ರೈಲ್ವೆಯು ಪ್ರಯಾಣಿಕರೇ ಇಲ್ಲಿ ಕೇಳಿ.. ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ 'ರೈಲ್ ಒನ್' ಸೂಪರ್ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ರೈಲ್ವೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಸೇವೆಗಳು ಒಂದೇ ಕಡೆ ಸೂರಿನ ಅಡಿಯಲ್ಲಿ ನಿಮ್ಮಗೆ ಮಾಹಿತಿ ಸಿಗುತ್ತದೆ.ಹಾಗದ್ರೆ ರೈಲ್ ಒನ್ ಅಪ್ಲಿಕೇಶನ್‌ನಿಂದ ಏನೆಲ್ಲಾ ಉಪಯೋಗವಿದೆ..?ಇದು ಹೇಗೆ ಕಾರ್ಯವನ್ನು ನಿರ್ವಹಿಸುತ್ತದೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಲಿ ಎಂದು ತನ್ನ ಸೇವೆಗಳಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಹೆಚ್ಚಾಗಿ ಅಳವಡಿಸುಕೊಳ್ಳತ್ತದೆ.ಇದೀಗ 'ರೈಲ್ ಒನ್' ಎಂಬ ಅಪ್ಲಿಕೇಶನ್ ಅನ್ನು ಇಂದು ಬಿಡುಗಡೆ ಮಾಡಿದೆ. ಇದರಿಂದಾಗಿ ಪ್ರಯಾಣಿಕರು ಯಾವುದೇ ಮಾಹಿತಿಯನ್ನು ಕುಳಿತುಕೊಂಡಿರುವ ಸ್ಥಳದಲ್ಲಿ ಮಾಡಿದುಕೊಳ್ಳಬಹುದು.

ರೈಲ್ ಒನ್ ಆ್ಯಪ್: ಪ್ರಯಾಣಿಕರಿಗೆ ಒಂದು ಸಮಗ್ರ ವೇದಿಕೆ
ಹೊಸ ರೈಲ್ ಒನ್ ಅಪ್ಲಿಕೇಶನ್‌ನಲ್ಲಿ ಎಲ್ಲಾ ಪ್ರಯಾಣಿಕ ಸೇವೆಗಳು ಒಂದೇ ಸೂರಿನಡಿಯಲ್ಲಿ ಮಾಹಿತಿ ಲಭ್ಯವಾಗಲಿವೆ. ಐಆರ್‌ಸಿಟಿಸಿಯಿಂದ ಕಾಯ್ದಿರಿಸಿದ, ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್‌ಗಳನ್ನು ಕಾಯ್ದಿರಿಸುವುದು, ಪಿಎನ್‌ಆರ್ ಮತ್ತು ರೈಲಿನ ಸ್ಥಿತಿ, ಕೋಚ್ ವಿವರಗಳು ಮುಂತಾದ ಸೇವೆಗಳುನ್ನು ಇದು ಒಳಗೊಂಡಿದೆ. ಎಂದು ಟಿಒಐ ಮೂಲಗಳು ಮಾಹಿತಿಯನ್ನು ತಿಳಿಸಿವೆ.
ರೈಲ್ ಒನ್ ಅಪ್ಲಿಕೇಶನ್‌ನಿಂದ ಏನೆಲ್ಲಾ ಪ್ರಯೋಜನ?
ರೈಲ್ ಒನ್ ಅಪ್ಲಿಕೇಶನ್ ಉತ್ತಮ ಇಂಟರ್ಫೇಸ್ ಮೂಲಕ ಪ್ರಯಾಣಿಕರಿಗೆ ಒಂದು ವಿಶಿಷ್ಟವಾದ ಅನುಭವವನ್ನು ನೀಡುವುದು ರೈಲ್ ಒನ್ ಅಪ್ಲಿಕೇಶನ್‌ನ ಮುಖ್ಯ ಗುರಿಯಾಗಿದೆ. ಇದು ವಿವಿಧ ಸೇವೆಗಳನ್ನು ಸಂಯೋಜಿಸುವ ಮೂಲಕ ಎಲ್ಲಾ ರೈಲ್ವೆ ಸೇವೆಗಳನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ, ಇದರಿಂದಾಗಿ ಭಾರತೀಯ ರೈಲ್ವೆಯ ಎಲ್ಲಾ ಸೌಲಭ್ಯಗಳನ್ನು ಒಂದೇ ಸ್ಥಳದಲ್ಲಿ ಮಾಹಿತಯನ್ನು ಪಡೆದುಕೊಳ್ಳಬಹುದು.
ಹೊಸ ರೈಲ್ ಒನ್ ಅಪ್ಲಿಕೇಶನ್ ಎಲ್ಲಿ ಡೌನ್‌ಲೋಡ್ ಮಾಡಬಹುದು..?
ನೀವು ಹೊಸ ರೈಲ್ ಒನ್ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಪ್ಲೇ ಸ್ಟೋರ್ ಮತ್ತು ಐಒಎಸ್ ಆಪ್ ಸ್ಟೋರ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.ಇದು ಸಿಂಗಲ್-ಸೈನ್-ಆನ್ ಸಾಮರ್ಥ್ಯವನ್ನು ಹೊಂದಿದೆ. ಬಳಕೆದಾರರು ಬಹು ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುಅಗತ್ಯ ಏನು ಇರುವುದಿಲ್ಲ.
ಪ್ರತ್ಯೇಕ ಅಪ್ಲಿಕೇಶನ್‌ಗಳ ಅಗತ್ಯವಿಲ್ಲ
ರೈಲ್ವೆ ಮಾಹಿತಿ ಪಡೆಯುವುದಕ್ಕಾಗಿ ಪ್ರತ್ಯೇಕ ಅಪ್ಲಿಕೇಶನ್‌ಗಳ ಅಗ್ಯವಿಲ್ಲ. 'ರೈಲ್ ಒನ್' ಅಪ್ಲಿಕೇಶನ್ ಒಂದು ಇದ್ದರೆ ಸಾಕು ಎಲ್ಲಾ ರೈಲ್ವೆ ಎಲ್ಲಾ ಮಾಹಿತಿ ಒಟ್ಟಾಗಿ ಒಂದೇ ಕಡೆಗೆ ಸಿಗುತ್ತದೆ. ಇದರಿಂದಾಗಿ, ವಿವಿಧ ಭಾರತೀಯ ರೈಲ್ವೆ ಸೇವೆಗಳಿಗೆ ಪ್ರತ್ಯೇಕ ಅಪ್ಲಿಕೇಶನ್‌ಗಳ ಅಗತ್ಯವಿರುವುದಿಲ್ಲ, ಇದು ಸಾಧನದ ಶೇಖರಣಾ ಸ್ಥಳದ ಅವಶ್ಯಕತೆಗಳನ್ನು ಕಡಿಮೆ ಮಾಡುತ್ತದೆ. ಈ ಅಪ್ಲಿಕೇಶನ್ ಆರ್-ವ್ಯಾಲೆಟ್ (ರೈಲ್ವೆ ಇ-ವ್ಯಾಲೆಟ್) ನ ದಕ್ಷತೆಯನ್ನು ಸಹ ಒಳಗೊಂಡಿದೆ. ಬಳಕೆದಾರರು ಸಂಖ್ಯಾತ್ಮಕ MPIN ಮತ್ತು ಬಯೋಮೆಟ್ರಿಕ್ ಲಾಗಿನ್ ಆಯ್ಕೆಗಳ ಮೂಲಕ ತಮ್ಮ ಖಾತೆಗಳಿಗೆ ಭೇಟಿ ನೀಡಬಹುದು.
ಭಾರತೀಯ ರೈಲ್ವೆ ಸಚಿವಾಲಯವು ದೇಶದ ರೈಲ್ವೆ ಮೂಲಸೌಕರ್ಯವನ್ನು ಆಧುನೀಕರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ, ರೈಲ್ ಒನ್ ಅಪ್ಲಿಕೇಶನ್ ಕೂಡ ಒಂದಾಗಿದೆ.
ಪ್ರಸ್ತುತ, ಭಾರತೀಯ ರೈಲ್ವೆ ಪ್ರಯಾಣಿಕರು ವಿವಿಧ ಸೇವೆಗಳಿಗಾಗಿ ಹಲವಾರು ಅಪ್ಲಿಕೇಶನ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಬಳಸುತ್ತಿದ್ದಾರೆ. ಟಿಕೆಟ್ ಬುಕಿಂಗ್‌ಗಾಗಿ ಐಆರ್‌ಸಿಟಿಸಿ ರೈಲ್ ಕನೆಕ್ಟ್, ಊಟವನ್ನು ಆರ್ಡರ್ ಮಾಡಲು ಐಆರ್‌ಸಿಟಿಸಿ ಇ-ಕೇಟರಿಂಗ್ ಫುಡ್ ಆನ್ ಟ್ರ್ಯಾಕ್, ಪ್ರತಿಕ್ರಿಯೆ ನೀಡಲು ರೈಲ್ ಮದದ್, ಕಾಯ್ದಿರಿಸದ ಟಿಕೆಟ್‌ಗಳನ್ನು ಖರೀದಿಸಲು ಯುಟಿಎಸ್ ಮತ್ತು ರೈಲು ಚಲನೆಯನ್ನು ಮೇಲ್ವಿಚಾರಣೆ ಮಾಡಲು ರಾಷ್ಟ್ರೀಯ ರೈಲು ವಿಚಾರಣಾ ಸೌಲಭ್ಯ ಮುಂತಾದವುಗಳನ್ನು ಬಳಸಲಾಗುತ್ತಿದೆ.
ಒಟ್ಟಾರೆಯಾಗಿ, ಹೇಳುವುದಾದರೇ ರೈಲ್ ಒನ್ ಅಪ್ಲಿಕೇಶನ್ ಭಾರತೀಯ ರೈಲ್ವೆಯು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲಗಳನ್ನು ನೀಡುತ್ತದೆ.


Click it and Unblock the Notifications