳ ಕೊನೆಗೆ ಅದು ಅಂತಿಮಗೊಳ್ಳಲಿದೆ. ವಿದೇಶಿ ಬಂಡವಾಳ ಸೆಳೆಯಲು ಆಯಾ ರಾಜ್ಯಗಳು ಪ್ರತ್ಯೇಕವಾದ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಲಾಗಿದೆ. ಏಪ್ರಿಲ್ 30ನೇ ತಾರೀಕಿನಂದು ಪ್ರಧಾನಿ ಮೋದಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಹೂಡಿಕೆದಾರರನ್ನು ಆಕರ್ಷಿಸಲು ಅಗತ್ಯ ಇರುವ ಕ್ರಮಗಳನ್ನು ಶೀಘ್ರವಾಗಿ ಪೂರೈಸುವುದಕ್ಕೆ ಸೂಚನೆ ನೀಡಿದ್ದಾರೆ. ಅಂದಹಾಗೆ ಆಂಧ್ರಪ್ರದೇಶ ಈ ವಿಚಾರದಲ್ಲಿ ಅತ್ಯುತ್ತಮ ಉದಾಹರಣೆ. ಈಗಾಗಲೇ ಜಪಾನ್, ಯು.ಎಸ್., ದಕ್ಷಿಣ ಕೊರಿಯಾದ ಕಂಪೆನಿಗಳ ಜತೆಗೆ ಅದು ಸಂಪರ್ಕದಲ್ಲಿದೆ. ಇನ್ನು ಉತ್ತರಪ್ರದೇಶ ಕೂಡ ಕೈಗಾರಿಕೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಭೂಮಿಯನ್ನು ವಿತರಿಸಲು ಆನ್ ಲೈನ್ ವ್ಯವಸ್ಥೆ ಅಭಿವೃದ್ಧಿ ಪಡಿಸುತ್ತಿದೆ. ರಕ್ಷಣೆ ಮತ್ತು ಏರೊಸ್ಪೇಸ್ ವಲಯಗಳಲ್ಲಿ ಹೂಡಿಕೆ ಸೆಳೆಯಲು ಜಾಗತಿಕ ಕಂಪೆನಿಗಳ ಜತೆಗೆ ಮಾತುಕತೆ ನಡೆಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+