For Quick Alerts
ALLOW NOTIFICATIONS  
For Daily Alerts

ಭಾರತೀಯರು 2020ರಲ್ಲಿ ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 20,700 ಕೋಟಿ

|

ಭಾರತದ ಮೂಲದ ಹಣಕಾಸು ಸಂಸ್ಥೆಗಳು, ಶಾಖೆಗಳು ಸೇರಿದಂತೆ ಭಾರತೀಯರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಇರಿಸಿರುವ ಹಣವು 2020ರಲ್ಲಿ 2.55 ಬಿಲಿಯನ್ ಸ್ವಿಸ್ ಫ್ರಾಂಕ್‌ (20,700 ಕೋಟಿ ರೂ.ಗಳಿಗಿಂತಲೂ ಹೆಚ್ಚು) ಏರಿದೆ.

 

ಬೇರೆ ಬೇರೆ ಹಣಕಾಸು ಉತ್ಪನ್ನಗಳ ಮೂಲಕ ಭಾರತದ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಂದ ಸ್ವಿಸ್‌ ಬ್ಯಾಂಕ್‌ಗಳಿಗೆ ಇಷ್ಟು ದೊಡ್ಡ ಮೊತ್ತವನ್ನು ಇಡಲಾಗಿದೆ. ಆದರೆ ನೇರವಾಗಿ ಠೇವಣಿ ರೂಪದಲ್ಲಿ ಇರಿಸಿದ ಮೊತ್ತವು ಇಳಿಕೆಯಾಗಿದೆ.

 
ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ 20,700 ಕೋಟಿ ಇಟ್ಟಿದ್ದಾರೆ!

ಇದು 13 ವರ್ಷಗಳಲ್ಲಿ ಇಡಲಾದ ಅತಿಹೆಚ್ಚಿನ ಮೊತ್ತವಾಗಿದ್ದು, ಸ್ವಿಸ್‌ ಬ್ಯಾಂಕ್‌ಗಳು ಈ ಕುರಿತಾಗಿ ಅಧಿಕೃತವಾಗಿ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ಗೆ ಮಾಹಿತಿಯನ್ನ ನೀಡಿವೆ. ಈ ಮೂಲಕ ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಇರಿಸಿರುವ ಹಣ 'ಕಪ್ಪು ಹಣ'ವೆಂಬ ವಾದ ಮುಂದುವರಿದಿದ್ದು, ಇದನ್ನ ಅಲ್ಲಿನ ಅಧಿಕಾರಿಗಳು ಹಿಂದಿನಿಂದಲೂ ಒಪ್ಪಿಕೊಳ್ಳಲು ತಯಾರಿಲ್ಲ.

ಇದು 2006 ರಲ್ಲಿ ಸುಮಾರು 6.5 ಬಿಲಿಯನ್ ಸ್ವಿಸ್ ಫ್ರಾಂಕ್‌ಗಳ ದಾಖಲೆಯ ಗರಿಷ್ಠ ಮಟ್ಟದಲ್ಲಿತ್ತು, ನಂತರ ಇದು ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ) ದತ್ತಾಂಶದ ಪ್ರಕಾರ 2011, 2013 ಮತ್ತು 2017 ಸೇರಿದಂತೆ ಕೆಲವು ವರ್ಷಗಳನ್ನು ಹೊರತುಪಡಿಸಿ ಹೆಚ್ಚಾಗಿ ಕೆಳಮುಖವಾಗಿದೆ.

English summary

Indian's Funds In Swiss Banks Rises To Rs 20,700 Crore: Highest in 13 years

Funds parked by Indian individuals and firms in Swiss banks, including through India-based branches and other financial institutions, jumped to 2.55 billion Swiss francs (over Rs 20,700 crore) in 2020
Story first published: Thursday, June 17, 2021, 23:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X