For Quick Alerts
ALLOW NOTIFICATIONS  
For Daily Alerts

ಸಾರ್ವಕಾಲಿಕ ದಾಖಲೆಯ ಎತ್ತರದಲ್ಲಿ ಗಳಿಕೆ ಮುಂದುವರಿಸಿದ ಷೇರು ಪೇಟೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರ (ಫೆಬ್ರವರಿ 4, 2021) ಸಾರ್ವಕಾಲಿಕ ಎತ್ತರದ ದಾಖಲೆ ಬರೆದಿದೆ. ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು 358.54 ಪಾಯಿಂಟ್ ಏರಿಕೆ ಕಂಡು, 50,614.29 ಪಾಯಿಂಟ್ ನೊಂದಿಗೆ ದಿನಾಂತ್ಯದ ವ್ಯವಹಾರ ಮುಗಿಸಿದರೆ, ನಿಫ್ಟಿ 50 ಸೂಚ್ಯಂಕವು 105.70 ಪಾಯಿಂಟ್ ಮೇಲೇರಿ 14,895.65 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು. ಬ್ಯಾಂಕ್ ನಿಫ್ಟಿ 586 ಪಾಯಿಂಟ್ ಗಳಿಕೆ ಕಂಡಿತು.

 

ಸತತ ನಾಲ್ಕನೇ ಸೆಷನ್ ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆ ಓಟವನ್ನು ಮುಂದುವರಿಸಿದವು. ಇದಕ್ಕೆ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಹಾಗೂ ಲೋಹದ ಷೇರುಗಳು ಬೆಂಬಲ ನೀಡಿದವು. ಇಂದಿನ ವಹಿವಾಟಿನಲ್ಲಿ 1813 ಕಂಪೆನಿಯ ಷೇರುಗಳು ಗಳಿಕೆ ಕಂಡರೆ, 1110 ಕಂಪೆನಿ ಷೇರುಗಳು ಇಳಿಕೆ ದಾಖಲಿಸಿದವು ಮತ್ತು 142 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.

 

ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ ಷೇರು ಮಾರ್ಕೆಟ್ ಹೂಡಿಕೆಗೆ ಸೂಕ್ತವಲ್ಲದ "ಮನಸ್ಥಿತಿಯವರು" ಇವರು

ಇನ್ಫರ್ಮೇಷನ್ ಟೆಕ್ನಾಲಜಿ ವಲಯ ಷೇರುಗಳನ್ನು ಹೊರತುಪಡಿಸಿದಂತೆ ಉಳಿದವು ಏರಿಕೆಯಲ್ಲೇ ವಹಿವಾಟು ಮುಗಿಸಿದವು. ಬಿಎಸ್ ಇ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ 1 ಪರ್ಸೆಂಟ್ ಗೂ ಹೆಚ್ಚು ಏರಿಕೆ ದಾಖಲಿಸಿದವು.

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಐಟಿಸಿ 6.09%

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 5.70%

ಬಜಾಜ್ ಫೈನಾನ್ಸ್ 4.95%

ಕೋಲ್ ಇಂಡಿಯಾ 4.63%

ಒಎನ್ ಜಿಸಿ 4.61%

ಸಾರ್ವಕಾಲಿಕ ದಾಖಲೆಯ ಎತ್ತರದಲ್ಲಿ ಗಳಿಕೆ ಮುಂದುವರಿಸಿದ ಷೇರು ಪೇಟೆ

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು ಮತ್ತು ಪರ್ಸೆಂಟ್
ಏಷ್ಯನ್ ಪೇಂಟ್ಸ್ -2.11%

ಯುಪಿಎಲ್ -1.83%

ಸಿಪ್ಲಾ -1.74%

ಇಂಡಸ್ ಇಂಡ್ ಬ್ಯಾಂಕ್ -1.56%

ಟಾಟಾ ಮೋಟಾರ್ಸ್ -1.47%

English summary

Indian Share Market Index Sensex, Nifty Hits New Record High Again

Indian stock market index sense, nifty hits new record high on February 4, 2021. Here is the nifty top gainers and losers.
Story first published: Thursday, February 4, 2021, 15:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X