ಕ್ರಿಸ್‌ಮಸ್ ಹಾಗೂ ಹೊಸ ವರ್ಷ ಹತ್ತಿರ ಬರುವಾಗಲೇ ರೈಲು ಪ್ರಯಾಣಿಕರಿಗೆ ದೊಡ್ಡ ತಲೆನೋವು ಎದುರಾಗಿದೆ. ಒಂದಲ್ಲ...ಎರಡೆರಡು ತಲೆನೋವು ಎನ್ನಬಹುದು. ಅದೇನೆಂದರೆ ಒಂದೆಡೆ ದೂರದ ಪ್ರಯಾಣದ ಟಿಕೆಟ್ ದರವನ್ನು ಹೆಚ್ಚಿಸಲಾಗಿದೆ. ಇನ್ನೊಂದೆಡೆ, ನಿಗದಿತ ಮಿತಿಗಿಂತ ಹೆಚ್ಚು ಲಗೇಜ್ ಹೊತ್ತೊಯ್ಯುವ ಪ್ರಯಾಣಿಕರ ಮೇಲೆ ಕಠಿಣ ಕ್ರಮ ಜಾರಿಗೊಳಿಸಲಾಗುತ್ತಿದೆ. ಇದರ ಪರಿಣಾಮವಾಗಿ, ರೈಲು ಪ್ರಯಾಣ ಮಾತ್ರವಲ್ಲ, ಹೆಚ್ಚು ಸಾಮಾನು ಸಾಗಿಸುವುದೂ ಈಗ ದುಬಾರಿಯಾಗುತ್ತಿದೆ.

ಭಾರತೀಯ ರೈಲ್ವೆ ಡಿಸೆಂಬರ್ 26 ರಿಂದ ಹೊಸ ಪ್ರಯಾಣ ದರಗಳನ್ನು ಜಾರಿಗೊಳಿಸಲು ನಿರ್ಧರಿಸಿದೆ. ಸಾಮಾನ್ಯ ವರ್ಗದಲ್ಲಿ 215 ಕಿಲೋಮೀಟರ್‌ಗಿಂತ ಹೆಚ್ಚಿನ ದೂರ ಪ್ರಯಾಣಿಸಿದರೆ, ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ಸ್ಲೀಪರ್ ಕ್ಲಾಸ್ ಹಾಗೂ ಮೇಲ್-ಎಕ್ಸ್‌ಪ್ರೆಸ್ ರೈಲುಗಳ ಎಲ್ಲಾ ಎಸಿ ವರ್ಗಗಳಲ್ಲಿ, ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳವಾಗಲಿದೆ. ಉದಾಹರಣೆಗೆ, 500 ಕಿಲೋಮೀಟರ್ ದೂರದ ಸ್ಲೀಪರ್ ಪ್ರಯಾಣಕ್ಕೆ ಈಗ ಸುಮಾರು 10 ರೂಪಾಯಿ ಹೆಚ್ಚಾಗಿ ಪಾವತಿಸಬೇಕಾಗುತ್ತದೆ.
ಇದಕ್ಕೊಂದಿಗೇ, ರೈಲುಗಳಲ್ಲಿ ಲಗೇಜ್ ಸಾಗಿಸುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ವಿಮಾನಗಳಲ್ಲಿ ಇರುವಂತೆ, ರೈಲುಗಳಲ್ಲಿಯೂ ನಿಗದಿತ ತೂಕ ಮಿತಿಗಿಂತ ಹೆಚ್ಚು ಲಗೇಜ್ ಹೊತ್ತೊಯ್ಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಹೆಚ್ಚುವರಿ ಲಗೇಜ್‌ನಿಂದ ಸಹಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಈ ಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ರೈಲ್ವೆ ಸ್ಪಷ್ಟಪಡಿಸಿದೆ.
ರೈಲ್ವೆ ಸಚಿವಾಲಯದ ಎಡಿಜಿ ಧರ್ಮೇಂದ್ರ ತಿವಾರಿ ಅವರ ಹೇಳಿಕೆಯಂತೆ, ಇದು ಯಾವುದೇ ಹೊಸ ಆದೇಶವಲ್ಲ. ಈಗಾಗಲೇ ಇದ್ದ ನಿಯಮಗಳನ್ನೇ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಎಲ್ಲಾ ತರಗತಿಗಳಿಗೆ ವಿಭಿನ್ನ ತೂಕ ಮಿತಿಗಳನ್ನು ನಿಗದಿಪಡಿಸಲಾಗಿದೆ ಮತ್ತು ಅವುಗಳನ್ನು ಪಾಲಿಸುವುದು ಪ್ರಯಾಣಿಕರ ಕರ್ತವ್ಯವಾಗಿದೆ.
ಎಸಿ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವವರು ಗರಿಷ್ಠ 70 ಕೆಜಿ ವರೆಗೆ ಲಗೇಜ್ ಸಾಗಿಸಬಹುದು. ಇದಕ್ಕೆ ಹೆಚ್ಚುವರಿಯಾಗಿ 15 ಕೆಜಿ ಲಗೇಜ್‌ಗೆ ಅವಕಾಶವಿದೆ. ಈ ಮಿತಿಯನ್ನು ಮೀರಿದರೆ, ಪಾರ್ಸೆಲ್ ವ್ಯಾನ್ ಮೂಲಕ ಗರಿಷ್ಠ 65 ಕೆಜಿ ವರೆಗೆ ಲಗೇಜ್ ಬುಕ್ ಮಾಡಿ ಸಾಗಿಸಬೇಕು. ಎಸಿ ಸೆಕೆಂಡ್ ಕ್ಲಾಸ್‌ನಲ್ಲಿ 50 ಕೆಜಿ ಲಗೇಜ್ ಜೊತೆಗೆ 10 ಕೆಜಿ ಹೆಚ್ಚುವರಿ ಅನುಮತಿ ಇದೆ. ಪಾರ್ಸೆಲ್ ವ್ಯಾನ್‌ನಲ್ಲಿ 30 ಕೆಜಿ ವರೆಗೆ ಲಗೇಜ್ ಬುಕ್ ಮಾಡಬಹುದು.
ಎಸಿ ತರ್ಡ್ ಕ್ಲಾಸ್ ಅಥವಾ ಎಸಿ ಚೇರ್ ಕಾರ್ ಪ್ರಯಾಣಿಕರಿಗೆ 40 ಕೆಜಿ ಲಗೇಜ್ ಮತ್ತು ಹೆಚ್ಚುವರಿ 10 ಕೆಜಿ ಅನುಮತಿಸಲಾಗಿದೆ. ಇದಕ್ಕೂ ಮೀರಿದ ತೂಕದ ಲಗೇಜ್‌ನ್ನು ಪಾರ್ಸೆಲ್ ವ್ಯಾನ್‌ನಲ್ಲಿ ಬುಕ್ ಮಾಡಿ ಸಾಗಿಸಬೇಕು. ಸ್ಲೀಪರ್ ಕ್ಲಾಸ್‌ನಲ್ಲಿ 40 ಕೆಜಿ ಲಗೇಜ್ ಮತ್ತು ಹೆಚ್ಚುವರಿ 10 ಕೆಜಿ ಅನುಮತಿ ಇದೆ. ಬುಕಿಂಗ್ ಮೂಲಕ 70 ಕೆಜಿ ವರೆಗೆ ಹೆಚ್ಚುವರಿ ಲಗೇಜ್ ಸಾಗಿಸಲು ಅವಕಾಶ ನೀಡಲಾಗಿದೆ.
ಸೆಕೆಂಡ್ ಕ್ಲಾಸ್ ಪ್ರಯಾಣಿಕರು 35 ಕೆಜಿ ಲಗೇಜ್ ಜೊತೆಗೆ 10 ಕೆಜಿ ಹೆಚ್ಚುವರಿ ಸಾಗಿಸಬಹುದು. ಪಾರ್ಸೆಲ್ ವ್ಯಾನ್ ಮೂಲಕ 60 ಕೆಜಿ ವರೆಗೆ ಲಗೇಜ್ ಬುಕ್ ಮಾಡಬಹುದು. ಹೊಸ ಮಾರ್ಗಸೂಚಿಗಳ ಪ್ರಕಾರ, ನಿಗದಿತ ಮಿತಿಗಿಂತ ಹೆಚ್ಚು ಹಾಗೂ ಬುಕ್ ಮಾಡದೇ ಲಗೇಜ್ ಸಾಗಿಸುವಾಗ ಪ್ರಯಾಣಿಕರು ಸಿಕ್ಕಿಬಿದ್ದರೆ, ಆ ಲಗೇಜ್‌ಗೆ ಆರು ಪಟ್ಟು ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಒಟ್ಟಾರೆ, ರೈಲು ಪ್ರಯಾಣಿಕರು ಈಗ ಟಿಕೆಟ್ ದರ ಮಾತ್ರವಲ್ಲ, ತಮ್ಮ ಲಗೇಜ್ ತೂಕದ ಮೇಲೂ ಹೆಚ್ಚಿನ ಗಮನ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿಯಮಗಳನ್ನು ಮುಂಚಿತವಾಗಿ ತಿಳಿದುಕೊಂಡು ಪ್ರಯಾಣಿಸಿದರೆ, ಹೆಚ್ಚುವರಿ ಶುಲ್ಕ ಹಾಗೂ ತೊಂದರೆಗಳನ್ನು ತಪ್ಪಿಸಿಕೊಳ್ಳಬಹುದು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications