ರೈಲ್ವೆ ಪ್ರಯಾಣಿಕರೇ ಗಮನಿಸಿ..ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವಂತಹ ಹೊಸ ವೈಶಿಷ್ಟ್ಯವೊಂದನ್ನು ಪರಿಚಯವನ್ನು ಮಾಡಿದೆ. ಈ ಹೊಸ ನಿಯಮದ ಪ್ರಕಾರ ರೈಲ್ವೆ ಸೀಟು ಬುಕ್ ಮಾಡಿ ಕಾಯುವ ಪಟ್ಟಿಯಲ್ಲಿರುವ( ರಿಸರ್ವೇಷನ್) ಪ್ರಯಾಣಿಕರಿಗೆ ತಮ್ಮ ಸೀಟುಗಳು ಖಚಿತಗೊಂಡಿವೆಯೇ ಇಲ್ಲವೇ ಎಂಬುದನ್ನು ರೈಲು ಹೊರಡುವ ಮುಂಚೆಯೇ 8 ಗಂಟೆಗಳ ಮುಂಚಿತವಾಗಿ ಮಾಹಿತಿಯನ್ನು ಪ್ರಯಾಣಿಕರು ತಿಳಿದುಕೊಳ್ಳಬಹುದು.

ಹೌದು, ಭಾರತೀಯ ರೈಲ್ವೆ ಇಲಾಖೆಯು ನಿಯಮದ ಪ್ರಕಾರ ಈ ಹಿಂದೆ, ರೈಲ್ವೆಯ ಪ್ರಯಾಣಿಕರಿಗೆ ಈ ಮಾಹಿತಿಯನ್ನು ರೈಲು ಹೊರಡುವ 4 ಗಂಟೆಗಳ ಮೊದಲು ಮಾತ್ರ ನಮ್ಮಗೆ ಮಾಹಿತಿ ಸಿಗುತ್ತಿತ್ತು. ರೈಲ್ವೆ ಮಂಡಳಿಯು ಜುಲೈ 14 ರಿಂದ 15ರ ಮಧ್ಯರಾತ್ರಿ 12 ಗಂಟೆಯಿಂದ ಜಾರಿಗೆ ಬರುವಂತೆ ನಿಯಮಗಳಲ್ಲಿ ಬದಲಾವಣೆಯನ್ನು ಮಾಡಿದೆ.ರೈಲ್ವೆ ಇಲಾಖೆಯ ಈ ಹೊಸ ಬದಲಾವಣೆಯು ಕಾಯುವ ಪಟ್ಟಿಯಲ್ಲಿ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ, ಒಂದು ವೇಳೆ ಅವರ ಸೀಟು ಖಚಿತವಾಗದಿದ್ದಲ್ಲಿ, ಪರ್ಯಾಯ ಪ್ರಯಾಣದ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಾಕಷ್ಟು ಸಮಯಾವಕಾಶವನ್ನು ಪ್ರಯಾಣಿಕರಿಗೆ ಮಾಹಿತಿಯನ್ನು ಒದಗಿಸಲಾಗುತ್ತದೆ.
ಭಾರತೀಯ ರೈಲ್ವೆ ಇಲಾಖೆ ಹಿಂದಿನ ವ್ಯವಸ್ಥೆ
ರೈಲ್ವೆ ಹಿಂದಿನ ವ್ಯವಸ್ಥೆಯಲ್ಲಿ, ಕಾಯುವ ಪಟ್ಟಿಯಲ್ಲಿದ್ದ ಪ್ರಯಾಣಿಕರಿಗೆ ಸೀಟು ಖಚಿತವಾಗುವ ಬಗ್ಗೆ ಕೇವಲ ನಾಲ್ಕು ಗಂಟೆಗಳ ಮುಂಚಿತವಾಗಿ ಮಾತ್ರ ಮಾಹಿತಿ ದೊರೆಯುತ್ತಿತ್ತು. ಮುಂಜಾನೆಯ ರೈಲುಗಳ ಚಾರ್ಟ್‌ಗಳನ್ನು ಮಧ್ಯರಾತ್ರಿಯಲ್ಲಿ ಸಿದ್ಧಪಡಿಸುತ್ತಿದ್ದ ಕಾರಣ, ಪ್ರಯಾಣಿಕರು ಸೀಟು ಖಚಿತವಾಗುವುದಕ್ಕಾಗಿ ರಾತ್ರಿಯಿಡೀ ಕಾಯುವಂತಹ ಪರಿಸ್ಥಿತಿ ಇತ್ತು. ಆದರೆ, ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರಿಗೆ ಸಮಯ ಮತ್ತು ಕಾಯುವಿಕೆಯನ್ನು ತಡೆಯಲು ಹೆಚ್ಚಿನ ಅನುಕೂಲವನ್ನು ಸಹ ನೀಡಲಾಗಿದೆ.
ರೈಲ್ವೆ ಬೋಗಿಗಳು, ಇಂಜಿನ್‌ಗಳಲ್ಲಿ AI ಸಿಸಿಟಿವಿ ಕ್ಯಾಮೆರಾ ಅಳವಡಿಕೆ
ಪ್ರಯಾಣಿಕರ ಬೋಗಿಗಳು ಮತ್ತು ರೈಲುಗಳ ಇಂಜಿನ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಈ ಕುರಿತು ಪೈಲಟ್ ಯೋಜನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈಲುಗಳಲ್ಲಿ ಕಳ್ಳತನ ಮತ್ತು ಅಪರಾಧಗಳನ್ನು ತಡೆಯುವ ಉದ್ದೇಶವನ್ನು ಹೊಂದಿದೆ. ಈ ಕ್ಯಾಮೆರಾಗಳು 100 ಕಿಮೀ/ಗಂಟೆ ವೇಗದಲ್ಲಿ ಮತ್ತು ಕಡಿಮೆ ಬೆಳಕಿನ ಸ್ಥಿತಿಯಲ್ಲಿಯೂ ಸಹ ಸ್ಪಷ್ಟವಾದ ಚಿತ್ರಗಳನ್ನು ಒದಗಿಸುತ್ತವೆ. ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 74,000 ಬೋಗಿಗಳು ಮತ್ತು 15,000 ಇಂಜಿನ್‌ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಅನುಮೋದನೆಯನ್ನು ಸಹ ನೀಡಲಾಗಿದೆ.
ರೈಲು ಬೋಗಿಯ ಪ್ರತಿ ಕೋಚ್‌ನಲ್ಲೂ 4 ಸಿಸಿಟಿವಿ ಕ್ಯಾಮೆರಾಗಳನ್ನುಅಳವಡಿಕೆಯನ್ನು ಮಾಡಲಾಗುವುದು. ಇದಲ್ಲದೇ, ರೈಲ್ವೆ ಕೋಚ್‌ಗಳ ಪ್ರತಿ ಪ್ರವೇಶ ದ್ವಾರದಲ್ಲಿ 2 ಕ್ಯಾಮೆರಾಗಳನ್ನು ಮತ್ತು ಪ್ರತಿ ಲೋಕೋಮೋಟಿವ್‌ನಲ್ಲಿ 6 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ ಇದರಿಂದ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷಿತತೆ ಸಿಗುತ್ತದೆ.
ಒಟ್ಟಾರೆಯಾಗಿ ಹೇಳುವುದಾರೆ, ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ತಂದಿರುವ ಈ ಹೊಸ ವೈಶಿಷ್ಟ್ಯಗಳು ಮತ್ತು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯು ಪ್ರಯಾಣಿಕರಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ಒದಗಿಸುವಲ್ಲಿ ಹೆಚ್ಚಿನ ಅನುಕೂಲವನ್ನು ಹೊಂದಿದೆ.


Click it and Unblock the Notifications