ಭಾರತದಲ್ಲಿನ ಬಹುಪಾಲು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ತಾತ್ಕಾಲಿಕ ಉದ್ಯೋಗಿಗಳ ಕನಿಷ್ಠ ವೇತನ ನೀತಿಯನ್ನು ಹೊಂದಿಲ್ಲ ಎಂದು ಫೇರ್‌ವರ್ಕ್ ಇಂಡಿಯಾವು ಹೊಸ ವರದಿಯಲ್ಲಿ ಉಲ್ಲೇಖಿಸಿದೆ. ಪ್ಲಾಟ್‌ಫಾರ್ಮ್ ಎಕಾನಮಿಯಲ್ಲಿ ಲೇಬರ್ ಸ್ಟ್ಯಾಂಡರ್ಡ್ಸ್ ಶೀರ್ಷಿಕೆಯ ಹೊಸ ವರದಿಯಲ್ಲಿ ಈ ಬಗ್ಗೆ ಫೇರ್‌ವರ್ಕ್ ಇಂಡಿಯಾವು ಉಲ್ಲೇಖ ಮಾಡಿದೆ.
ಫೇರ್‌ವರ್ಕ್ ಇಂಡಿಯಾವು ಒಟ್ಟಾಗಿ 12 ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕ ನೀತಿ, ನಿಯಮಗಳ ಬಗ್ಗೆ ಅಧ್ಯಯನ ಮಾಡಿ ಈ ವರದಿಯನ್ನು ಮಾಡಿದೆ. ಅಮೆಜಾನ್ ಫ್ಲೆಕ್ಸ್, ಬಿಗ್‌ಬಾಸ್ಕೆಟ್, ಬ್ಲೂಸ್ಮಾರ್ಟ್, ಡೊನ್ಜೊ, ಫ್ಲಿಪ್‌ಕಾರ್ಟ್, ಓಲಾ, ಪೋರ್ಟರ್, ಸ್ವಿಗ್ಗಿ, ಉಬರ್, ಅರ್ಬನ್ ಕಂಪನಿ, ಝೆಪ್ಟೋ ಮತ್ತು ಜೊಮಾಟೊ ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕ ನೀತಿಯನ್ನು ಪರಿಶೀಲನೆ ಮಾಡಲಾಗಿದೆ.

ಇಷ್ಟು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಪೈಕಿ ಕೇವಲ ಬಿಗ್ ಬಾಸ್ಕೆಟ್, ಫ್ಲಿಪ್‌ಕಾರ್ಟ್ ಮತ್ತು ಅರ್ಬನ್ ಕಂಪನಿ ಮಾತ್ರ ತಾತ್ಕಾಲಿಕ ಉದ್ಯೋಗಿಗಳ ಕನಿಷ್ಠ ವೇತನ ನೀತಿಯನ್ನು ಪಾಲಿಸುತ್ತಿದೆ ಎಂದು ಅಧ್ಯಯನದಲ್ಲಿ ಕಂಡು ಬಂದಿದೆ. ಉಳಿದಂತೆ ಯಾವುದೆ ಕಂಪನಿಗಳು ಇದರ ಪಾಲನೆ ಮಾಡುತ್ತಿಲ್ಲ. ಈ ನೀತಿ ವಿಚಾರದಲ್ಲಿ ಮೌನವಾಗಿದೆ ಎಂದು ವರದಿ ಹೇಳಿದೆ.
ಆದರೆ ಪರಿಶೀಲನೆ ನಡೆಸಿದ ಯಾವುದೇ ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕರು ಸ್ಥಳೀಯ ಕನಿಷ್ಠ ವೇತನವನ್ನು ಗಳಿಸುತ್ತಾರೆ ಎಂಬುವುದಕ್ಕೆ ಸಾಕಷ್ಟು ಪುರಾವೆಗಳು ಇಲ್ಲ. ತಾತ್ಕಾಲಿಕ ಉದ್ಯೋಗಿಗಳಿಗೆ ನೀಡುವ ವೇತನ ವಿಚಾರದಲ್ಲಿ ಐದು ಅಂಕದಲ್ಲಿ ಲೆಕ್ಕಾಚಾರ ಮಾಡಿದರೆ ಕೇವಲ ಎರಡು ಅಂಕಗಳನ್ನು ಈ ಪ್ಲಾಟ್‌ಫಾರ್ಮ್‌ಗಳಿಗೆ ನೀಡಬಹುದು ಎಂದು ವರದಿ ತಿಳಿಸಿದೆ.
ಸುರಕ್ಷತಾ ಕ್ರಮ, ಕೆಲಸದ ವೇಳೆ ಗಾಯವಾದರೆ ವೈದ್ಯಕೀಯ ವಿಮಾ ರಕ್ಷಣೆ, ಕಾರ್ಮಿಕರಿಗೆ ಡೇಟಾ ರಕ್ಷಣೆ, ಅಥವಾ ಅವರ ಮೇಲೆ ಪರಿಣಾಮ ಬೀರುವ ನೀತಿಗಳ ವಿಚಾರದಲ್ಲಿ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಸಾಕಷ್ಟು ಅಂತರಗಳು ಇದೆ. ಮುಖ್ಯವಾಗಿ ಕಾರ್ಮಿಕರು ತಮ್ಮನ್ನು ವ್ಯಕ್ತಪಡಿಸಲು ಸಾಮೂಹಿಕ ಸಂಸ್ಥೆ ಅಥವಾ ಟ್ರೇಡ್ ಯೂನಿಯನ್ ಇಲ್ಲದ ಕಾರಣ ಕಂಪನಿಗಳು ನ್ಯಾಯಯುತ ಪ್ರಾತಿನಿಧ್ಯ ವಿಚಾರದಲ್ಲಿ ಅಂಕಗಳನ್ನು ಗಳಿಸಲಿಲ್ಲ.
ಹತ್ತರಲ್ಲಿ ಯಾವ ಕಂಪನಿಗೆ ಎಷ್ಟು ಅಂಕ?
"ದೇಶದಾದ್ಯಂತ ಪ್ಲಾಟ್‌ಫಾರ್ಮ್ ಕೆಲಸಗಾರರ ಪ್ರಮಾಣದಲ್ಲಿ ಏರಿಕೆಯಾಗಿದೆ. ಆದರೆ ಕಳೆದ ನಾಲ್ಕು ವರ್ಷಗಳಲ್ಲಿ, ಯಾವುದೇ ಪ್ಲಾಟ್‌ಫಾರ್ಮ್‌ನಲ್ಲಿ ಉದ್ಯೋಗಿಗಳಿಗೆ ಬೇಕಾದ ಒಂದು ಸಮಿತಿಯಿಲ್ಲ, ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ," ಎಂದು ವರದಿ ಹೇಳಿದೆ. ಒಟ್ಟಾರೆಯಾಗಿ, ಬಿಗ್ ಬಾಸ್ಕೆಟ್ 10 ರಲ್ಲಿ ಆರು ಅಂಕಗಳೊಂದಿಗೆ ಅತೀ ಅಧಿಕ ಅಂಕ ಗಳಿಸಿದ ಸಂಸ್ಥೆ ಎನಿಸಿಕೊಂಡಿದೆ.
ನಂತರದ ಸ್ಥಾನದಲ್ಲಿ ಜೊಮ್ಯಾಟೊ, ಅರ್ಬನ್ ಕಂಪನಿ ಮತ್ತು ಜೆಪ್ಟೊ ಕಾಣಿಸಿಕೊಂಡಿದೆ. ಇದೇ ಸಮಯದಲ್ಲಿ ಓಲಾ ಮತ್ತು ಪೋರ್ಟರ್ ಯಾವುದೇ ಪ್ಯಾರಾಮೀಟರ್‌ಗಳಲ್ಲಿಯೂ ಶೂನ್ಯ ಅಂಕ ಪಡೆದುಕೊಂಡಿದೆ. ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿದ ಪ್ಲಾಟ್‌ಫಾರ್ಮ್‌ಗಳಾಗಿದೆ. ಉಬರ್ ಕೇವಲ ಒಂದು ಅಂಕ ಪಡೆದುಕೊಂಡಿದೆ. ಇನ್ನು ಮೊದಲ ಬಾರಿಗೆ ಪಟ್ಟಿಯಲ್ಲಿ ಕಾಣಿಸಿಕೊಂಡ ಬ್ಲ್ಯೂಸ್ಮಾರ್ಟ್ ಹತ್ತರಲ್ಲಿ ಐದು ಅಂಕಗಳನ್ನು ಪಡೆದುಕೊಂಡಿದೆ.


Click it and Unblock the Notifications