ಎಫ್‌ಎಂಸಿಜಿಯ ಪ್ರಮುಖ ಸಂಸ್ಥೆಯಾದ ಬ್ರಿಟಾನಿಯಾ ಇಂಡಸ್ಟ್ರೀಸ್ ತನ್ನ ಸಂಸ್ಥೆಯನ್ನು ಮಹಿಳಾ ಉದ್ಯೋಗಿಗಳ ಪ್ರಮಾಣವನ್ನು ಶೇಕಡ 50ಕ್ಕೆ ಏರಿಸುವ ನಿರ್ಧಾರ ಮಾಡಿದೆ. ಪ್ರಸ್ತುತ ಶೇಕಡ 41ರಷ್ಟು ಮಹಿಳಾ ಉದ್ಯೋಗಿಗಳಿದ್ದು, ಈ ಪ್ರಮಾಣವನ್ನು ಶೇಕಡ 50ಕ್ಕೆ 2024ರ ಒಳಗಾಗಿ ಹೆಚ್ಚಿಸುವ ತೀರ್ಮಾನವನ್ನು ಸಂಸ್ಥೆ ಕೈಗೊಂಡಿದೆ. 15 ಉತ್ಪಾದನಾ ಪ್ಲ್ಯಾಂಟ್‌ಗಳನ್ನು ಹೊಂದಿರುವ ಸಂಸ್ಥೆಯು 35 ಕಾಂಟ್ರಾಕ್ಟ್ ಮತ್ತು ಪ್ರಾಂಚೈಸ್ ಕೇಂದ್ರಗಳನ್ನು ಭಾರತದಾದ್ಯಂತ ಹೊಂದಿದೆ.
ಭಾರತದ ಬ್ರಿಟಾನಿಯಾ ಸಂಸ್ಥೆಯಲ್ಲಿ ಒಂದು ಲಕ್ಷ ಜನರು ಉದ್ಯೋಗ ಮಾಡುತ್ತಿದ್ದು, ಪ್ರಸ್ತುತ ಬ್ರಿಟಾನಿಯಾದ ಒಟ್ಟು ಉದ್ಯೋಗಿಗಳಲ್ಲಿ ಶೇಕಡ 41ರಷ್ಟು ಉದ್ಯೋಗಿಗಳು ಮಹಿಳೆಯರು ಆಗಿದ್ದಾರೆ. ಆದರೆ ಇದನ್ನು 2024ರ ವೇಳೆಗೆ ಶೇಕಡ 50ಕ್ಕೆ ಏರಿಸುವ ಉದ್ದೇಶ ಸಂಸ್ಥೆಯದ್ದಾಗಿದೆ ಎಂದು ಬ್ರಿಟಾನಿಯಾ ಸಂಸ್ಥೆಯ ಉತ್ಪಾದಕಾ ಘಟಕದ ಮುಖ್ಯಸ್ಥ ಇಂದ್ರನೀಲ್ ಗುಪ್ತಾ ತಿಳಿಸಿದ್ದಾರೆ. ಇನ್ನು ಸ್ಂಸ್ಥೆಯು ಮದುರೈ ಘಟಕ ಒಂದರಲ್ಲೇ ಶೇಕಡ 65ರಷ್ಟು ಅಂದರೆ 1,400 ಉದ್ಯೋಗಿಗಳನ್ನು ಹೊಂದಿದೆ ಎಂಬುವುದು ಗಮನಾರ್ಹ.

ಮದುರೈ ಘಟಕದಲ್ಲಿ ಒಟ್ಟಾಗಿ 1400 ಉದ್ಯೋಗಿಗಳಿದ್ದು, ಈ ಪೈಕಿ ಮಹಿಳಾ ಉದ್ಯೋಗೊಗಳ ಪ್ರಮಾಣವನ್ನು 2024ರ ವೇಳೆಗೆ ಶೇಕಡ 70ಕ್ಕೆ ಏರಿಕೆ ಮಾಡುವ ನಿರ್ಧಾರವನ್ನು ಸಂಸ್ಥೆಯು ಕೈಗೊಂಡಿದೆ. ಹಿರಿಯ ಪತ್ರಕರ್ತರ ಮಾಹಿತಿ ಪ್ರಕಾರ ಈ ಘಟಕದಲ್ಲಿಯೇ 190 ಟನ್‌ಗಳನ್ನು ಉತ್ಪಾದನೆ ನಡೆಸಲಾಗುತ್ತಿದೆ. ಬ್ರಿಟಾನಿಯಾ ಸಂಸ್ಥೆಯ ಉತ್ಪಾದಕಾ ಘಟಕದ ಮುಖ್ಯಸ್ಥ ಇಂದ್ರನೀಲ್ ಗುಪ್ತಾ ಅವರ ಬಳಿಕ ಬ್ರಿಟಾನಿಯಾ ಸಂಸ್ಥೆಯು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿಸುವ ಕಾರಣವನ್ನು ಕೂಡಾ ನೀಡಿದ್ದಾರೆ.
ಮಹಿಳಾ ಉದ್ಯೋಗಿಗಳ ಪ್ರಮಾಣ ಹೆಚ್ಚಳಕ್ಕೆ ಕಾರಣ
"ಮಹಿಳೆಯರು ಹೆಚ್ಚಾಗಿ ಶುಚಿತ್ವವನ್ನು ಕಾಪಾಡಿಕೊಳ್ಳುತ್ತಾರೆ. ಇಂತಹ ಕಾರ್ಯಗಳಿಗೆ ಮಹಿಳೆಯರು ಹೆಚ್ಚಾಗಿ ಸೂಕ್ತವಾಗಿರುತ್ತಾರೆ. ಆಹಾರ ಉತ್ಪಾದನಾ ಕಾರ್ಯಗಳಲ್ಲಿ ಶುಚಿತ್ವ ಅತೀ ಮುಖ್ಯವಾಗುತ್ತದೆ. ಹಾಗೆಯೇ ಶಿಸ್ತು ಕೂಡಾ ಅತೀ ಮುಖ್ಯವಾಗುತ್ತದೆ. ಇವರೆಡನ್ನು ನೋಡಿದಾಗ ಪುರಷರಿಗಿಂತ ಅಧಿಕ ಮಹಿಳೆಯರಿಗೆ ಅಧಿಕವಾಗಿ ಶುಚಿತ್ವ, ಶಿಸ್ತು ಇರುತ್ತದೆ. ಅಧಿಕ ಮಹಿಳಾ ಉದ್ಯೋಗಿಗಳು ಇರುವುದರಿಂದ ನಮ್ಮ ಘಟಕಗಳಲ್ಲಿ ಉತ್ಪಾದನೆಗೆ ಸಹಾಯಕವಾಗಿದೆ," ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಸಂಸ್ಥೆಯ ಸ್ಥಳೀಯ ಉತ್ಪಾದನಾ ಮುಖ್ಯಸ್ಥ ಸಿ ಎಸ್ ಗುರಪ್ರಸಾದ್, "ಬ್ರಿಟಾನಿಯಾ ಸಂಸ್ಥೆಗೆ ವೈವಿಧ್ಯತೆ ಅತೀ ಮುಖ್ಯವಾಗಿದೆ. ಅತೀ ಹೆಚ್ಚು ಜನರು ಕೃಷಿ ಮಾಡುವ ಕುಟುಂಬಕ್ಕೆ ಸೇರಿದವರು ಆಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಈ ಮಹಿಳೆಯರು ನಮಗೆ ಹೆಚ್ಚಾಗಿ ಸಹಾಯ ಮಾಡಿದ್ದಾರೆ. ಅವರ ಕುಟುಂಬ ಉದ್ಯೋಗ ಕಳೆದುಕೊಂಡಾಗ ಅವರಿಗೂ ಸಹಾಯವಾಗಿದೆ. ಇದು ಮಾತ್ರದಲ್ಲಿದೆ ಸಂಸ್ಥೆಯಲ್ಲಿ ಉತ್ತಮ ವಾತಾವರಣವಿದೆ, ಸುರಕ್ಷತೆಯಿದೆ. ಉದ್ಯೋಗಿಗಳು 5ರಿಂದ 20 ವರ್ಷ ಅನುಭವ ಹೊಂದಿರುವವರು ಇದ್ದಾರೆ," ಎಂದಿದ್ದಾರೆ.


Click it and Unblock the Notifications