ಮೆಟ್ರೋ ಆಯ್ತು, ಬಿಎಂಟಿಸಿ, ಆಯ್ತು ಇಷ್ಟು ಸಾಲದು ಅಂತ ಕುಡಿಯುವ ಹಾಲು, ನೀರಿನ ಬೆಲೆ ಏರಿಕೆ ಆಯ್ತು.. ಕೇಂದ್ರ ಹಾಗೂ ರಾಜ್ಯಸರ್ಕಾರಗಳೆರಡು ನಾ ಮುಂದು ತಾ ಮುಂದು ಅಂತ ಬೆಲೆ ಏರಿಕೆಯ ಹೊರೆಯನ್ನು ವರ್ಷದ ಮೊದಲ ದಿನದಿಂದಲ್ಲೂ ಏರಿಕೆ ಮಾಡುತ್ತಲೇ ಬಂದಿದೆ. ಆದರೆ ಇದೀಗ ಭಾರತೀಯ ರೈಲ್ವೆ ಕೂಡ ಪ್ರಯಾಣ ದರವನ್ನು ಏರಿಕೆ ಮಾಡಲು ಬಹಳ ವರ್ಷಗಳ ಬಳಿಕ ತೀರ್ಮಾನ ವನ್ನು ಕೈಗೊಳ್ಳುತ್ತಿದೆ.
ಹೌದು,ಬಹಳ ವರ್ಷಗಳ ಬಳಿಕ ರೈಲು ಪ್ರಯಾಣಿಕರಿಗೆ ಪ್ರಯಾಣ ಸ್ವಲ್ಪ ದುಬಾರಿಯಾಗಬಹುದು.ಯಾಕೆಂದರೆ ರೈಲ್ವೆ ಮಂಡಳಿಯ ಅಧಿಕೃತ ಮೂಲಗಳ ಪ್ರಕಾರ, ಮುಂದಿನ ತಿಂಗಳಿಂದ ರೈಲು ದರಗಳಲ್ಲಿ ಸ್ವಲ್ಪ ಬದಲಾವಣೆಯಾಗುವಂತಹ ಸಾಧ್ಯತೆಯಿದೆ ಹೆಚ್ಚಿಗಿದೆ. ಆದರಿಂದ ರೈಲ್ವೆ ಪ್ರಯಾಣದ ದರಗಳನ್ನು ಹೆಚ್ಚಳವಾಗುತ್ತಿದ್ದು,ಹೊಸ ದರಗಳು ಜುಲೈ 1, 2025 ರಿಂದ ಜಾರಿಗೆ ಬರುವ ನಿರೀಕ್ಷೆಯಿದೆ. ದೇಶದಲ್ಲಿ ಪ್ರತಿದಿನ ಸುಮಾರು 2 ಕೋಟಿಗೂ ಅಧಿಕ ಜನರು ರೈಲ್ವೆಯಲ್ಲಿ ಪ್ರಯಾಣ ಮಾಡ್ತಾರೆ. ರೈಲ್ವೆ ಪ್ರಯಾಣವನ್ನು ಮಾಡವ ಎಲ್ಲರಿಗೂ ಬೆಲೆ ಏರಿಕೆಯ ಬಿಸಿ ತಟ್ಟಬಹುದು. ಅದರಲ್ಲೂ ಹೆಚ್ಚಾಗಿ ಬಡವರು, ಮಧ್ಯಮ ವರ್ಗದ ಜನರು ಸಂಚಾರಕ್ಕೆ ರೈಲುಗಳನ್ನೇ ಹೆಚ್ಚಿಗೆ ಅವಲಂಬಿಸಿದ್ದಾರೆ ಇವರಿಗೂ ಕೂಡ ಬೆಲೆ ಏರಿಕೆ ಹೊರೆಯಾಗಬಹುದು.

ರೈಲ್ವೆ ಸಚಿವಾಲಯದ ಮೂಲಗಳ ಪ್ರಕಾರ, ಸಾಮಾನ್ಯ ಮೇಲ್/ಎಕ್ಸ್‌ಪ್ರೆಸ್ ರೈಲುಗಳ (ನಾನ್-ಎಸಿ) ದರಗಳು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಬಹುದು. ಅದೇ ಸಮಯದಲ್ಲಿ, ಎಸಿ ದರ್ಜೆಯಲ್ಲಿ ಪ್ರಯಾಣಿಸುವ ಪ್ರಯಾಣಿಕರು ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚು ಪಾವತಿಯನ್ನು ಮಾಡಬೇಕಾಗುತ್ತದೆ.
ಜುಲೈ 1 ರಿಂದ ದೆಹಲಿಯಿಂದ ಪಾಟ್ನಾಗೆ ಪ್ರಯಾಣಿಸುವ ಪ್ರಯಾಣಿಕರು ಎಸಿ ದರ್ಜೆಯಲ್ಲಿ ಸುಮಾರು 20 ರೂ. ಮತ್ತು ಎಸಿಯೇತರ ದರ್ಜೆಯಲ್ಲಿ ಸುಮಾರು 10 ರೂ. ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ. ಅದೇ ರೀತಿ, ದೆಹಲಿಯಿಂದ ಮುಂಬೈಗೆ ಪ್ರಯಾಣಿಸುವ ಪ್ರಯಾಣಿಕರು ಎಸಿ ದರ್ಜೆಯಲ್ಲಿ ಸುಮಾರು 28 ರೂ. ಮತ್ತು ಎಸಿಯೇತರ ದರ್ಜೆಯಲ್ಲಿ ಸುಮಾರು 14 ರೂ. ಹೆಚ್ಚುವರಿಯಾಗಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
ಎಲ್ಲಾ ಪ್ರಯಾಣಿಕರ ಮೇಲೂ ಬೆಲೆ ಏರಿಕೆ ಪರಿಣಾಮ ಬೀರುವುದಿಲ್ಲ
ರೈಲ್ವೆ ಸಚಿವಾಲಯ ಸಬ್-ಅರ್ಬನ್ (Suburban) ರೈಲುಗಳಲ್ಲಿ ಟಿಕೆಟ್ ದರ ಏರಿಕೆ ಇಲ್ಲ. 500 ಕಿ.ಮೀ.ವರೆಗೆ ಸೆಕೆಂಡ್ ಕ್ಲಾಸ್ ಬೋಗಿಗಳಲ್ಲಿ ಯಾವುದೇ ದರ ಕೂಡ ಏರಿಕೆ ಇಲ್ಲ. 500 ಕಿ.ಮೀ.ಗಿಂತ ಹೆಚ್ಚಿನ ದೂರದ ಪ್ರಯಾಣಗಳಿಗೆ ಮಾತ್ರ ಪ್ರತಿ ಕಿಲೋಮೀಟರಿಗೆ ಅರ್ಧ ಪೈಸೆ ಏರಿಕೆ ಮಾಡಲಾಗುತ್ತದೆ. ಮತ್ತು ಪ್ರತಿ ತಿಂಗಳ ಸೀಸನ್ ಟಿಕೆಟ್‌ಗಳ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ.
ಶೀಘ್ರದಲ್ಲೇ ಅಧಿಕೃತವಾಗಿ ರೈಲ್ವೆ ದರ ಏರಿಕೆಯ ತಿರ್ಮಾನ ಘೋಷಣೆ ಮಾಡುವ ಸಾಧ್ಯತೆ ಇದೆ.
ತತ್ಕಾಲ್ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆಗಳು
ತತ್ಕಾಲ್ ಟಿಕೆಟ್ ಬುಕಿಂಗ್ ಬಗ್ಗೆ ರೈಲ್ವೆ ಕೂಡ ಪ್ರಕಟಣೆ ಹೊರಡಿಸಿದೆ. ಜುಲೈ 1, 2025 ರಿಂದ ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು ಆಧಾರ್ ಕಾರ್ಡ್ ನ್ನು ಕಡ್ಡಾಯವನ್ನು ಮಾಡಿದೆ. ಈ ಕುರಿತು ರೈಲ್ವೆ ಸಚಿವಾಲಯವು ಜೂನ್ 10 ರಂದು ಆದೇಶವನ್ನು ಹೂರಡಿಸಲಾಗಿತ್ತು.
ಸಾಮಾನ್ಯ ಜನರಿಗೆ ತತ್ಕಾಲ್ ಯೋಜನೆಯ ಪ್ರಯೋಜನಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ. ನೀವು ಜುಲೈ 1 ರಿಂದ, IRCTC (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಿಂದ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಆಧಾರ್ ಕಾರ್ಡ್‌ನೊಂದಿಗೆ ದೃಢೀಕರಿಸುವುದು ಅಗತ್ಯವಾಗಿದೆ ಎಂದು ರೈಲ್ವೆ ಹೊರಡಿಸಿದ ಸೂಚನೆಯಲ್ಲಿ ತಿಳಿಸಲಾಗಿದೆ. ಆಧಾರ್ ಕಾರ್ಡ್ ಇಲ್ಲದೆ ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಿಲ್ಲ.
ಜುಲೈ 15, 2025 ರಿಂದ, ತತ್ಕಾಲ್ ಟಿಕೆಟ್‌ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಮತ್ತೊಂದು ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಅವರು ಆಧಾರ್ ಕಾರ್ಡ್ ಮೂಲಕ OTP (ಒನ್ ಟೈಮ್ ಪಾಸ್‌ವರ್ಡ್) ನೊಂದಿಗೆ ದೃಢೀಕರಿಸಬೇಕಾಗುತ್ತದೆ. ಈ OTP ಅನ್ನು ಅವರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ.


Click it and Unblock the Notifications